Pages

Friday, March 23, 2012

ವಿಶ್ವವಿದ್ಯಾಲಯ ಆನ್‌ಲೈನ್ ಪ್ರಶ್ನೆಪತ್ರಿಕೆ


ಆನ್‌ಲೈನ್ ಮೌಲ್ಯಮಾಪನದ ನಂತರ, ಇದೀಗ ಪ್ರಶ್ನೆಪತ್ರಿಕೆಗಳ ಬಟವಾಡೆಗೆ ಅಂತರ್ಜಾಲದ ಬಳಕೆ ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸುದ್ದಿಯಲ್ಲಿದೆ. ಬೆಳಗಾವಿ ವಿಭಾಗದಲ್ಲಿ ಆನ್‌ಲೈನ್ ಪ್ರಶ್ನೆಪತ್ರಿಕೆ ರವಾನೆ ವ್ಯವಸ್ಥೆಯನ್ನು ಸಫಲವಾಗಿ ಬಳಸಿ,ಇನ್ನಿದನ್ನು ರಾಜ್ಯದಲ್ಲೆಡೆ ಬಳಕೆ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ.ಕಾಲೇಜುಗಳಿಗೆ ಪರೀಕ್ಷೆ ನಡೆವ ದಿನವೇ ಪ್ರಶ್ನೆಪತ್ರಿಕೆಯ ಇ-ಪ್ರತಿ ಕಳುಹಿಸಿ,ಪರೀಕ್ಷಾ ಕೇಂದ್ರಗಳಲ್ಲಿ ಅವನ್ನು ಮುದ್ರಿಸಿ, ಪರೀಕ್ಷೆ ನಡೆಸುವುದೇ ಈ ವ್ಯವಸ್ಥೆ.ಮಾಮೂಲು ಮಿಂಚಂಚೆ ಸೇವೆಯನ್ನು ಈ ವ್ಯವಸ್ಥೆ ಬಳಸುತ್ತಿಲ್ಲ. ಅಂತರ್ಜಾಲದಲ್ಲಿ ಖಾಸಗಿ ಜಾಲವನ್ನು ಏರ್ಪಡಿಸಿ, ತಂತ್ರಾಂಶವೊಂದನ್ನು ಬಳಸಿ ಇದನ್ನು ಕಾರ್ಯಗತಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಮಾಹಿತಿ ಸೋರಿಕೆ ತಡೆಗೆ ಗೂಢಲಿಪಿಯನ್ನು ಆಧರಿಸಿದ ಭದ್ರತಾ ವ್ಯವಸ್ಥೆಯಿದೆ. http://www.vtu.ac.in/

No comments:

Post a Comment