Pages

Thursday, February 18, 2016

251₹ ಸ್ಮಾರ್ಟ್ ಫೋನ್ಗೆ ಬೀಳೋ ಮುಂಚೆ ಯೋಚನೆ ಮಾಡಿ

ಎಲ್ರೂ ಹೇಳ್ತಿದಾರೆ ಅಂತ 251₹ ಸ್ಮಾರ್ಟ್ ಫೋನ್ಗೆ ಬೀಳೋ ಮುಂಚೆ ಈ 11 ವಿಷಯದ ಬಗ್ಗೆ ತಪ್ಪದೆ ಯೋಚನೆ ಮಾಡಿ





251 ರುಪಾಯಿಗೆ `ಫ್ರೀಡಂ 251' ಅನ್ನೋ ಹೆಸರಿನ ಸ್ಮಾರ್ಟ್ ಫೋನ್ ಸಿಗತ್ತೆ ಅಂತ ಎಲ್ಲಾ ಕಡೆ ಸುದ್ದಿ.

ಅದರಲ್ಲಿ 4-inch WVGA IPS screen, 1.3GHz Quad-core processor, 1GB RAM, 8GB internal storage, dual SIM 3G cellular, a 3.2MP ಫೋಟೋ ಕ್ಯಾಮೆರಾ, 0.3MP ಸೆಲ್ಪಿ ಕ್ಯಾಮೆರಾ, Android 5.1 Lollipop, ಎಲ್ಲಾ ಇರತ್ತಂತೆ. ಇಷ್ಟೆಲ್ಲ ಸೇರಿ ಬರೀ 251 ರೂ ಅಂತ ಕೇಳಿದರೇ ಏನೋ ಕಿರೀಕ್ ಇದ್ದಂಗಿದೆ ಅನ್ಸಲ್ವಾ ನಿಮಗೆ? ಇಂಥಾ ಫೋನ್ಗೆ ಅಂಟಿಸೋ ಸ್ಕ್ರೀನ್ ಗಾರ್ಡ್ಗೇ 500 ರೂ ಆಗತ್ತೆ. ಇನ್ನು ಇಡೀ ಫೋನ್ನ ಇವರು ಹೆಂಗೆ 251 ರೂಪಾಯಿಗೆ ಕೊಡ್ತಾರೆ? ನಮ್ಮ ಪ್ರಕಾರ ಈ ಫೋನಿಗೆ ‘ಬೀಳೋ’ ಮುಂಚೆ ಬಹಳ ಹುಷಾರಾಗಿರಬೇಕು.

ಈ 11 ವಿಷಯಗಳ್ನ ಗಮನಿಸಿ:

1. ಕಂಪನಿ ವೆಬ್ಸೈಟಲ್ಲೇ ಹಾಳು-ಮೂಳು ಚಾರ್ಜುಗಳು ಇವೆ ಅಂತ ಹಾಕಿದಾರೆ. ಅಂದ್ರೆ ಏನ್ ಮಾಡಿದರೂ ನಿಮಗೆ 251 ರೂಪಾಯಿಗೆ ಅದು ಸಿಗಲ್ಲ.

  1. ಶಿಪ್ಪಿಂಗ್ ಚಾರ್ಜ್: ರೂ. 40
  2. ಕ್ಯಾಶ್ ಆನ್ ಡೆಲಿವರಿ: ರೂ 50
  3. ತೊಂದರೆ ಇದ್ದರೆ ವಾಪಸ್ ಕಳಿಸಕ್ಕೆ ಕೊರಿಯರ್ ಚಾರ್ಜ್ ನೀವೇ ಕೊಡಬೇಕು: ರೂ 500 (ಅಂದಾಜು).
  4. ಜೊತೆಗೆ ವಾಪಸ್ ಕಳಿಸಿದ್ದಕ್ಕೆ ಕಂಪನಿಗೆ ಕೊಡಬೇಕಾದ್ದು: ರೂ. 50
ಇದೆಲ್ಲ ಕೇಳಿದರೇ ಏನೋ ಕಿರೀಕ್ ಇದೆ ಅನ್ನಿಸುತ್ತೆ.

2. ಇಷ್ಟು ಕಡಿಮೆಗೆ ಮಾರ್ತಾ ಇರಬೇಕಾದರೆ ಕಂಪನಿಗೆ ಬೇರೆ ಯಾವುದೋ ರೀತಿಯಲ್ಲಿ ದುಡ್ಡು ಸಿಗ್ತಾ ಇರಬೇಕು. ಅಂದ್ರೆ... ನೀವು ಕಟ್ತಾ ಇರಬೇಕು...

ಏನಾದರೂ ಡೇಟಾ ಪ್ಲಾನು, ಫೋನ್ ಬಿಲ್ಲು, ಎಲ್ಲಾ ಅವರಿಗೇ ಕಟ್ಟಬೇಕು ಅನ್ನೋ ಪ್ಲಾನ್ ಇದೆಯಾ ಇವರಿಗೆ? ಗೊತ್ತಿಲ್ಲ.

3. ಫೋನ್ ಗುಣಮಟ್ಟ ಚೆನ್ನಾಗಿರಕ್ಕೆ ಸಾಧ್ಯ ಇದ್ಯಾ? ಉದಾ: ಬ್ಯಾಟರಿ ಎಷ್ಟು ದಿನ ಬರುತ್ತೆ? ಚಾರ್ಜ್ ಮಾಡಿದರೆ ಎಷ್ಟು ದಿನ ನಡೆಯುತ್ತೆ?

ಬ್ಯಾಟರಿ ಇಂದಾನೇ ದುಡ್ಡು ಮಾಡ್ತಾರಾ ಇವರು?

4. ಫೋನಿಂದ ಹೊರಬರೋ ವಿಕಿರಣಗಳು (radiation) ಎಷ್ಟಿರತ್ತೆ? ಇಂಥಾ ಫೋನು ನಮ್ಮ ಆರೋಗ್ಯಕ್ಕೆ (ಅದೂ ಮಾನಸಿಕ ಆರೋಗ್ಯಕ್ಕೆ) ತೊಂದರೆ ಮಾಡಲ್ಲ ಅನ್ನೋದಕ್ಕೆ ಏನು ಪ್ರೂಫು?


seven-ways-cell-phones-harm-your-health-ziliving_com.jpg

ಚೈನಾ ಇಂದ ಬರೋ ಚೀಪ್ ಸ್ಮಾರ್ಟ್ ಫೋನುಗಳಿಗೆ ಈ ವಿಕಿರಣದ ತೊಂದರೆ ಹೆಚ್ಚು. ಈ ಫೋನ್ಗೆ ಆ ತೊಂದರೆ ಇಲ್ಲ ಅನ್ನೋ ಗ್ಯಾರಂಟಿ ಏನು?

5. ಈ ಫೋನಿಂದ ನಮ್ಮ ಕಿವಿ ಹಾಳಾಗಲ್ಲ ಅನ್ನೋದಕ್ಕೆ ಏನು ಪ್ರೂಫು?

ಕಡಿಮೆ ದುಡ್ಡು ಕೊಟ್ಟಾಗ ಒಳ್ಳೇ ಸ್ಪೀಕರ್ಗಳು ಸಿಗಲ್ಲ.

6. ಈ ಫೋನಿಂದ ನಮ್ಮ ಕಣ್ಣು ಹಾಳಾಗಲ್ಲ ಅನ್ನೋದಕ್ಕೆ ಏನು ಪ್ರೂಫು?

ಕಡಿಮೆ ದುಡ್ಡು ಕೊಟ್ಟಾಗ ಒಳ್ಳೇ ಸ್ಕ್ರೀನುಗಳು ಸಿಗಲ್ಲ.

7. ಏನಾದರೂ ಬಿಟ್ಟಿ ಸಾಫ್ಟ್ವೇರ್ ಲೋಡ್ ಮಾಡಿ ಅದರಲ್ಲಿ ಜಾಹೀರಾತು ತೋರುಸ್ತಾರಾ?

ನೀವು ಜಾಹೀರಾತು ನೋಡಕ್ಕೆ ಡೇಟಾ ಪ್ಲಾನಿಗೆ ದುಡ್ಡು ಕೊಡ್ತೀರಿ, ಕಂಪನಿ ಜಾಹೀರಾತು ಮಾರಿ ದುಡ್ಡು ಮಾಡಿದರೆ? ಜಾಹೀರಾತಿಗೋಸ್ಕರ ನೀವು ಫೋನ್ ತೊಗೊಂಡಂಗ್ ಆದ್ರೆ?

8. ಫೋನ್ ತುಂಬ ಸ್ಲೋ ಆದ್ರೆ?


 9. ಈ ಫೋನ್ ಕಂಪನಿಯೋರ್ಗೆ ಅಡುಗೆ ಪದಾರ್ಥದ ವ್ಯಾಪಾರ ಮಾಡೋ ಅನುಭವ ಮಾತ್ರ ಇರೋದು.
ರಿಂಗಿಂಗ್ ಬೆಲ್ಸ್ ಅನ್ನೋ ಈ ಕಂಪನಿ ಶುರುವಾಗಿದ್ದು 16-9-2015ಕ್ಕೆ. ಅಂದ್ರೆ 5 ತಿಂಗಳಾಗಿದೆ, ಅಷ್ಟೆ. ಅಡುಗೆ ಪದಾರ್ಥ ಮಾರ್ತಿದ್ದ ಇವರಿಗೆ ಇಷ್ಟು ಕಡಿಮೆ ಬೆಲೆಗೆ ಫೋನ್ ಮಾಡುವ ತಾಂತ್ರಿಕ ಸಾಮರ್ಥ್ಯ ಇದ್ಯಾ?

10. ಫೋನ್ ಸಿಗೋದು ಕಂಪನಿ ವೆಬ್ಸೈಟಲ್ಲಿ ಮಾತ್ರ. ಇನ್ನೂ ಸಗಟು ಮಾರಾಟಗಾರರು ಸಿಕ್ಕಿಲ್ಲ.

ನೀವು ದುಡ್ಡು ಕಟ್ಟಿದ ಮೇಲೂ ನಿಮಗೆ ಫೋನ್ ಟೈಮಿಗೆ ಸರಿಯಾಗಿ ಬರದೆ ಹೋದ್ರೆ?

11. ಫೋನಲ್ಲಿ ಕನ್ನಡ ಸಪೋರ್ಟ್ ಇರತ್ತಾ? ಎಲ್ಲಕ್ಕೂ ದುಡ್ಡಾಗತ್ತೆ....

ಅಷ್ಟೇ ಅಲ್ಲ, ನಿಮಗೆ ಬೇಕಾಗಿರೋ ಎಲ್ಲಾ ಫೀಚರ್ಸೂ ಇದ್ಯಾ ಅಂತ ಒಂದ್ಸಲಿ ನೋಡ್ಕೊಳೋಡು ಒಳ್ಳೇದು.

ಈ ಫೋನ್ ಚೆನ್ನಾಗಿಲ್ಲ ಅಂತ ಹೇಳೋದು ನಮ್ಮ ಉದ್ದೇಶ ಅಲ್ಲ. ಹಾಗೆ ಹೇಳಕ್ಕೆ ಇದನ್ನ ಯಾರೂ ನೋಡೂ ಇಲ್ಲ. ಹುಷಾರಾಗಿರಿ, ಅಷ್ಟೆ...

 More info & Buy online : http://freedom251.com/cart
Source by: antekante.com 

No comments:

Post a Comment