Pages

Tuesday, August 28, 2012

ಗ್ಯಾಡ್ಜೆಟ್ ಟ್ರಾಕ್ (GadgetTrak )

ಮ್ಯಾಕ್ ಮತ್ತು ವಿಂಡೋಸ್ ಪಿಸಿಗಳಿಗೆ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಂಡ್ರಾಯ್ಡ್, ಬ್ಲಾಕ್ಬೆರಿ, ಐಫೋನ್ ಮತ್ತು ವಿಂಡೋಸ್ ಮೊಬೈಲ್ ಆವೃತ್ತಿಗಳು ಲಭ್ಯವಿದೆ. ಮೋಬೈಲ್ ಆವೃತ್ತಿ ಒಂದು ವರ್ಷದ ಬಳಕೆಗೆ 19.95 ಡಾಲರ್ ದರ, ಐಪೋನ್ ಆವೃತ್ತಿ ಒಂದು ವರ್ಷದ ಬಳಕೆಗೆ 3.99 ಡಾಲರ್ ದರ, ಲ್ಯಾಪ್ಟಾಪ್ ಆವೃತ್ತಿ ಒಂದು ವರ್ಷದ ಬಳಕೆಗೆ 19.95 ಡಾಲರ್ ದರ, ಲ್ಯಾಪ್ಟಾಪ್ ಪ್ಯಾಮಿಲಿ ಎಲ್ಲಾ ಆವೃತ್ತಿ ಒಂದು ವರ್ಷದ ಬಳಕೆಗೆ 59.95 ಡಾಲರ್ ದರ ವಿಧಿಸಲಾಗುತ್ತದೆ. ಕಳುವಾದಂತ ಸಂದರ್ಭದಲ್ಲಿ ಇದು ಪ್ರತಿ 30 ನಿಮಿಷಕ್ಕೆ ನಕಲಿ ಬಳಕೆದಾರನ ಚಿತ್ರ ತೆಗೆದು ರವಾನಿಸುತ್ತದೆ.
ತಂತ್ರಾಂಶದಲ್ಲಿರುವ ದತ್ತಾಂಶವನ್ನು ಕಾಪಾಡುವುದರೊಂದಿಗೆ ಸಿಮ್ ಕಾರ್ಡ್ ಬದಲಾಯಿಸಿದರೆ ಮಾಹಿತಿ ರವಾನಿಸುತ್ತದೆ. ದತ್ತಾಂಶವನ್ನು ಅಳಿಸಬೇಕಾದರೆ ರಿಮೋಟ್ ರೀತಿಯಲ್ಲಿ ಅಳಿಸಿಹಾಕುವ ಸೌಲಭ್ಯ ಒದಗಿಸುತ್ತದೆ. ಸದ್ಯ ಲ್ಯಾಪ್‌ಟಾಪ್ ಇರುವ ಜಾಗದ ಸೆಲ್‌ಫೋನ್ ಟವರ್ ಲೊಕೇಶನ್ ಮತ್ತು ಜಿಪಿಎಸ್ ಡೇಟವನ್ನು ಬಳಕೆದಾರನ ಫ್ಲಿಕ್ಕರ್ ಖಾತೆಗೆ ರವಾನಿಸುತ್ತದೆ. ಈ ಮಾಹಿತಿ ಆಧರಿತ ಬಳಕೆದಾರ ಲ್ಯಾಪ್‌ಟಾಪ್ ಇರುವ ಸ್ಥಳದ ನಕಾಶೆ ರಚಿಸಿಕೊಳ್ಳಬಹುದು. ಇದು ಕೊಡುವ ಸ್ಥಳ ಮಾಹಿತಿ ಎಷ್ಟು ನಿಖರ ಎಂದರೆ ಸೂಚಿಸಿದ ಸ್ಥಳದ 300 ಅಡಿ ಒಳಗೆ ಕಳುವಾದ ವಸ್ತು ಸಿಗುತ್ತದೆ.
ಸೀಮಿತ ಸೌಲಭ್ಯಗಳಿರುವ ಉಚಿತ ಆವೃತ್ತಿಯ ತಂತ್ರಾಂಶಕ್ಕಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಜಾಲತಾಣ  : http://www.gadgettrak.com

ಸಲಹೆ:  
ಅಂತರ್ಜಾಲದಲ್ಲಿ ಇಂತಹ ನೂರಾರು (anti-theft program) ತಂತ್ರಾಂಶಗಳು ಲಭ್ಯವಿದೆ. ಉಚಿತ ಎಂದುಕೊಂಡು ಸಿಕ್ಕವುಗಳನ್ನು ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬೇಡಿ. ದುಡ್ಡು ಕೊಡದೆ ಈ ತಂತ್ರಾಂಶವನ್ನು ಹಾಕಿಕೊಂಡರೆ ಅದು ಯಾವ ಮಾಹಿತಿಯನ್ನೂ ನೀಡುವುದಿಲ್ಲ.
ಅಷ್ಟೇ ಅಲ್ಲ, ನೀವು ಉಚಿತ ಆವೃತ್ತಿ ಬಳಸುತ್ತಿದ್ದರೆ, ನಿಮ್ಮ ವೈಯಕ್ತಿಕ ವಿವರ, ಪಾಸ್‌ವರ್ಡ್, ಗಣಕಯಂತ್ರದ ಮಾಹಿತಿ ಜೊತೆಗೆ ನೀವಿರುವ ಸ್ಥಳದ ನಕ್ಷೆಯೊಂದಿಗೆ ಸೀದಾ ಇದನ್ನು ನಿರ್ಮಿಸಿದ ತಂತ್ರಾಂಶ ಕಂಪನಿಗಳಿಗೇ ವರದಿ ಒಪ್ಪಿಸುತ್ತದೆ. ಸುಮ್ಮನೆ ರಿಸ್ಕ್ ಯಾಕೆ? ದುಡ್ಡು ಕೊಟ್ಟು ಲ್ಯಾಪ್‌ಟಾಪ್‌ನೊಳಗೊಂದು ಖಾಸಗಿ ಗೂಢಚಾರನನ್ನು ನೇಮಿಸಿ, ನಿಶ್ಚಿಂತೆಯಾಗಿರಿ.....

No comments:

Post a Comment