WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Friday, March 23, 2012

ವಿಡಿಯೋ ಕ್ಲಿಪ್‌ಗಳನ್ನು ಪರಸ್ಪರ ಹಂಚಿಕೊಳ್ಳಲು ಜಾಲತಾಣ

ಈ ಅಂತರ್ಜಾಲ ತಾಣದಲ್ಲಿ ವಿಡಿಯೋಗಳನ್ನು ಪರಸ್ಪರ ಹಂಚಿಕೊಳ್ಳಲು ಬರುತ್ತದೆ.ಇದೂ ಇನ್ನೊಂದು ಬಗೆಯ ಸಾಮಾಜಿಕ ಜಾಲತಾಣವಾದರೂ, ವಿಡಿಯೋ ಕ್ಲಿಪ್‌ಗಳ ಕಡೆ ಹೆಚ್ಚಿನ ಒತ್ತು ನೀಡಿರುವುದು ಈ ತಾಣದ ವೈಶಿಷ್ಟ್ಯ.

ವಿಶ್ವವಿದ್ಯಾಲಯ ಆನ್‌ಲೈನ್ ಪ್ರಶ್ನೆಪತ್ರಿಕೆ


ಆನ್‌ಲೈನ್ ಮೌಲ್ಯಮಾಪನದ ನಂತರ, ಇದೀಗ ಪ್ರಶ್ನೆಪತ್ರಿಕೆಗಳ ಬಟವಾಡೆಗೆ ಅಂತರ್ಜಾಲದ ಬಳಕೆ ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸುದ್ದಿಯಲ್ಲಿದೆ. ಬೆಳಗಾವಿ ವಿಭಾಗದಲ್ಲಿ ಆನ್‌ಲೈನ್ ಪ್ರಶ್ನೆಪತ್ರಿಕೆ ರವಾನೆ ವ್ಯವಸ್ಥೆಯನ್ನು ಸಫಲವಾಗಿ ಬಳಸಿ,ಇನ್ನಿದನ್ನು ರಾಜ್ಯದಲ್ಲೆಡೆ ಬಳಕೆ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.ಕಾಲೇಜುಗಳಿಗೆ ಪರೀಕ್ಷೆ ನಡೆವ ದಿನವೇ ಪ್ರಶ್ನೆಪತ್ರಿಕೆಯ ಇ-ಪ್ರತಿ ಕಳುಹಿಸಿ,ಪರೀಕ್ಷಾ ಕೇಂದ್ರಗಳಲ್ಲಿ ಅವನ್ನು ಮುದ್ರಿಸಿ, ಪರೀಕ್ಷೆ ನಡೆಸುವುದೇ ಈ ವ್ಯವಸ್ಥೆ.ಮಾಮೂಲು ಮಿಂಚಂಚೆ ಸೇವೆಯನ್ನು ಈ ವ್ಯವಸ್ಥೆ ಬಳಸುತ್ತಿಲ್ಲ. ಅಂತರ್ಜಾಲದಲ್ಲಿ ಖಾಸಗಿ ಜಾಲವನ್ನು ಏರ್ಪಡಿಸಿ, ತಂತ್ರಾಂಶವೊಂದನ್ನು ಬಳಸಿ ಇದನ್ನು ಕಾರ್ಯಗತಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಮಾಹಿತಿ ಸೋರಿಕೆ ತಡೆಗೆ ಗೂಢಲಿಪಿಯನ್ನು ಆಧರಿಸಿದ ಭದ್ರತಾ ವ್ಯವಸ್ಥೆಯಿದೆ. http://www.vtu.ac.in/

Wednesday, March 21, 2012

ಸ್ಯಾಮ್ಸಂಗ್ ಫೋನ್ ಗೆ ಆನ್ಲೈನ್ ಅಂಗಡಿ

ಸ್ಯಾಮ್ಸಂಗ್ ಇಂಡಿಯಾ ಈಗ ಭಾರತೀಯ ಗ್ರಾಹಕರಿಗೆ ತನ್ನದೇ ಆದ ಹೊಸ ಆನ್ಲೈನ್ ಮಳಿಗೆಯನ್ನು ಪ್ರಾರಂಭಿಸಿದೆ.
ಇದರೊಂದಿಗೆ ನೀವು ಈಗ ಸ್ಯಾಮ್ಸಂಗ್ ಕಂಪನಿಯ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಹಾಗು ಬಿಡಿಭಾಗಗಳನ್ನು ಇಲ್ಲೇ ಕೊಳ್ಳಬಹುದು. ಹಣ ಪಾವತಿಗಾಗಿ ಆನ್ಲೈನ್ (ಡೆಬಿಟ್ / ಕ್ರೆಡಿಟ್ ಕಾರ್ಡ್) ಸೌಲಭ್ಯ ಹಾಗು ಖರೀದಿಸಿದ ವಸ್ತು ಮನೆಗೆ ಬಂದ ಮೇಲೆ ಹಣ ಪಾವತಿ ಮಾಡುವ ಆಯ್ಕೆಯನ್ನೂ ಕೊಟ್ಟಿದೆ.
ನಿಮ್ಮ ಹತ್ತಿರದ ಮೊಬೈಲ್ ಅಂಗಡಿಗಿಂತಲೂ ಕಡಿಮೆ ಬೆಲೆಯಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಇಲ್ಲಿ ಸಿಗಲಿದ್ದು, ಕೆಲವು ಮೊಬೈಲುಗಳ ಮೇಲೆ ಡಿಸ್ಕೌಂಟ್ ಕೂಡಾ ಇದೆ.
ಹಾಗಾದರೆ ತಡ ಯಾಕೆ. ಖರೀದಿ ಮಾಡಲು ಇಲ್ಲವೆ ಬೆಲೆಯನ್ನು ಚೆಕ್ ಮಾಡಲು ಭೇಟಿ ಕೊಡಿ .

Tuesday, March 20, 2012

ವಾರಂಟಿಫೈ

ನಾವು ದಿನನಿತ್ಯದ ಬದುಕಲ್ಲಿ ಹಲವಾರು ವಸ್ತುಗಳನ್ನು ಖರೀದಿಸುತ್ತೇವೆ. ಅದೆಷ್ಟೋ ಬಿಲ್ಲುಗಳನ್ನು ಜೇಬಿನಲ್ಲಿ ಇಲ್ಲವೆ ಪರ್ಸಿನಲ್ಲಿ ತುರುಕಿರುತ್ತೇವೆ. ಕೊಂಡುಕೊಂಡ ವಸ್ತು ಕೆಟ್ಟಾಗ ಇಲ್ಲವೆ ಹಾನಿಯಾದಾಗ ಅದರ ಬಿಲ್ಲುಗಳು ಸಿಗದಿದ್ದರೆ ಪರದಾಡಬೇಕಾಗುತ್ತದೆ.
ಇನ್ನುಮುಂದೆ ನೀವು ಯಾವುದೇ ವಾರಂಟಿ ಇರುವ ವಸ್ತು ಖರೀದಿಸಿದಾಗ ಅದರ ಬಿಲ್ಲನ್ನು ಜೋಪಾನ ಮಾಡುವ ವಾರಂಟಿಫೈ ಎಂಬ ಆಪ್ (App) ಬಂದಿದೆ. ಇದನ್ನು ನೀವು ನಿಮ್ಮ ಸ್ಮಾರ್ಟ್ಫೋನ್ ಹಾಗು ಆಪಲ್ ನ ಉತ್ಪನ್ನಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಆ ಬಿಲ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಸ್ಕ್ಯಾನ್ ಆದ ನಿಮ್ಮ ಬಿಲ್ಲುಗಳನ್ನು ವಾರಂಟಿಫೈ ನ ಸರ್ವರುಗಳು ಎಷ್ಟೇ ವರ್ಷವಾದರೂ ಸರಿ ಜೋಪಾನ ಮಾಡುತ್ತವೆ.
ಇದಷ್ಟೇ ಅಲ್ಲದೆ ವಾರಂಟಿ ಕೊನೆಯಾಗುವ ಸಮಯವನ್ನು ಅದೇ ನೆನಪಿಸುತ್ತದೆ ಹಾಗು ಆನ್ಲೈನ್ ನಲ್ಲೇ ವಾರಂಟಿಯನ್ನು ವಿಸ್ತರಿಸಬಹುದು.
ಈ ಆಪ್ ಅನ್ನು ನಿಮ್ಮ ಆಪಲ್ ಹಾಗು ಆಂಡ್ರಾಯ್ಡ್ ಫೋನುಗಳಿಗೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ  

Sunday, March 18, 2012

ಸ್ತೋತ್ರಸಂಗ್ರಹ

ಕಗ್ಗ ರಸಧಾರೆ

ಮಂಕುತಿಮ್ಮನ ಕಗ್ಗಗಳ ವಿಚಾರ ಮಂಥನ 

ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು

ASCII2UNICODE

Text Encoding Converter for Kannada
ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದು. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ, ಅದನ್ನು ಕಾಪಿ ಮಾಡಿಕೊಂಡು ಫೈಲ್ ಗಳಲ್ಲಿ ಸೇವ್ ಮಾಡಿಕೊಳ್ಳಿ. 

Saturday, March 17, 2012

ಶ್ರೀಯುತ ಡಾ|| ದೊಡ್ಡರಂಗೇಗೌಡ ರ ಅಂತರ್ಜಾಲ ತಾಣ


ಶ್ರೀಯುತ ಡಾ|| ದೊಡ್ಡರಂಗೇಗೌಡರು ಕನ್ನಡದ ವಿಶಿಷ್ಟ ಸಾಹಿತಿ ಮತ್ತು ಲೇಖಕರು. ಇವರು ಎಲ್ಲಾ ತೆರನಾದ ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇವರು ಬರೆದ ನೂರಾರು ಚಿತ್ರಗೀತೆಗಳಂತೂ ಕನ್ನಡಿಗರ ಜನಮಾನಸದಲ್ಲಿ ಸದಾ ಗುನುಗುಡುತ್ತಿರುತ್ತವೆ. ಅದಲ್ಲದೇ ಭಾವಗೀತೆ, ಕವನ, ಪ್ರವಾಸ ಕಥನ ಮತ್ತು ಇನ್ನಿತರೆ ಹತ್ತು ಹಲವಾರು ಪುಸ್ತಕಗಳಲ್ಲಿ ದೊ.ರಂ.ಗೌ. ಅವರು ಕನ್ನಡಕ್ಕೆ ತಮ್ಮದೇ ಆದ ವಿಶೇಷ ಸೇವೆ ಸಲ್ಲಿಸಿದ್ದಾರೆ.
ದೊ.ರಂ.ಗೌ. ಅವರು ನಾಡಿನಲ್ಲಷ್ಟೇ ಅಲ್ಲದೇ ದೇಶ ವಿದೇಶಗಳಲ್ಲೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದೂರದಲ್ಲಿರುವ ಕನ್ನಡಿಗರಿಗೂ ಸಹ ಶ್ರೀಯುತರ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಅಂತರ್ಜಾಲ ತಾಣವನ್ನು ರಚಿಸಲಾಗಿದೆ. ಇಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಗೌಡರ ಮತ್ತು ಅವರ ಸಾಹಿತ್ಯದ ಪರಿಚಯ ಮಾಡಿಕೊಡಲು ಯತ್ನಿಸಲಾಗಿದೆ.
ನೀವೂಮ್ಮೆ  ಭೇಟಿಕೊಡಬಾರದೇಕೆ? ವಿಳಾಸ: http://www.doddarangegowda.com/

ಆನ್ ಲೈನ್ ನಲ್ಲಿ ಪಾಸ್ ಪೂರ್ಟ್ ಅರ್ಜಿ

Wednesday, March 7, 2012

ಗೂಗಲ್ ಪ್ಲೇ

ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪ್ಲೇ, ಗೂಗಲ್ ನ ಆನ್ಲೈನ್ ಮಳಿಗೆಯಾಗಿದ್ದು ನೀವು ಮೊಬೈಲ್ ಸಾಧನಗಳು, ಸಂಗೀತ, ಪುಸ್ತಕಗಳು, ಡಿಜಿಟಲ್ ವಸ್ತುಗಳು, ಆಪ್ ಗಳು, ವೀಡಿಯೋ ಗಳನ್ನು, ಗೇಮ್ಸ್ ಗಳನ್ನು ಖರೀದಿಸಬಹುದು.

ಗೂಗಲ್ ತನ್ನ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯುತ್ತಿದ್ದ ಮಳಿಗೆಯ ಹೆಸರಿನ್ನು ಬದಲಿಸಿದೆ.
ಗೂಗಲ್ ಪ್ಲೇ ಒಮ್ಮೆ ನೋಡಲು ಕ್ಲಿಕ್ ಮಾಡಿ. https://play.google.com/store

Tuesday, March 6, 2012

ಚಂದ್ರುಲೋಕದಲ್ಲಿ ಎಲ್ಲವೂ ಚಂದ

28-02-2012 ನನ್ನ ನೆಚ್ಚಿನ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ 13ನೇ ಪುಟದಲ್ಲಿ ಬ್ಲಾಗ್ ಲೋಕ ( ಚಂದ್ರುಲೋಕದಲ್ಲಿ ಎಲ್ಲವೂ ಚಂದ ) ನನ್ನೆಲ್ಲ ಬ್ಲಾಗ್ ಗಳ ಬಗ್ಗೆ  ಸುದ್ದಿ ಪ್ರಕಟಣೆಗೊಂಡಿದೆ ಸ್ನೇಹಿತರೆ.! ನೀವೂ ಓದಿ ಕಾಮೆಂಟಿಸಿ....
ಹಾಗೆ ನನ್ನನ್ನು ಅಭಿನಂದಿಸಿದ  ನನ್ನೆಲ್ಲಾ ಬ್ಲಾಗ್ ಓದುಗ ಮಿತ್ರರಿಗೆ ನನ್ನ ಸ್ಮರಣೀಯ ವಂದನೆಗಳು.
!! ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ !!

ಟೆರ್ರಾಫುಗಿಯಾ: ಹಾರುವ ಕಾರು

ಹಕ್ಕಿಗೆ ಬಾನಿನಲ್ಲಿ ಹಾರುವ ಆಸೆ ನದಿಗೆ ಸಾಗರವ ಸೇರುವ ಆಸೆ.. ರಸ್ತೆಯಲ್ಲಿ ಸಾಗುವ ಕಾರಿಗೂ ಬಾನಲ್ಲಿ ಆಸೆ. ನಂಬಿದರೆ ನಂಬಿ ಹಾರುವ ಕಾರೊಂದು ರಸ್ತೆಗೆ ಅಲ್ಲಲ್ಲ ಆಕಾಶಕ್ಕೆ ಹಾರಲಿದೆ.

ಟೆರ್ರಾಫುಗಿಯಾ ಎಂದರೆ ಅಮೆರಿಕದ ದೊಡ್ಡ ಕನಸಿನ ಸಣ್ಣ ಕಂಪನಿ. ಕಂಪನಿಯು ಹಾರುವ ಕಾರಿನ ಕಾನ್ಸೆಪ್ಟನ್ನು ಹಲವು ವರ್ಷಗಳ ಹಿಂದೆಯೇ ಪ್ರದರ್ಶಿಸಿತ್ತು. ಇದೀಗ ಈ ಕಾರು ಉತ್ಪಾದನಾ ಹಂತಕ್ಕೆ ತಲುಪಿದೆ. ಈ ಕಾರು ದುಬಾರಿ. ಅಂದ್ರೆ 2.79 ಲಕ್ಷ ಡಾಲರ್.  ಟೆರ್ರಾಫುಗಿಯಾ ಹಾರುವ ಕಾರು ಅಮೆರಿಕದಲ್ಲಿ ಮಾರಾಟಕ್ಕೆ ರೆಡಿಯಾಗಲಿದೆ.

ಈ ಕಾರಿನಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಕೇವಲ 30 ಸೆಕೆಂಡಿನಲ್ಲಿ ಇದು ಕಾರಿನಿಂದ ವಿಮಾನಕ್ಕೆ ಪರಿವರ್ತನೆ ಗೊಳ್ಳಲಿದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಈ ಕಾರು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ. ದುಡ್ಡು ನಮ್ಮಲ್ಲಿ ಬೇಕಾದಷ್ಟು ಇದೆ ಅಂತ ನೀವು ಅಂದುಕೊಂಡರೂ ಇದನ್ನು ಖರೀದಿಸುವುದು ಸುಲಭವಲ್ಲ. ಇದಕ್ಕೆ ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ

ಈಗಾಗಲೇ ಈ ಹಾರುವ ಕಾರಿಗೆ ಭಾರತದ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದಾರೆ. ಆದರೆ ದೇಶದ ಕೆಲವು ಇಲಾಖೆಯಿಂದ ಇನ್ನೂ ಸರಿಯಾದ ಸಮ್ಮತಿ ದೊರಕಿಲ್ಲ. ಕಂಪನಿಯ ಹಾರುವ ಕಾರಿಗೆ ಈಗಾಗಲೇ ಸುಮಾರು 100 ಜನರು ಬುಕ್ಕಿಂಗ್ ಮಾಡಿದ್ದಾರೆ.

Monday, March 5, 2012

ವಿಂಡೋಸ್ 8


ಬಳಕೆದಾರರಿಗೆ ಮುಂಬರುವ ಹೊಸ ವಿಂಡೋಸ್ 8ರ ಅನುಭವ ನೀಡಲು ಮೈಕ್ರೋಸಾಫ್ಟ್ ಆಪರೇಟೀಂಗ್ ವ್ಯವಸ್ಥೆ ತಂತ್ರಾಂಶದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.ಇದು ಸರ್ವ ಸಾಧನಗಳನ್ನು ಗಮನದಲ್ಲಿರಿಸಿ ಸಿದ್ಧ ಪಡಿಸಿರುವ ಆಪರೇಟಿಂಗ್ ವ್ಯವಸ್ಥೆಯಾಗಿರುವುದರಿಂದ.ಇದರಲ್ಲಿ ಡೆಸ್ಕ್‌ಟಾಪ್ ವ್ಯವಸ್ಥೆಯ ಮಾಮೂಲಿ ಬಳಕೆಗೆ ಒಗ್ಗದಿರಬಹುದು.ಆದರೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಬಳಕೆಯಲ್ಲಿ ಸ್ಪರ್ಶಸಂವೇದಿ ತೆರೆಗೆ  ಸೂಕ್ತವಾದ ಅನುಕೂಲತೆಗಳನ್ನಿದು ಹೊಂದಿದೆ ಎಂದು ಇದನ್ನು ಬಳಸಿದವರು ಪ್ರಮಾಣೀಕರಿಸಿದ್ದಾರೆ.ವಿಂಡೋಸ್ ಎಂಟನ್ನು ಅನುಸ್ಥಾಪಿಸಿದಾಗ, ಸ್ಟಾರ್ಟ್ ಬಟನ್ ಇತ್ಯಾದಿಗಳ ಮಾಮೂಲಿ ನೋಟ ಸಿಗದು. ವಿವಿಧ ಅಪ್ಲಿಕೇಶನ್‌ಗಳ ಐಕಾನುಗಳ ದರ್ಶನವಾದೀತು. ಮಾಮೂಲಿ ಡೆಸ್ಕ್‌ಟಾಪ್ ಅನುಭವ ನೀಡುವಂತೆ ಆಪರೇಟಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಿದರೆ, ವಿಂಡೋಸ್ 7ನ್ನು ಬಳಸಿದಂತೆ ಕಾಣಿಸಿ, ಹೊಸ ಆಪರೇಟಿಂಗ್ ವ್ಯವಸ್ಥೆಯಿದೆ ಎನ್ನುವುದೇ ಮರೆತೀತು ಎಂದು ಬಳಕೆದಾರರ ಮೊದಲ ಪ್ರತಿಕ್ರಿಯೆಗಳು ಹೇಳುತ್ತವೆ. ವಿಂಡೋಸ್ 8ರ 64ಬಿಟ್ ಆವೃತ್ತಿಯು 3.3ಜಿಬಿ ಹೊಂದಿದ್ದು. 32 ಬಿಟ್ ಆವೃತ್ತಿಯು 2.5ಜಿಬಿ ಹೊಂದಿರುತ್ತದೆ. ನೀವೂ ಹೊಸ ವಿಂಡೋಸ್ 8ನ್ನು ಪಡೆಯಲು ವಿಳಾಸ : http://windows.microsoft.com/en-US/windows-8/iso

Thursday, March 1, 2012

ಸ್ಯಾಮ್ಸಂಗ್ ನ ಚಾಟ್ ಆನ್ ಈಗ ವೆಬ್ ಬ್ರೌಸೆರ್ ನಲ್ಲಿ ಲಭ್ಯ



ಸ್ಯಾಮ್ಸಂಗ್ ಚಾಟ್ ಆನ್ (ChatON), ಮೆಸೆಂಜರ್ ಸೇವೆ ನೀಡುವ ಆಪ್ ಆಗಿದ್ದು ಈಗ ವೆಬ್ ಬ್ರೌಸರ್ ಮೂಲಕವೂ ಲಭ್ಯವಾಗಲಿದೆ.
ಸಾಮಾನ್ಯವಾಗಿ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ಗಳಲ್ಲಿ ಈ ಸೌಲಭ್ಯವಿದ್ದು, ನಿಮ್ಮ ಸ್ನೇಹಿತರ ಜೊತೆ ಗೂಗಲ್ ಚಾಟ್ ರೀತಿಯಲ್ಲಿ ಚಾಟ್ ಮಾಡಬಹುದಿತ್ತು. ಈಗ ವೆಬ್ ಮೂಲಕವೂ ಲಾಗಿನ್ ಮಾಡಿ ಚಾಟ್ ಮಾಡಲು ಸ್ಯಾಮ್ ಸಂಗ್ ಅನುವು ಮಾಡಿಕೊಟ್ಟಿದ್ದು, ಬಡಾ, ಐಓಎಸ್ ಹಾಗು ಆಂಡ್ರಾಯ್ಡ್ ಆಪ್ ಗಳಲ್ಲಿ ಈಗಾಗಲೇ ಲಭ್ಯವಿದೆ. .
ವೆಬ್ ಮೂಲಕ ಚಾಟ್ ಆನ್ (ChatON) ಲಾಗಿನ್ ಮಾಡಲು ಕ್ಲಿಕ್ ಮಾಡಿ 

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಗೊರಿಲ್ಲಾ ಗ್ಲಾಸ್ ಎಂದರೇನು ?

ಏನಪ್ಪಾ ಇದು ಗೊರಿಲ್ಲಾ ಪ್ರಾಣಿಗೆ ಬಳಸುವ ಗ್ಲಾಸ್ ಎಂದುಕೊಂಡಿರಾ? ಇದು ಮೊಬೈಲ್ ಪ್ಯಾನೆಲ್ ಗಳಿಗೆ ಉಪಯೋಗಿಸುವ ಅತ್ಯಂತ ಶಕ್ತಿಶಾಲಿ ತರಚು ನಿರೋಧಕ ಗಾಜು.
ಕಾರ್ನಿಂಗ್ ಎಂಬ ಕಂಪನಿ ಉತ್ಪಾದಿಸುವ ಈ ಗಾಜು ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಮೊಬೈಲ್ ಗಳ ಡಿಸ್ಪ್ಲೇ ಪ್ಯಾನೆಲ್ ಆಗಿ ಉಪಯೋಗಿಸಲ್ಪಡುತ್ತದೆ. ಈ ಗ್ಲಾಸ್ ತೆಳುವಾಗಿದ್ದು ಪ್ಲಾಸ್ಟಿಕ್ ಗಿಂತ 30 ಪಟ್ಟು ಹೆಚ್ಚು ಗಟ್ಟಿತನ ಹೊಂದಿದೆ. ಮೊದಲೆಲ್ಲಾ HD ಟಿ.ವಿ ಹಾಗು 3ಡಿ ಕನ್ನಡಕಗಳಲ್ಲಿ ಈ ಗ್ಲಾಸ್ಗಳನ್ನು ಬಳಸುತ್ತಿದ್ದು ಈಗ ಆಪಲ್ ನ ಐಫೋನ್- 4 ನಲ್ಲಿ ಕೂಡ ಬಳಸಲಾಗುತ್ತಿದೆ. ಈ ಗ್ಲಾಸ್ ಟ್ಯಾಬ್ಲೆಟ್ ಹಾಗು ಟಚ್ ಸ್ಕ್ರೀನ್ ಇರುವ ಫೋನ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಗೊರಿಲ್ಲಾ ಗ್ಲಾಸ್ ನ ಹೊಸ ಆವೃತ್ತಿ ಗೊರಿಲ್ಲಾ ಗ್ಲಾಸ್-2 ಮೇ ತಿಂಗಳಲ್ಲಿ ಬರಲಿದ್ದು ಈಗಿರುವ ಗ್ಲಾಸ್ ಗಿಂತಾ 20 % ಸಣ್ಣದಾಗಿ ಇರಲಿದೆಯಂತೆ.

Sunday, February 26, 2012

ನಿಮ್ಮ CAMERA ಕಳೆದುಹೋದರೆ Onlineನಲ್ಲಿ ಹುಡುಕುವುದು ಹೇಗೆ ?

ಇಷ್ಟಪಟ್ಟು ಖರೀದಿಸಿರುವ ಯಾವುದೇ ವಸ್ತು ಕಳೆದು ಹೋದರೆ ಎಷ್ಟು ಬೇಜಾರಾಗುತ್ತೆ ಅಂತಾ ಕಳೆದು ಕೊಂಡಿರುವುವರಿಗೆ ಮಾತ್ರ ಗೊತ್ತು.

ಅದರಲ್ಲೂ ನಮ್ಮ ನೆನಪುಗಳನ್ನು ಸೆರೆ ಹಿಡಿದು ಜೀವನ ಪೂರ್ತಿ ಜ್ಞಾಪಿಸಿಕೊಳ್ಳುವ ಚಿತ್ರಗಳು ತೆಗೆಯುವ ಕ್ಯಾಮರಾ ಕಳೆದು ಹೋದರೆ ಮನಸಿಗೆ ಇನ್ನಷ್ಟು ದುಗುಡ. ಕ್ಯಾಮರಾ ಜೊತೆ ಫೋಟೋಗಳೂ ಕಳೆದು ಹೋದರೆ ಏನೋ ಕಳೆದುಕೊಂಡ ಅನುಭವ.

ಸಂತೋಷದ ವಿಷಯ ಏನೆಂದರೆ ಕಳೆದು ಹೋದ ಕ್ಯಾಮರಾ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿಯನ್ನು ತೆಗೆಯಬಹುದು ಕೂಡ . ಅದೇನೆಂದರೆ, ಪ್ರತಿಯೊಂದು ಕ್ಯಾಮರಾಗೂ ಒಂದು ವಿಶಿಷ್ಟವಾದ ಅಂಕಿ ಇರುತ್ತದೆ. ಅದನ್ನು ಇಂಥ ವೆಬ್ಸೈಟ್ ನಲ್ಲಿ ಕೊಟ್ಟರೆ ಸಾಕು, ನೀವು ಕಳೆದುಕೊಂಡ ನಂತರ ಯಾರಾದರೂ ಆ ಕ್ಯಾಮೆರಾ ದಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದರೆ, ನಿಮ್ಮ ಕ್ಯಾಮರಾ ದ ವಿಶಿಷ್ಟ ಸಂಖ್ಯೆ ಅನುಸರಿಸಿ ಅದು ಅಂತರ್ಜಾಲದಲ್ಲಿ ಹೆಕ್ಕಿ ತೆಗೆಯುತ್ತದೆ. ನಿಮ್ಮ ಹತ್ತಿರ ವಿಶಿಷ್ಟ ಸಂಖ್ಯೆ ಇಲ್ಲದಿದ್ದರೂ ಕೂಡ , ಕಳೆದು ಹೋದ ಕ್ಯಾಮರಾದಿಂದ ತೆಗೆದ ಯಾವುದಾದರೂ ಒಂದು ಫೋಟೋ ಇದ್ದರೂ ಸಾಕು ನೀವು ಅದನ್ನು ಅಪ್ಲೋಡ್ ಮಾಡಿ. ಈ ವೆಬ್ ಸೈಟ್ ಅದರಿಂದಲೇ ಸಂಖ್ಯೆ ಹೆಕ್ಕಿ ತೆಗೆದು ಹುಡುಕಲಾರಂಭಿಸುತ್ತದೆ.
ಪ್ರಯತ್ನಿಸಿ ನೋಡಿ , ಮತ್ತೆ ನಿಮ್ಮ ಕ್ಯಾಮರಾ ಸಿಗಬಹುದು, ಯಾವನಿಗ್ ಗೊತ್ತು.
http://www.camerafound.com
http://www.stolencamerafinder.com

Monday, February 20, 2012

ಹೆಂಗಸರ ಫೇಸ್ ಬುಕ್

ನಿಮಗೆ ಇಷ್ಟವಾಗುವ ವಿಷಯಗಳ ಬಗ್ಗೆ ಎಲ್ಲರ ಹತ್ತಿರ ಹಂಚಿಕೊಳ್ಳಬೇಕು ಯೆನಿಸುತ್ತಿದೆಯಾ, ಇಲ್ಲವೆ ಹೊಸ ಅಡುಗೆಯ ಬಗ್ಗೆ ತಿಳಿದುಕೊಳ್ಳಬೇಕು, ಮದುವೆ ಹೇಗೆ ಆದರೆ ಚೆನ್ನ ಎಂದು ಸಲಹೆ ಕೇಳಲು ನಿಮ್ಮ ಥರಹ ಯೋಚನೆ ಮಾಡುವ ವ್ಯಕ್ತಿಗಳ ಸಲಹೆ ಇದ್ದರೆ ಹೇಗೆ ಅನಿಸುತ್ತದೆ ಅಲ್ಲವೆ.
ಹಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ಹಾಗಿದೆ, ಈ ಸಾಮಾಜಿಕ ಜಾಲ ತಾಣ-ಪಿನ್ಟೆರೆಸ್ಟ್ . ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು ಕೂಡ. ಈಗಾಗಲೇ ದೃಶ್ಯಕ ಟ್ವಿಟರ್ ಎಂದೇ ಪ್ರಖ್ಯಾತ ವಾಗಿರುವ ಪಿನ್ಟೆರೆಸ್ಟ್ ಹೆಂಗಸರ ಪಾಲಿಗೆ ಡೈರಿ ಇದ್ದಂತೆ. ನೀವು ಪೋಸ್ಟ್ ಮಾಡುವ ಅನಿಸಿಕೆಗಳು ಫೋಟೋ ಮೂಲಕ ಪ್ರಕಟಗೊಳ್ಳುತ್ತವೆ. ಟ್ವಿಟರ್ ತರಹ ನಿಮಗೆ ಇಷ್ಟವಾದವರ ಹಿಂಬಾಲಕರಾಗಬಹುದು.
ಇಂಟರೆಸ್ಟಿಂಗ್ ಆದ ಈ ಸಾಮಾಜಿಕ ತಾಣ ಶೀಘ್ರವಾಗಿ ಹೆಸರು ಪಡೆಯುತ್ತಿದೆ. ನೀವೂ ಟ್ರೈ ಮಾಡಿ. https://pinterest.com/

Tuesday, February 7, 2012

ನಿಮ್ಮ ಮಿಂಚಂಚೆ ಸುರಕ್ಷಿತವೇ?

ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎಂದು ತಿಳಿಸುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. https://www.pwnedlist.com ವಿಳಾಸದಲ್ಲಿ ಲಭ್ಯವಿರುವ ತಾಣದಲ್ಲಿ ನಿಮ್ಮ ಮಿಂಚಂಚೆಯ ವಿಳಾಸ ಅಥವ ಬಳಕೆದಾರನ ಹೆಸರನ್ನು ನೀಡಿದರೆ,ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎನ್ನುವ ವಿವರ ಸಿಗುತ್ತದೆ.ಪೈರೇಟ್ ಬೇ,ಪೇಸ್ಟ್ ಬಿನ್ ಮುಂತಾದ ತಾಣಗಳಲ್ಲಿ ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.ಅಂತಹ ತಾಣಗಳಿಂದ ವಿವರಗಳನ್ನು ಕಲೆ ಹಾಕಿ,ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ.ಇದುವರೆಗೆ ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮಿಂಚಂಚೆಗಳ ವಿವರಗಳನ್ನು ತಾಣ ಸಂಗ್ರಹಿಸಿದೆ.ಒಂದು ವೇಳೆ ನಿಮ್ಮ ಮಿಂಚಂಚೆ ಹ್ಯಾಕ್ ಆಗಿದೆ ಎಂದು ಈ ತಾಣದ ಮೂಲಕ ತಿಳಿದರೆ,ಒಡನೆಯೇ ಮಿಂಚಂಚೆ ವಿಳಾಸದ ಲಾಗಿನ್ ವಿವರಗಳನ್ನು ಬದಲಿಸುವುದು ಸುರಕ್ಷಿತ.ಹೊಸ ಪಾಸ್‌ವರ್ಡ್ ಬಳಸಿ,ಮಿಂಚಂಚೆಯ ಮೂಲಕ ಇತರ ಖಾತೆಗಳ ಪಾಸ್‌ವರ್ಡ್ ಪಡೆದಿದ್ದರೆ, ಅವನ್ನೂ ಬದಲಿಸಿ ಸುರಕ್ಷಿತವಾಗಿಸಿ. https://www.pwnedlist.com

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ  soundcloud.com