Pages

Thursday, September 29, 2011

ಅಸೀಮಾ ಮಾಸಪತ್ರಿಕೆ

 
ಒಂದು ಧ್ಯೇಯ, ಒಂದು ಉದ್ಧೇಶದಿಂದ, ರಾಷ್ಟ್ರದ ಹೆಸರಾಂತ ಚಿಂತಕರ ಸಹಾಯೋಗದಿಂದ, ಧ್ಯೇಯವಾದಿ ಲೇಖಕರ ಬಳಗದಿಂದ ಅನಂತವಾದ ದಾರಿಯನ್ನು ಕ್ರಮಿಸುತ್ತಾ ಬೆಳೆಯುತ್ತಿರುವ ರಾಷ್ಟ್ರ ಜಾಗರನದ ವ್ಯಚಾರಿಕ ಮಾಸಿಕ “ಅಸೀಮಾ’ ಕ್ಕೀಗ ೧೮ರ ಹರೆಯ. ೧೮ ಕೇವಲ ಕ್ರಮಿಸಿದ ಕಾಲದ ಮಾಪಕವಲ್ಲ. ಅದೊಮದು ಪರ್ವ, ವಿಶಿಷ್ಟ ಸಾಧನೆ. ಸಾರಸ್ವತ ಲೋಕದಲ್ಲಿ ರಾಷ್ಟೀಯತೆಯನ್ನು ಪ್ರತಿಪಾದಿಸುತ್ತಿರುವ ಪತ್ರಿಕೆ. ಕನ್ನಡದಲ್ಲಿ ಸಂಪೂರ್ಣ ವೈಚಾರಿಕ ಬರಹಗಲಿಗೆ ಮೀಸಲಾದ ಕನ್ನಡ ಎಕೈಕ ಮಾಸಪತ್ರಿಕೆ. ಕಳೆದ ಹದಿನೆಂಟು ವರ್ಷಗಳಿಂದ ಕನ್ನಡದ ಚಿಂತನ ಶೀಲ- ಸೃಷ್ಟಿ ಶೀಲರಿಗೊಂದು ವೇದಿಕೆಯನ್ನೊದಗಿಸುತ್ತಾ ಬರುತ್ತಿರುವ “ಅಸೀಮ’ ಪ್ರತಿ ತಿಂಗಳೂ ಚರ್ಚೆಗೆತ್ತಿಕೊಳ್ಳುತ್ತಿರುವ ವಿಷಯಗಳೂ ಅಪೂರ್ವವಾದವುಗಳು. ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿರಿಚರ್ಚೆ, ಇತಿಹಾಸದ ಬಗೆಗೊಮದು ಒಳನೋಟ, ವರ್ತಮಾನದ ಅವಲೋಕನ, ಭವಿಷ್ಯದತ್ತ ಬರವಸೆಯ ನೋಟ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ವೈಜ್ಞಾನಿಕ ವಿಚಾರ ವಿಮರ್ಶೆ ನಾಡಿನ ಖ್ಯಾತ ಹಿರಿಯ ಲೇಖಕರೊದಗಿಸುವ ಚಾವಡಿಯ ಮೂಲಕ ವೈಚಾರಿಕೆಯನ್ನೂ ಚಪ್ಪರಿಸಿ ಓದ ಬಹುದು ಎಂಬುದನ್ನು  ಯಿಲಿಸಿಕೊಟ್ಟಿದೆ. ವಿದ್ಯಾರ್ಥಿಗಳಿಗೂ ವೇದಿಕೆ ಒದಗಿಸಿ ವಿದ್ಯಾರ್ಥಿದೆಸೆಯಿಂದಲೇ ಲೇಖಕರು, ಚಿಂತಕರ ಸೃಷ್ಟಿಕ್ರಿಯೆಯಲ್ಲಿ ಭಾಗಿಯಾಗಿದೆರ. ಡಮ್ಮಿಚತುರ್ದಳ ಅಕರ ಬಹುವರ್ಣದ ಪುಟಗಳಿಂದ ಮುದ್ರಣಮಾಧ್ಯಮದಲ್ಲಿ ಗಮನ ಸೆಳೆದಿರುವ “ಅಸೀಮಾ’ ಇನ್ನೂ ವೆಬ್ ಜಾಲದಲ್ಲಿ ಕಾಣಿಸಿಕೊಳ್ಳಲಿದೆ.  http://aseemaa.com/

No comments:

Post a Comment