Pages

Friday, October 5, 2012

ಪವರ್‌ಪಾಯಿಂಟ್ ಪ್ರಸೆಂಟೇಶನ್ ಸ್ಲೈಡ್‌ ಹಂಚಿ



ಸಭೆ, ವಿಚಾರ ಸಂಕಿರಣ, ಕಮ್ಮಟ, ಗೋಷ್ಠಿಗಳಲ್ಲಿ ಮಂಡಿಸಬೇಕಾದ ವಿಷಯವನ್ನು ಪರಿಣಾಮಕಾರಿಯಾಗಿ ತಿಳಿಸಲು ಸಾಮಾನ್ಯವಾಗಿ ಗಣಕ ಬಳಸಿ ಪ್ರೆಸೆಂಟೇಶನ್ ಮಾಡಲಾಗುತ್ತದೆ. ಬಹುಜನರು ಇದಕ್ಕಾಗಿ ಬಳಸುವುದು ಮೈಕ್ರೋಸಾಫ್ಟ್ ಪವರ್‌ಪಾಯಿಂಟ್ ತಂತ್ರಾಂಶ. ಈ ರೀತಿ ತಯಾರಿಸಿದ ಪ್ರಸೆಂಟೇಶನ್ ಸ್ಲೈಡ್‌ಗಳನ್ನು ಜಗತ್ತಿಗೆ ಹಂಚಲು ಒಂದು ಜಾಲತಾಣ ಇದೆ. ಅದರ ವಿಳಾಸ - www.slideshare.net.
ಈ ಜಾಲತಾಣ ಬಹುಮಟ್ಟಿಗೆ ಯುಟ್ಯೂಬ್ ಮಾದರಿಯಲ್ಲಿ ಕೆಲಸ ಮಾಡುತ್ತದೆ. ನೀವು ಇಲ್ಲಿ ನಿಮ್ಮ ಪ್ರೆಸೆಂಟೇಶನ್ ಸ್ಲೈಡ್‌ಗಳನ್ನು ಸೇರಿಸಿ ಅದರ ಕೊಂಡಿಯನ್ನು ನಿಮ್ಮ ಮಿತ್ರರಿಗೆ ಕಳುಹಿಸಿದರೆ ಅವರು ತಮ್ಮ ಗಣಕದಲ್ಲಿ ಅಂತರಜಾಲದ ಮೂಲಕ ಈ ಸ್ಲೈಡ್‌ಗಳನ್ನು ನೋಡಬಹುದು. ಜಾಲತಾಣದಲ್ಲಿ ಈಗಾಗಲೆ ಇರುವ ಸಾವಿರಾರು ಪ್ರಸೆಂಟೇಶನ್ ಸ್ಲೈಡ್‌ಗಳನ್ನು ವಿಷಯವಾರು ವಿಂಗಡಿಸಿರಿಸಲಾಗಿದೆ.

No comments:

Post a Comment