Pages

Thursday, May 24, 2012

ಅಬ್ಬೀ ಇ-ವಿಸಿಟಿಂಗ್ ಕಾರ್ಡ್ ರೀಡರ್

ವಿಸಿಟಿಂಗ್ ಕಾರ್ಡ್ ವಿನಿಮಯ ನಡೆಸಿ, ಪರಸ್ಪರರ ಹೆಸರು,ಪದವಿ, ವಿಳಾಸ ಸಂಪರ್ಕ ಸಂಖ್ಯೆ ಇತ್ಯಾದಿಗಳನ್ನು ಬೇಕಾದಾಗ ಬಳಸಿಕೊಳ್ಳುವುದು ಹಳೆಯ ವಿಧಾನ.ಇ-ವಿಸಿಟಿಂಗ್ ಕಾರ್ಡ್‌ಗಳ ವಿನಿಮಯವನ್ನು ಮೊಬೈಲ್ ಇಂದ ಮೊಬೈಲಿಗೆ ಮಾಡಿಕೊಳ್ಳಲೂ ಬಹುದು.ಹಳೆಯ ವಿಧಾನದಲ್ಲಿ ನಂಬಿಕೆಯಿಟ್ಟವರು, ಈಗಲೂ ನಿಮಗೆ ವಿಸಿಟಿಂಗ್ ಕಾರ್ಡ್ ನೀಡಬಹುದು. ಅದನ್ನು ಜೋಪಾನ ಪಡಿಸಿ, ಇರಿಸಿಕೊಂಡು ಬೇಕಾದಾಗ ಹುಡುಕುವುದು ತಾಪತ್ರಯವೆನಿಸಿದರೀಗ ಇದನ್ನು ನಿವಾರಿಸಲು ಸುಲಭ ಉಪಾಯವಿದೆ.ಕಾರ್ಡನ್ನು ಕೈಯಲ್ಲಿ ಹಿಡಿದು, ಮೊಬೈಲಿನಲ್ಲಿ ಅದರ ಚಿತ್ರ ಸೆರೆಹಿಡಿಯಿರಿ.ಕಾರ್ಡಿನಲ್ಲಿರುವ ವಿವರಗಳನ್ನು ಮೊಬೈಲಿನ ಅಡ್ರೆಸ್‌ಬುಕ್‌ನಲ್ಲಿ ದಾಖಲಾಗಿಸಿ.ಇದನ್ನು ಸಾಧ್ಯವಾಗಿಸುವ ಆಂಡ್ರಾಯಿಡ್ ಫೋನ್ ತಂತ್ರಾಂಶವೀಗ ಅಬ್ಬೀ abbyy ಎನ್ನುವ ಹೆಸರಿನಲ್ಲಿ ಲಭ್ಯವಿದೆ.ಇದನ್ನು ಗೂಗಲ್ ಆಂಡ್ರಾಯಿಡ್ ಫೋನುಗಳಲ್ಲಿ ಅನುಸ್ಥಾಪಿಸಿಕೊಂಡರೆ, ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಓಸಿಆರ್) ತಂತ್ರಜ್ಞಾನವನ್ನು ಸ್ಮಾರ್ಟ್ ಫೋನ್ ಕ್ಯಾಮೆರಾ ಬಳಸಿ ಮೊಬೈಲ್ ವಿಳಾಸ ಪುಸ್ತಕಕ್ಕೆ ನೇರವಾಗಿ ವಿಸಿಟಿಂಗ್ ಕಾರ್ಡುಗಳ ಸಂಪರ್ಕ ಮಾಹಿತಿಯನ್ನು ವರ್ಗಾಯಿಸಬಹುದು. ಪೂರ್ತಿ ತಂತ್ರಾಂಶ ಬೇಕಿದ್ದರೆ, ಐನೂರು ರೂಪಾಯಿ ಬಿಚ್ಚಬೆಕು-ಉಚಿತವಾಗಿ ಸರಳ ಆವೃತ್ತಿ ಲಭ್ಯವಿದೆ: http://goo.gl/WX9nt
ಐಪೋನ್ ತಂತ್ರಾಂಶಕ್ಕಾಗಿ ಜಾಲತಾಣ ಕೊಂಡಿ: http://goo.gl/xJHkH
ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶ ಜಾಲತಾಣ ಕೊಂಡಿ: http://goo.gl/CY04L

No comments:

Post a Comment