Pages

Tuesday, January 22, 2013

ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್

ಜನಾಗ್ರಹ ಸಂಘಟನೆಯು ಭ್ರಷ್ಟಾಚಾರದ ವಿರುದ್ದ ಹೋರಾಡಲು  ಐ ಪೇಡ್ ಎ ಬ್ರೈಬ್ ಡಾಟ್ ಕಾಮ್ ಎಂಬ ಜಾಲತಾಣವನ್ನು ಆರಂಭಿಸಿದೆ. 
 
ಯಾವ ಇಲಾಖೆಯ ಅಧಿಕಾರಿಗೆ ಎಷ್ಟು ಲಂಚ ನೀಡಲಾಗಿದೆ, ಯಾರು ನಿಷ್ಠಾವಂತ ಅಧಿಕಾರಿ ಮತ್ತು ಭ್ರಷ್ಟಾಚಾರ ಹೋರಾಟಗಾರರ ಬಗ್ಗೆ  ಇತ್ಯಾದಿ ವಿವರಗಳನ್ನು ಜಾಲತಾಣದಲ್ಲಿ ಬರೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.
 
ವಾಹನಗಳ ನೋಂದಣಿ ಮಾಡುವಾಗ, ಮನೆ, ಭೂಮಿ ಮಾರಾಟಕ್ಕೆ ಅಗತ್ಯವಿರುವ ಪ್ರಮಾಣಪತ್ರ ಅಥವಾ ಮತ್ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಲಂಚ ನೀಡಿರಬಹುದು. ಈ ಭ್ರಷ್ಟಾಚಾರದ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು  ಐ ಪೇಡ್ ಎ ಬ್ರೈಬ್ ಡಾಟ್ ಕಾಮ್  ಜಾಲತಾಣವನ್ನು ಆರಂಭಿಸಲಾಗಿದೆ.
 
ಈ ಜಾಲತಾಣವನ್ನು ಈಗಾಗಲೇ ವಿಶ್ವಾದ್ಯಾಂತ ಲಕ್ಷಾಂತರ ಜನರು ವೀಕ್ಷಿಸಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಪಿಡುಗು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶ್ವಾದ್ಯಂತವಿದ್ದು ಭಾರತ, ಕೀನ್ಯ, ಗ್ರೀಸ್, ಜಿಂಬಾಂಬ್ವೆ, ಪಾಕಿಸ್ತಾನ ಹಾಗೂ (ಪಿಲಿಪೈನ್ಸ್ ಮತ್ತು ಮಾಂಗೋಲೀಯ) ದೇಶಗಳ ಮಾಹಿತಿ ಶೀಘ್ರದಲ್ಲಿ ಸಿಗಲಿದೆ. ಸುಮಾರು 7 ದೇಶಗಳ ಭ್ರಷ್ಟಾಚಾರದ ಮಾಹಿತಿ ಈ ಜಾಲತಾಣದಲ್ಲಿ ಸಿಗುವುದರಿಂದ ಈ  ಸಮಸ್ಯೆ ಎಷ್ಟು ಇದೆ ಎಂಬುದು ಇದರಿಂದ ಗೊತ್ತಾಗಲಿದೆ.

ಈಗಾಗಲೇ ಜಾಲತಾಣದಲ್ಲಿ 493 ನಗರಗಳ 22,337 ಮಾಹಿತಿಗಳು, 82,58,63,606 ರೂಪಾಯಿಗಳಷ್ಟು ಭ್ರಷ್ಟಾಚಾರದ ಮಾಹಿತಿ ಜಾಲತಾಣದಲ್ಲಿ ಲಭ್ಯವಿದ್ದು. ನೀವೂ ಸಹ ಈ ಆಂದೋಲನದಲ್ಲಿ ಭಾಗವಹಿಸಿ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಬಾರದೇಕೆ ?. ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ ಕೊಂಡಿ: www.ipaidabribe.com

No comments:

Post a Comment