Pages

Wednesday, May 25, 2011

ಹಳೆಯ ಪುಸ್ತಕಗಳನ್ನು ರದ್ದಿಯಂಗಡಿಗೆ ಮಾರುವಿರೇತಕೆ?

ಹಳೆಯ ಶಾಲಾ ಪಠ್ಯ ಪುಸ್ತಕ, ಕತೆ, ಕಾದಂಬರಿ ಪುಸ್ತಕಗಳನ್ನು ರದ್ದಿಯಂಗಡಿಗೆ ಮಾರುವುದು ಮಾಮೂಲು. ಆದರೆ ನಿಮ್ಮಲ್ಲಿರುವ ಹಳೆಯ ಪುಸ್ತಕಗಳು ಬಡಮಕ್ಕಳ ಶಿಕ್ಷಣಕ್ಕೆ ವಿನಿಯೋಗವಾದರೆ ಎಷ್ಟು ಚೆನ್ನ ಅಲ್ಲವೇ?

ಬೆಂಗಳೂರಿನಲ್ಲಿರುವ ಕೆಲವು ಮಾಲ್ ಗಳು ಇಂತಹ ಒಂದು ಅಭಿಯಾನವನ್ನು ಆರಂಭಿಸಿವೆ. ಹೈಪರ್ಸಿಟಿ ಮತ್ತು ಕ್ರಾಸ್ ವರ್ಡ್ ಸಹಯೋಗದೊಂದಿಗೆ ಶಿಕ್ಷಾ ಫೌಂಡೆಷನ್ ನಿಮ್ಮಲ್ಲಿರುವ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಬಡಮಕ್ಕಳಿಗೆ ನೀಡುವ "ಬುಕ್-ಒ-ಮೀಟರ್" ಎಂಬ ಅಭಿಯಾನ ಸುರು ಮಾಡಿದೆ.

ರದ್ದಿಯಂಗಡಿಗೆ ಸಾಗಿಸಲು ಜೋಡಿಸಿಟ್ಟಿದ್ದ ಅಥವಾ ನಿಮಗೆ ಅಗತ್ಯವಿಲ್ಲದ ಹಳೆಯ ಪಠ್ಯಪುಸ್ತಕಗಳು, ಸಾಹಿತ್ಯ ಪುಸ್ತಕಗಳನ್ನು ನೀವು ಈ ಮಾಲ್ ಗಳಿಗೆ ನೀಡಬಹುದು. ಇದರಿಂದ ಬಡಮಕ್ಕಳಿಗೆ ಮಾತ್ರ ಲಾಭವಲ್ಲ. ಯಾರು ಹಳೆಯ ಪುಸ್ತಕಗಳನ್ನು ನೀಡುತ್ತಾರೋ ಅವರಿಗೆ ವಿನಾಯಿತಿ ದರದ ವೋಚರ್ಸ್ ಕೂಡ ನೀಡಲಾಗುತ್ತದೆ.

ಬನ್ನೇರುಘಟ ರಸ್ತೆಯಲ್ಲಿರುವ ರಾಯಲ್ ಮೀನಾಕ್ಷಿ ಮಾಲ್, ಐಟಿಪಿಎಲ್ ರಸ್ತೆಯಲ್ಲಿರುವ ಎಂಬಾಸ್ಸಿ ಪಾರಾಗನ್ ಹೈಪರ್ ಸಿಟಿ ಮಾಲಿನಲ್ಲಿ ಹಳೆಯ ಪುಸ್ತಕಗಳನ್ನು ಮಾರಾಟ ಮಾಡಬಹುದು.

ಈ ಪುಸ್ತಕ ಸಂಗ್ರಹ ಅಭಿಯಾನ ಜೂನ್ 20ಕ್ಕೆ ಕೊನೆಗೊಳ್ಳಲಿದೆ. ಚಿಲ್ಲರೆ ಹಣದ ಆಸೆಗಾಗಿ ರದ್ದಿಯಂಗಡಿಗೆ ಹಳೆಯ ಪುಸ್ತಕಗಳನ್ನು ಮಾರಾಟ ಮಾಡದಿರಿ. ಹೆಚ್ಚಿನ ಮಾಹಿತಿಗಾಗಿ 43643333 ನಂಬರ್ ಗೆ ಕರೆ ಮಾಡಬಹುದು.

1 comment: