Pages

Thursday, June 14, 2012

ಆಪಲ್ iOS 6.0

 ಆಪಲ್ ಕಂಪನಿ ಹೊಸ ಆವೃತ್ತಿಯ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ iOS 6 ಎಂಬ ತಂತ್ರಾಂಶವನ್ನು ಅನಾವರಣಗೊಳಿಸುತ್ತಿದೆ. ಮತ್ತು ಇದು ನಿಮ್ಮ ಐಪೋನ್, ಐಪಾಡ್ ಅಥವಾ ಐಪಾಡ್ ಟಚ್ ಗಳನ್ನು ನಿಸ್ತಂತು ರೂಪದಲ್ಲಿ ಆಪ್ಗ್ರೇಡ್ ಮಾಡಬಹುದಾಗಿದೆ.


ಜೂನ್ 11 ರಿಂದ ಜೂನ್ 15 ರ ವರೆಗೆ ನಡೆಯುವ ಈ ಕಾನ್ಫರೆನ್ಸ್ ನಲ್ಲಿ ಈಗಾಗಲೇ iOS 6 ಬಿಡುಗಡೆಯ ಬಗ್ಗೆ ಬ್ಯಾನರ್ ಗಳನ್ನು ಹಾಕಲಾಗಿದ್ದು ಸಾಕಷ್ಟು ಸುದ್ದಿಯಾಗಿದೆ. ಆಪಲ್ ನ iOS 6.0 ದಲ್ಲಿ ಹೊಸ ಹೊಸ ಫೀಚರುಗಳ ನಿರೀಕ್ಷೆ ಇದ್ದು, ಗೂಗಲ್ ಮ್ಯಾಪ್ಸ್ ರೀತಿಯಲ್ಲಿ 3D ಮ್ಯಾಪ್ಸ್ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಬರಿ iOS 6.0 ತಂತ್ರಾಂಶದ ಅನಾವರಣವಷ್ಟೇ ಅಲ್ಲದೆ ಐಪ್ಯಾಡ್ ಗಳಿಗೆ ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ ಹಾಗು iOS ಗೆ ಫೇಸ್ ಬುಕ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕಲನ ಮಾಡಬಹುದು ಎಂಬ ನಿರೀಕ್ಷೆಯೂ ಇದೆ.
ಪಾಸ್ ಬುಕ್ ಎಂಬ ತಂತ್ರಾಂಶದಲ್ಲಿ ನಿಮ್ಮ ಬೋರ್ಡಿಂಗ್ ಪಾಸುಗಳನ್ನು, ಚಲನಚಿತ್ರ ಟಿಕೆಟ್ಗಳನ್ನು  ಮತ್ತು ಠೇವಣಿ ಪುಸ್ತಕ ಮುಂತಾದ ವೈಯಕ್ತಿಕ ದಾಖಲೆಗಳನ್ನು ನಿಮ್ಮ ಐಫೋನ್ ಅಥವಾ ಐಪಾಡ್ ಟಚ್ ನಲ್ಲಿ ಸ್ಕ್ಯಾನ್ ಮಾಡಬಹುದು.
ಇದು ಮೊದಲನೇ ಆವೃತ್ತಿಯ ಐಪ್ಯಾಡ್  ಹಾಗು ಹಳೆಯ ಐಪಾಡ್ ಟಚ್ ಗಳಿಗೆ ಹೊಂದಾಣಿಕೆಯಾಗಲಿಕ್ಕಿಲ್ಲ ಎಂಬ ಗುಮಾನಿಯೂ ಇದೆ.
ಆಪಲ್ ನ  iOS 6.0 ತಂತ್ರಾಂಶದ  ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://www.apple.com/ios/ios6

No comments:

Post a Comment