Pages

Thursday, May 10, 2012

ಯಾವ ಆಸ್ಪತ್ರೆ ಅಗ್ಗ?

ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ. ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,  ನೌಕರರು ಸ್ವತ: ವಿಮೆ ಮಾಡಿಸಬೇಕಿದೆ. ಆದುದರಿಂದ ಹಣ ನೀಡದೇ, ಆಸ್ಪತ್ರೆವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು. ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ, ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ.http://www.castlighthealth.comಅಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ, ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ. ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ. ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ. ನೌಕರರಿಗೆ ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ. ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ.

No comments:

Post a Comment