WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!
Showing posts with label source: ಗಣಕಿಂಡಿ. Show all posts
Showing posts with label source: ಗಣಕಿಂಡಿ. Show all posts

Wednesday, December 26, 2012

ಹಳದಿ ಬಣ್ಣದ ಅಂಟುಚೀಟಿ Yellow Stickies

ಹಳದಿ ಬಣ್ಣದ ಅಂಟುಚೀಟಿ ಬಳಸಿದ್ದೀರಿ ತಾನೆ. ಏನೇನೋ ಕೆಲಸಗಳನ್ನು ಮಾಡಬೇಕಾಗಿದೆ. ಕೆಲವೆಲ್ಲ ಮರೆತು ಹೋಗುತ್ತವೆ. ಅದಕ್ಕಾಗಿ ಅಲ್ಲಿ ಇಲ್ಲ ಸಿಕ್ಕ ಸಿಕ್ಕಲ್ಲೆಲ್ಲ ಹಳದಿ ಬಣ್ಣದ (ಈಗೀಗ ಬೇರೆ ಬೇರೆ ಬಣ್ಣಗಳಲ್ಲು ಬರುತ್ತಿವೆ) ಅಂಟಿಸಿ ಪುನಃ ತೆಗೆಯಬಹುದಾದ ಸ್ಟಿಕೀ ನೋಟ್ಸ್‌ಗಳನ್ನು ಬಳಸುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಗಣಕಗಳಲ್ಲೂ ಇದೇ ಮಾದರಿಯ ಸ್ಟಿಕಿನೋಟ್ಸ್ ತಂತ್ರಾಂಶ ಲಭ್ಯವಿದೆ. ಇದು ವಿಂಡೋಸ್ ಜೊತೆ ಬರುವ ಸ್ಟಿಕಿನೋಟ್ಸ್ ತಂತ್ರಾಂಶಕ್ಕಿಂತ ಚೆನ್ನಾಗಿದೆ. ಇದರಲ್ಲಿ ಚಿತ್ರಗಳನ್ನೂ ಸೇರಿಸಬಹುದು. ಸ್ನೇಹಿತರ ಜೊತೆ ಹಂಚಿಕೊಳ್ಳಲೂಬಹುದು.
ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ.   http://www.zhornsoftware.co.uk/stickies/download.html

Monday, April 16, 2012

ಭಾರತೀಯ ಹೂಗಳ ಮಾಹಿತಿಗಾಗಿ ಅಂರ್ತಜಾಲತಾಣ

ಹೂವುಗಳನ್ನು ಮೆಚ್ಚದವರಾರು? ಹೂವುಗಳು ಎಲ್ಲರಿಗೂ ಇಷ್ಟ. ಹೂವುಗಳ ಫೋಟೋ ತೆಗೆಯುವವರೂ ತುಂಬ ಮಂದಿ. ಹೂವುಗಳ ಫೋಟೋ ನೋಡಿದೊಡನೆ ಮನಸ್ಸಿನಲ್ಲಿ ಅದರ ಬಗ್ಗೆ ಹಲವು ನೆನಪುಗಳು ಮೂಡುತ್ತವೆ. ಅದೆಲ್ಲ ಸರಿ. ಆದರೆ ಅದರ ಹೆಸರು ಗೊತ್ತಾಗುತ್ತದೆಯೇ? ಕೆಲವು ಸಾಮಾನ್ಯ ಹೂವುಗಳಿಗೆ ಕೂಡ ನಮಗೆ ನಾವು ಮನೆಯಲ್ಲಿ ಬಳಸುವ ಹೆಸರು ಗೊತ್ತಿರುತ್ತದೆ, ಆದರೆ ಅದರ ವೈಜ್ಞಾನಿಕ ಹೆಸರು ಗೊತ್ತಿರುವುದಿಲ್ಲ. ಭಾರತದ ಪ್ರಮುಖ ಹೂವುಗಳ ಫೋಟೋ ಮತ್ತು ವಿವರ ಇಲ್ಲಿವೆ. ಭಾರತೀಯ ಹೂವುಗಳಿಗೆಂದೇ ಇರುವ ಜಾಲತಾಣ.

Friday, March 30, 2012

ವಿದ್ಯುನ್ಮಾನ ಮದುವೆ

ಅಂತರಜಾಲದಲ್ಲಿ ಪ್ರತಿಯೊಂದಕ್ಕೂ ಒಂದೊಂದು ಜಾಲತಾಣವಿರುವಾಗ ಮದುವೆಗೂ ಬೇಕಲ್ಲವೇ? ಹೌದು. ಅದಕ್ಕೂ ಹಲವಾರು ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ ಮದುವೆಯನ್ನು ಯೋಚಿಸುವಲ್ಲಿಂದ ಹಿಡಿದು ಮಧುಚಂದ್ರ ಮುಗಿಸಿ ಬರುವ ತನಕ ವಿವಿಧ ಹಂತಗಳಿಗೆ ಇದರಲ್ಲಿ ಸೂಕ್ತ ವಿಭಾಗಗಳಿವೆ. ವಧೂವರರ ಭಾವಚಿತ್ರ, ಅವರು ಹೇಗೆ ಭೇಟಿಯಾದರೆಂಬ ವಿವರ, ಎಲ್ಲಿ ಯಾವಾಗ ಮದುವೆ, ಬಂಧುಮಿತ್ರರಿಗೆ ಆಹ್ವಾನ ಕಳುಹಿಸುವುದು, ತಮಗೇನು ಬೇಕು ಎಂಬ ಆಶಾಪಟ್ಟಿ, ಹೀಗೆ ಹಲವು ರೀತಿಯಲ್ಲಿ ಮದುವೆಗೆ ಸಹಾಯ ಮಾಡುವ ಸವಲತ್ತುಗಳಿವೆ. ಮದುವೆಗೆ ಬರುವವರು ತಮಗೆ ಯಾವ ರೀತಿಯ ಆಹಾರ ಬೇಕು ಎಂಬಂತಹ ವೋಟಿಂಗ್ ಕೂಡ ತಯಾರಿಸಬಹುದು.

Friday, March 23, 2012

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ ವಿಜ್ಞಾನದ ಪ್ರಾತ್ಯಕ್ಷಿಕೆ

ವಿಜ್ಞಾನ ಎಂದೆಂದಿಗೂ ಕುತೂಹಲಕಾರಿಯೇ. ನಾವು ಪ್ರತಿದಿನ ಮನೆಗಳಲ್ಲಿ ಮಾಡುವ ಹಲವು ಕೆಲಸಗಳ ಹಿಂದೆ ವಿಜ್ಞಾನದ ತತ್ತ್ವಗಳಿವೆ. ಅಂಗಳಕ್ಕೆ ಬಂದು ಆಕಾಶ ನೋಡಿದರೆ ಕಾಣುವ ನಕ್ಷತ್ರಗಳು ಶತಮಾನಗಳಿಂದ ಮಾನವನ ಆಸಕ್ತಿಯನ್ನು ಕೆರಳಿಸುತ್ತಲೇ ಬಂದಿವೆ. ದೋಸೆ ಕಾವಲಿ ಬಿಸಿಯಾಗಿದೆಯೇ ಎಂದು ತಿಳಿಯಲು ಗೃಹಿಣಿ ಸ್ವಲ್ಪ ನೀರು ಚಿಮುಕಿಸಿ ನೋಡುವುದರ ಹಿಂದೆ ಭೌತಶಾಸ್ತ್ರದ ಸಿದ್ಧಾಂತ ಅಡಗಿದೆ. ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಅದನ್ನು ತಿಳಿದುಕೊಳ್ಳಲು ಆಸಕ್ತಿ ಮೂಡಿಸುವುದು ಪಾಲಕರ ಮತ್ತು ಶಿಕ್ಷಕರ ಹೊಣೆಗಾರಿಕೆ. ಇದರಿಂದ ತಪ್ಪಿಸಕೊಳ್ಳುವಂತೆಯೇ ಇಲ್ಲ. ವಿಜ್ಞಾನವಿಲ್ಲದೆ ಜೀವನವಿಲ್ಲ. ದೈನಂದಿನ ಜೀವನದಲ್ಲಿ ಅಡಕವಾಗಿರುವ ವಿಜ್ಞಾನದ ಸಿದ್ಧಾಂತಗಳ ಬಗ್ಗೆ ಅರಿವು ಮೂಡಿಸುವ ಜಾಲತಾಣ ವಿಜ್ಞಾನದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪಾಲಕರಿಗೆ, ಎಲ್ಲ ಹಂತಗಳವರಿಗೆ, ಇಲ್ಲಿ ಸೂಕ್ತ ಮಾಹಿತಿ, ಪ್ರಾತ್ಯಕ್ಷಿಕೆ ಎಲ್ಲ ಇವೆ. 

Thursday, March 1, 2012

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.