WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, March 7, 2012

ಗೂಗಲ್ ಪ್ಲೇ

ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯಲ್ಪಡುತ್ತಿದ್ದ ಗೂಗಲ್ ಪ್ಲೇ, ಗೂಗಲ್ ನ ಆನ್ಲೈನ್ ಮಳಿಗೆಯಾಗಿದ್ದು ನೀವು ಮೊಬೈಲ್ ಸಾಧನಗಳು, ಸಂಗೀತ, ಪುಸ್ತಕಗಳು, ಡಿಜಿಟಲ್ ವಸ್ತುಗಳು, ಆಪ್ ಗಳು, ವೀಡಿಯೋ ಗಳನ್ನು, ಗೇಮ್ಸ್ ಗಳನ್ನು ಖರೀದಿಸಬಹುದು.

ಗೂಗಲ್ ತನ್ನ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಮಾರ್ಕೆಟ್ ಎಂದು ಕರೆಯುತ್ತಿದ್ದ ಮಳಿಗೆಯ ಹೆಸರಿನ್ನು ಬದಲಿಸಿದೆ.
ಗೂಗಲ್ ಪ್ಲೇ ಒಮ್ಮೆ ನೋಡಲು ಕ್ಲಿಕ್ ಮಾಡಿ. https://play.google.com/store

Tuesday, March 6, 2012

ಚಂದ್ರುಲೋಕದಲ್ಲಿ ಎಲ್ಲವೂ ಚಂದ

28-02-2012 ನನ್ನ ನೆಚ್ಚಿನ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ 13ನೇ ಪುಟದಲ್ಲಿ ಬ್ಲಾಗ್ ಲೋಕ ( ಚಂದ್ರುಲೋಕದಲ್ಲಿ ಎಲ್ಲವೂ ಚಂದ ) ನನ್ನೆಲ್ಲ ಬ್ಲಾಗ್ ಗಳ ಬಗ್ಗೆ  ಸುದ್ದಿ ಪ್ರಕಟಣೆಗೊಂಡಿದೆ ಸ್ನೇಹಿತರೆ.! ನೀವೂ ಓದಿ ಕಾಮೆಂಟಿಸಿ....
ಹಾಗೆ ನನ್ನನ್ನು ಅಭಿನಂದಿಸಿದ  ನನ್ನೆಲ್ಲಾ ಬ್ಲಾಗ್ ಓದುಗ ಮಿತ್ರರಿಗೆ ನನ್ನ ಸ್ಮರಣೀಯ ವಂದನೆಗಳು.
!! ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ !!

ಟೆರ್ರಾಫುಗಿಯಾ: ಹಾರುವ ಕಾರು

ಹಕ್ಕಿಗೆ ಬಾನಿನಲ್ಲಿ ಹಾರುವ ಆಸೆ ನದಿಗೆ ಸಾಗರವ ಸೇರುವ ಆಸೆ.. ರಸ್ತೆಯಲ್ಲಿ ಸಾಗುವ ಕಾರಿಗೂ ಬಾನಲ್ಲಿ ಆಸೆ. ನಂಬಿದರೆ ನಂಬಿ ಹಾರುವ ಕಾರೊಂದು ರಸ್ತೆಗೆ ಅಲ್ಲಲ್ಲ ಆಕಾಶಕ್ಕೆ ಹಾರಲಿದೆ.

ಟೆರ್ರಾಫುಗಿಯಾ ಎಂದರೆ ಅಮೆರಿಕದ ದೊಡ್ಡ ಕನಸಿನ ಸಣ್ಣ ಕಂಪನಿ. ಕಂಪನಿಯು ಹಾರುವ ಕಾರಿನ ಕಾನ್ಸೆಪ್ಟನ್ನು ಹಲವು ವರ್ಷಗಳ ಹಿಂದೆಯೇ ಪ್ರದರ್ಶಿಸಿತ್ತು. ಇದೀಗ ಈ ಕಾರು ಉತ್ಪಾದನಾ ಹಂತಕ್ಕೆ ತಲುಪಿದೆ. ಈ ಕಾರು ದುಬಾರಿ. ಅಂದ್ರೆ 2.79 ಲಕ್ಷ ಡಾಲರ್.  ಟೆರ್ರಾಫುಗಿಯಾ ಹಾರುವ ಕಾರು ಅಮೆರಿಕದಲ್ಲಿ ಮಾರಾಟಕ್ಕೆ ರೆಡಿಯಾಗಲಿದೆ.

ಈ ಕಾರಿನಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಕೇವಲ 30 ಸೆಕೆಂಡಿನಲ್ಲಿ ಇದು ಕಾರಿನಿಂದ ವಿಮಾನಕ್ಕೆ ಪರಿವರ್ತನೆ ಗೊಳ್ಳಲಿದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಈ ಕಾರು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ. ದುಡ್ಡು ನಮ್ಮಲ್ಲಿ ಬೇಕಾದಷ್ಟು ಇದೆ ಅಂತ ನೀವು ಅಂದುಕೊಂಡರೂ ಇದನ್ನು ಖರೀದಿಸುವುದು ಸುಲಭವಲ್ಲ. ಇದಕ್ಕೆ ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ

ಈಗಾಗಲೇ ಈ ಹಾರುವ ಕಾರಿಗೆ ಭಾರತದ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದಾರೆ. ಆದರೆ ದೇಶದ ಕೆಲವು ಇಲಾಖೆಯಿಂದ ಇನ್ನೂ ಸರಿಯಾದ ಸಮ್ಮತಿ ದೊರಕಿಲ್ಲ. ಕಂಪನಿಯ ಹಾರುವ ಕಾರಿಗೆ ಈಗಾಗಲೇ ಸುಮಾರು 100 ಜನರು ಬುಕ್ಕಿಂಗ್ ಮಾಡಿದ್ದಾರೆ.

Monday, March 5, 2012

ವಿಂಡೋಸ್ 8


ಬಳಕೆದಾರರಿಗೆ ಮುಂಬರುವ ಹೊಸ ವಿಂಡೋಸ್ 8ರ ಅನುಭವ ನೀಡಲು ಮೈಕ್ರೋಸಾಫ್ಟ್ ಆಪರೇಟೀಂಗ್ ವ್ಯವಸ್ಥೆ ತಂತ್ರಾಂಶದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.ಇದು ಸರ್ವ ಸಾಧನಗಳನ್ನು ಗಮನದಲ್ಲಿರಿಸಿ ಸಿದ್ಧ ಪಡಿಸಿರುವ ಆಪರೇಟಿಂಗ್ ವ್ಯವಸ್ಥೆಯಾಗಿರುವುದರಿಂದ.ಇದರಲ್ಲಿ ಡೆಸ್ಕ್‌ಟಾಪ್ ವ್ಯವಸ್ಥೆಯ ಮಾಮೂಲಿ ಬಳಕೆಗೆ ಒಗ್ಗದಿರಬಹುದು.ಆದರೆ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್ ಸಾಧನಗಳ ಬಳಕೆಯಲ್ಲಿ ಸ್ಪರ್ಶಸಂವೇದಿ ತೆರೆಗೆ  ಸೂಕ್ತವಾದ ಅನುಕೂಲತೆಗಳನ್ನಿದು ಹೊಂದಿದೆ ಎಂದು ಇದನ್ನು ಬಳಸಿದವರು ಪ್ರಮಾಣೀಕರಿಸಿದ್ದಾರೆ.ವಿಂಡೋಸ್ ಎಂಟನ್ನು ಅನುಸ್ಥಾಪಿಸಿದಾಗ, ಸ್ಟಾರ್ಟ್ ಬಟನ್ ಇತ್ಯಾದಿಗಳ ಮಾಮೂಲಿ ನೋಟ ಸಿಗದು. ವಿವಿಧ ಅಪ್ಲಿಕೇಶನ್‌ಗಳ ಐಕಾನುಗಳ ದರ್ಶನವಾದೀತು. ಮಾಮೂಲಿ ಡೆಸ್ಕ್‌ಟಾಪ್ ಅನುಭವ ನೀಡುವಂತೆ ಆಪರೇಟಿಂಗ್ ವ್ಯವಸ್ಥೆಯನ್ನು ಸಿದ್ಧಪಡಿಸಿದರೆ, ವಿಂಡೋಸ್ 7ನ್ನು ಬಳಸಿದಂತೆ ಕಾಣಿಸಿ, ಹೊಸ ಆಪರೇಟಿಂಗ್ ವ್ಯವಸ್ಥೆಯಿದೆ ಎನ್ನುವುದೇ ಮರೆತೀತು ಎಂದು ಬಳಕೆದಾರರ ಮೊದಲ ಪ್ರತಿಕ್ರಿಯೆಗಳು ಹೇಳುತ್ತವೆ. ವಿಂಡೋಸ್ 8ರ 64ಬಿಟ್ ಆವೃತ್ತಿಯು 3.3ಜಿಬಿ ಹೊಂದಿದ್ದು. 32 ಬಿಟ್ ಆವೃತ್ತಿಯು 2.5ಜಿಬಿ ಹೊಂದಿರುತ್ತದೆ. ನೀವೂ ಹೊಸ ವಿಂಡೋಸ್ 8ನ್ನು ಪಡೆಯಲು ವಿಳಾಸ : http://windows.microsoft.com/en-US/windows-8/iso

Thursday, March 1, 2012

ಸ್ಯಾಮ್ಸಂಗ್ ನ ಚಾಟ್ ಆನ್ ಈಗ ವೆಬ್ ಬ್ರೌಸೆರ್ ನಲ್ಲಿ ಲಭ್ಯ



ಸ್ಯಾಮ್ಸಂಗ್ ಚಾಟ್ ಆನ್ (ChatON), ಮೆಸೆಂಜರ್ ಸೇವೆ ನೀಡುವ ಆಪ್ ಆಗಿದ್ದು ಈಗ ವೆಬ್ ಬ್ರೌಸರ್ ಮೂಲಕವೂ ಲಭ್ಯವಾಗಲಿದೆ.
ಸಾಮಾನ್ಯವಾಗಿ ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನ್ಗಳಲ್ಲಿ ಈ ಸೌಲಭ್ಯವಿದ್ದು, ನಿಮ್ಮ ಸ್ನೇಹಿತರ ಜೊತೆ ಗೂಗಲ್ ಚಾಟ್ ರೀತಿಯಲ್ಲಿ ಚಾಟ್ ಮಾಡಬಹುದಿತ್ತು. ಈಗ ವೆಬ್ ಮೂಲಕವೂ ಲಾಗಿನ್ ಮಾಡಿ ಚಾಟ್ ಮಾಡಲು ಸ್ಯಾಮ್ ಸಂಗ್ ಅನುವು ಮಾಡಿಕೊಟ್ಟಿದ್ದು, ಬಡಾ, ಐಓಎಸ್ ಹಾಗು ಆಂಡ್ರಾಯ್ಡ್ ಆಪ್ ಗಳಲ್ಲಿ ಈಗಾಗಲೇ ಲಭ್ಯವಿದೆ. .
ವೆಬ್ ಮೂಲಕ ಚಾಟ್ ಆನ್ (ChatON) ಲಾಗಿನ್ ಮಾಡಲು ಕ್ಲಿಕ್ ಮಾಡಿ 

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಗೊರಿಲ್ಲಾ ಗ್ಲಾಸ್ ಎಂದರೇನು ?

ಏನಪ್ಪಾ ಇದು ಗೊರಿಲ್ಲಾ ಪ್ರಾಣಿಗೆ ಬಳಸುವ ಗ್ಲಾಸ್ ಎಂದುಕೊಂಡಿರಾ? ಇದು ಮೊಬೈಲ್ ಪ್ಯಾನೆಲ್ ಗಳಿಗೆ ಉಪಯೋಗಿಸುವ ಅತ್ಯಂತ ಶಕ್ತಿಶಾಲಿ ತರಚು ನಿರೋಧಕ ಗಾಜು.
ಕಾರ್ನಿಂಗ್ ಎಂಬ ಕಂಪನಿ ಉತ್ಪಾದಿಸುವ ಈ ಗಾಜು ವಿಶ್ವದಾದ್ಯಂತ ಸುಮಾರು 200 ಮಿಲಿಯನ್ ಮೊಬೈಲ್ ಗಳ ಡಿಸ್ಪ್ಲೇ ಪ್ಯಾನೆಲ್ ಆಗಿ ಉಪಯೋಗಿಸಲ್ಪಡುತ್ತದೆ. ಈ ಗ್ಲಾಸ್ ತೆಳುವಾಗಿದ್ದು ಪ್ಲಾಸ್ಟಿಕ್ ಗಿಂತ 30 ಪಟ್ಟು ಹೆಚ್ಚು ಗಟ್ಟಿತನ ಹೊಂದಿದೆ. ಮೊದಲೆಲ್ಲಾ HD ಟಿ.ವಿ ಹಾಗು 3ಡಿ ಕನ್ನಡಕಗಳಲ್ಲಿ ಈ ಗ್ಲಾಸ್ಗಳನ್ನು ಬಳಸುತ್ತಿದ್ದು ಈಗ ಆಪಲ್ ನ ಐಫೋನ್- 4 ನಲ್ಲಿ ಕೂಡ ಬಳಸಲಾಗುತ್ತಿದೆ. ಈ ಗ್ಲಾಸ್ ಟ್ಯಾಬ್ಲೆಟ್ ಹಾಗು ಟಚ್ ಸ್ಕ್ರೀನ್ ಇರುವ ಫೋನ್ ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಗೊರಿಲ್ಲಾ ಗ್ಲಾಸ್ ನ ಹೊಸ ಆವೃತ್ತಿ ಗೊರಿಲ್ಲಾ ಗ್ಲಾಸ್-2 ಮೇ ತಿಂಗಳಲ್ಲಿ ಬರಲಿದ್ದು ಈಗಿರುವ ಗ್ಲಾಸ್ ಗಿಂತಾ 20 % ಸಣ್ಣದಾಗಿ ಇರಲಿದೆಯಂತೆ.

Sunday, February 26, 2012

ನಿಮ್ಮ CAMERA ಕಳೆದುಹೋದರೆ Onlineನಲ್ಲಿ ಹುಡುಕುವುದು ಹೇಗೆ ?

ಇಷ್ಟಪಟ್ಟು ಖರೀದಿಸಿರುವ ಯಾವುದೇ ವಸ್ತು ಕಳೆದು ಹೋದರೆ ಎಷ್ಟು ಬೇಜಾರಾಗುತ್ತೆ ಅಂತಾ ಕಳೆದು ಕೊಂಡಿರುವುವರಿಗೆ ಮಾತ್ರ ಗೊತ್ತು.

ಅದರಲ್ಲೂ ನಮ್ಮ ನೆನಪುಗಳನ್ನು ಸೆರೆ ಹಿಡಿದು ಜೀವನ ಪೂರ್ತಿ ಜ್ಞಾಪಿಸಿಕೊಳ್ಳುವ ಚಿತ್ರಗಳು ತೆಗೆಯುವ ಕ್ಯಾಮರಾ ಕಳೆದು ಹೋದರೆ ಮನಸಿಗೆ ಇನ್ನಷ್ಟು ದುಗುಡ. ಕ್ಯಾಮರಾ ಜೊತೆ ಫೋಟೋಗಳೂ ಕಳೆದು ಹೋದರೆ ಏನೋ ಕಳೆದುಕೊಂಡ ಅನುಭವ.

ಸಂತೋಷದ ವಿಷಯ ಏನೆಂದರೆ ಕಳೆದು ಹೋದ ಕ್ಯಾಮರಾ ಅಂತರ್ಜಾಲದಲ್ಲಿ ಹುಡುಕಿ ಮಾಹಿತಿಯನ್ನು ತೆಗೆಯಬಹುದು ಕೂಡ . ಅದೇನೆಂದರೆ, ಪ್ರತಿಯೊಂದು ಕ್ಯಾಮರಾಗೂ ಒಂದು ವಿಶಿಷ್ಟವಾದ ಅಂಕಿ ಇರುತ್ತದೆ. ಅದನ್ನು ಇಂಥ ವೆಬ್ಸೈಟ್ ನಲ್ಲಿ ಕೊಟ್ಟರೆ ಸಾಕು, ನೀವು ಕಳೆದುಕೊಂಡ ನಂತರ ಯಾರಾದರೂ ಆ ಕ್ಯಾಮೆರಾ ದಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದರೆ, ನಿಮ್ಮ ಕ್ಯಾಮರಾ ದ ವಿಶಿಷ್ಟ ಸಂಖ್ಯೆ ಅನುಸರಿಸಿ ಅದು ಅಂತರ್ಜಾಲದಲ್ಲಿ ಹೆಕ್ಕಿ ತೆಗೆಯುತ್ತದೆ. ನಿಮ್ಮ ಹತ್ತಿರ ವಿಶಿಷ್ಟ ಸಂಖ್ಯೆ ಇಲ್ಲದಿದ್ದರೂ ಕೂಡ , ಕಳೆದು ಹೋದ ಕ್ಯಾಮರಾದಿಂದ ತೆಗೆದ ಯಾವುದಾದರೂ ಒಂದು ಫೋಟೋ ಇದ್ದರೂ ಸಾಕು ನೀವು ಅದನ್ನು ಅಪ್ಲೋಡ್ ಮಾಡಿ. ಈ ವೆಬ್ ಸೈಟ್ ಅದರಿಂದಲೇ ಸಂಖ್ಯೆ ಹೆಕ್ಕಿ ತೆಗೆದು ಹುಡುಕಲಾರಂಭಿಸುತ್ತದೆ.
ಪ್ರಯತ್ನಿಸಿ ನೋಡಿ , ಮತ್ತೆ ನಿಮ್ಮ ಕ್ಯಾಮರಾ ಸಿಗಬಹುದು, ಯಾವನಿಗ್ ಗೊತ್ತು.
http://www.camerafound.com
http://www.stolencamerafinder.com

Monday, February 20, 2012

ಹೆಂಗಸರ ಫೇಸ್ ಬುಕ್

ನಿಮಗೆ ಇಷ್ಟವಾಗುವ ವಿಷಯಗಳ ಬಗ್ಗೆ ಎಲ್ಲರ ಹತ್ತಿರ ಹಂಚಿಕೊಳ್ಳಬೇಕು ಯೆನಿಸುತ್ತಿದೆಯಾ, ಇಲ್ಲವೆ ಹೊಸ ಅಡುಗೆಯ ಬಗ್ಗೆ ತಿಳಿದುಕೊಳ್ಳಬೇಕು, ಮದುವೆ ಹೇಗೆ ಆದರೆ ಚೆನ್ನ ಎಂದು ಸಲಹೆ ಕೇಳಲು ನಿಮ್ಮ ಥರಹ ಯೋಚನೆ ಮಾಡುವ ವ್ಯಕ್ತಿಗಳ ಸಲಹೆ ಇದ್ದರೆ ಹೇಗೆ ಅನಿಸುತ್ತದೆ ಅಲ್ಲವೆ.
ಹಾಗಿದ್ದರೆ ನಿಮಗೆ ಹೇಳಿ ಮಾಡಿಸಿದ ಹಾಗಿದೆ, ಈ ಸಾಮಾಜಿಕ ಜಾಲ ತಾಣ-ಪಿನ್ಟೆರೆಸ್ಟ್ . ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ನಿಮ್ಮ ಅನಿಸಿಕೆ ಹಂಚಿಕೊಳ್ಳಬಹುದು ಕೂಡ. ಈಗಾಗಲೇ ದೃಶ್ಯಕ ಟ್ವಿಟರ್ ಎಂದೇ ಪ್ರಖ್ಯಾತ ವಾಗಿರುವ ಪಿನ್ಟೆರೆಸ್ಟ್ ಹೆಂಗಸರ ಪಾಲಿಗೆ ಡೈರಿ ಇದ್ದಂತೆ. ನೀವು ಪೋಸ್ಟ್ ಮಾಡುವ ಅನಿಸಿಕೆಗಳು ಫೋಟೋ ಮೂಲಕ ಪ್ರಕಟಗೊಳ್ಳುತ್ತವೆ. ಟ್ವಿಟರ್ ತರಹ ನಿಮಗೆ ಇಷ್ಟವಾದವರ ಹಿಂಬಾಲಕರಾಗಬಹುದು.
ಇಂಟರೆಸ್ಟಿಂಗ್ ಆದ ಈ ಸಾಮಾಜಿಕ ತಾಣ ಶೀಘ್ರವಾಗಿ ಹೆಸರು ಪಡೆಯುತ್ತಿದೆ. ನೀವೂ ಟ್ರೈ ಮಾಡಿ. https://pinterest.com/

Tuesday, February 7, 2012

ನಿಮ್ಮ ಮಿಂಚಂಚೆ ಸುರಕ್ಷಿತವೇ?

ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎಂದು ತಿಳಿಸುವ ಅಂತರ್ಜಾಲ ತಾಣವೊಂದು ಆರಂಭವಾಗಿದೆ. https://www.pwnedlist.com ವಿಳಾಸದಲ್ಲಿ ಲಭ್ಯವಿರುವ ತಾಣದಲ್ಲಿ ನಿಮ್ಮ ಮಿಂಚಂಚೆಯ ವಿಳಾಸ ಅಥವ ಬಳಕೆದಾರನ ಹೆಸರನ್ನು ನೀಡಿದರೆ,ನಿಮ್ಮ ಮಿಂಚಂಚೆಯು ಹ್ಯಾಕರುಗಳ ದಾಳಿಗೆ ತುತ್ತಾಗಿದೆಯೇ ಎನ್ನುವ ವಿವರ ಸಿಗುತ್ತದೆ.ಪೈರೇಟ್ ಬೇ,ಪೇಸ್ಟ್ ಬಿನ್ ಮುಂತಾದ ತಾಣಗಳಲ್ಲಿ ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ಹಂಚಿಕೊಳ್ಳಲಾಗುತ್ತದೆ.ಅಂತಹ ತಾಣಗಳಿಂದ ವಿವರಗಳನ್ನು ಕಲೆ ಹಾಕಿ,ಹ್ಯಾಕ್ ಆದ ಮಿಂಚಂಚೆಯ ವಿವರಗಳನ್ನು ತಾಣದಲ್ಲಿ ಪ್ರಕಟಿಸಲಾಗುತ್ತದೆ.ಇದುವರೆಗೆ ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚು ಮಿಂಚಂಚೆಗಳ ವಿವರಗಳನ್ನು ತಾಣ ಸಂಗ್ರಹಿಸಿದೆ.ಒಂದು ವೇಳೆ ನಿಮ್ಮ ಮಿಂಚಂಚೆ ಹ್ಯಾಕ್ ಆಗಿದೆ ಎಂದು ಈ ತಾಣದ ಮೂಲಕ ತಿಳಿದರೆ,ಒಡನೆಯೇ ಮಿಂಚಂಚೆ ವಿಳಾಸದ ಲಾಗಿನ್ ವಿವರಗಳನ್ನು ಬದಲಿಸುವುದು ಸುರಕ್ಷಿತ.ಹೊಸ ಪಾಸ್‌ವರ್ಡ್ ಬಳಸಿ,ಮಿಂಚಂಚೆಯ ಮೂಲಕ ಇತರ ಖಾತೆಗಳ ಪಾಸ್‌ವರ್ಡ್ ಪಡೆದಿದ್ದರೆ, ಅವನ್ನೂ ಬದಲಿಸಿ ಸುರಕ್ಷಿತವಾಗಿಸಿ. https://www.pwnedlist.com

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ  soundcloud.com

Monday, January 23, 2012

ಕ್ರೆಡಿಟ್ ಕಾರ್ಡ್ ನ ಫೋಟೋ ಮೂಲಕವೇ ಆನ್ಲೈನ್ ಶಾಪಿಂಗ್

cr card
ಮೊಬೈಲ್ ನ ಕ್ಯಾಮರಾದಿಂದ ನನ್ನ ಗೆಳೆಯನೊಬ್ಬ ವಿಸಿಟಿಂಗ್ ಕಾರ್ಡ್ ಗಳ ಫೋಟೋ ತೆಗೆದಿಟ್ಟುಕೊಂಡು ಬೇಕಾದಾಗ ಉಪಯೋಗಿಸುತ್ತಿದ್ದ. ನೀವೂ ಆ ಥರದ ಐಡಿಯಾ ಗಳನ್ನ ಮೊಬೈಲ್ ಕ್ಯಾಮೆರಾ ದಿಂದ ಟ್ರೈ ಮಾಡೇ ಇರುತ್ತೀರಿ.
Card.io ಎಂಬ ಕಂಪೆನಿಯೊಂದು ಇನ್ನೂ ಒಂದು ಹೆಜ್ಜೆ ಹೋಗಿ ಕ್ರೆಡಿಟ್ ಕಾರ್ಡ್ ನ ಫೋಟೋ ಮೂಲಕವೇ ಆನ್ಲೈನ್ ಶಾಪಿಂಗ್ ಮಾಡಲು, ಬಿಲ್ ಕಟ್ಟಲು, ಸ್ನೇಹಿತರಿಗೆ ಹಣ ವರ್ಗಾಯಿಸಲು ಹೊಸ ಅಪ್ಲಿಕೇಶನ್ ಒಂದನ್ನ ಕಂಡುಹಿಡಿದಿದೆ. ಕೇವಲ ನಿಮ್ಮ ಮೊಬೈಲ್ ನ ಕ್ಯಾಮೆರಾ ಆನ್ ಮಾಡಿ, ಕಾರ್ಡ್ಅನ್ನು ಸ್ಕ್ಯಾನ್ ಮಾಡಿದರೆ ಸಾಕು, ಈ ಆಪ್, ಕಾರ್ಡ್ ನ ಸಂಖ್ಯೆಯನ್ನು ಸಂಸ್ಕರಿಸಿ ತಾನೇ ಉಳಿದ ಕೆಲಸ ಮಾಡಿಕೊಡುತ್ತದೆ. ಕಾರ್ಡ್ ನ ಸಂಖ್ಯೆಯನ್ನು ಪ್ರತೀಬಾರಿ ಒತ್ತುವ ರೇಜಿಗೆಯ ಕೆಲಸ ಮತ್ತು ಸಣ್ಣ ಅಕ್ಷರದ ಫೋನ್ಗಳಲ್ಲಿ ಟೈಪ್ ಮಾಡುವ ಕೆಲಸ ತಪ್ಪಿಸುತ್ತದೆ ಈ ಅಪ್. ಅಂದ ಹಾಗೆ ಡೌನ್ಲೋಡ್ ಮಾಡಲು ಹಣ ಕೂಡ ಕೊಡಬೇಕಾಗಿಲ್ಲ.
ನಿಮ್ಮಲ್ಲಿ ಆನ್ಡ್ರೊಯ್ಡ್ ಅಥವಾ ಐಫೋನ್ ಇದ್ದರೆ ಕೂಡಲೇ ಡೌನ್ಲೋಡ್  ಮಾಡಿ. https://www.card.io/

Sunday, January 22, 2012

ಸೈಬರ್ ಕ್ರೈಮ್

ಅಂತರಜಾಲ ಮಾಹಿತಿಗಳ ಮಹಾಪೂರ. ನಿರಂತರವಾಗಿ ನಾವು ಅಂತರಜಾಲವನ್ನು ಬಳಸುತ್ತಲೇ ಇರುತ್ತೇವೆ. ಇತ್ತೀಚಿನ ದಿನಗಳಲ್ಲಿ ಎಲ್ಲದಕ್ಕೂ ಅಂತರಜಾಲವನ್ನು ಜಾಲಾಡುವುದು ಅಭ್ಯಾಸವಾಗಿದೆ. ಒಂದು ಮೂಲ ಪ್ರಕಾರ ಜಾಗತೀಕವಾಗಿ ಸುಮಾರು ಮೂರು ನೂರು ಕೋಟಿ ಜನ, ಸುಮಾರು ಎಪ್ಪತ್ತೈದು ಮಿಲಿಯನ್ ಜಾಲತಾಣಗಳನ್ನು ನೋಡುತ್ತಿದ್ದಾರೆ. ಬೃಹತ್ ಸಂಖ್ಯೆಯ ಅಂತರಜಾಲ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಅನೇಕರು ಅಂತರಜಾಲದಲ್ಲಿ ವಂಚನೆಯೇ ಮುಂತಾದ ಅಪರಾಧಗಳನ್ನು ಮಾಡುತ್ತಾರೆ. ಅಂತರಜಾಲದಲ್ಲಿ ಯಾವ ರೀತಿಯಲ್ಲಿ ಮೋಸಗಳು ನಡೆಯುತ್ತವೆ, ಅಂತರಜಾಲವನ್ನು ಬಳಸುತ್ತಲೇ ಇಂತಹ ಮೋಸದ ಜಾಲಗಳಿಂದ ಹೇಗೆ ದೂರ ಉಳಿಯಬೇಕು ಎಂಬುದನ್ನು ತಿಳಿಯುವುದು ಅಗತ್ಯ. ಅಂತರಜಾಲದಲ್ಲಿ ಯಾವ ರೀತಿಯ ಅಪರಾಧಗಳು (ಸೈಬರ್ ಕ್ರೈಮ್) ನಡೆಯುತ್ತವೆ ಎಂಬುದನ್ನು ನೋಡೋಣ:
ಅಂತರಜಾಲ ಅಪರಾಧಗಳಲ್ಲಿ ಮುಖ್ಯವಾಗಿ ಹ್ಯಾಕಿಂಗ್, ವೈರಸ್ಗಳು, ವಂಚನೆ, ಕಪ್ಪು ಹಣ ಬಿಳಿ ಹಣವಾಗಿಸುವುದು, ಬೇಹುಗಾರಿಕೆ, ವೇಶ್ಯಾವೃತ್ತಿ, ಜೂಜು, ಡ್ರಗ್ ಬಳಕೆ ಮತ್ತು ಕಳ್ಳಸಾಗಣೆ, ಆತ್ಮಹತ್ಯೆಗೆ ಪ್ರೇರೇಪಿಸುವುದು, ಮಾನಹಾನಿ ಮಾಡುವುದು, ಸೈಬರ್ ಸ್ಟಾಕಿಂಗ್, ಸೈಬರ್ ಭಯೋತ್ಪಾದನೆ ಮತ್ತು ಭಯೋತ್ಪಾದನೆಯೇ ಮೊದಲಾದವುಗಳು ಸೇರಿವೆ. ಇವುಗಳನ್ನು ವಿವರವಾಗಿ ನೋಡೋಣ.
ಹ್ಯಾಕಿಂಗ್:
ಹ್ಯಾಕಿಂಗ್ ಎಂದರೆ ಅನಧಿಕೃತವಾಗಿ ಇನ್ನೊಬ್ಬರ ಜಾಲ ತಾಣಗಳಿಗೆ, ನೆಟ್ವರ್ಕ್ಗಳಿಗೆ ನುಗ್ಗುವುದು. ಖಾಸಗಿ ನೆಟ್ವರ್ಕ್ಗಳಿಗೆ ನುಗ್ಗುವ ಮೂಲಕ ಅಲ್ಲಿರುವ ವಿಷಯಗಳನ್ನು ಹಾಳುಮಾಡುವುದು, ಬದಲಿಸುವುದು, ಅನಗತ್ಯವಾದುದನ್ನು ತುಂಬುವುದು ಮುಂತಾದವುಗಳನ್ನು ಹ್ಯಾಕ್ಮಾಡುವವರು ಮಾಡುತ್ತಾರೆ. ಅಷ್ಟೇ ಅಲ್ಲದೇ, ಬಳಕೆದಾರರು ಒಂದು ನಿರ್ದಿಷ್ಟ ಜಾಲತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿದಾಗ ಅವರನ್ನು ಬೇರೆ ತಾಣಗಳೆಡೆಗೆ ನಿರ್ದೇಶಿಸುವುದು, ನೂರಾರು ಸಂದೇಶಗಳನ್ನು ಕಳಿಸುವ ಮೂಲಕ ಸರ್ವರ್ ಕುಸಿಯುವಂತೆ ಮಾಡುವುದು ಮುಂತಾದ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾರೆ. ಆದರೆ ಹ್ಯಾಕಿಂಗ್ ಸಂಪೂರ್ಣ ಕಾನೂನುಬಾಹಿರವಲ್ಲ. ಏಕೆಂದರೆ, ಒಂದು ನೆಟ್ವರ್ಕ್ಹ್ಯಾಕ್ ಮಾಡಲ್ಪಟ್ಟಿದೆ ಎಂದರೆ ಅದು ನೆಟ್ವರ್ಕ್ ದೌರ್ಬಲ್ಯ ಎಂದು ಪರಿಗಣಿಸಲಾಗುತ್ತದೆ. ಒಂದು ಹಂತದವರೆಗೆ ಹ್ಯಾಕಿಂಗ್ ಮೋಜಿನ ಕೆಲಸವಾಗಿರುತ್ತದಾದರೂ, ಅದು ಅಂತರಜಾಲದಲ್ಲಿ ನಡೆಯುವ ವ್ಯವಹಾರಗಳ ಮೇಲೆ ಕೆಟ್ಟ ಪರಿಣಾಮವನ್ನೂ ಬೀರುತ್ತದೆ.
ಹ್ಯಾಕ್ಮಾಡುವವರಲ್ಲಿ ಎರಡು ರೀತಿಯವರಿರುತ್ತಾರೆ. ವೈಟ್-ಹ್ಯಾಟ್ ಹ್ಯಾಕರ್ಗಳಿಗೆ ಸಂಸ್ಥೆಯವರೇ ಉದ್ಯೋಗ ನೀಡಿ, ತಮ್ಮ ಸಂಸ್ಥೆಯ ಜಾಲತಾಣಗಳು ಮತ್ತು ನೆಟ್ವರ್ಕ್ಗಳಲ್ಲಿ ಯಾವುದಾದರೂ ದೋಷಗಳಿವೆಯೇ ಎಂಬುದನ್ನು ಕಂಡುಹಿಡಿಯಲು ನಿಯೋಜಿಸುತ್ತಾರೆ. ಇನ್ನು ಬ್ಲ್ಯಾಕ್-ಹ್ಯಾಟ್ ಹ್ಯಾಕರ್ಗಳು ಗುಟ್ಟಾಗಿ ಇನ್ನೊಬ್ಬರ ನೆಟ್ವರ್ಕ್ ಸಿಸ್ಟಂಗಳ ಒಳಗೆ ನುಗ್ಗುತ್ತಾರೆ. ಇವರೆಡಲ್ಲದೇ ಇನ್ನೊಂದು ಗ್ರೇ-ಹ್ಯಾಟ್ ಹ್ಯಾಕರ್ಗಳೆಂಬ ಇನ್ನೊಂದು ಪ್ರಕಾರವಿದ್ದು, ಅವರು ಮೇಲಿನ ಎರಡೂ ಕೆಲಸಗಳನ್ನೂ ಮಾಡುತ್ತಾರೆ! ಅಂದರೆ ದೋಷ ಹುಡುಕಿ ಸಹಾಯ ಮಾಡುವ ಭರದಲ್ಲಿ ಅವರು ಕೆಲವೊಮ್ಮೆ ಕಾನೂನನ್ನು ಮೀರುತ್ತಾರೆ.
ಬ್ಯಾಕ್ಡೋರ್ಎನ್ನುವ ಪ್ರೋಗ್ರಾಮ್ ಸಹಾಯದಿಂದ ಮೈಕ್ರೋಸಾಫ್ಟ್ ವಿಂಡೋಸ್ ಸ್ಥಾಪಿಸಲ್ಪಟ್ಟಿರುವ ಸಿಸ್ಟಂಗಳಿಗೆ ಹ್ಯಾಕರ್ಗಳು ಪ್ರವೇಶ ಮಾಡುತ್ತಾರೆ. ಇದರ ಸಹಾಯದಿಂದ ಕಂಪ್ಯೂಟರ್ ಸಿಸ್ಟಂನಲ್ಲಿ ಇರುವ ಮೈಕ್ರೋಫೋನ್ ಅಥವಾ ವೆಬ್ಕ್ಯಾಮ್ ಆರಂಭಿಸಿಬಿಡುತ್ತಾರೆ. ಪರಿಣಾಮ ಯೋಚಿಸಿ.
ವೈರಸ್ಗಳು
ವೈರಸ್‌ಗಳೆಂದರೆ ಚಿಕ್ಕ ಸಾಫ್ಟ್‌ವೇರ್ ಪ್ರೋಗ್ರಾಮ್‌ಗಳೇ ಆಗಿದ್ದು, ಅವು ಕಂಪ್ಯೂಟರ್‌ನಲ್ಲಿ ಬಳಸಲ್ಪಡುವ ಪ್ರೋಗ್ರಾಮ್‌ಗಳ ಮೇಲೆ ಸವಾರಿ ಮಾಡುತ್ತ, ಕೆಲಸಕ್ಕೆ ಅಡ್ಡಿಪಡಿಸುತ್ತವೆ. ಅಷ್ಟೇ ಅಲ್ಲದೇ ಅವು ಒಂದು ಕಂಪ್ಯೂಟರ್‌ ವ್ಯವಸ್ಥೆಯಿಂದ ಇನ್ನೊಂದಕ್ಕೆ ದತ್ತಾಂಶ ರವಾನೆ ಸಂದರ್ಭದಲ್ಲಿ ಮತ್ತು ಅಂತರಜಾಲದ ಮೂಲಕ ಹರಿದಾಡುತ್ತವೆ. ಅವು ಕಂಪ್ಯೂಟರ್‌ನಲ್ಲಿ ಸಂಗ್ರಹಿಸಲ್ಪಟ್ಟಿರುವ ವಿಷಯಗಳನ್ನು ಹಾಳುಮಾಡಬಹುದು, ಅಥವಾ ಸಂಪೂರ್ಣ ಅಳಿಸಿ ಹಾಕಬಹುದು. ವೈರಸ್‌ ಎಂಬ ಪದದ ಬಳಕೆಯನ್ನು ಜೀವಶಾಸ್ತ್ರದ ವೈರಸ್ ಎಂಬ ಜೀವಾಣುವಿನಿಂದಲೇ ತೆಗೆದುಕೊಳ್ಳಲಾಗಿದೆ. ವೈರಸ್ ಜೀವಾಣುಗಳು ತಮ್ಮಷ್ಟಕ್ಕೆ ತಾವೇ ಪಡಿಯಚ್ಚುಗಳನ್ನು ನಿರ್ಮಿಸಿಕೊಳ್ಳುವುದಿಲ್ಲ, ಬದಲಾಗಿ ಒಂದು ಜೀವಿಯ ದೇಹದ ಜೀವಕೋಶಗಳನ್ನು ಸೇರಿಕೊಂಡು ನಂತರದಲ್ಲಿ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಗುತ್ತವೆ. ಹಾಗೆಯೇ ಈ ಕಂಪ್ಯೂಟರ್ ವೈರಸ್‌ಗಳು ಕೂಡಾ ಯಾವುದಾದರೂ ಒಂದು ಸಾಫ್ಟ್‌ವೇರ್ ಪ್ರೋಗ್ರಾಮ್‌ನಲ್ಲಿ ಸೇರಿಕೊಂಡು ಕಂಪ್ಯೂಟರ್‌ನಲ್ಲಿರುವ ಇತರೆ ಪ್ರೋಗ್ರಾಮುಗಳು ಮತ್ತು ಕಡತಗಳಲ್ಲಿ ತನ್ನದೇ ನಕಲುಗಳನ್ನು ಸೇರಿಸುತ್ತಾ ಸಾಗುತ್ತದೆ. ಈ ಕಡತಗಳನ್ನು ಬೇರೆ ಕಂಪ್ಯೂಟರ್‌ಗಳಿಗೆ ವರ್ಗಾಯಿಸಿದಾಗ ಆ ಕಂಪ್ಯೂಟರ್‌ಗಳಿಗೂ ಈ ವೈರಸ್ ಸೇರುತ್ತದೆ.
ವರ್ಮ್: ವರ್ಮ್‌ಗಳು ಕಂಪ್ಯೂಟರ್ ಜಾಲಗಳಲ್ಲಿರುವ ಭದ್ರತಾ ದೋಷಗಳನ್ನು ಬಳಸಿಕೊಂಡು ಹರಡುತ್ತವೆ. ಒಂದು ಕಂಪ್ಯೂಟರ್‌ಗೆ ವರ್ಮ್ ಬಂದಿತೆಂದರೆ ಸಾಕು; ಅದೇ ಜಾಲದಲ್ಲಿರುವ ಇತರೆ ಕಂಪ್ಯೂಟರ್‌ಗಳಲ್ಲಿ ಇರಬಹುದಾದ ಭದ್ರತಾ ದೋಷಗಳನ್ನು ಹುಡುಕುವ ಆ ವರ್ಮ್‌ನ ಪ್ರತಿಗಳು ಒಂದರಿಂದ ಇನ್ನೊಂದು ಕಂಪ್ಯೂಟರ್‌ಗೆ ಹರಡುತ್ತಾ ಹೋಗುತ್ತವೆ. ವರ್ಮ್‌ಗಳಿಗೂ ವೈರಸ್‌ಗಳಿಗೂ ತಾಂತ್ರಿಕವಾಗಿ ವ್ಯತ್ಯಾಸವಿದೆ. ವರ್ಮ್‌ಗಳು ಯಾವುದೇ ಪ್ರೋಗ್ರಾಮ್‌ಗಳಲ್ಲಿ ಸೇರಿಕೊಂಡು ಕೆಲಸ ಮಾಡದೇ ಸ್ವತಂತ್ರವಾಗಿ ತಮ್ಮ ಕಾರ್ಯವನ್ನು ನಿರ್ವಹಿಸುವಂತಹ ಕೋಡ್‌ ಹೊಂದಿರುತ್ತವೆ. ಹಾಗಾಗಿ ಅವುಗಳು ಪಡಿಯಚ್ಚುಗಳನ್ನು ನಿರ್ಮಿಸಿಕೊಳ್ಳುವುದು ಮತ್ತು ಕಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಹರಿದಾಡುವುದು ಸುಲಭ.
ಹೆಚ್ಚಿನ ಮಾಲ್‌ವೇರ್‌ಗಳು (ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳು) ವರ್ಮ್‌ಗಳೇ ಆಗಿರುತ್ತವೆ ಮತ್ತು ಅವು ಹೆಚ್ಚಾಗಿ ಇಮೇಲ್ ಮುಖಾಂತರ ಪಸರಿಸಲ್ಪಡುತ್ತವೆ. ಅಂತರಜಾಲದ ಮುಖಾಂತರ ಸುಲಭವಾಗಿ ಹರಡುವಂತೆ ಅವುಗಳನ್ನು ರೂಪಿಸಲಾಗಿರುತ್ತದೆ. ದೊಡ್ಡ ದೊಡ್ಡ ಕಂಪ್ಯೂಟರ್ ವ್ಯವಸ್ಥೆಗಳನ್ನೂ ಹದಗೆಡಿಸಿದ ಇತಿಹಾಸ ಈ ಮಾಲ್‌ವೇರ್‌ಗಳಿಗಿದೆ.
ಇಮೇಲ್ ವೈರಸ್ಗಳು: ಈ ವೈರಸ್‌ಗಳು ಹೆಚ್ಚಾಗಿ ಇಮೇಲ್ ಲಗತ್ತಿನ ಮೂಲಕ ಹರಿದಾಡುತ್ತವೆ. ಹಾಗಾಗಿ ನಿಮಗೆ ಒಂದು ಇಮೇಲ್ ಬಂದಾಗ ಕಳಿಸಿದವರು ನಿಮಗೆ ಪರಿಚಯದವರಲ್ಲದಿದ್ದಾಗ ಅಂತಹ ಇಮೇಲ್‌ ಲಗತ್ತುಗಳನ್ನು ತೆರೆಯಲೇಬಾರದು. ಇಂತಹ ವೈರಸ್‌ಗಳು ಮೋಜಿನ ಚಿತ್ರಗಳು, ಗ್ರೀಟಿಂಗ್ ಕಾರ್ಡುಗಳು, ಸಂಗೀತ ಅಥವಾ ವೀಡಿಯೋಗಳ ರೂಪದಲ್ಲಿ ಇಮೇಲ್‌ ಲಗತ್ತುಗಳಾಗಿ ಬರುತ್ತವೆ.
ಒಂದು ಮೋಜಿನ ಸಂಗತಿಯೆಂದರೆ ಇಮೇಲ್ ಮೂಲಕ ಒಬ್ಬ ವ್ಯಕ್ತಿಯ ಕಂಪ್ಯೂಟರ್‌ಗೆ ಪ್ರವೇಶ ಪಡೆದ ವರ್ಮ್‌ಗಳು ಆ ಖಾತೆಯಲ್ಲಿ ಲಭ್ಯವಿರುವ ಇಮೇಲ್ ವಿಳಾಸಗಳನ್ನು ಪತ್ತೆ ಹಚ್ಚಿ ಅವುಗಳಿಗೆ ದೋಷಪೂರಿತ ಅಥವಾ ವರ್ಮ್ ಸೊಂಕಿರುವ ಇಮೇಲ್‌ ಸಂದೇಶಗಳನ್ನು ರವಾನಿಸತೊಡಗುತ್ತದೆ. ಹೀಗೆ ತನ್ನ ಇಮೇಲ್ ವಿಳಾಸದ ಮುಖಾಂತರ ದೋಷಪೂರಿತ ಇಮೇಲ್ ಸಂದೇಶಗಳು ರವಾನಿಸಲ್ಪಡುತ್ತಿವೆ ಎಂಬುದು ಆ ವ್ಯಕ್ತಿಗೆ ತಿಂಗಳುಗಳವರೆಗೆ ಗೊತ್ತಾಗದೇ ಇರಬಹುದು. ವರ್ಮ್‌ ದಾಳಿಗೊಳಗಾದ ಒಂದು ಕಂಪ್ಯೂಟರ್ ಮೂಲಕ ಸೊಂಕಿರುವ ಸಾವಿರಾರು ಸಂದೇಶಗಳು ಕಳಿಸಲ್ಪಡಬಹುದು.
ಟ್ರೋಜನ್ ಹಾರ್ಸ್: ಟ್ರೋಜನ್ ಹಾರ್ಸ್ ಸಹ ಒಂದು ಕಂಪ್ಯೂಟರ್ ಪ್ರೋಗ್ರಾಮ್. ಇದು ಒಂದು ಉಪಯುಕ್ತ ಪ್ರೋಗ್ರಾಮ್ ಎಂಬಂತೆ ತೋರಿಸಿಕೊಳ್ಳುತ್ತ, ಅದನ್ನು ಬಳಸಲು ತೆರೆದಾಗ ವ್ಯವಸ್ಥೆಯನ್ನು ಹದಗೆಡಿಸುತ್ತದೆ, ಅಲ್ಲದೇ ಮಾಹಿತಿಯನ್ನು ಅಳಿಸಿ ಹಾಕುತ್ತದೆ.
ಇವಲ್ಲದೇ ಆಡ್‌ವೇರ್‌ಗಳು (Adware), ಸ್ಪೈವೇರ್‌ಗಳು (Spyware) ಮುಂತಾದ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳೂ ಕಂಪ್ಯೂಟರ್‍ ಪ್ರೋಗ್ರಾಮ್‌ಗಳನ್ನು ಅಡರಿಕೊಳ್ಳುತ್ತವೆ. ಅಂತರಜಾಲವನ್ನು ಬಳಸುವ ಸಮಯದಲ್ಲಿ ಅಥವಾ ಯಾವುದಾದರೂ ಪ್ರೋಗ್ರಾಮ್ ಸ್ಥಾಪಿಸಿಕೊಳ್ಳುವಾಗ ಈ ಸ್ಪೈವೇರ್‌ಗಳು ಬಳಕೆದಾರರ ಅರಿವಿಲ್ಲದೇ ಸೇರಿಕೊಂಡುಬಿಡುತ್ತವೆ. ಅವು ಬಳಕೆದಾರರ ಪಾಸ್‌ವರ್ಡ್‌ಗಳು, ಇಮೇಲ್ ವಿಳಾಸಗಳು, ಅಂತರಜಾಲ ಹುಡುಕಾಟದ ಇತಿಹಾಸ, ಅಂತರಜಾಲದ ಮೂಲಕ ಖರೀದಿ ವಿವರಗಳು, ವಯಸ್ಸು, ಲಿಂಗ ಮುಂತಾದವುಗಳ ಮಾಹಿತಿ ಕಲೆಹಾಕಿ, ಆ ಪ್ರೋಗ್ರಾಮ್ ರೂಪಿಸಿದವರಿಗೆ ರವಾನಿಸುತ್ತದೆ. ಆಡ್‌ವೇರ್‌ಗಳೂ ಕೂಡಾ ಈ ವಿವರಗಳನ್ನು ಕಲೆ ಹಾಕುತ್ತವೆ ಮತ್ತು ಜಾಹೀರಾತು ಪಾಪ್‌ಅಪ್ (ವೆಬ್ ಬ್ರೌಸಿಂಗ್ ಮಾಡುವಾಗ ಮಧ್ಯ ಮಧ್ಯದಲ್ಲಿ ಎದ್ದು ಬರುವ) ಜಾಹೀರಾತುಗಳನ್ನು ತೋರಿಸತೊಡಗುತ್ತವೆ. ಇವುಗಳು ಉತ್ಪಾದಕರಿಗೆ ಮತ್ತು ವ್ಯಾಪಾರಿ ಸಂಸ್ಥೆಗಳಿಗೆ ಅನೇಕ ಉಪಯುಕ್ತ ಮಾಹಿತಿ ನೀಡಲು ನಿಯೋಜಿಸಲ್ಪಟ್ಟಿರುತ್ತವೆ.
ಪೈರೇಟಿಂಗ್ ಅಥವಾ ಸ್ವಾಮ್ಯಚೌರ್ಯ
ಡಿಜಿಟಲ್ ತಂತ್ರಜ್ಞಾನದಿಂದಾಗಿ ಸ್ವಾಮ್ಯಚೌರ್ಯ ಬಹಳ ಸುಲಭವಾಗಿದೆ. ಸಂಗೀತ, ಸಿನೆಮಾಗಳು, ಪುಸ್ತಕಗಳು ಮುಂತಾದವುಗಳನ್ನು ನಕಲು ಮಾಡಿ ಕಡಿಮೆ ಬೆಲೆಗೆ ಮಾರುವುದು, ಅಥವಾ ಅಂತರಜಾಲದ ಮೂಲಕ ಅನಾಮದೇಯವಾಗಿ ಹಂಚಿಕೊಳ್ಳುವುದು ಮುಂತಾದವುಗಳು ಸ್ವಾಮ್ಯಚೌರ್ಯದ ಅಡಿಯಲ್ಲಿ ಬರುತ್ತವೆ.    
ಕಾನೂನು ಬಾಹಿರ ವ್ಯಾಪಾರ
ಚಾಟ್‍ರೂಮುಗಳು, ಬುಲೆಟಿನ್‌ ಬೋರ್ಡ್‌ಗಳು, ಸುದ್ದಿಗುಂಪುಗಳು ಮತ್ತು ಜಾಲತಾಣಗಳ ಮುಖಾಂತರ ಕಾನೂನು ಬಾಹಿರ ವ್ಯಾಪಾರ ನಡೆಯುತ್ತದೆ. ಒಂದು ಪ್ರತಿಷ್ಠಿತ ಸಂಸ್ಥೆಯು ಒಂದು ಉತ್ಪಾದಕ ಸಂಸ್ಥೆಯಿಂದ ಉತ್ಪನ್ನಗಳನ್ನು ತಯಾರಿಸಿಕೊಂಡು ಮಾರುವ ಸಂದರ್ಭದಲ್ಲಿ, ಆ ಉತ್ಪಾದಕ ಸಂಸ್ಥೆ ಅದೇ ಉತ್ಪನ್ನವನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿ ಕಡಿಮೆ ಬೆಲೆ ಮಾರಾಟ ಮಾಡುತ್ತದೆ. ಒಂದೇ ಉತ್ಪನ್ನವು ಬೇರೆ ಬೆಲೆಯಲ್ಲಿ ಬೇರೆ ಮಾರುಕಟ್ಟೆಯಲ್ಲಿ ಮಾರಲ್ಪಡುವುದನ್ನು `ಪ್ಯಾರಲಲ್ ಟ್ರೇಡಿಂಗ್’ ಎನ್ನುತ್ತಾರೆ.
ವಂಚನೆ
ಬಳಕೆದಾರರನ್ನು ತಮ್ಮ ಬ್ಯಾಂಕಿನ ಪಾಸ್‌ವರ್ಡ್ ಮುಂತಾದ ವಿವರಗಳನ್ನು ನೀಡುವಂತೆ ಮಾಡಿ ಅವರ ಖಾತೆಗೆ ಲಗ್ಗೆ ಹಾಕುವುದು ಅಂತರಜಾಲದಲ್ಲಿ ಸಾಮಾನ್ಯವಾಗಿ ನಡೆಯುವ ಒಂದು ಪ್ರಕಾರದ ವಂಚನೆ. ಕೆಲವೊಮ್ಮೆ ಒಂದು ಸಂಸ್ಥೆಯ ಹೆಸರಲ್ಲಿ ಪಾಸ್‌ವರ್ಡ್ ದೃಢೀಕರಣಕ್ಕಾಗಿ ಇಮೇಲ್‌ ಕಳಿಸಿ ಬ್ಯಾಂಕ್ ಖಾತೆಯಿಂದ ಹಣ ಕದಿಯುತ್ತಾರೆ. ಕೆಲವು ಜಾಲತಾಣಗಳು ಉಚಿತ ಪ್ರಾಯೋಗಿಕ ಸದಸ್ಯತ್ವಕ್ಕಾಗಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ತೆಗೆದುಕೊಂಡು ಮೋಸಗೈಯುತ್ತವೆ. ಇನ್ನು ಕೆಲವು ತಾಣಗಳಲ್ಲಿ ನೋಂದಾಯಿಸಿಕೊಂಡ ಮಾರಾಟಗಾರರು ತಮ್ಮಲ್ಲಿಲ್ಲದ ವಸ್ತುವನ್ನೂ ಅಂತರಜಾಲದಲ್ಲಿ ಹರಾಜಿಗೆ ಬಿಟ್ಟು, ದುಡ್ಡು ಹೊಡೆದುಕೊಂಡು ಹೋಗುತ್ತಾರೆ. ಒಂದು ಸುಳ್ಳು ವೆಬ್‌ಸೈಟ್ ನಿರ್ಮಿಸಿ ಅದರಲ್ಲಿ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿವರಗಳು, ಪಾಸ್‌ವರ್ಡ್ ಮುಂತಾದವುಗಳನ್ನು ನೀಡುವಂತೆ ಕೇಳಿ ಮೋಸ ಮಾಡುವುದನ್ನು `ಫಿಷಿಂಗ್’ ಎಂದು ಕರೆಯುತ್ತಾರೆ.
ಔಷಧಿ ಮಾರಾಟ
ಅಂತರಜಾಲದ ಮುಖಾಂತರ ಔಷಧಿ ಮಾರಾಟ ಅಪರಾಧವಲ್ಲದಿದ್ದರೂ ಹೀಗೆ ಔಷಧಿಗಳನ್ನು ಕೊಳ್ಳುವುದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಆದರೆ ಕಾನೂನುಬಾಹಿರ ಅಂತರಜಾಲ ಔಷಧಿ ಮಾರಾಟ ಅಪರಾಧ ಹೌದು.
ಮಾನಹಾನಿ
ಅಂತರಜಾಲದ ಮುಖಾಂತರ ಮಾನಹಾನಿ ಮಾಡುವುದು, ದ್ವೇಷದ ಪ್ರತಿಕ್ರಿಯೆ ಮುಂತಾದವುಗಳು ಅಂತರಜಾಲದಲ್ಲಿ ನಡೆಯುತ್ತವೆ. ವ್ಯಕ್ತಿಗಳ ಅಥವಾ ಸಂಸ್ಥೆಗಳ ಕುರಿತು ಅಪಮಾನಕಾರಿ ಬರಹಗಳನ್ನು ಬರೆಯುವುದು, ವಿರೂಪಗೊಳಿಸಿದ ಚಿತ್ರಗಳನ್ನು ಹಾಕುವುದು, ಅಶ್ಲೀಲ ಭಾಷೆ ಬಳಸಿ ವ್ಯಕ್ತಿಗಳ ಕುರಿತು ಅಂತರಜಾಲದಲ್ಲಿ ಪ್ರಕಟಿಸುವುದು ಮುಂತಾದವುಗಳ ಮೂಲಕ ಮಾನಹಾನಿ ಮಾಡಲಾಗುತ್ತದೆ.
ಸೈಬರ್ ಸ್ಟಾಕಿಂಗ್
ಅಂತರಜಾಲದ ಮುಖಾಂತರ ಯಾರಿಗೇ ಆದರೂ ತೊಂದರೆ ಕೊಡುವುದು, ಪದೇಪದೇ ಇಮೇಲ್‌ಗಳನ್ನು ಕಳಿಸುವುದು, ಅವರ ಇಚ್ಛೆಗೆ ವಿರುದ್ಧವಾಗಿ ವರ್ತಿಸುವುದು ಅಪರಾಧ. ಯುನಿಟೆಡ್ ಕಿಂಗ್‌‍ಡಮ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಚಿತ್ರಗಳು ಮತ್ತು ವಿವರಗಳನ್ನು ವೇಶ್ಯಾವೃತ್ತಿ ಮಾಡುವವರ ಜಾಲತಾಣವೊಂದರಲ್ಲಿ ಸೇರಿಸಿದ್ದ. ಈ ಅಪರಾಧಕ್ಕಾಗಿ ಆತನಿಗೆ ೫ ತಿಂಗಳ ಸೆರೆವಾಸ ವಿಧಿಸಲಾಯಿತು.
ಅಂತರಜಾಲ ಭಯೋತ್ಪಾದನೆ
ಸೈಬರ್ ಟೆರರಿಸಮ್ ಅಥವಾ ಅಂತರಜಾಲ ಭಯೋತ್ಪಾದನೆ ಎಂದರೆ ಒಂದು ದೇಶದ ಅಥವಾ ಪ್ರಮುಖ ಸಂಸ್ಥೆಯೊಂದರ ಪ್ರಮುಖ ಅಂತರಜಾಲ ನೆಟ್‌ವರ್ಕ್‌ಗಳಲ್ಲಿ ನುಗ್ಗಿ ಮಾಹಿತಿಗಳನ್ನು ಕದಿಯುವುದು, ನಾಶಪಡಿಸುವುದು, ವ್ಯವಸ್ಥೆಯನ್ನು ಹದಗೆಡಿಸುವುದು ಮತ್ತು ಆ ಮೂಲಕ ರಾಷ್ಟ್ರೀಯ ಭದ್ರತೆಗೆ ದಕ್ಕೆ ತರುವುದಾಗಿದೆ. ಜಗತ್ತಿನ ಅನೇಕ ದೇಶಗಳಲ್ಲಿ ಪ್ರಮುಖ ಕಾರ್ಯಗಳು ಅಂತರಜಾಲದ ಸಹಾಯದಿಂದ ನಡೆಯುವುದರಿಂದ, ಆ ವ್ಯವಸ್ಥೆಗೆ ಹಾನಿ ಮಾಡುವ ಮೂಲಕ ಆ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಮೇಲೆ ದಕ್ಕೆ ಮಾಡುವುದು ಸಾಧ್ಯವಿದೆ.
ಅಂತರಜಾಲದಲ್ಲಿ ಅಪರಾಧಗಳ ಪ್ರಕಾರಗಳು ಮತ್ತು ಸ್ವರೂಪಗಳ ಕುರಿತು ತಿಳಿದುಕೊಳ್ಳುವುದು ಎಲ್ಲರಿಗೂ ಅವಶ್ಯಕ. ಎಷ್ಟೋ ಬಾರಿ ತಮಗೆ ಅರಿವಿಲ್ಲದೇ ಬಳಕೆದಾರರು ಅಂತರಜಾಲದಲ್ಲಿ ಅಪರಾಧವೆಸಗುತ್ತಾರೆ, ಅಥವಾ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ. ಅಂತರಜಾಲದಲ್ಲಿ ಒಬ್ಬ ಬಳಕೆದಾರ ಮಾಡುವ ಪ್ರತಿಯೊಂದು ಕಾರ್ಯವೂ ದಾಖಲಾಗುತ್ತಿರುತ್ತದೆ ಮತ್ತು ಯಾವುದೇ ರೀತಿಯ ಅಪರಾಧವೂ ಪತ್ತೆ ಹಚ್ಚಲ್ಪಡುತ್ತದೆ. ಹಾಗಾಗಿ, ಎಚ್ಚರ ಅತ್ಯಗತ್ಯ.
More Information visit links

ಎಂ.ಬಿ.ಏ ಗೆ ಆನ್ಲೈನ್ ನಲ್ಲಿ ಅಪ್ಲೈ ಮಾಡಲು ಒಂದೇ ವೇದಿಕೆ

apply  online


ಇತ್ತೀಚೆಗೆ ತಾನೇ ಕ್ಯಾಟ್ ನ ಫಲಿತಾಂಶ ಬಂದಿದ್ದು, ಜಿ. ಡಿ, ಇಂಟರ್ವ್ಯೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದರ ಜೊತೆಗೆ ಹಲವಾರು ಎಂ.ಬಿ.ಏ ಸ್ಕೂಲ್ ಗಳಿಗೆ ಅರ್ಜಿ ಸಲ್ಲಿಸುವ ಟೆನ್ಷನ್ ಇನ್ನೊಂದು ಕಡೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತುಕೊಂಡು ಸಮಯ ವ್ಯರ್ಥ ಮಾಡಿಕೊಳ್ಳಬೇಕು ಬೇರೆ. ಒಂದೇ ಕಡೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ವೇದಿಕೆ ಇದ್ದರೆ ಎಷ್ಟು ಚೆನ್ನ ಅಂತ ಒಮ್ಮೆಯಾದರೂ ನೀವು ಅಂದುಕೊಂಡಿರಿತ್ತೀರಿ ಅಲ್ಲವೆ.
ಇದೆಲ್ಲವನ್ನೂ ಈಗ ಸಾಧ್ಯ ಮಾಡಿದೆ ಇನ್ಫೋ ಎಡ್ಜ್ ಕಂಪನಿಯ- “ದಿ ಕಾಮನ್ ಆಪ್” ಪ್ಲಾಟ್ಫಾರ್ಮ್. ಒಂದೇ ಕ್ಲಿಕ್ ಮೂಲಕ ಅನೇಕ ಕಾಲೇಜ್ ಗಳಿಗೆ ಅರ್ಜಿ ಸಲ್ಲಿಸಬಹುದು ಹಾಗು ಆನ್ಲೈನ್ ಮೂಲಕವೇ ಹಣ ಕಟ್ಟಬಹುದು. ಬ್ಯಾಂಕ್ ಗೆ ಹೋಗಿ ಡಿ. ಡಿ ಮೂಲಕ ಹಣ ಸಂದಾಯ ಮಾಡುವ ಪ್ರಮೇಯವೇ ಇಲ್ಲ.
ಈಗಾಗಲೇ ಪ್ರಮುಖ ಕಾಲೇಜುಗಳು ಇದರಡಿ ಸೇರಿದ್ದು, ಇನ್ನಾರು ತಿಂಗಳಲ್ಲಿ ಎಲ್ಲಾ ಬಿಸಿನೆಸ್ ಸ್ಕೂಲ್ಗಳನ್ನು ತರುವ ವಿಶ್ವಾಸ ಕಂಪೆನಿಯದ್ದು.
ಅಂದಹಾಗೆ ಅಪ್ಲೈ ಮಾಡಬಹುದಾದ ವೆಬ್ ಲಿಂಕ್ - http://management.shiksha.com

Sunday, January 15, 2012

ಅಂತಾರಾಷ್ಟ್ರೀಯ ಸಹಕಾರಿ ವರ್ಷ

ವಿಶ್ವ ಸಂಸ್ಥೆಯು ಪ್ರತಿ ವರ್ಷ ಒಂದು ಸಾಮಾಜಿಕ ಬದ್ಧತಯೆ ವಿಷಯವನ್ನು ಎತ್ತಿಕೊಂಡು ಇಡಿಯ ವರ್ಷವನ್ನು ಆ ವಿಷಯದ ವರ್ಷ ಎಂದು ಘೋಷಿಸುತ್ತದೆ. ಅದೇ ರೀತಿ ೨೦೧೨ನ್ನು ಅಂತಾರಾಷ್ಟ್ರೀಯ ಸಹಕಾರಿ ವರ್ಷ ಎಂದು ಘೋಷಿಸಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವುದು, ಸಹಕಾರಿ ಸಂಸ್ಥೆಗಳ ಮೂಲಕ ಎಲ್ಲ ರಂಗ ಹಾಗೂ ಹಂತಗಳಲ್ಲಿ ಉದ್ಯೋಗ ಸೃಷ್ಠಿಗೆ ಪ್ರೋತ್ಸಾಹ ನೀಡುವುದು, ಬಡತನ ನಿರ್ಮೂಲನ -ಇತ್ಯಾದಿಗಳನ್ನೆಲ್ಲ ಸಾಧಿಸುವುದು ಈ ವರ್ಷದ ಆಶಯ. ಈ ಎಲ್ಲ ಕೆಲಸಗಳಿಗೆ ಸಹಾಯಕಾರಿಯಾಗಿವಂತೆ ಅಂತಾರಾಷ್ಟ್ರೀಯ ಸಹಕಾರಿ ವರ್ಷ ೨೦೧೨ ಎಂದು ಧ್ಯೇಯವಾಕ್ಯವಾಗಿರುವ ಜಾಲತಾಣ www.2012.coop. ಸಹಕಾರಿ ರಂಗದ ಸಾಧನೆಗಳ ಪರಿಚಯ, ಕಥೆಗಳು, ಸ್ಪರ್ಧೆಗಳು -ಎಲ್ಲ ಈ ಜಾಲತಾಣದಲ್ಲಿವೆ.

Monday, January 9, 2012

ಕ್ಯೂಆರ್ ಕೋಡ್ (QR Code)



ಇದೀಗ ನೀವು ನಿಮ್ಮದೇ ಆದ ಕ್ಯೂಆರ್ ಕೋಡ್ ಹೊಂದಲು http://qrcode.kaywa.com/ ಜಾಲತಾಣದ ಮುಖಾಂತರ ನಿಮ್ಮ ಅಂತರಜಾಲ ತಾಣ, ಬ್ಲಾಗ್, ಮಾಹಿತಿ, ಮೊಬೈಲ್ ಸಂಖ್ಯೆ, ಎಸ್ ಎಂ ಎಸ್ ಗಳನ್ನು ಕ್ಯೂ ಆರ್ ಕೋಡ್ ಗೆ ಪರಿವರ್ತಿಸಿ ಅದನ್ನು ನಿಮ್ಮ ಅಂತರಜಾಲ ತಾಣಗಳಲ್ಲಿ ಪ್ರಕಟಿಸಿ, ಮಿಂಚೆ ಮುಖಾಂತರ ನಿಮ್ಮ ಸ್ನೇಹಿತರಿಗೆ ಹಂಚಿ ಅಥವಾ ನಿಮ್ಮ ವಿಳಾಸ ಚೀಟಿ (ವಿಸಿಟಿಂಗ್ ಕಾರ್ಡ್)ಗಳಲ್ಲಿ ಮುದ್ರಿಸಿ ಹಂಚಬಹುದು. ಇದು ಸಂಪೂರ್ಣ ಉಚಿತ ಹಾಗೂ ನಿಮ್ಮ ಸ್ಮಾರ್ಟ್ ಪೋನ್ ಗಳಲ್ಲಿಯೂ ಸ್ಕ್ಯಾನ್ ಮಾಡುವ ತಂತ್ರಾಂಶವನ್ನು  ಉಚಿತವಾಗಿ ಒದಗಿಸುತ್ತದೆ. ನೀವೂ ಒಮ್ಮೆ ಪ್ರಯತ್ನಿಸಿ ನೋಡಬಹುದಲ್ಲವೇ?...



ಈಚೆಗೆ ಅನೇಕ ಜಾಹೀರಾತುಗಳಲ್ಲಿ, ಜಾಲತಾಣಗಳಲ್ಲಿ ಚಿತ್ರವಿಚಿತ್ರ ವಿನ್ಯಾಸದ ಕಪ್ಪನೆಯ ಚೌಕಗಳು ಕಾಣಿಸಿಕೊಳ್ಳುತ್ತಿರುವುದನ್ನು ನೀವು ಗಮನಿಸಿರಬಹುದು; ಇಂತಹ ಚೌಕಗಳ ಪಕ್ಕದಲ್ಲೇ ಪ್ರಕಟವಾಗುವ "ಈ ಕ್ಯೂಆರ್ ಸಂಕೇತವನ್ನು ಸ್ಕ್ಯಾನ್ ಮಾಡಿ" ಎಂಬ ಸಂದೇಶವನ್ನೂ ನೋಡಿರಬಹುದು. ಇದೆಂತಹ ಸಂಕೇತ? ಇದನ್ನು ಸ್ಕ್ಯಾನ್ ಮಾಡುವುದು ಹೇಗೆ? ಸ್ಕ್ಯಾನ್ ಮಾಡಿದಾಗ ಏನಾಗುತ್ತದೆ? - ಇಂತಹ ಅನೇಕ ಪ್ರಶ್ನೆಗಳೂ ನಿಮ್ಮ ಮನಸ್ಸಿಗೆ ಬಂದಿರಬಹುದು.
ಇದು ಕ್ಯೂಆರ್ ಕೋಡ್
ಕ್ಯೂಆರ್ ಕೋಡ್ ಎನ್ನುವುದು ಕ್ವಿಕ್ ರೆಸ್ಪಾನ್ಸ್ ಕೋಡ್ ಎಂಬ ಹೆಸರಿನ ಹ್ರಸ್ವರೂಪ. ಅಂಗಡಿಯಲ್ಲಿರುವ ಪದಾರ್ಥಗಳ ಮೇಲೆ ನಾವೆಲ್ಲ ಬಾರ್‌ಕೋಡ್‌ಗಳನ್ನು ನೋಡುತ್ತೇವಲ್ಲ, ಕ್ಯೂಆರ್ ಕೋಡ್ ಅದರದೇ ಬೇರೆಯದೊಂದು ರೂಪ. ಒಂದೇ ಆಯಾಮದ ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಕೊಂಚ ಭಿನ್ನವಾಗಿರುವ ಇವು ಎರಡು ಆಯಾಮದ ಸಂಕೇತಗಳು ಎನ್ನುವುದೇ ವಿಶೇಷ. ಸಾಮಾನ್ಯ ಬಾರ್‌ಕೋಡ್‌ಗಳಿಗಿಂತ ಹೆಚ್ಚಿನ ಪ್ರಮಾಣದ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವುದು ಕ್ಯೂಆರ್ ಕೋಡ್‌ಗಳ ಮತ್ತೊಂದು ವೈಶಿಷ್ಟ್ಯ.


ಕ್ಯೂಆರ್ ಕೋಡ್‌ಗಳಲ್ಲಿರುವ ಪುಟ್ಟಪುಟ್ಟ ಚೌಕಗಳು ನಿರ್ದಿಷ್ಟ ಮಾಹಿತಿಯನ್ನು ಪ್ರತಿನಿಧಿಸಬಲ್ಲವು. ಅಂಗಡಿಯಲ್ಲಿಟ್ಟ ವಸ್ತುಗಳ ವಿವರಣಾ ಚೀಟಿಯಿಂದ ಪ್ರಾರಂಭಿಸಿ ಜಾಹೀರಾತುಗಳವರೆಗೆ ಕ್ಯೂಆರ್ ಕೋಡ್‌ಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಇವು ಜಾಲತಾಣಗಳ ವಿಳಾಸವನ್ನು ಸೂಚಿಸಲು ಬಳಕೆಯಾಗುತ್ತವೆ.


ಇತಿಹಾಸ
ಕ್ಯೂಆರ್ ಕೋಡ್‌ಗಳು ಮೊದಲ ಬಾರಿ ಬಳಕೆಯಾದದ್ದು ಆಟೊಮೊಬೈಲ್ ಕ್ಷೇತ್ರದಲ್ಲಿ. ಕಾರ್ಖಾನೆಯೊಳಗೆ ಬಿಡಿಭಾಗಗಳ ಸಾಗಾಣಿಕೆಯ ಮೇಲೆ ನಿಗಾ ಇಡಲು ಟೊಯೋಟಾದ ಅಂಗಸಂಸ್ಥೆಯಾದ ಡೆನ್ಸೋ ವೇವ್ ೧೯೯೪ರಲ್ಲಿ ಈ ಸಂಕೇತವನ್ನು ಸೃಷ್ಟಿಸಿತು. ಸ್ಕ್ಯಾನ್ ಮಾಡಿದಾಗ ಹೆಚ್ಚಿನ ಪ್ರಮಾಣದ ಮಾಹಿತಿಯನ್ನು ಆದಷ್ಟೂ ಕಡಿಮೆ ಸಮಯದಲ್ಲಿ ಓದುವುದು ಸಾಧ್ಯವಾಗಬೇಕು ಎನ್ನುವುದು ಈ ಸಂಕೇತದ ಸೃಷ್ಟಿಯ ಹಿಂದಿದ್ದ ಉದ್ದೇಶ. ಬಹಳ ಬೇಗ ಜನಪ್ರಿಯವಾದ ಕ್ಯೂಆರ್ ಕೋಡ್ ಆಟೊಮೊಬೈಲ್ ಮಾತ್ರವಲ್ಲದೆ ಅನೇಕ ಇತರ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ.


ಓದುವ ರೀತಿ
ಕ್ಯೂಆರ್ ಕೋಡ್‌ಗಳಲ್ಲಿ ಅಡಕವಾಗಿರುವ ಮಾಹಿತಿಯನ್ನು ಓದಲು ಮೊದಲಿಗೆ ಕ್ಯೂಆರ್ ಕೋಡ್ ರೀಡರ್ ಉಪಕರಣಗಳನ್ನು ಬಳಸಲಾಗುತ್ತಿತ್ತು. ಆದರೆ ಈಗ ಬಹುತೇಕ ಎಲ್ಲ ಆಧುನಿಕ ಮೊಬೈಲ್ ದೂರವಾಣಿಗಳಲ್ಲೂ ಈ ಸಂಕೇತಗಳನ್ನು ಗುರುತಿಸುವ ತಂತ್ರಾಂಶ ಲಭ್ಯವಿರುವುದರಿಂದ ಪ್ರತ್ಯೇಕ ಉಪಕರಣದ ಆವಶ್ಯಕತೆ ಇಲ್ಲ.


ಮೊಬೈಲ್ ದೂರವಾಣಿ ಬಳಸಿ ಕ್ಯೂಆರ್ ಸಂಕೇತಗಳನ್ನು ಸ್ಕ್ಯಾನ್ ಮಾಡುವುದು ಬಹಳ ಸುಲಭ. ಮೊದಲಿಗೆ ನಿಮ್ಮ ದೂರವಾಣಿ ಉಪಕರಣದಲ್ಲಿ ಕ್ಯೂಆರ್ ಕೋಡ್ ರೀಡರ್ ತಂತ್ರಾಂಶವನ್ನು ಅಳವಡಿಸಿಕೊಳ್ಳಿ (ನಿಮ್ಮ ದೂರವಾಣಿಗೆ ಲಭ್ಯವಿರುವ ತಂತ್ರಾಂಶದ ಬಗೆಗೆ ತಿಳಿದುಕೊಳ್ಳಲು ಯಾವುದೇ ಸರ್ಚ್ ಇಂಜನ್ ಮೊರೆಹೋಗಬಹುದು). ಆ ತಂತ್ರಾಂಶವನ್ನು ಚಾಲೂ ಮಾಡಿ ನಿಮ್ಮ ದೂರವಾಣಿಯನ್ನು ಯಾವುದೇ ಕ್ಯೂಆರ್ ಕೋಡ್‌ನತ್ತ ತಿರುಗಿಸಿದರೆ ಸಾಕು, ಆ ತಂತ್ರಾಂಶ ಕ್ಯೂಆರ್ ಸಂಕೇತವನ್ನು ಅರ್ಥೈಸಿಕೊಂಡು ಅದರಲ್ಲಿ ಸೂಚಿಸಲಾಗಿರುವ ಕೆಲಸ ಮಾಡುತ್ತದೆ.


ಡೆನ್ಸೋ ವೇವ್ ಸಂಸ್ಥೆ ಕ್ಯೂಆರ್ ಸಂಕೇತಗಳ ಪೇಟೆಂಟ್ ಹಕ್ಕುಗಳನ್ನು ಹೊಂದಿದೆಯಾದರೂ ಅದು ಅವನ್ನು ಮುಕ್ತ ಬಳಕೆಗೆ ತೆರೆದಿಟ್ಟಿದೆ. ಹೀಗಾಗಿ ನಿಮ್ಮದೇ ಆದ ಕ್ಯೂಆರ್ ಸಂಕೇತಗಳ ರೂಪಿಸಿಕೊಳ್ಳುವುದು ಸುಲಭ ಮಾತ್ರವೇ ಅಲ್ಲ, ಉಚಿತವೂ ಹೌದು. ಕ್ಷಣಾರ್ಧದಲ್ಲೇ ಕ್ಯೂಆರ್ ಸಂಕೇತಗಳನ್ನು ರೂಪಿಸಿಕೊಡುವ ಅನೇಕ ಜಾಲತಾಣಗಳನ್ನು ಯಾವುದೇ ಸರ್ಚ್ ಇಂಜನ್ ನಿಮಗೆ ಹುಡುಕಿಕೊಡಬಲ್ಲದು.


ಏನೇನೆಲ್ಲ ಸಾಧ್ಯ
ಕಾರಿನ ಜಾಹೀರಾತಿನ ಜೊತೆಗಿರುವ ಕ್ಯೂಆರ್ ಕೋಡ್ ನಿಮ್ಮನ್ನು ಯೂಟ್ಯೂಬ್‌ನಲ್ಲಿರುವ ಆ ಕಾರಿನ ವೀಡಿಯೋದತ್ತ ಕೊಂಡೊಯ್ಯಬಹುದು; ಯಾವುದೋ ಜಾಲತಾಣದಲ್ಲಿರುವ ಸಂಕೇತ ಸ್ಕ್ಯಾನ್ ಮಾಡಿದರೆ ನಿಮ್ಮ ಮೊಬೈಲಿನಲ್ಲಿ ಆ ತಾಣದ ಮೊಬೈಲ್ ಸ್ನೇಹಿ ಆವೃತ್ತಿ ತೆರೆದುಕೊಳ್ಳಬಹುದು; ಇನ್ನಾವುದೋ ಸಂಕೇತ ನಿಮ್ಮ ಚಾಟಿಂಗ್ ಗೆಳೆಯರ ಪಟ್ಟಿಗೆ ಹೊಸ ಸ್ನೇಹಿತರನ್ನು ಸೇರಿಸಿಕೊಳ್ಳಲು ನೆರವಾಗಬಹುದು; ಹೊಸದಾಗಿ ಪರಿಚಯವಾದವರ ವಿಸಿಟಿಂಗ್ ಕಾರ್ಡ್ ಕೇಳಿದರೆ ಅವರು "ವಿಸಿಟಿಂಗ್ ಕಾರ್ಡ್ ಯಾಕೆ, ನನ್ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಳ್ಳಿ; ನನ್ನ ಸಂಪರ್ಕದ ವಿವರಗಳೆಲ್ಲ ತಕ್ಷಣವೇ ನಿಮ್ಮ ಮೊಬೈಲಿಗೆ ಸೇರಿಕೊಳ್ಳುತ್ತವೆ" ಎಂದೂ ಹೇಳಬಹುದು. ಒಟ್ಟಿನಲ್ಲಿ ಕ್ಯುಆರ್ ಸಂಕೇತಗಳನ್ನು ಸ್ಕ್ಯಾನ್ ಮಾಡುವ ಮೂಲಕ ಅನೇಕ ಕೆಲಸಗಳನ್ನು ಪೂರೈಸಿಕೊಳ್ಳುವುದು ಸಾಧ್ಯ ಎನ್ನುವುದಂತೂ ಸತ್ಯ.


ರೀಡರ್ ತಂತ್ರಾಂಶದ ಸಹಾಯವಿಲ್ಲದೆ ಕ್ಯೂಆರ್ ಸಂಕೇತಗಳಲ್ಲಿರುವ ಮಾಹಿತಿ ಏನು ಎಂದು ಅರಿತುಕೊಳ್ಳುವುದು ಸಾಧ್ಯವಿಲ್ಲ. ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡ ದುಷ್ಕರ್ಮಿಗಳು ಈ ಸಂಕೇತಗಳನ್ನು ಕೆಟ್ಟ ಉದ್ದೇಶಗಳಿಗಾಗಿಯೂ ಬಳಸಿಕೊಳ್ಳಬಹುದು ಎನ್ನುವುದೇ ವಿಪರ್ಯಾಸ.


ನಾವು ಸ್ಕ್ಯಾನ್ ಮಾಡುವ ಯಾವುದೋ ಸಂಕೇತ ನಮ್ಮನ್ನು ದುರುದ್ದೇಶಪೂರಿತ ಜಾಲತಾಣಗಳತ್ತ ಕೊಂಡೊಯ್ಯಬಹುದು, ಅಥವಾ ನಮ್ಮ ಮೊಬೈಲ್‌ನಲ್ಲಿರುವ ಮಾಹಿತಿಯನ್ನೆಲ್ಲ ಬೇರೆಯವರಿಗೆ ಕಳುಹಿಸಿಬಿಡಬಹುದಲ್ಲ! ಹೀಗಾಗಿಯೇ ನಂಬಲರ್ಹ ಎನಿಸದ ಯಾವುದೇ ಮೂಲದಿಂದ ದೊರಕುವ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡದಿರುವುದೇ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
ಮಾಹಿತಿ: ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಹೆಚ್ಚಿನ ಮಾಹಿತಿಗೆ:
http://www.plasticprinters.com/QR_Code_Business_Cards/

Sunday, December 25, 2011

ಮೊದಲನೇ ವರ್ಷದ ಸಂಭ್ರಮದಲ್ಲಿ

ಈ ಡಿಸೆಂಬರ್ 25-12-2011ರ [ಒಂದು ವರ್ಷ] ದ ಹೊತ್ತಿಗೆ ಸರಿಯಾಗಿ 
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣ ವಿಶ್ವದಾದ್ಯಂತ "13000+" ಬಾರಿ ತೆರೆದುಕೊಂಡಿದೆ.
ಚಂದ್ರು ಮಲ್ಟಿಮೀಡಿಯ ಅಂತರಜಾಲ ತಾಣದಿಂದಾಗಿ ವಿಶ್ವದಾದ್ಯಂತ ಗೆಳೆಯರು ಸಿಕ್ಕಿದ್ದಾರೆ.
ವೆಬ್ ಲೋಕದಲ್ಲಿ ಇಷ್ಟಪಟ್ಟು ಬರೆದುದನ್ನು ಅಷ್ಟೇ ಖುಷಿಯಿಂದ ಓದಿ ಪ್ರೋತ್ಸಾಹಿಸುವ ನಿಮ್ಮಂಥ ಗೆಳೆಯರು.
 ಅದಕ್ಕೆ ನನ್ನ ದೊಡ್ಡ ನಮನಗಳು.

Wednesday, December 14, 2011

ಕನ್ನಡ ಪದಬಂಧ

ಪತ್ರಿಕೆಗಳಲ್ಲಿ ಬರುವ ಪದಬಂಧ ನೋಡದವರಾರು? ಕೆಲವು ಮನೆಗಳಲ್ಲಂತೂ ಪದಬಂಧ ಬಿಡಿಸುವ ವಿಷಯದಲ್ಲಿ ನಾನು ತಾನು ಎಂದು ಜಗಳಗಳೇ ನಡೆಯುತ್ತದೆ. ಪತ್ರಿಕೆಯಲ್ಲಿ ಪದಬಂಧ ಬಿಡಿಸಬೇಕಾದರೆ ಪೆನ್ಸಿಲ್ ತೆಗೆದುಕೊಂಡು ಬರೆಯಬೇಕು, ಬರೆದುದನ್ನು ಅಳಿಸಿ ಬರೆಯಬೇಕು, ಹೀಗೆ ನಡೆಯುತ್ತದೆ. ಯಾವುದಾದರೊಂದು ಚೌಕದಲ್ಲಿ ತುಂಬಿಸಬೇಕಾದ ಅಕ್ಷರ ಏನು ಇರಬಹುದು ಎಂಬ ಸುಳುಹು ನೀಡಲು ಅಸಾಧ್ಯ. ಆದರೆ ಗಣಕ ಅಥವಾ ಅಂತರಜಾಲ ಮೂಲಕ ಪದಬಂಧ ಮಾಡಿದರೆ ಅದರಲ್ಲಿ ಈ ರೀತಿಯ ಹೆಚ್ಚಿನ ಸೌಕರ್ಯ ನೀಡಲು ಸಾಧ್ಯ. ಅಡ್ಡ ನೀಟ ಸುಳುಹುಗಳಲ್ಲದೆ, ಪ್ರತಿಯೊಂದು ಚೌಕಕ್ಕೂ ಪ್ರತ್ಯೇಕ ಸುಳುಹು ಅಥವಾ ಉತ್ತರ ನೀಡಬಹುದು. ಇಂಗ್ಲಿಶ್ ಭಾಷೆಯಲ್ಲಿ ಇಂತಹ ಪದಬಂಧಗಳನ್ನು ನೀಡುವ ಜಾಲತಾಣಗಳು ಬೇಕಾದಷ್ಟಿವೆ. ಕನ್ನಡದಲ್ಲಿ? ಹೌದು. ಈಗ ಕನ್ನಡ ಭಾಷೆಯಲ್ಲೂ ಅಂತರಜಾಲ ಮೂಲಕ ಪದಬಂಧ ಬಿಡಿಸಬಹುದು. ಅದಕ್ಕಾಗಿ ನೀವು www.indicross.com ಜಾಲತಾಣಕ್ಕೆ ಭೇಟಿ ನೀಡಬೇಕು.

ಮಕ್ಕಳಿಗಾಗಿ ಪ್ರೋಗ್ರಾಮ್ಮಿಂಗ್

ಗಣಕವನ್ನು ಬಳಸುವುದು ಒಂದಾದರೆ ಗಣಕದಲ್ಲಿ ಕ್ರಮವಿಧಿ ರಚಿಸುವುದು (ಪ್ರೋಗ್ರಾಮ್ಮಿಂಗ್) ಇನ್ನೊಂದು. ಇದು ಕೇವಲ ಆಸಕ್ತರಿಗೆ ಹಾಗೂ ಪರಿಣತರಿಗೆ. ಗಣಕದಲ್ಲಿ ಕ್ರಮವಿಧಿ ರಚಿಸಲು ಹಲವು ಭಾಷೆಗಳು (programming languages) ಲಭ್ಯವಿವೆ. ಉದಾ -C, C++, Java, C#, ASP.NET, ಇತ್ಯಾದಿ. ಇವೆಲ್ಲ ದೊಡ್ಡವರಿಗಾಗಿ ಹಾಗೂ ಕಲಿಯಲು ಕ್ಲಿಷ್ಟವಾದ ಭಾಷೆಗಳು. ಮಕ್ಕಳಿಗಾಗಿ ಲೋಗೋ ಎಂಬ ಭಾಷೆ ಸುಮಾರು ವರ್ಷಗಳಿಂದ ಬಳಕೆಯಲ್ಲಿದೆ. ಲೋಗೋ ಮಾದರಿಯಲ್ಲೇ ಮಕ್ಕಳಿಗೆಂದೇ ರಚಿಸಲಾದ ಕ್ರಮವಿಧಿ ರಚನೆಯ ಭಾಷೆ Scratch. ಇದರ ವೈಶಿಷ್ಟ್ಯವೇನೆಂದರೆ ಇದರಲ್ಲಿ ಎಲ್ಲವೂ ಚಿತ್ರಗಳ (ಗ್ರಾಫಿಕ್ಸ್) ಮೂಲಕ ಆಗುತ್ತದೆ. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಬೇಟಿ ನೀಡಬೇಕಾದ ಜಾಲತಾಣ scratch.mit.edu. ಇದು ೧೬ ವರ್ಷದ ಒಳಗಿನ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ತಯಾರಾದ ತಂತ್ರಾಂಶ. ಇದನ್ನು ಅಧ್ಯಾಪಕರೂ ಬಳಸಬಹುದು.