Pages

Sunday, February 13, 2011

ಇನ್ಮುಂದೆ ಟ್ರಾಫಿಕ್ ಚಿಂತೆ ಯಾಕೆ…? ವರ್ಷಾಂತ್ಯಕ್ಕೆ “ಹಾರುವ ಕಾರು”.. ಮಾರುಕಟ್ಟೆಗೆ



ಟ್ರಾಫಿಕ್ ಜಾಮ್‌ನಿಂದ ಬೇಸರಗೊಂಡಿರುವಿರಾ? ಇಲ್ಲಿದೆ ನಿಮಗೊಂದು ಸಂತಸದ ಸುದ್ದಿ.ಅಮೆರಿಕದ ಬೊಸ್ಟೊನ್ ಮೂಲದ ಟೆರ್ರಾಫ್ಯೂಗಿಯಾ ಟ್ರಾನ್ಸಿಶನ್ ಕಂಪೆನಿ ‘ಹಾರುವ ಕಾರು’(ಟ್ರಾನ್ಸಿಶನ್ ರೊಡೆಬಲ್ ಲೈಟ್ ಸ್ಪೋರ್ಟ್ ಏರ್‌ಕ್ರಾಫ್ಟ್) ಉತ್ಪಾದನೆಯನ್ನು ಆರಂಭಿಸಿದ್ದು. ಕೇವಲ 30 ಸೆಕೆಂಡ್‌ಗಳ ಸಮಯದೊಳಗೆ ಕಾರು ವಿಮಾನವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿಕೆ ನೀಡಿದೆ. 
‘ಹಾರುವ ಕಾರು’ ಆಕಾಶದಲ್ಲಿ ಪ್ರತಿ ಗಂಟೆಗೆ 185 ಕಿ.ಮೀ ವೇಗದಲ್ಲಿ ಹಾರಲಿದೆ. ಹಾಗೂ ರಸ್ತೆಯ ಮೇಲೆ ಪ್ರತಿ ಗಂಟೆಗೆ 105 ಕಿ.ಮೀ ದೂರವನ್ನು ಕ್ರಮಿಸಲಿದೆ.ಕಾರಿಗೆ ಸಾಮಾನ್ಯ ಪೆಟ್ರೋಲ್ ಪಂಪ್‌ನಲ್ಲಿ ಇಂಧನವನ್ನು ತುಂಬಿಕೊಳ್ಳಬಹುದಾಗಿದೆ ಎಂದು ಸಂಡೇ ಎಕ್ಸ್‌ಪ್ರೆಸ್ ವರದಿ ಮಾಡಿದೆ.
‘ಹಾರುವ ಕಾರು’ ಪ್ರಸಕ್ತ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹಾರುವ ಕಾರಿನ ದರ ಅಂದಾಜು ಕನಿಷ್ಠ 92,39,850 ರೂಪಾಯಿಗಳಿಂದ ಗರಿಷ್ಠ 1,18,40,000 ರೂಪಾಯಿಗಳವರೆಗೆ ನಿಗದಿಪಡಿಸುವ ಸಾಧ್ಯತೆಗಳಿವೆ ಎಂದು 
ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. 
ಟೆರ್ರಾಫ್ಯೂಗಿಯಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್ ಗೆರ್ಶ್ ಮಾತನಾಡಿ, ವಾರ್ಷಿಕವಾಗಿ 200 ಹಾರುವ ಕಾರುಗಳ ಮಾರಾಟದ ಗುರಿಯನ್ನು ಹೊಂದಲಾಗಿದೆ. ವಿಮಾನದಂತೆ ‘ಹಾರುವ ಕಾರಿನಲ್ಲಿ’ 400 ದಿಂದ 450 ಮೈಲುಗಳವರೆಗೆ ಹಾರಾಟ ನಡೆಸಬಹುದಾಗಿದೆ. ಈಗಾಗಲೇ 100 ಕಾರುಗಳಿಗೆ ಬೇಡಿಕೆ ಬಂದಿದೆ. ಕೆಲ ಬದಲಾವಣೆಗಳನ್ನು ಮಾಡುವ ಅಗತ್ಯವಿದ್ದು, ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ ಎಂದು ಹೇಳಿದ್ದಾರೆ.
ಹಾರುವ ಕಾರಿನ ಸಾಮರ್ಥ್ಯವನ್ನು ಯಶಸ್ವಿಯಾಗಿ ಸಂಶೋಧನೆಗೊಳಪಡಿಸಲಾಗಿದ್ದು, 28 ಬಾರಿ ಹಾರಾಟದ ಪರೀಕ್ಷೆ ನಡೆಸಲಾಗಿದೆ ಎಂದು ಕಂಪೆನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

No comments:

Post a Comment