ಯಾವುದೋ ಒಂದು ನಗರದ ಮಧ್ಯದಲ್ಲಿದ್ದೀರಿ. ಬಾತ್‌ರೂಮ್ ಬಳಸಬೇಕಾಗಿದೆ. ಸ್ವಚ್ಛ
ಟಾಯ್‌ಲೆಟ್ ಬೇಕಾಗಿದೆ. ಏನು ಮಾಡುವುದು? ಸುಲಭ್ ಇದೆಯಲ್ಲ ಎನ್ನುತೀರಾ? ಆದರೆ ಸುಲಭ್
ಸ್ವಚ್ಛ ಇರುತ್ತದೆ ಎಂದು ಏನು ಗ್ಯಾರಂಟಿ? ಇಷ್ಟಕ್ಕೂ ಸುಲಭ್ ಇರುವುದು ಭಾರತದಲ್ಲಿ
ಮಾತ್ರ. ಅಮೆರಿಕದಲ್ಲಿ? ಹೀಗೆ ಮಾಡಿದರೆ ಹೇಗೆ? ನಿಮ್ಮ ಮನೆಯಲ್ಲಿರುವ ಬಾತ್‌ರೂಮನ್ನೇ
ಸ್ವಲ್ಪ ಶುಲ್ಕಕ್ಕೆ ಬಾಡಿಗೆಗೆ ನೀಡಿದರೆ ಹೇಗೆ? ಹೌದು. ಅಂತಹ ಒಂದು ತಂತ್ರಾಂಶ
ತಯಾರಾಗಿದೆ. ತಮ್ಮ ಮನೆಯ ಬಾತ್‌ರೂಮನ್ನು ಬಾಡಿಗೆಗೆ ನೀಡಲು ಸಿದ್ಧರಿರುವವರು ಈ
ತಂತ್ರಾಂಶ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಾತ್‌ರೂಮ್ ಅಗತ್ಯ ಇರುವವರು ತಮ್ಮ
ಸ್ಮಾರ್ಟ್‌ಫೋನ್‌ನಲ್ಲಿರುವ ಇದೇ ತಂತ್ರಾಂಶ ಮೂಲಕ ತಾವಿರುವ ಸ್ಥಳಕ್ಕೆ ಹತ್ತಿರದಲ್ಲಿರುವ
ಶೌಚಾಲಯ ಯಜಮಾನರನ್ನು ಸಂಪರ್ಕಿಸಿ ಅವರು ಒಪ್ಪಿದರೆ ಹಣ ನೀಡಿ ಬಾತ್‌ರೂಮ್ ಬಳಸಬಹುದು! ಈ
ತಂತ್ರಾಂಶದ ಜಾಲತಾಣ - cloo-app.com.
No comments:
Post a Comment