ನೀವು ಮೆಡಿಕಲ್ ಶಾಪ್ ಗೆ ಹೋಗಿ ಔಷಧಿ ಹಾಗೂ ಮಾತ್ರೆ ಕೋಳ್ಳುತ್ತೀರಿ. ಅದು ಅಸಲಿಯೋ ನಕಲಿಯೋ ಕಂಡುಹಿಡಿಯುವುದು ಹೇಗೆ, 'ನಮ್ಮ ಕೈಯಲಂತೂ ಸಾಧ್ಯವೇ ಇಲ್ಲ, ದೇವರ ಮೇಲೆ ಭಾರ ಕೊಳ್ಳುವುದು, ಎಂದು ಹತಾಶೆಯಿಂದ ಮರುಗಬೇಡಿ. ಇನ್ನು ಮುಂದೆ ಕೇವಲ ಒಂದು ಎಸ್ ಎಂ. ಎಸ್. ಮಾಡಿ ನೀವು ಕೊಂಡ ಔಷಧಿ ಅಸಲಿಯೋ, ನಕಲಿಯೋ ತಿಳಿದುಕೊಳ್ಳಬಹುದು.
ಹೌದು, ಕೇಂದ್ರ ಔಷಧ ಸಲಹಾ ಸಮಿತಿ ಔಷಧಗಳ ಮೇಲೆ ವಿಶೇಷ ಕೋಡ್ ನಮೂದಿಸಿ, ಅದರ ಬಗ್ಗೆ ಮಾಹಿತಿ ಒದಗಿಸುವ ಪ್ರಸ್ತಾಪಕ್ಕೆ ಓಕೆ ಎಂದಿದೆ. ಹೀಗಾಗಿ ಈ ಪ್ರಸ್ತಾಪವೀಗ ಔಷದ ತಾಂತ್ರಿಕ ಸಲಹಾ ಮಂಡಳಿ ಮುಂದಿದೆ. ಅಲ್ಲಿಯೂ ಓಕೆಯಾದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಂತಿಮ ಅದೇಶ ಹೊರಡಿಸಲಿದೆ.
ಈ ಆದೇಶ ಹೊರಬಿದ್ದಲ್ಲಿ ನಮ್ಮ ದೇಶದಲ್ಲಿ ಮಾರಲಾಗುವ ಪ್ರತಿಯೊಂದು ಔಷದದ ಮೇಲೂ 2ಡಿ ಬಾರ್ ಕೋಡ್ ಮತ್ತು ಯೂನಿಕ್ ರಾಂಡ್ಯಾಮ್ಲಿ ಜನರೇಟೆಡ್ ನ್ಯೂಮರಿಕ್ ಕೋಡ್ (ಯುಐಡಿ) ನಮೂದಿಸಲಾಗುತ್ತದೆ. ಈ ಬಾರ್ ಕೋಡ್ ನ ಮೇಲೆ ಪೋನ್ ನಂಬರನ್ನೂ ಹಾಕಲಾಗುತ್ತದೆ. ಔಷದಿ ಕೊಳ್ಳುವ ಗ್ರಾಹಕರು ಯುಐಡಿ ನಂಬರನ್ನು ಪೋನ್ ನಂಬರಗೆ ಎಸ್ ಎಂ ಎಸ್ ಮಾಡಿದರೆ ಸಾಕು, ಕೂಡಲೇ ಈ ಔಷದಿ ಅಸಲಿ ಹೌದೋ, ಅಲ್ಲವೋ ಎಂ ಮಾಹಿತಿ ನಿಮ್ಮ ಮೊಬೈಲ್ ಗೆ ಒಂದು ಸೇರುತ್ತದೆ. ಈ ರೀತಿ ಬಾರ್ ಕೋಡ್ ಅಂಟಿಸಲು ಹೆಚ್ಚೇನೂ ಖರ್ಚಾಗುವುದಿಲ್ಲ. ಹೆಚ್ಚೆಂದರೆ 30ಪೈಸೆಯಷ್ಟೆ ಖರ್ಚಾಗುತ್ತದೆಯಂತೆ. ಎಲ್ಲ ಔಷದ ತಯಾರಕರು ಈ ಸಿಸ್ಟಂ ಅಳವಡಿಸಿಕೊಂಡಲ್ಲಿ ಈ ಖರ್ಚು 10 ಪೈಸೆಗಿಳಿಯಲಿದೆ ಎಂದು ಡ್ರಗ್ ಕಂಟ್ರೋಲರ್ ಹೇಳಿದ್ದಾರೆ. ಆದರೆ ಸಣ್ಣ ಔಷಧ ತಯಾರಕರು ಖರ್ಚು ಜಾಸ್ತಿಯಾಗುತ್ತದೆ ಎಂದು ತಗಾದೆ ತೆಗೆದಿದ್ದಾರೆ. ಈ ಸಿಸ್ಟಂ ನಮ್ಮ ದೇಶದಲ್ಲಿಯೇ ಮೊದಲಿಗೆ ಜಾರಿಗೆ ಬರುತ್ತಿಲ್ಲ. ಈಗಾಗಲೇ ಇಟಲಿ, ಮಲೇಷಿಯಾ, ಐರೋಪ್ಯ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ನಕಲಿ ಔಷಧಗಳ ಮಾರಾಟದ ಮೇಲೆ ನಿಯತ್ರಣ ಸಾದಿಸಿವೆ. ನಮ್ಮ ದೇಶದಲ್ಲಿಯೂ ನಕಲಿ ಹಾವಳಿ ಜಾಸ್ತಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರವೇ ಮಾರಾಟವಾಗುತ್ತಿರುವ ಔಷಧಗಳಲ್ಲಿ ಶೇ5.6 ಕಳಪೆ ಗುಣಮಟ್ಟದವು ಮತ್ತು ಶೇ0.26 ನಕಲಿ ಔಷಧಿಗಳು. ಹೀಗಾಗಿ ಈ ಸಿಸ್ಟಂ ಅಳವಡಿಸುವುದು ಅತಿ ಅಗತ್ಯವಾಗಿದೆ. ಆದರೆ ಜಾರಿಗೆ ಬರಲು ಇನ್ನೆಷ್ಟು ದಿನ ಬೇಕೋ ?
ಹೆಚ್ಚಿನ ಮಾಹಿತಿಗೆ: http://www.maya-biotech.com
No comments:
Post a Comment