Pages

Tuesday, March 6, 2012

ಟೆರ್ರಾಫುಗಿಯಾ: ಹಾರುವ ಕಾರು

ಹಕ್ಕಿಗೆ ಬಾನಿನಲ್ಲಿ ಹಾರುವ ಆಸೆ ನದಿಗೆ ಸಾಗರವ ಸೇರುವ ಆಸೆ.. ರಸ್ತೆಯಲ್ಲಿ ಸಾಗುವ ಕಾರಿಗೂ ಬಾನಲ್ಲಿ ಆಸೆ. ನಂಬಿದರೆ ನಂಬಿ ಹಾರುವ ಕಾರೊಂದು ರಸ್ತೆಗೆ ಅಲ್ಲಲ್ಲ ಆಕಾಶಕ್ಕೆ ಹಾರಲಿದೆ.

ಟೆರ್ರಾಫುಗಿಯಾ ಎಂದರೆ ಅಮೆರಿಕದ ದೊಡ್ಡ ಕನಸಿನ ಸಣ್ಣ ಕಂಪನಿ. ಕಂಪನಿಯು ಹಾರುವ ಕಾರಿನ ಕಾನ್ಸೆಪ್ಟನ್ನು ಹಲವು ವರ್ಷಗಳ ಹಿಂದೆಯೇ ಪ್ರದರ್ಶಿಸಿತ್ತು. ಇದೀಗ ಈ ಕಾರು ಉತ್ಪಾದನಾ ಹಂತಕ್ಕೆ ತಲುಪಿದೆ. ಈ ಕಾರು ದುಬಾರಿ. ಅಂದ್ರೆ 2.79 ಲಕ್ಷ ಡಾಲರ್.  ಟೆರ್ರಾಫುಗಿಯಾ ಹಾರುವ ಕಾರು ಅಮೆರಿಕದಲ್ಲಿ ಮಾರಾಟಕ್ಕೆ ರೆಡಿಯಾಗಲಿದೆ.

ಈ ಕಾರಿನಲ್ಲಿ ಮಡುಚಿಕೊಳ್ಳುವ ರೆಕ್ಕೆ ಇದೆ. ಕೇವಲ 30 ಸೆಕೆಂಡಿನಲ್ಲಿ ಇದು ಕಾರಿನಿಂದ ವಿಮಾನಕ್ಕೆ ಪರಿವರ್ತನೆ ಗೊಳ್ಳಲಿದೆ. ಅಂದರೆ ರಸ್ತೆಯಲ್ಲಿ ಸಾಗುತ್ತಿರುವ ಕಾರೊಂದು ಕೆಲವೇ ಸೆಕೆಂಡಿನಲ್ಲಿ ರೆಕ್ಕೆ ಬಿಚ್ಚಿ ಹಾರಲಿದೆ. ಪ್ರತಿಗಂಟೆಗೆ 110 ಕಿ.ಮೀ. ವೇಗದಲ್ಲಿ ಈ ಕಾರು ಫುಲ್ ಟ್ಯಾಂಕ್ ಇಂಧನದಲ್ಲಿ ಸುಮಾರು 460 ಮೈಲು ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಟ್ರಾನ್ಸಿಷನ್ ಹಾರುವ ಕಾರು ಎಲ್ಲರ ಕೈಗೆ ಸಿಗದು. ಭಾರತಕ್ಕೆ ಬಂದರೆ ಇದರ ದರ ಹಲವು ಕೋಟಿ ರುಪಾಯಿಗಳಲ್ಲಿ ಇರಲಿದೆ. ದುಡ್ಡು ನಮ್ಮಲ್ಲಿ ಬೇಕಾದಷ್ಟು ಇದೆ ಅಂತ ನೀವು ಅಂದುಕೊಂಡರೂ ಇದನ್ನು ಖರೀದಿಸುವುದು ಸುಲಭವಲ್ಲ. ಇದಕ್ಕೆ ಸಮರ್ಪಕ ಪೈಲಟ್ ಪರವಾನಿಗೆಯೂ ನಿಮಲ್ಲಿರಬೇಕು. ವೈಮಾನಿಕ ಸಚಿವಾಲಯ ಮಾತ್ರವಲ್ಲದೇ ದೇಶದ ಭದ್ರತಾ ವಿಭಾಗದಿಂದಲೂ ಅನುಮತಿ ಪಡೆಯಬೇಕಿದೆ

ಈಗಾಗಲೇ ಈ ಹಾರುವ ಕಾರಿಗೆ ಭಾರತದ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದಾರೆ. ಆದರೆ ದೇಶದ ಕೆಲವು ಇಲಾಖೆಯಿಂದ ಇನ್ನೂ ಸರಿಯಾದ ಸಮ್ಮತಿ ದೊರಕಿಲ್ಲ. ಕಂಪನಿಯ ಹಾರುವ ಕಾರಿಗೆ ಈಗಾಗಲೇ ಸುಮಾರು 100 ಜನರು ಬುಕ್ಕಿಂಗ್ ಮಾಡಿದ್ದಾರೆ.

No comments:

Post a Comment