Pages

Saturday, July 28, 2012

100 ಪಟ್ಟು ವೇಗದ ಗೂಗಲ್ ಇಂಟರ್ನೆಟ್

ಆಂಡ್ರಾಯ್ಡ್ ಆಪ್ ಹಾಗು ಗೇಮುಗಳ ಮಳಿಗೆ ಆಯ್ತು, ತನ್ನದೇ ಆದ ಸ್ಮಾರ್ಟ್ ಫೋನ್ ಆಯ್ತು, ಟ್ಯಾಬ್ಲೆಟ್ ಬಿಡುಗಡೆ ಮಾಡಿದ್ದಾಯ್ತು, ಈಗ ಗೂಗಲ್ ತನ್ನದೇ ಆದ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಕೊಡುವ ವ್ಯಾಪಾರಕ್ಕೆ ಕೈ ಹಾಕಿದೆ.
ಸಾದಾ ಒಂದಿಲ್ಲೊಂದು ವಿಶಿಷ್ಟ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿ ಸುದ್ದಿ ಮಾಡುವ ಗೂಗಲ್, ಈಗಿರುವ ಬ್ರಾಡ್ ಬ್ಯಾಂಡ್ ಗಿಂತಾ 100 ಪಟ್ಟು ಹೆಚ್ಚು ಇಂಟರ್ನೆಟ್ ಸೇವೆ ಒದಗಿಸಲು ಗೂಗಲ್ ಫೈಬರ್ ಮೂಲಕ ಸಜ್ಜಾಗಿದೆ.
ಅಮೆರಿಕಾದ ಕನ್ಸಾಸ್ ನಗರಕ್ಕೆ ಸೆಪ್ಟೆಂಬರ್ ವೇಳೆಗೆ ಹೈ ಸ್ಪೀಡ್ ಇಂಟರ್ನೆಟ್ ಮೊದಲು ಪ್ರಾರಂಭವಾಗಲಿದ್ದು, ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ಮನೆ ಮನೆಗೆ ತಲುಪಿಸಲು ಗೂಗಲ್ ಯೋಚಿಸಿದೆ.
ಕೇವಲ 70 ಡಾಲರ್ ಮಾಸಿಕ ಬಾಡಿಗೆಗೆ ಇದನ್ನು ಪಡೆಯಬಹುದಾಗಿದ್ದು, ನಿಮ್ಮ ಟಿವಿಗೂ ಕನೆಕ್ಟ್ ಮಾಡಬಹುದಾಗಿದೆ. ನೋಂದಾಯಿಸಲು ಸೆಪ್ಟೆಂಬರ್ 9 ಕೊನೆಯ ದಿನವಾಗಿದೆ. ಇಂಡಿಯಾಗೆ ಈ ಸೌಲಭ್ಯ ಯಾವಾಗ ಬರುತ್ತೆ ಅಂತ ಇನ್ನ ಗೊತ್ತಾಗಿಲ್ಲ. https://fiber.google.com/about/


No comments:

Post a Comment