WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Sunday, January 13, 2013

ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾಲತಾಣ

 "ವಿದ್ಯಾರಣ್ಯ" ಕನ್ನಡ ವಿಶ್ವವಿದ್ಯಾಲಯಕ್ಕೆ ಇಟ್ಟ ಸಾರ್ಥಕನಾಮ.
ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ. ಮತ್ತಷ್ಟು ಮಾಹಿತಿ ಹೆಕ್ಕಲು  ಅಂತರ ಜಾಲತಾಣ ಕೊಂಡಿ: www.kannadauniversity.org

ಹಾಗೆಯೇ  ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0 ನ್ನು  ಪಡೆಯಲು>
ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 13.7 MB Updated Date : 04.02.2011 )
ಯೂನಿಕೋಡ್ ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 8.85 MB Updated Date : 04.02.2011 )
ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 3.93 MB Updated Date : 04.02.2011)

Monday, January 7, 2013

ಮಹಿಳೆಯ ರಕ್ಷಣೆಗೆ "ಫೈಟ್‌ಬ್ಯಾಕ್‌" ತಂತ್ರಾಂಶ

ಮಹಿಳೆಯರಿಗೆ ಒಂದು ಶುಭಸುದ್ಧಿ!
ಇತ್ತೀಚೆಗೆ ದೆಹಲಿ ಗ್ಯಾಂಗ್‌ ರೇಪ್‌ ನಡೆದ ಬಳಿಕ ಟೆಕ್‌ ಮಹೀಂದ್ರಾ ಉಚಿತವಾದ "ಫೈಟ್‌ಬ್ಯಾಕ್‌" ತಂತ್ರಾಂಶವನ್ನು ನೀಡುತ್ತಿದೆ.
ನಗರದಲ್ಲಿ ಸಂಚರಿಸುವ ಮಹಿಳೆಯರ ರಕ್ಷಣೆಗಾಗಿ ಟೆಕ್‌ ಮಹೀಂದ್ರಾ ಒಂದು "ಫೈಟ್‌ಬ್ಯಾಕ್‌" ತಂತ್ರಾಂಶ ತಯಾರಿಸಿದೆ. ಈ ಅಪ್ಲಿಕೇಶನ್‌ ಮುಖಾಂತರ ತೊಂದರೆಯಲ್ಲಿರುವ ವ್ಯಕ್ತಿ ಒಂದು ಒಂದು  ಬಟನ್‌ ಒತ್ತಿದರೆ ಮಾಡಿದ್ರೆ ಸಾಕು ತೊಂದರೆಯಲ್ಲಿದ್ದರೆ ಆ ವ್ಯಕ್ತಿಯ ಸ್ಥಳವನ್ನು ಪತ್ತೆಹಚ್ಚಬಹುದು. ಈ ತಂತ್ರಾಂಶ ನಿಮ್ಮ ಸ್ಥಳವನ್ನು ಜಿಪಿಎಸ್‌ ಮುಖಾಂತರ ಪತ್ತೆಹಚ್ಚಿ ಆಪ್ತರಿಗೆ ಸಂದೇಶ ಕಳುಹಿಸುತ್ತದೆ.
ನೀವು ಫೈಟ್‌ ಬ್ಯಾಕ್‌ ಜಾಲತಾಣಕ್ಕೆ  ಭೇಟಿ ನೀಡಿ  ಸೇರಿದರೆ ಸಾಕು. ಸೇರಿದ ನಂತರ ನಿಮ್ಮ ಐದು ಜನ ಆಪ್ತರ ಸಂಚಾರಿ  ಸಂಖ್ಯೆ ಮತ್ತು ಮಿಂಚಂಚೆಯನ್ನು ಇದರಲ್ಲಿ ನಮೂದಿಸಬೇಕು. ಒಂದು ವೇಳೆ ನೀವು ಫೇಸ್‌ಬುಕ್‌ ಲಾಗಿನ್‌ ಆದ್ರೆ ನೀವು ತೊಂದರೆಯಲ್ಲಿದ್ದಾಗ ಈ ಅಪ್ಲಿಕೇಶನ್‌ ಬಳಸಿದರೆ ನಿಮ್ಮ ಫೇಸ್‌ಬುಕ್‌ನಲ್ಲೂ ನಿಮ್ಮ ಮಾಹಿತಿ ಪೊಸ್ಟ್‌ ಆಗುತ್ತದೆ.
ಈ ತಂತ್ರಾಂಶವನ್ನು ಟೆಕ್‌ ಮಹೀಂದ್ರ ಒಂದು ವರ್ಷ ಹಿಂದೆ ಬಿಡುಗಡೆ ಮಾಡಿತ್ತು. ಆದ್ರೆ ಒಂದು ವರ್ಷಕ್ಕೆ 100 ರೂಪಾಯಿ ನೀಡಿ ಚಂದದಾರರಾದ್ರೆ ಆದ್ರೆ ಮಾತ್ರ ನೀವು ಈ ಆಪ್ಲಿಕೇಶನ್‌ ಬಳಸಬಹುದಿತ್ತು. ಇದೀಗ "ಫೈಟ್‌ಬ್ಯಾಕ್‌" ತಂತ್ರಾಶ ಉಚಿತವಾಗಿ ಸಿಗುತ್ತಿದ್ದು ನಿಮಗೆನಾದ್ರೂ ಈ ಆಪ್ಲಿಕೇಶನ್‌ ಇಷ್ಟವಾಗಿದ್ರೆ ಫೈಟ್‌ಬ್ಯಾಕ್‌ ಜಾಲತಾಣಕ್ಕೆ ಭೇಟಿನೀಡಿ. ನೋಕಿಯಾ, ಬ್ಲಾಕ್ಬೆರ್ರಿ, ಆಂಡ್ರಾಯ್ಡ್ ತಂತ್ರಾಂಶಗಳಿಗಾಗಿ ಕೊಂಡಿ:  http://www.fightbackmobile.com

Tuesday, January 1, 2013

ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಮಾಹಿತಿ ನೀಡುವ ಜಾಲತಾಣ


ಪ೦ಚಮ೦ತ್ರ ಮತ್ತು ಸಪ್ತಸೂತ್ರ
“ಮರ್ತ್ಯಜೀವನದ ತಾಟಸ್ಥ್ಯಮ೦ ಕಡೆಕಡೆದು
ಶ್ರದ್ಧೆ ಸ೦ದೇಹಗಳನಿರದೆ ಹೊಡೆದೆಬ್ಬಿಸುವ,
ಮೇಣ್ ಜನತೆ ಜನತೆಯೊಳ್ ಪಕ್ಷಪಕ್ಷ೦ಗಳ೦
ಕೆರಳಿಸುವ ಶತಶತ ಮತ೦ಗಳ೦ ತಾಮಲ್ಲಿ
ರಾರಾಜಿಸಿದುವಗ್ನಿವರ್ಣದ ವೃಕ೦ಗಳೋಲ್,
ಜೋಲ್ವ ಜಿಹ್ವೆಯೊಳತಿ ಭಯಾನಕ೦-!”

          ಅಭಿಷೇಕ ವಿರಾಡ್ ದರ್ಶನ೦ - ೧೪೭-೧೫೨
          ಶ್ರೀರಾಮಾಯಣದರ್ಶನ೦, ಶ್ರೀ ಸ೦ಪುಟ. ಸ೦.೧೩

ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’   

ಇಡೀ ವಿಶ್ವಕ್ಕೆಲ್ಲಾ ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರದ ಮಹಾನ್ ಕವಿ ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಅವರ ಜನನ, ಬಾಲ್ಯ ಹಾಗೂ ಜೀವನ. ನೆನಪು, ಕೃತಿಗಳು, ಅಪರೂಪದ ಛಾಯಾಚಿತ್ರಗಳು, ಹಸ್ತಪ್ರತಿಗಳು ಹಾಗೂ ವಿಶ್ವಮಾನವ ಸಂದೇಶದ ಬಗ್ಗೆ ಮಾಹಿತಿ ನೀಡುವ ಕುವೆಂಪು.com ಅಂತರ್ಜಾಲ ತಾಣ. http://kuvempu.com

ಹಬ್ಬ ಹರಿದಿನಗಳ ಮಾಹಿತಿಗೆ ಜಾಲತಾಣ

ಇತ್ತೀಚೆಗಷ್ಟೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡಿದ್ದೇವೆ. ಇದರ ಹಿನ್ನೆಲೆ ನಮ್ಮಲ್ಲಿ ಬಹುತೇಕರಿಗೆ ಗೊತ್ತು. ಜತೆಗೆ ಅನೇಕ ಧರ್ಮಗಳ ಬೀಡಾದ ಭಾರತದಲ್ಲಿ ಸದಾ ಹಬ್ಬಗಳು ಜರುಗುತ್ತಲೇ ಇರುತ್ತವೆ. ಹಾಂಗತ ಎಲ್ಲರಿಗೂ, ಎಲ್ಲಾ ಧರ್ಮಗಳ ಹಬ್ಬಗಳ ಬಗೆಗೂ ಗೊತ್ತಿರುತ್ತದೆ ಅಂತೇನಿಲ್ಲ.
ನಿಮಗೇನಾದರೂ ಬೇರೆ ಬೇರೆ ಧರ್ಮಗಳ, ಮಹತ್ವದ ಹಬ್ಬಗಳ ಬಗ್ಗೆ ತಿಳಿದುಕೊಳ್ಳಬೇಕೆನಿಸುವುದೇ? ಹಾಗಿದ್ದರೆ ಈ ಜಾಲತಾಣಕ್ಕೆ ಬೇಟಿನೀಡಲೇಬೇಕು. ಯಾವ್ಯಾವ ಹಬ್ಬಗಳನ್ನು ಯಾವ್ಯಾವಾಗ, ಎಲ್ಲೆಲ್ಲಿ ಆಚರಿಸುತ್ತಾರೆ? ಅದರ ಮಹತ್ವ ಏನು? ಎನ್ನುವಂತಹ ವಿವರಗಳಿವೆ.
ಅಲ್ಲದೆ ಯಾವ ವಿವರ ನಿಮಗೆ ಬೇಕೋ ಅದು ತಕ್ಷಣ ಕೈಗೆಟಕುವಂತೆ ಆಕಾರಾದಿಯಾಗಿ, ತಿಂಗಳುಗಳ ಪ್ರಕಾರ, ರಾಜ್ಯಗಳ ಪ್ರಕಾರ, ಪ್ರಮುಖ ದಿನಗಳ ಪ್ರಕಾರ, ರಜಾದಿನಗಳ ಪ್ರಕಾರ, ಆಹಾರ ಪದ್ದತಿಗಳ ಪ್ರಕಾರ, ದೇವರು, ದೇವತೆಗಳ ಪ್ರಕಾರ ಮತ್ತು ಧರ್ಮಗಳ ವಿಭಾಗದ ಮೂಲಕ ಹೀಗೆ ಹೀಗೆ ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಲಾಗಿದೆ. ಹೀಗಾಗಿ ಇಲ್ಲಿಗೊಮ್ಮೆ ನಿಮ್ಮ ಬೇಟಿ ನೀಡಿ ನಮ್ಮ ದೇಶದ ಸಂಪ್ರದಾಯಗಳ ಬಗ್ಗೆ ಮಾಹಿತಿ ಪಡೆಯಲು ಜಾಲತಾಣ ಕೊಂಡಿ:  http://www.festivalsofindia.in

ಸಾಹಿತ್ಯ ಲೋಕ

ಸಾಹಿತ್ಯ ಎಂದರೆ ನಿಮಗೆ ಇಷ್ಟವೇ? 
ಷೇಕ್ಸ್ ಪಿಯರ್, ಲಿಯೋ ಟಾಲ್ ಸ್ಟಾಯ್, ಪುಷ್ಕಿನ್, ಮಿಲ್ಟಾ, ವಡ್ಸ್ ವರ್ಥ್, ಕಾಪ್ಕಾ, ಕಮೂ, ಕೀಟ್ಸ್, ರಾಬರ್ಟ್ ಬ್ರೌನಿಂಗ್, ಆರಿಸ್ಟಾಟಲ್, ಟ್ಯಾಗೂರ್, ಒ.ಹೆನ್ರಿ, ಪ್ಲೇಟೂ, ಎವರನ್ನೇಲ್ಲಾ ಓದಿದ್ದೀರಾ? ಅಥವಾ ಓದಬೇಕೆಂದುಕೊಂಡಿದ್ದೀರಾ?
ಈ ಧಾವಂತದ ಬದುಕಿನಲ್ಲಿ ಇವನ್ನೇಲ್ಲ ಓದೋದು ಹೇಗೆ ಅಂತ ಯೋಚಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಆನ್ಲೈನ್ ಲಿಟರೇಚರ್ ಡಾಟ್ ಕಾಮ್ ಈ ತಾಣದಲ್ಲಿ ಸಾಹಿತ್ಯದ ಸಮೃದ್ದ ರಸದೌತಣ ದೊರೆಯುತ್ತದೆ. ಬಿಡುವಿನಲ್ಲಿ ಈ ತಾಣಕ್ಕೆ ಬಂದರೆ ಇವರನ್ನೆಲ್ಲ ಓದಿಕೊಳ್ಳಬಹುದು. 250 ಕ್ಕೂ ಹೆಚ್ಚು ಲೇಖಕರ ಕತೆ, ಕವಿತೆ, ಪುಸ್ತಕಗಳು ಇಲ್ಲಿ ನಿಮಗೆ ಓದಿಗೆ ದೊರೆಯುತ್ತದೆ. ಜತೆಗೆ ಈ ಎಲ್ಲ ಲೇಖಕರ ಜೀವನದ ಸಂಕ್ಷಿಪ್ತ ಪರಿಚಯವೂ ಇದೆ. ಜೊತೆಗೆ ಸಾಹಿತ್ಯದ ಓದುಗರಿಗಾಗಿ ಆಕರ್ಷಕ ಸ್ಪರ್ಧೆಗಳೂ ಇರುವುದು ಈ ತಾಣದ ವಿಶೇಷ. ನಿಮ್ಮ ನೆಚ್ಚಿನ ಬರಹಗಾರರನ್ನೆಲ್ಲ ಇಲ್ಲಿ ಓದಿಕೊಳ್ಳಬಹುದು. ಹಾಗಿದ್ದರೆ ಏಕೆ ತಡ? ಕೊಂಡಿ ಕ್ಲಿಕ್ಕಿಸಿ. http://www.online-literature.com

ಕನ್ನಡದಲ್ಲಿ ಶುಭಾಶಯ

ಕನ್ನಡದಲ್ಲಿ ನಿಮ್ಮ ಶುಭಸಂದೇಶಗಳನ್ನು ಕಳುಹಿಸಲು ಇದೋ ನಿಮಗೊಂದು ಸುವರ್ಣಾವಕಾಶ ಇಲ್ಲಿದೆ! 
ಯಾವುದೇ ಶುಭಸಮಾರಂಭಗಳಿಗೆ ಸೂಕ್ತವಾಗಿ ನಿಮ್ಮ ವಿಶ್ವಾಸ, ಪ್ರೀತಿ, ಪ್ರೇಮ, ಭಾವನೆಗಳನ್ನು ನಿಮ್ಮ ಮಾತೃಭಾಷೆಯಲ್ಲೇ ವ್ಯಕ್ತಪಡಿಸುವಂತಹ ವಿಶಿಷ್ಟ ಅಂಚೆ ಕಾಗದಗಳನ್ನು ಪ್ರಸ್ತುತಪಡಿಸಬಹುದು.
ರಜಾದಿನಗಳಲ್ಲಿ, ವಿಶೇಷ ಹಬ್ಬಹರಿದಿನಗಳಲ್ಲಿ ನಿಮ್ಮ ಆತ್ಮೀಯ ಸ್ನೇಹಿತರಿಗೆ ಬಂದುಭಾಂದವರಿಗೆ ಕನ್ನಡದಲ್ಲಿ ಶುಭಾಷಯ ತಿಳಿಸುವುದಕ್ಕಿಂತ ಸಂತೋಷ ಬೇರೇನಿದೆ ಅಲ್ವಾ? 
ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಅಭಿನಂದನೆ, ರಜಾದಿನಗಳು, ವಿಶೇಷ ಕಾಗದ, ಧನ್ಯವಾದ ನಿಮ್ಮ ಕನಸಿನ ಇನ್ನಿತರೆ ಯಾವುದೇ ಬಗೆಯ ಶುಭಾಷಯ ಪತ್ರಗಳನ್ನು ರಚಿಸಿ ಹಂಚಿಕೊಳ್ಳಲು.
ಕನ್ನಡದ ಶುಭಾಶಯ ಪತ್ರಗಳನ್ನು ಲಭ್ಯವಾಗಿಸುವ ಅಂತರ್ಜಾಲ ತಾಣವೊಂದಿದೆ,ಅದುವೆ ಶುಭಾಷಯ ಡಾಟ್ ಕಾಮ್ ಜಾಲತಾಣ. ವಿವಿಧ ಸಂದರ್ಭಗಳಿಗೆ ಸೂಕ್ತವಾದ ಶುಭಾಶಯ ಪತ್ರಗಳು ಇಲ್ಲಿವೆ. ಬೇಕಾದರೆ ನಿಮಗೆ ಸೂಕ್ತವಾದ ಪತ್ರವನ್ನು ವಿನ್ಯಾಸ ಮಾಡಿಕೊಡುವ ಉಚಿತ ಸೇವೆಯೂ ಇಲ್ಲಿ ಲಭ್ಯ. ಆಯ್ದ ಪತ್ರವನ್ನು ಬೇಕಾದ ಮಿಂಚಂಚೆ ವಿಳಾಸಕ್ಕೆ ಕಳುಹಿಸಲು ಅಂತರ್ಜಾಲ ತಾಣವು ಅನುಕೂಲ ಕಲ್ಪಿಸಿದೆ. ಶುಭಾಶಯ ಪತ್ರಗಳ ಜತೆ ಹಿನ್ನೆಲೆ ಸಂಗೀತ, ಅನಿಮೇಶನ್ ಮುಂತಾದ ಸೌಲಭ್ಯಗಳೂ ಸಿಗುತ್ತವೆ. ಇನ್ನೇಕೆ ತಡ ಕೂಡಲೇ ನಿಮ್ಗಿಷ್ಟವಾದ ಕಾಗದ ರಚನೆಗೆ ಜಾಲತಾಣ ವಿಳಾಸ ಕೊಂಡಿ: http://www.shubhashaya.com

ಬಿಲ್ ಮೇಡ್ ಐಡಿ ಮೂಲಕ ಅತಿ ಸರಳ ವಿಧಾನದಿಂದ ಪಾವತಿ

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಲಾಭ ಪಡೆದಿರುವ ಸ್ಥಳೀಯ ಯುವ ಟೆಕ್ಕಿಗಳ ತಂಡ ಬಿಲ್ ಪಾವತಿ ಮಾಡಲು ಜನಸಾಮಾನ್ಯರು ಪಡುವ ಪಾಡನ್ನು ಹೋಗಲಾಡಿಸಲು ’ಬಿಲ್ ಮೇಲ್ ಐಡಿ’ ಎಂಬ ವೆಬ್ ಪೋರ್ಟಲ್ ಗೆ ಡಿ.13ರಂದು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಬಿಲ್ ಪಾವತಿ ಅಷ್ಟೇ ಅಲ್ಲದೆ, ಇ ವಾಣಿಜ್ಯ ಉದ್ಯಮಿಗಳು, ಮಾರಾಟಗಾರರು ಇತರೆ ಗ್ರಾಹಕರಿಗೂ ಈ ತಾಣ ಅನುಕೂಲವಾಗಲಿದೆ. ಬ್ಯಾಂಕ್ ಹಾಗೂ ಜನಸಮಾನ್ಯರ ನಡುವಿನ ಸಂಪರ್ಕ ಕೊಂಡಿಯಾಗಿರುವ ಈ ತಾಣ ವಿಶ್ವದ ಪ್ರಪ್ರಥಮ ವಾಣಿಜ್ಯ ನೆಟ್ ವರ್ಕಿಂಗ್ ಸಾಧನವಾಗಲಿದೆ.

ಬಿಲ್ ಪಾವತಿ ಅತಿ ಸರಳ: ಬಿಲ್ ಮೇಲ್ ಐಡಿಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಸರಳವಾದ ರೀತಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಬಿಲ್ ಮೇಲ್ ಐಡಿ ಪಡೆದ ಬಳಕೆದಾರ ನೀರು, ವಿದ್ಯುತ್ ಹಾಗೂ ಇನ್ನಿತರ ಸಂಸ್ಥೆಗಳ ಬಿಲ್ ಪಾವತಿಯನ್ನು ಸರಳ ವಿಧಾನದಿಂದ ಮಾಡಬಹುದು. ಮೊಬೈಲ್, ಕಂಪ್ಯೂಟರ್, ಬ್ಯಾಂಕ್ ಕೌಂಟರ್, ಎಟಿಎಂ, ಕಿಯೋಸ್ಕ್, ತೃತೀಯ ಪಕ್ಷದ ಫ್ರಾಂಚೈಸಿ ಮುಂತಾದ ಸ್ಥಳಗಳಲ್ಲಿ ಬಿಲ್ ಮೇಲ್ ಐಡಿ ಮೂಲಕ ಗ್ರಾಹಕರು ಬಿಲ್ ಪಾವತಿಸಬಹುದಾಗಿದೆ.

ಬ್ಯಾಂಕ್‌ಗಳು ಹಾಗೂ ಇತರ ಹಣಕಾಸು ಸಂಸ್ಥೆಗಳೊಂದಿಗೆ ಬಿಲ್ ಮೇಲ್ ಐಡಿ ಹಲವು ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡಿಕೊಳ್ಳಲಿದ್ದು, ಈ ತಾಣದಲ್ಲಿ ನೋಂದಾಯಿಸಿಕೊಂಡ ಗ್ರಾಹಕರು ವಿವಿಧ ಬಿಲ್ಲಿಂಗ್ ಏಜೆನ್ಸಿಗಳು ಮತ್ತು ಸೇವೆ ನೀಡುವವರಿಗೆ ಬಿಲ್ ಮೇಲ್ ಐಡಿ ಮೂಲಕ ಬಿಲ್‌ಗಳನ್ನು ಪಾವತಿಸಬಹುದು. ಬಿಲ್ ಪಾವತಿದಾರರಿಗೆ ಬಿಲ್‌ಮೇಲ್ ಐಡಿ ಉಚಿತವಾಗಿ ಈ ಸೇವೆ ನೀಡುತ್ತದೆ.

ಇ ವಾಣಿಜ್ಯಕ್ಕೂ ಅನುಕೂಲ: ವ್ಯಾಪಾರಿಗಳು ತಮ್ಮ ಸಂಸ್ಥೆಗೆ ಸಂಬಂಧಿಸಿದ ಬಿಲ್‌ಗಳನ್ನು ತಯಾರಿಸಲು ಬಿಲ್‌ಮೇಲ್ ಐಡಿ ಯನ್ನು ಉಪಯೋಗಿಸಬಹುದಾಗಿದ್ದು, ಇದು ಪ್ರಸಕ್ತ ಲಭ್ಯವಿರುವ ಎಲ್ಲ ಅಕೌಂಟಿಂಗ್ ಸಾಫ್ಟ್‌ವೇರ್‌ಗೂ ಸಂಪರ್ಕಿತವಾಗಿದೆ. ಉಚಿತವಾಗಿ ಡೌನ್‌ಲೋಡ್ ಮಾಡಬಲ್ಲಂತಹ ಬಿಲ್ಲಿಂಗ್ ಸಾಫ್ಟ್‌ವೇರ್ ಆವೃತ್ತಿ ಇದರಲ್ಲಿ ಲಭ್ಯವಿದೆ. ಇದನ್ನು ಆಫ್‌ಲೈನಮ್ ಬಳಕೆಗೆ ಬಳಸಿಕೊಳ್ಳಬಹುದಾಗಿದೆ. ಜಗತ್ತಿನ ಎಲ್ಲರೂ ಬಿಲ್ ಮೇಲ್ ಐಡಿ ಸಮುದಾಯದ ಸದಸ್ಯರಾಗಬಹುದು. ಬಿಲ್‌ಮೇಲ್ ಐಡಿ ಸದಸ್ಯ ಇನ್ನೊಬ್ಬ ಬಿಲ್‌ಮೇಲ್ ಐಡಿ ಸದಸ್ಯನಿಗೆ ಪರ್ಚೆಸ್ ಆರ್ಡರ್, ಬಿಲ್ ನೀಡುವಿಕೆ, ಬಿಲ್ ಹಣಪಾವತಿ, ವಸ್ತುವಿನ ಬಟವಾಡೆ ಮೊದಲಾದ ವಾಣಿಜ್ಯ ಪ್ರಕ್ರಿಯೆಗಳನ್ನು ಸರಳವಾಗಿ ನಡೆಸಬಹುದಾಗಿದೆ . ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ:

Saturday, December 29, 2012

ಕನ್ನಡ ಬರಲ್ವಾ? "ಮಾತಾಡಿ" ನೋಡಿ!


ಕನ್ನಡ ಈಗ ಬರೀ ರಾಜ್ಯದ ಸ್ಥಳೀಯ ಭಾಷೆಯಾಗಿ ಉಳಿದಿಲ್ಲ. ದೇಶದ ಇತರ ಪ್ರಾದೇಶಿಕ ಭಾಷೆಗಳ ಜೊತೆಯಲ್ಲಿ ಸರಿಯಾದ ಪೈಪೋಟಿ ನೀಡುವಂತಹ ಭಾಷೆಯಾಗಿ ಬೆಳೆದು ನಿಂತಿದೆ ಎನ್ನುವುದು ಪ್ರತಿಯೊಬ್ಬ ಕನ್ನಡಿಗನ ಅಂತರಾಳದ ಮಾತು.

ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಸಹಾಯಕವಾಗುವಂತಹ ವೆಬ್‌ಸೈಟ್‌ನ್ನು ಡ್ರೀಮ್ಸ್‌ ಇನ್ಫರಾ ಸಂಸ್ಥೆ ಆರಂಭಿಸಿದೆ. ಇಂಗ್ಲೀಷ್‌, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳ ಮುಖಾಂತರ ಮಾತಾಡಿ ಡಾಟ್ ಕಾಮ್ ಅಂತರ್ಜಾಲದಲ್ಲಿ ಸರಳವಾಗಿ ವಿಡಿಯೋ ಮುಖಾಂತರ ಕನ್ನಡ ಕಲಿಯಬಹುದಾಗಿದೆ. ಸದ್ಯಕ್ಕೆ ಹದಿನಾರು ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಲಭ್ಯವಿದೆ. ಜಾಲತಾಣ ಕೊಂಡಿ: www.mathadi.com

Friday, December 28, 2012

ಚುಕುಬುಕು ಒಂದು ಓದಿನ ಬಂಡಿ!

ಚುಕುಬುಕು ಒಂದು ಓದಿನ ಬಂಡಿ! ಇದು ರೈಲೂ ಹೌದು, ಪ್ಲಾಟ್‌ಫಾರ್ಮೂ ಹೌದು. ಕನ್ನಡದ ಪುಸ್ತಕಪ್ರೇಮಿಗಳನ್ನೆಲ್ಲ ಒಂದೆಡೆ ಸೇರಿಸುವ ಚಂದದ ವೇದಿಕೆ ಅನ್ನಿ. ಒಂದು ಅಂದಾಜಿನ ಪ್ರಕಾರ ಪ್ರತಿವರ್ಷ ಮುದ್ರಣವಾಗುವ ಓದಲು ಯೋಗ್ಯವಾದ ಹೊಸ ಕನ್ನಡಪುಸ್ತಕಗಳ ಸಂಖ್ಯೆ ಏಳು ಸಾವಿರ. ಆದರೆ ಭಾನುವಾರದ ಪುರವಣಿಗಳ ಪುಸ್ತಕಪರಿಚಯ ವಿಭಾಗದಲ್ಲಿ ಚೂರು ಜಾಗ ಪಡೆಯುವ ಅದೃಷ್ಟ ಏಳೆಂಟು ಪುಸ್ತಕಗಳಿಗೆ ಮಾತ್ರ. ಅಂದರೆ ಶೇಕಡಾ ೮೫ರಷ್ಟು ಪುಸ್ತಕಗಳು ಬಂದದ್ದು ಓದುಗನಿಗೆ ತಿಳಿಯುವುದೇ ಇಲ್ಲ. ಅಂಗಡಿಗೆ ಹೋಗಿ ನೋಡೋಣವೆಂದರೆ ಇಡೀ ರಾಜ್ಯದಲ್ಲಿರುವುದು ಹತ್ತು - ಹನ್ನೆರೆಡು ಪುಸ್ತಕದಂಗಡಿಗಳು ಮಾತ್ರ. ಓದುಗ ಮತ್ತು ಪ್ರಕಾಶಕನ ನಡುವಿನ ಬಹುಮುಖ್ಯ ಕೊಂಡಿಯೊಂದು ತಪ್ಪಿಹೋಗಿದೆ ಎಂದು ನಿಮಗನ್ನಿಸುವುದಿಲ್ಲವೆ? ಅದಕ್ಕೇ ಚುಕ್ಕುಬುಕ್ಕು ಎಂಬ ಲಿಂಕ್ ಟ್ರೈನು ಬಂದಿರುವುದು 
ಇಷ್ಟದ ಲೇಖಕನ ಹೊಸ ಪುಸ್ತಕ ಬಂತೆ? ಹೊಸ ಲೇಖಕರು ಯಾರಾದರೂ ಚೆನ್ನಾಗಿ ಬರೆಯುತ್ತಿದ್ದಾರಾ? ಒಂದು ಕತೆ ಅಥವಾ ಒಂದು ಅಧ್ಯಾಯ ಓದಿ ಇಷ್ಟವಾದರೆ ಮಾತ್ರ ಕೊಂಡುಕೊಳ್ಳುವಂತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು? ಓದುವ ಹಸಿವಿನ ನಿಮ್ಮ ಆತಂಕಗಳಿಗೆಲ್ಲ ಸಮಾಧಾನ ನೀಡುವಂತಿದೆ ನಮ್ಮ ಚುಕ್ಕುಬುಕ್ಕು. ಇಲ್ಲಿ ನೀವು ಹೊಸದಾಗಿ ಪ್ರಕಾಶನಗೊಂಡ ಪುಸ್ತಕದ ಬೆಲೆ ಪುಟಸಂಖ್ಯೆ ಮಾತ್ರವಲ್ಲ, ಪುಸ್ತಕದ ಸಾರಾಂಶ, ಲೇಖಕರ ಪರಿಚಯ, ಪುಸ್ತಕದ ಬಗ್ಗೆ ಅವರ ಮಾತು, ಮುನ್ನುಡಿ-ಬೆನ್ನುಡಿಕಾರರ ಅನಿಸಿಕೆಗಳನ್ನೆಲ್ಲಾ ಓದಬಹುದು. ಅಷ್ಟೇ ಅಲ್ಲ, ಪುಸ್ತಕದ ಒಂದು ಅಧ್ಯಾಯವನ್ನು ಕೂಡ ಉಚಿತವಾಗಿ ಓದಬಹುದು ಅಂದರೆ ಖುಷಿಯಾಯಿತಲ್ಲವೆ?! ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದು. ಇಷ್ಟವಾದ ಪುಸ್ತಕಗಳನ್ನು ಕೊಳ್ಳಲು ಪ್ರಕಾಶಕರ ವಿಳಾಸ, ದೂರವಾಣಿ ಸಂಖ್ಯೆಗಳೂ ಇಲ್ಲಿ ಲಭ್ಯ. ಇನ್ನೇನು ತಾನೆ ಬೇಕು? 
ಅಷ್ಟೆಲ್ಲಾ ಶ್ರದ್ಧೆಯಿಂದ ಮುದ್ರಿಸಿದ ಪುಸ್ತಕ ಬಂದಿದೆ ಎಂದು ಓದುಗರಿಗೆ ತಿಳಿಯದೇ ಹೋಗುವ ಪ್ರಕಾಶಕನ ಸಂಕಟ ನಮಗೆ ಅರ್ಥವಾಗುತ್ತದೆ. ಸಾಪ್ತಾಹಿಕ ಪುರವಣಿಗಳಲ್ಲಿ ವಿಮರ್ಶೆಯ ಮಾತಿರಲಿ, ಸಾದರ ಸ್ವೀಕಾರದಲ್ಲಾದರೂ ಬಂದರೆ ಅದೇ ಭಾಗ್ಯವೆಂದು ಹಪಹಪಿಸುವ ಬದಲು ಚುಕ್ಕುಬುಕ್ಕು ಎಂಬ ಈ ವೇದಿಕೆಯನ್ನು ಬಳಸಿಕೊಂಡು ಹಬ್ಬ ಮಾಡಿ. ಹೌದು! ನಮ್ಮ ವೆಬ್‌ಸೈಟಿನಲ್ಲಿ ನಿಮ್ಮ ಪುಸ್ತಕದ ಬಗ್ಗೆ ನಾಲ್ಕು ಸಾಲು ಬರೆಯುವ ಬಗ್ಗೆ ನಾವು ಮಾತನಾಡುತ್ತಿಲ್ಲ. ನಿಮ್ಮ ಪುಸ್ತಕಕ್ಕೇ ಒಂದು ಚೆಂದದ ಕಿರುವೆಬ್‌ಸೈಟಿನ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ನಾಲಕ್ಕು ಪೂರ್ಣ ವೆಬ್‌ಪುಟಗಳು ನಿಮ್ಮ ಕನಸಿನ ಪುಸ್ತಕಕ್ಕೆಂದೇ ಮೀಸಲು! ದೊಡ್ಡ ಮುಖಪುಟ, ಲೇಖಕನ ಪರಿಚಯ, ಸಾರಾಂಶ, ಉಚಿತಪುಟ, ವಿಮರ್ಶೆಗಳು, ಓದುಗರ ಅನಿಸಿಕೆಗಳು. ಒಂದು ಪುಸ್ತಕವನ್ನು ಸೆಲೆಬ್ರೇಟ್ ಮಾಡುವ ಇದಕ್ಕಿಂತ ಉತ್ತಮ ವಿಧಾನ ಬೇರೊಂದಿಲ್ಲ. ನೀವೇ ನೋಡಿ. ಚುಕ್ಕುಬುಕ್ಕು ಸಾಧ್ಯತೆಗಳನ್ನು ಬಳಸಿಕೊಳ್ಳಿ. ಸರಿಯಾದ ಓದುಗರನ್ನು ತಲುಪಿ. 

  • ಪುಸ್ತಕಗಳಲ್ಲದೆ ಚುಕ್ಕುಬುಕ್ಕುವಿನಲ್ಲಿ ಮತ್ತೇನಿದೆ?
ಚುಕ್ಕುಬುಕ್ಕುವನ್ನು ಒಂದು ಲವಲವಿಕೆಯ ಓದುಗರ ಕೂಡುಸ್ಥಳವನ್ನಾಗಿಸಬೇಕೆಂಬುದು ನಮ್ಮ ಆಶಯ. ಇಲ್ಲಿ ಸದಾ ಯಾವುದಾದರೊಂದು ಸ್ಪರ್ಧೆ, ಚರ್ಚೆಗಳು ನಡೆಯುತ್ತಿರುತ್ತವೆ. ನೀವು ಪಾಲ್ಗೊಳ್ಳಬಹುದು. ಬಹುಮಾನಗಳನ್ನು ಗೆಲ್ಲಬಹುದು. ಈ ತಾಣ ಏನಾಗಿ ರೂಪುಗೊಳ್ಳಬೇಕೆಂಬುದು ನಿಮ್ಮ ಪಾಲ್ಗೊಳ್ಳುವಿಕೆಯ ಮೇಲೆಯೂ ಅವಲಂಬಿತವಾಗಿದೆ. ಮತ್ತೆ ಮತ್ತೆ ಭೇಟಿಕೊಡಿ. ನಿಮ್ಮ ತಾಣವನ್ನಾಗಿ ಇದನ್ನು ರೂಪಿಸಿ.
 ಚುಕ್ಕುಬುಕ್ಕು ಜಾಲತಾಣ ಕೊಂಡಿ: http://chukkubukku.com


Wednesday, December 26, 2012

ಹಳದಿ ಬಣ್ಣದ ಅಂಟುಚೀಟಿ Yellow Stickies

ಹಳದಿ ಬಣ್ಣದ ಅಂಟುಚೀಟಿ ಬಳಸಿದ್ದೀರಿ ತಾನೆ. ಏನೇನೋ ಕೆಲಸಗಳನ್ನು ಮಾಡಬೇಕಾಗಿದೆ. ಕೆಲವೆಲ್ಲ ಮರೆತು ಹೋಗುತ್ತವೆ. ಅದಕ್ಕಾಗಿ ಅಲ್ಲಿ ಇಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಹಳದಿ ಬಣ್ಣದ (ಈಗೀಗ ಬೇರೆ ಬೇರೆ ಬಣ್ಣಗಳಲ್ಲು ಬರುತ್ತಿವೆ) ಅಂಟಿಸಿ ಪುನಃ ತೆಗೆಯಬಹುದಾದ ಸ್ಟಿಕೀ ನೋಟ್ಸ್‌ಗಳನ್ನು ಬಳಸುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಗಣಕಗಳಲ್ಲೂ ಇದೇ ಮಾದರಿಯ ಸ್ಟಿಕಿನೋಟ್ಸ್ ತಂತ್ರಾಂಶ ಲಭ್ಯವಿದೆ. ಇದು ವಿಂಡೋಸ್ ಜೊತೆ ಬರುವ ಸ್ಟಿಕಿನೋಟ್ಸ್ ತಂತ್ರಾಂಶಕ್ಕಿಂತ ಚೆನ್ನಾಗಿದೆ. ಇದರಲ್ಲಿ ಚಿತ್ರಗಳನ್ನೂ ಸೇರಿಸಬಹುದು. ಸ್ನೇಹಿತರ ಜೊತೆ ಹಂಚಿಕೊಳ್ಳಲೂಬಹುದು.
ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ.   http://www.zhornsoftware.co.uk/stickies/download.html

Tuesday, December 25, 2012

ಆಗಸದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ನೋಡಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರವನ್ನು (ಐ.ಎಸ್.ಎಸ್.) ನೋಡಬೇಕು ಎಂಬ ಆಸೆ ಇದೆಯೇ? ಅಂತಹ ಆಸೆ ಇದ್ದರೆ ಅದಕ್ಕೆ ಈಗ ಅವಕಾಶ ಇದೆ. ನಿಮ್ಮ ಮನೆಯ ಮೇಲಿನಿಂದ ಐ.ಎಸ್.ಎಸ್ ಹಾದು ಹೋಗುವುದಿದ್ದರೆ ಬರಿಗಣ್ಣಿನಿಂದ ಅದನ್ನು ನೋಡುವುದಕ್ಕೆ ಸಾಧ್ಯ ಇದೆ. ಇದಕ್ಕಾಗಿ ನಾಸಾ ಹೊಸ ಎಸ್.ಎಂ.ಎಸ್ ಸೇವೆಯನ್ನು ಆರಂಭಿಸಿದೆ.
"ಐ.ಎಸ್.ಎಸ್ ನೋಡಿ" ಎಂಬ ಕೇಂದ್ರವನ್ನು ನಾಸಾ ಆರಂಭಿಸಿದೆ. ಅಲ್ಲಿ ನೀವು ನೋಂದಣಿ ಮಾಡಿಕೊಂಡರೆ ಐ.ಎಸ್.ಎಸ್ ನಿಮ್ಮ ಮನೆಯ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ನಾಸಾ ನಿಮಗೆ ಎಸ್.ಎಂ.ಎಸ್ ಕಳುಹಿಸುತ್ತದೆ. ಆಗ ನೀವು ಬರಿಗಣ್ಣಿನಿಂದ ಐ.ಎಸ್.ಎಸ್ ಅನ್ನು ನೋಡಬಹುದು.
ಮುಂಜಾನೆ ಮತ್ತು ಮುಸ್ಸಂಜೆ ಆಕಾಶ ಅತ್ಯಂತ ಶುಭ್ರವಾಗಿರುವಾಗ ಬಾಹ್ಯಾಕಾಶ ಕೇಂದ್ರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಇದು ವೇಗವಾಗಿ ಹಾದು ಹೋಗುವ ಬೆಳಕಿನ ಕಿರಣದಂತೆ ಕಾಣಿಸುತ್ತದೆ.  ಜಾಲತಾಣ ಕೊಂಡಿ: http://spotthestation.nasa.gov

ಎರಡನೇ ವರ್ಷದ ಹರುಷದಲ್ಲಿ

ಈ ಡಿಸೆಂಬರ್ 25-12-2012ರ [ಎರಡು ವರ್ಷ] ದ ಹೊತ್ತಿಗೆ ಸರಿಯಾಗಿ 
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣ ವಿಶ್ವದಾದ್ಯಂತ "28000+" ಹೆಚ್ಚು ಬಾರಿ ತೆರೆದುಕೊಂಡಿದೆ.
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣದಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ.
ಜೊತೆಗೆ ನನ್ನ ನೆಚ್ಚಿನ ದಿನ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ "ಟೆಕ್ ಕನ್ನಡ" ಎಂಬ ಶಿರ್ಷೀಕೆಯಡಿಯಲ್ಲಿ  ತಂತ್ರಜ್ಞಾನದಿಂದ ಸಾಮಾನ್ಯನೆಡೆಗೆ ಎಂಬ ಅಂಕಣದಲ್ಲಿ ತಂತ್ರಜ್ಞಾನ, ಕಲಿಕೆ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮುಂತಾದ ವಿಚಾರಗಳನ್ನು ಓದುಗರಿಗೆ ತಲುಪಿಸುವ ಪ್ರಯತ್ನಕ್ಕೆ ಅನುವು ಮಾಡಿಕೊಟ್ಟ ಸಯುಂಕ್ತ ಕರ್ನಾಟಕ ದಿನ ಪತ್ರಿಕೆಯ ಸುದ್ದಿ ಸಂಪಾದಕರಾದ ಶ್ರೀಯುತ ಚಾಮರಾಜ ಸವಡಿ ರವರಿಗೆ ನಾನು ಕೃತಜ್ಞ.
ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

Thursday, December 6, 2012

ಗೂಗಲ್ ಸ್ಟೀಟ್‌ವ್ಯೂ

ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ಜಗತ್ತಿನ ಸುಮಾರು ಹದಿನೇಳು ದೇಶಗಳ ರಸ್ತೆಯ ದೃಶ್ಯಗಳನ್ನು ನೇರವಾಗಿ ಜನರಿಗೆ ಒದಗಿಸುತ್ತದೆ. ಕಾರು, ಬಸ್, ಇನ್ನಿತರೆ ವಾಹನಗಳು, ಜನರು ಹಿಡಿದಿರುವ ಕ್ಯಾಮರಾದ ಮೂಲಕ ರಸ್ತೆಯ ದೃಶ್ಯಗಳನ್ನು ನೇರವಾಗಿ ಸೆರೆಹಿಡಿದು, ಗೂಗಲ್ ಮ್ಯಾಪ್ ತಾಣದ ಮೂಲಕ ಅದನ್ನು ಜನರೊಂದಿಗೆ ಹಂಚಿಕೊಳ್ಳುವ ಗೂಗಲ್ ಸ್ಟ್ರೀಟ್‌ವ್ಯೂ ಸೇವೆಯು ನಾರ್ವೆ, ಸಿಂಗಾಪೂರ್, ಕೆನಡಾ, ಮಲೇಶ್ಯಾ, ಥೈಲ್ಯಾಂಡ್, ಅಮೆರಿಕಾ, ಲಂಡನ್, ಸ್ವೀಡನ್, ಡೆನ್ಮಾರ್ಕ್, ಟೈವಾನ್, ಇಟೆಲಿ, ಡೆನ್ಮಾರ್ಕ್ ಮೊದಲಾದ ಜಗತ್ತಿನ ಸುಮಾರು ಹದಿನೇಳು ದೇಶಗಳ ದೃಶ್ಯಗಳನ್ನು ಒಳಗೊಂಡಿದೆ. ಗೂಗಲ್ ತನ್ನ ಸ್ಟ್ರೀಟ್‌ವ್ಯೂನಲ್ಲಿ ಇಪ್ಪತ್ತೈದು ಸಾವಿರ ಮೈಲು ವಿವರಗಳನ್ನು ಹೊಂದಿದೆ. ಜಾಲತಾಣ ಕೊಂಡಿ: http://goo.gl/22Cly  ಅಥವಾ http://maps.google.co.in/intl/en/help/maps/streetview

ಸೃಜನಶೀಲರಿಗೆ ಸಾಮಾಜಿಕ ಜಾಲತಾಣ (ಕ್ಯುಕಿ)


ಇಂದು ಜಗತ್ತಿನ ಅಂರ್ತಜಾಲದಲ್ಲಿ ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡಿನ್, ಗೂಗಲ್ ಪ್ಲಸ್, ಆರ್ಕುಟ್, ಯೂಟ್ಯೂಬ್ ಗೀಗೆ ಹಲವು ಹತ್ತು ಸಾಮಾಝಿಕ ಮಾಧ್ಯಮಗಳಿವೆ. ಇಂಥದೇ, ಇದಕ್ಕಿಂತ ಸೂಕ್ಷ್ಮ ಹಾಗೂ ಸೃಜನಶೀಲತೆಗೆ ಮೀಸಲಾದ ಬಹು ನಿರೀಕ್ಷಿತ ಸಾಮಾಜಿಕ ಮಾಧ್ಯಮ "ಕ್ಯುಕಿ" ಜಾಗತಿಕ ಮಟ್ಟದಲ್ಲಿ  ಹುಟ್ಟಿಕೊಂಡಿದೆ. ಕಲಾ ಪ್ರಪಂಚದಲ್ಲಿ ಈ ರಾಷ್ಟ್ರದ ಇಬ್ಬರು ಹೆಮ್ಮೆಯ ಪುತ್ರರೆನಿಸಿದ ಮುಂಬೈನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ, ನಟ, ನಿರ್ಮಾಪಕ ಶೇಖರ್ ಕಫೂರ್ ಮತ್ತು ಆಸ್ಕರ್, ಗ್ರಾಮ್ಮೀ ಪ್ರಶಸ್ತಿ ವಿಜೇತ, ಪ್ರಸ್ತುತ ಭಾರತೀಯ ಚಲನಚಿತ್ರ ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಕ್ಯುಕಿಯ ಅಪ್ಪ,ಅಮ್ಮಂದಿರು.

ಭಾರತದ ಮೂಲೆ ಮೂಲೆಯಲ್ಲಿರುವ ಸಾವಿರಾರು ಕ್ರಿಯಾಶೀಲ ಮನಸ್ಸುಗಳು ತೆರೆದುಕೊಳ್ಳಲು "ಕ್ಯುಕಿ" ಸೂಕ್ತ ವೇದಿಕೆಯಾಗಿ ರೂಪಗೊಳ್ಳುತ್ತಿದ್ದು ಕಲಾ ಪ್ರಪಂಚದಲ್ಲಿ ಭಾರತೀಯ ಮನಸ್ಸುಗಳ ಕಲ್ಪನೆಯ ಮೂರ್ತಸ್ವರೂಪ ಪಡೆಯಲು "ಕ್ಯುಕಿ" ಮೊದಲ ಮೆಟ್ಟಿಲಾಗಲಿದೆ. ನಮ್ಮ ದೇಶಾದ್ಯಂತ ಪ್ರತಿಭಾನ್ವೇಷಣೆಯಲ್ಲಿ ಯುವ ಮನಸ್ಸುಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಒಂದು ಸೃಜನಶೀಲ ಸಾಮಾಜಿಕ ಜಾಲತಾಣ ರೂಪಿಸಿದ್ದಾರೆ. ಜಾಲತಾಣದಲ್ಲಿ ಆಗಲೇ ಸೃಜನಶೀಲ ಮನಸುಗಳು ಖಾತೆ ತೆರಿದಿದ್ದು ಅಸಂಖ್ಯಾತ ಸಂಖ್ಯೆಯಲ್ಲಿ ಖಾತೆಗಳು ತೆರೆಯಬೇಕಾಗಿದೆ. ಜಾಲತಾಣ ವಿಳಾಸ ಕೊಂಡಿ: http://www.qyuki.com