Pages

Monday, May 20, 2013

ಕಂಪ್ಯೂಟರಿಗೆ ಮೊಬೈಲ್ ಕುಲುಕಿ ಕಡತ ವರ್ಗಾವಣೆ ಮಾಡಲು

ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ,ಕಡತಗಳನ್ನು ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು.ಈ ತಂತ್ರಾಂಶವು ಐಓಎಸ್ ಮತ್ತು ಆಂಡ್ರಾಯಿಡ್ ಫೋನುಗಳಿಗೆ ಲಭ್ಯವಿದೆ. ಈಗ ಅದರ ಹೊಸ ಸುಧಾರಿತ ಆವೃತ್ತಿಯಲ್ಲಿ ಈ ಸೌಕರ್ಯವನ್ನು ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಪಡೆಯಲು ಸಾಧ್ಯ.ಇದಕ್ಕೆ ಕಂಪ್ಯೂಟರಿನಲ್ಲಿ ತಂತ್ರಾಂಶ ಅಳವಡಿಸಬೇಕಿಲ್ಲ. ಬಂಪ್ ತಂತ್ರಾಂಶವು ಮೊಬೈಲಿನಲ್ಲಿ ಇರಬೇಕು. ವರ್ಗಾಯಿಸ ಬೇಕಿರುವ ಕಡತಗಳನ್ನು ಆಯ್ಕೆ ಮಾಡಿ. ನಂತರ ಮೊಬೈಲನ್ನು ಕಂಪ್ಯೂಟರಿನ ಸ್ಪೇಸ್‌ಬಾರ್ ಕೀಲಿಯ ಮೇಲೆ ಕುಟ್ಟಿದರೆ ಸರಿ, ಕಡತಗಳು ವರ್ಗಾಯಿಸಲ್ಪಡುತ್ತವೆ. ಆಡಿಯೋ, ವೀಡಿಯೋ, ಲಿಪಿ ಕಡತಗಳು ಯಾವುದನ್ನೂ ವರ್ಗಾಯಿಸಲು ಬರುತ್ತದೆ. ಹೆಚ್ಚಿನ ವಿವರಗಳಿಗೆ ಜಾಲತಾಣವನ್ನು ನೋಡಿ.https://bu.mp

No comments:

Post a Comment