Pages

Saturday, March 29, 2014

ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ "ಕೇಳು" ತಂತ್ರಾಂಶ


ವ್ಯವಹಾರ ಜ್ಞಾನಕ್ಕಾಗುವಷ್ಟು ಕನ್ನಡ ಕಲಿಯಬೇಕೆಂಬ ಆಸೆಪಡುತ್ತಿದ್ದವರಿಗೆ ಶುಭಸುದ್ದಿ‌.
ನಿಮಗಾಗಿ ಒಂದು ಕನ್ನಡ ಆಂಡ್ರಾಯ್ಡ್ ಆಪ್ತಯಾರಾಗಿದೆ. ಬೆಂಗಳೂರಿನ ಸಾಫ್ಟ್ವೇರ್ಎಂಜಿನಿಯರ್ಹರೀಶ್ಎಂಬವರು 'ಕೇಳು' ಹೆಸರಿನ ಹೊಸ ಆಂಡ್ರಾಯ್ಡ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದಾರೆ. ತಂತ್ರಾಂಶ 2.9 ಎಂ.ಬಿ ಗಾತ್ರವನ್ನು ಹೊಂದಿದ್ದು, ಆಂಡ್ರಾಯ್ಡ್‌ 2.2 ನಂತರ ಆವೃತ್ತಿಯ ಆಂಡ್ರಾಯ್ಡ್ ಸಾಧನಗಳನ್ನು ಹೊಂದಿರುವ ಬಳಕೆದಾರರು ತಂತ್ರಾಂಶವನ್ನು ಗೂಗಲ್ಪ್ಲೇ ಸ್ಟೋರ್‌‌ನಿಂದ ಉಚಿತವಾಗಿ ಡೌನ್ಲೋಡ್ಮಾಡಿ ಕನ್ನಡ ಕಲಿಯಬಹುದು.
"ಕೇಳು ‌‌" ಕನ್ನಡ ಕಲಿಯಲು ಹೊಸ ಆಂಡ್ರಾಯ್ಡ್‌ ತಂತ್ರಾಂಶ "ಕೇಳು" ತಂತ್ರಾಂಶದಲ್ಲಿ ಏನಿದೆ?


 ಕನ್ನಡದಲ್ಲಿ ವ್ಯವಹಾರ ಜ್ಞಾನ ಕಲಿಯಬೇಕು ಎಂದು ಮನಸ್ಸುಮಾಡಿದವರಿಗೆ ಉತ್ತಮ ತಂತ್ರಾಂಶಇದಾಗಿದ್ದು ಇಂಗ್ಲಿಷ್‌‌ ವಾಕ್ಯಗಳನ್ನು ಇಂಗ್ಷಿಷ್‌‌ ಪದಗಳಲ್ಲೇ(ಕಂಗ್ಷಿಷ್‌‌)ಕನ್ನಡಕ್ಕೆ ಭಾಷಾಂತರ ಮಾಡಲಾಗಿದೆ. ಕನ್ನಡ ಭಾಷಾಂತರದ ಜೊತೆಗೆ ವಾಕ್ಯಗಳನ್ನು ಹೇಗೆ ಉಚ್ಛಾರಣೆ ಮಾಡವುದು ಎಂಬುದನ್ನು ತಿಳಿಯಲು ಅಲ್ಲೇ ವಾಕ್ಯಗಳ ಕನ್ನಡ ಉಚ್ಛಾರಣೆಯ ಆಡಿಯೋ ಸಹ ನೀಡಲಾಗಿದ್ದು ಸ್ಪಷ್ಟವಾಗಿ ಕೇಳಬಹುದಾಗಿದೆ
ಇದರಲ್ಲಿರುವ ಎಲ್ಲಾ ಆಡಿಯೋವನ್ನು ಆಫ್‌‌ಲೈನ್ನಲ್ಲಿ ಕೇಳಬೇಕಿದ್ದಲ್ಲಿ ಮೊದಲ ಸಲ ಎಲ್ಲಾ ಆಡಿಯೋವನ್ನು ಒಮ್ಮೆ ಇಂಟರ್ನೆಟ್ಮೂಲಕ ಪ್ಲೇ ಮಾಡಬೇಕಾಗುತ್ತದೆ. ಒಮ್ಮೆ ಪ್ಲೇ ಆದ ಬಳಿಕ ಮತ್ತೇ ಆಡಿಯೋ ಪ್ಲೇ ಮಾಡಲು ಇಂಟರ್ನೆಟ್ಸಂಪರ್ಕಬೇಕಾಗಿಲ್ಲ. ಆಪ್ನಲ್ಲಿ ಶುಭಾಶಯ ವಿನಿಮಯ,ರಿಕ್ಷಾ ಪ್ರಯಾಣ, ಖರೀದಿ ಸೇರಿದಂತೆ 17 ವಿವಿಧ ಸಂದರ್ಭದಲ್ಲಿ ಕನ್ನಡ ಮಾತನಾಡುವ ಬಗೆಯನ್ನು ವಿವರಿಸಲಾಗಿದ್ದು, ನಿಮಗೆ ಇಷ್ಟವಾದ ವಾಕ್ಯವನ್ನು ಫೇವರೇಟ್ವಿಭಾಗಕ್ಕೆ ಸೇರಿಸುವ ಮೂಲಕವೂ ಕಲಿಯಬಹುದಾಗಿದೆ.
ಗೂಗಲ್ಪ್ಲೇ ಸ್ಟೋರ್ನಿಂದ ಡೌನ್ಲೋಡ್ಮಾಡಲು ಕ್ಲಿಕ್ಮಾಡಿ. http://goo.gl/a2bF7a

No comments:

Post a Comment