Pages

Monday, May 20, 2013

ಬಳಸಿದ ನಿಮಿಷಕ್ಕನುಗುಣವಾಗಿ ದರ ಕಾರ್ ಸೇವೆ

ಅಮೆರಿಕಾದಲ್ಲಿ ಕಾರನ್ನು ಬಾಡಿಗೆಗೆ ನೀಡುವ ಸೇವೆಗಳನ್ನು ಇಂಟರ್ನೆಟ್ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ Car2go ಮತ್ತು ಸ್ಮಾರ್ಟ್‌ಫೋನ್ ಮುಖಾಂತರ ಕಾರನ್ನು ಬಾಡಿಗೆಗೆ ಹಿಡಿಯಬಹುದು. ಈಗದು ಕಾರನ್ನು ಬಳಸಿದ್ದಕ್ಕೆ ಬಾಡಿಗೆಯನ್ನು ನಿಮಿಷಕ್ಕಿಷ್ಟು ಎಂಬ ದರದಲ್ಲಿ ಲೆಕ್ಕ ಹಾಕಿ,ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ಹೆಚ್ಚಿನ ಬಾಡಿಗೆ ಕಾರು ಸೇವೆಗಳು ಗಂಟೆಗಿಷ್ಟು ಎಂದು ದರ ನಿಗದಿಪಡಿಸಿವೆ. Car2go ದ ಸೇವೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಬಾಡಿಗೆಯಲ್ಲಿ ಪಾರ್ಕಿಂಗ್ ಉಚಿತವಾಗಿದೆ. ಹಾಗಾಗಿ, ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಬಿಟ್ಟು ಹೋದರಾಯಿತು. ಯಾರಿಗಾದರೂ ವಿಮಾನ ನಿಲ್ದಾಣಕ್ಕೆ ಹೋಗಬೇಕಾದರೆ ಇಂಟರ್ನೆಟ್ ಮೂಲಕ ಬಾಡಿಗೆ ಕಾರನ್ನು ಬುಕ್ ಮಾಡಿ, ಅದನ್ನು ಚಲಾಯಿಸಿಕೊಂಡು ವಿಮಾನ ನಿಲ್ದಾಣ ತಲುಪಿ, ಅಲ್ಲಿನ ಅಧಿಕೃತ ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಹೋದರಾಯಿತು. ಕಾರನ್ನು ಮರಳಿಸುವ ಅಗತ್ಯವೂ ಇಲ್ಲ. ಹೀಗಾಗಿ, ಏಕಮುಖ ಪಾವತಿ ಸವಲತ್ತು ಪಡೆದಂತಾಯಿತು. ಗ್ರಾಹಕರು ಇಂತಹ ಕಾರು ಸೇವೆಗಳನ್ನು ಪಡೆಯಲು ವಾರ್ಷಿಕ ಶುಲ್ಕ ಪಾವತಿಸಿ, ನೋಂದಾಯಿಸಿಕೊಳ್ಳಬೇಕು. ವಿಳಾಸ ಕೋಂಡಿ: www.car2go.com

No comments:

Post a Comment