ಅಮೆರಿಕಾದಲ್ಲಿ ಕಾರನ್ನು ಬಾಡಿಗೆಗೆ ನೀಡುವ ಸೇವೆಗಳನ್ನು ಇಂಟರ್ನೆಟ್ ಮೂಲಕ ಪಡೆಯಲು ಸಾಧ್ಯವಾಗುತ್ತಿದೆ Car2go ಮತ್ತು ಸ್ಮಾರ್ಟ್‌ಫೋನ್ ಮುಖಾಂತರ
ಕಾರನ್ನು ಬಾಡಿಗೆಗೆ ಹಿಡಿಯಬಹುದು. ಈಗದು ಕಾರನ್ನು ಬಳಸಿದ್ದಕ್ಕೆ ಬಾಡಿಗೆಯನ್ನು
ನಿಮಿಷಕ್ಕಿಷ್ಟು ಎಂಬ ದರದಲ್ಲಿ ಲೆಕ್ಕ ಹಾಕಿ,ಗ್ರಾಹಕರಿಗೆ ಅನುಕೂಲ
ಮಾಡಿಕೊಟ್ಟಿದೆ. ಹೆಚ್ಚಿನ ಬಾಡಿಗೆ ಕಾರು ಸೇವೆಗಳು ಗಂಟೆಗಿಷ್ಟು ಎಂದು ದರ
ನಿಗದಿಪಡಿಸಿವೆ. Car2go ದ ಸೇವೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಬಾಡಿಗೆಯಲ್ಲಿ
ಪಾರ್ಕಿಂಗ್ ಉಚಿತವಾಗಿದೆ. ಹಾಗಾಗಿ, ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ಬಿಟ್ಟು
ಹೋದರಾಯಿತು. ಯಾರಿಗಾದರೂ ವಿಮಾನ ನಿಲ್ದಾಣಕ್ಕೆ ಹೋಗಬೇಕಾದರೆ ಇಂಟರ್ನೆಟ್ ಮೂಲಕ ಬಾಡಿಗೆ
ಕಾರನ್ನು ಬುಕ್ ಮಾಡಿ, ಅದನ್ನು ಚಲಾಯಿಸಿಕೊಂಡು ವಿಮಾನ ನಿಲ್ದಾಣ ತಲುಪಿ, ಅಲ್ಲಿನ ಅಧಿಕೃತ
ಪಾರ್ಕಿಂಗ್ ಜಾಗದಲ್ಲಿ ಕಾರು ನಿಲ್ಲಿಸಿ ಹೋದರಾಯಿತು. ಕಾರನ್ನು ಮರಳಿಸುವ ಅಗತ್ಯವೂ
ಇಲ್ಲ. ಹೀಗಾಗಿ, ಏಕಮುಖ ಪಾವತಿ ಸವಲತ್ತು ಪಡೆದಂತಾಯಿತು. ಗ್ರಾಹಕರು ಇಂತಹ ಕಾರು
ಸೇವೆಗಳನ್ನು ಪಡೆಯಲು ವಾರ್ಷಿಕ ಶುಲ್ಕ ಪಾವತಿಸಿ, ನೋಂದಾಯಿಸಿಕೊಳ್ಳಬೇಕು. ವಿಳಾಸ ಕೋಂಡಿ: www.car2go.com
Monday, May 20, 2013
ಕರಕುಶಲ ಸಾಮಗ್ರಿಗಳ ತಾಣ
ಶಾಪೆಟ್‌ಪ್ಲೇಸಸ್
ಇಂಟರ್ನೆಟ್ ತಾಣವು
ಇದರಲ್ಲಿ ವಿವಿಧ ಸ್ಥಳಗಳ ವಿಶೇಷ ಸಾಮಗ್ರಿಗಳ ಆನ್‌ಲೈನ್ ಮಾರಾಟಕ್ಕೆ ಅವಕಾಶ
ಕಲ್ಪಿಸಲಾಗಿದೆ. ಸದ್ಯ ಎಂಟು ರಾಜ್ಯಗಳ ಕರಕುಶಲ ಸಾಮಗ್ರಿಗಳಷ್ಟೇ ಈ ತಾಣದಲ್ಲಿ
ದೊರಕುತ್ತಿದೆ. ನಿಧಾನವಾಗಿ ಈ ತಾಣ ಎಲ್ಲಾ ರಾಜ್ಯಗಳನ್ನೂ ಒಳಗೊಳ್ಳಲಿದೆ. ಗ್ರಾಹಕರು ತಮಗೆ
ಬೇಕಾದ ವಸ್ತುಗಳಿಗೆ ಬೇಡಿಕೆ ಸಲ್ಲಿಸಿದರೆ, ಅದನ್ನು ಕಳುಹಿಸುವ ಏರ್ಪಾಡು
ಮಾಡಲಾಗುತ್ತದೆ.ಸಾಮಗ್ರಿಯನ್ನು ತಲುಪಿಸಿದಾಗ,ಪಾವತಿ ಮಾಡಿದರೆ ಸಾಕು. ಜಾಲತಾಣದಲ್ಲಿ ಜಾಲಾಡಲು ಕೊಂಡಿ: www.shopatplaces.com
ಕಂಪ್ಯೂಟರಿಗೆ ಮೊಬೈಲ್ ಕುಲುಕಿ ಕಡತ ವರ್ಗಾವಣೆ ಮಾಡಲು
ಮೊಬೈಲ್‌ಗಳಲ್ಲಿ ಬಂಪ್ ಎನ್ನುವ ತಂತ್ರಾಂಶ ಇದ್ದರೆ, ಅವನ್ನು ಡಿಕ್ಕಿ ಹೊಡೆಸಿ,ಕಡತಗಳನ್ನು
ಒಂದರಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಾಧ್ಯವಿತ್ತು.ಈ ತಂತ್ರಾಂಶವು ಐಓಎಸ್ ಮತ್ತು
ಆಂಡ್ರಾಯಿಡ್ ಫೋನುಗಳಿಗೆ ಲಭ್ಯವಿದೆ. ಈಗ ಅದರ ಹೊಸ ಸುಧಾರಿತ ಆವೃತ್ತಿಯಲ್ಲಿ ಈ
ಸೌಕರ್ಯವನ್ನು ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲೂ ಪಡೆಯಲು ಸಾಧ್ಯ.ಇದಕ್ಕೆ
ಕಂಪ್ಯೂಟರಿನಲ್ಲಿ ತಂತ್ರಾಂಶ ಅಳವಡಿಸಬೇಕಿಲ್ಲ. ಬಂಪ್ ತಂತ್ರಾಂಶವು ಮೊಬೈಲಿನಲ್ಲಿ
ಇರಬೇಕು. ವರ್ಗಾಯಿಸ ಬೇಕಿರುವ ಕಡತಗಳನ್ನು ಆಯ್ಕೆ ಮಾಡಿ. ನಂತರ ಮೊಬೈಲನ್ನು ಕಂಪ್ಯೂಟರಿನ
ಸ್ಪೇಸ್‌ಬಾರ್ ಕೀಲಿಯ ಮೇಲೆ ಕುಟ್ಟಿದರೆ ಸರಿ, ಕಡತಗಳು
ವರ್ಗಾಯಿಸಲ್ಪಡುತ್ತವೆ. ಆಡಿಯೋ, ವೀಡಿಯೋ, ಲಿಪಿ ಕಡತಗಳು ಯಾವುದನ್ನೂ ವರ್ಗಾಯಿಸಲು
ಬರುತ್ತದೆ. ಹೆಚ್ಚಿನ ವಿವರಗಳಿಗೆ ಜಾಲತಾಣವನ್ನು ನೋಡಿ.https://bu.mp
ಸತ್ತ ನಂತರವೂ ಟ್ವೀಟ್ ಮಾಡಲು ಲೈವ್ಸ್ ಆನ್ ತಂತ್ರಾಂಶ
ಲೈವ್ಸ್ ಆನ್ ಎಂಬ ತಂತ್ರಾಂಶದ ಮೂಲಕ ಸತ್ತ ನಂತರವೂ ಟ್ವಿಟ್ಟರಿನಲ್ಲಿ ಸಂದೇಶ ಹಾಕುವುದು ಸಾಧ್ಯ. ಈ ಲೈವ್ಸ್ ಆನ್ ತಂತ್ರಾಂಶವು ವ್ಯಕ್ತಿಯು ಇಷ್ಟಪಡುವ ಕೊಂಡಿಗಳ ಬಗೆ, ಆತನು ಯಾರ ಟ್ವೀಟುಗಳನ್ನು
ಇತರರ ಜತೆ ಹೆಚ್ಚಾಗಿ ಹಂಚಿಕೊಳ್ಳುತ್ತಾನೆ ಎಂಬುದನ್ನೆಲಾ ಗಮನಿಸಿ, ಅದರ ಪ್ರಕಾರವೇ
ವ್ಯಕ್ತಿಯು ಮರಣ ಹೊಂದಿದ ಬಳಿಕವೂ ಸಂದೇಶಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿದೆ. ಹಾಗೂ ನಿಮ್ಮ ಖಾತೆಗೆ ನಾಮನಿರ್ದೇಶನ ಮಾಡಿದ ವ್ಯಕ್ತಿಯು ಸಹ ನಿಮ್ಮ ಖಾತೆಯನ್ನು ಚಲಾಯಿಸಬಹುದು. ಹೆಚ್ಚಿನ ವಿವರಗಳಿಗೆ ಜಾಲತಾಣ ಕೋಂಡಿ: http://liveson.org/
ಗೂಗಲ್ ಕ್ರೋಮ್ ಪಿಕ್ಸೆಲ್ ಲ್ಯಾಪ್‌ಟಾಪ್
ಗೂಗಲ್ ಯಂತ್ರಾಂಶ ತಯಾರಿಗಿಳಿದದ್ದು ಹಳೆ ಸುದ್ದಿ. ಸ್ಯಾಮ್‌ಸಂಗ್, ಏಸರ್, ಲೆನೋವೋ, ಎಚ್‌ಪಿ
ಕಂಪೆನಿಗಳು ಗೂಗಲ್‌ಗಾಗಿ ಸಾಧನಗಳನ್ನು ತಯಾರಿಸುತ್ತವೆ. ಆದರೆ ಪಿಕ್ಸೆಲ್
ಲ್ಯಾಪ್‌ಟಾಪ್‌ನಲ್ಲಿ ಬಿಡಿಭಾಗಗಳನ್ನು ಇತರ ಕಂಪೆನಿಗಳಿಂದ ಖರೀದಿಸಿ, ಗೂಗಲ್ ಸ್ವತ:
ತಯಾರಿಸಿದೆ.
ಇದರ ತೆರೆ ಮ್ಯಾಕ್‌ಬುಕ್ಕಿನ ರೆಟಿನಾ ಡಿಸ್‌ಪ್ಲೇಯಷ್ಟೇ ಸ್ಪಷ್ಟತೆ
ಹೊಂದಿದೆ. ಪ್ರತಿ ಇಂಚಿಗೆ ಇನ್ನೂರ ಮೂವತ್ತೊಂಭತ್ತು, ಒಟ್ಟಾರೆಯಾಗಿ ನಲವತ್ತಮೂರು ಲಕ್ಷ
ಪಿಕ್ಸೆಲುಗಳನ್ನು ತೆರೆಯ ಮೇಲಿದೆ. ಹಾಗಾಗಿ ಇದರಲ್ಲಿ ಚಿತ್ರ ಮತ್ತು ಲಿಪಿಗಳನ್ನು
ಸ್ಪಷ್ಟವಾಗಿ ಕಾಣಲು ಸಾಧ್ಯವಾಗುತ್ತದೆ. ಮಾತ್ರವಲ್ಲ ಇದರ ತೆರೆ ಸ್ಪರ್ಶಸಂವೇದಿ
ಕೂಡಾ. ಹಾಗಾಗಿ ವಿಂಡೋಸ್8ನಂತಹ ಆಪರೇಟಿಂಗ್ ವ್ಯವಸ್ಥೆಗಳಿಗಿದು ಹೇಳಿ ಮಾಡಿಸಿದ
ಹಾಗಿದೆ. ಆದರೆ ಇದರಲ್ಲಿ ಗೂಗಲ್‌ಕ್ರೋಮ್ ಆಪರೇಟಿಂಗ್ ವ್ಯವಸ್ಥೆಯನ್ನು
ಬಳಸಲಾಗಿದೆ. ಪದಸಂಸ್ಕಾರದಂತಹ ದೈನಂದಿನ ತಂತ್ರಾಂಶಗಳನ್ನು ಕ್ಲೌಡ್‌ಸೇವೆಗಳ ಮುಖಾಂತರ
ಇಂಟರ್‌ನೆಟ್ಟಿನಿಂದ ಪಡೆಯುವಲ್ಲಿ ಅವಕಾಶ ಕಲ್ಪಿಸಲಾಗಿದೆ. ನಾಲ್ಕನೇ ತಲೆಮಾರಿನ ಫೋರ‍್‌ಜಿ
ಸಂಪರ್ಕಕ್ಕಿದರಲ್ಲಿ ಅವಕಾಶವಿದೆ.
ಸದ್ಯಕ್ಕಂತೂ ಈ ಕ್ರೋಮ್ ಪಿಕ್ಸೆಲ್ ಲ್ಯಾಪ್ ಟಾಪ್ ಗೋಗಲೆ ಪ್ಲೇ ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಭಾರತೀಯ ಮಾರುಕಟ್ಟೆಗೆ ಇನ್ನೂ ಬಾರದ ಈ ಲ್ಯಾಪ್ ಟಾಪ್, ವಿದೇಶಗಳಲ್ಲಿನ ಉತ್ತಮ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ ಜಾಲತಾಣ ಕೊಂಡಿಗಳು: http://www.google.co.in/intl/en/chrome/devices/chromebook-pixel/ ಹಾಗೂ ಆನ್ಲೈನ್ ಮಾರುಕಟ್ಟೆ ಗೂಗಲ್ ಪ್ಲೇ ವಿಳಾಸ : https://play.google.com/store/devices/details?id=chromebook_pixel_wifi ಹಾಗೂ ಬೆಸ್ಟ್ ಬೈ ಸ್ಟೋರ್ಸ್ಗಳ ವಿಳಾಸ ಕೊಂಡಿ: http://www.google.co.in/intl/en/chrome/devices/chromebook-pixel/#stores
ಬಿಟ್‌ಕಾಯಿನ್
ಈ ಬಿಟ್‌ಕಾಯಿನ್ ಎನ್ನುವುದು, ಕಂಪ್ಯೂಟರ್ ಪ್ರಪಂಚದಲ್ಲಷ್ಟೇ ಚಲಾಯಿಸಲಾಗುವ
ಕರೆನ್ಸಿ. ಯಾವುದಾದರೂ ಗಣಿತ ಸಮಸ್ಯೆಯನ್ನು ಬಿಡಿಸಿದಾಗ, ಬಿಟ್‌ಕಾಯಿನ್ ಮೂಲಕ ಸಮಸ್ಯೆ
ಬಿಡಿಸಿದವನಿಗೆ ಮೊತ್ತ ಪಾವತಿಯಾಗುತ್ತದೆ. ಯಾರ ತಿಳುವಳಿಕೆಗೂ ಬಾರದಂತೆ ಹಣ ಖರ್ಚು
ಮಾಡುವವರಿಗೆ ಈ ಕರೆನ್ಸಿ ಅನುಕೂಲವಾಗಿದೆ. ಕ್ಯಾಸಿನೋಗಳಲ್ಲೂ ಇದನ್ನು ಸ್ವೀಕರಿಸುವ ಕಾರಣ
ಇದು ಜನಪ್ರಿಯವಾಗಿದೆ. ಇದನ್ನು ಮಾಮೂಲು ಹಣಕ್ಕೆ ಪರಿವರ್ತಿಸಲೂ ಸಾಧ್ಯ. ಇದರ ದೈನಂದಿನ
ಮೌಲ್ಯವನ್ನು ನಿರ್ಧರಿಸುವ Mt Gox ಅಂತಹ ಕಂಪೆನಿ ಈ ಕೆಲಸ ಮಾಡುತ್ತದೆ. ಸದ್ಯ
ಬಿಟ್‌ಕಾಯಿನ್ ಬೆಲೆ ಗಗನಮುಖಿಯಾಗಿದ್ದು, ಮೂವತ್ತಮೂರು ಡಾಲರು ಬೆಲೆಯಿದೆ. ಹೆಚ್ಚಿನ ಮಾಹಿತಿಗೆ ಜಾಲತಾಣಗಳ ವಿಳಾಸ ಕೊಂಡಿ: http://bitcoin.org/en/ https://mtgox.com/ http://unoco.in/
Saturday, March 30, 2013
ತಟ್ಟನೆ ಏನಾದರೂ ಹೊಳೆದಾಗ ಬರೆದಿಡಲು "ಕೀಪ್" ಗೂಗಲ್ ಸೇವೆ
ಜನರು ತಟ್ಟನೆ ಏನಾದರೂ ಹೊಳೆದಾಗ, ಅದನ್ನು ಬರೆದಿಡುವ ಅಭ್ಯಾಸ ಹೋದಿದ್ದಾರೆ. ಈಗ
ಸ್ಮಾರ್ಟ್‌ಫೋನ್ ಬಳಕೆದಾರರು, ಇದಕ್ಕೆ ಆನ್‌ಲೈನ್ ಸೇವೆಗಳನ್ನು ಬಳಸಬಹುದು. ಎವರ್‌ನೋಟ್ ಈ
ಪೈಕಿ ಬಹುಜನಪ್ರಿಯ. ಜಾಲತಾಣ ಕೊಂಡಿ: https://evernote.com
ಈ ಸೇವೆಗೆ ಸದ್ಯ ಸುಮಾರು ಒಂದೂವರೆ ದಶಲಕ್ಷ
ಬಳಕೆದಾರರಿದ್ದಾರೆ. ಮೈಕ್ರೋಸಾಫ್ಟ್ ಒನ್ ನೋಟ್ ಸೇವೆಯನ್ನು ಒದಗಿಸುತ್ತಿದೆ. ಈಗ ಇದಕ್ಕೆ
ಹೊಸ ಸೇರ್ಪಡೆ ಗೂಗಲ್ ಕೀಪ್. ಮೈಕ್ರೋಸಾಫ್ಟ್ ಒನ್ ನೋಟ್ ಪಡೆಯಲು ಜಾಲತಾಣ ಕೊಂಡಿ: microsoft.com/onenote
ಗೂಗಲ್ ಈ ಸೇವೆ ಒದಗಿಸುವುದರಲ್ಲಿ ತಡಮಾಡಿ, ತನ್ನನ್ನು ಕಠಿನ
ಪರಿಸ್ಥಿತಿಗೆ ಒಡ್ಡಿ ಕೊಂಡಿದೆ ಎಂದು ಕೆಲ ವಿಶ್ಲೇಷಕರು ಪ್ರತಿಕ್ರಿಯಿಸಿದ್ದಾರೆ. ಗೂಗಲ್
ಕೀಪ್ ಚಿತ್ರಗಳನ್ನೂ ಬಳಸಲು ಅವಕಾಶವಿತ್ತಿದೆ. ಗೂಗಲ್ ಡ್ರೈವ್ ಇದರ ಉಳಿಕೆಗೆ
ಬಳಕೆಯಾಗಲಿದೆ. ಗೂಗಲ್ ಕೀಪ್ ಬಳಸಿ ನಿಮ್ಮ ಮಾಹಿತಿಯನ್ನು ಉಳಿಸಲು ಜಾಲತಾಣ ಕೊಂಡಿ: drive.google.com/keep
ಛಾಯಚಿತ್ರಗಳನ್ನು ಹಂಚಿಕೊಳ್ಳಲು "ಪ್ಲಿಕ್ಕರ್"
ನಮ್ಮ ಬದುಕಿನ ಹಲವು ಅಮೂಲ್ಯ ಕ್ಷಣಗಳನ್ನು ಹಂಚಿಕೊಳ್ಳಲು ಅಂರ್ತಜಾಲದಲ್ಲಿ ಹಲವಾರು ಜಾಲತಾಣಗಳಿವೆ. ಕೆಲವು ಜಾಲತಾಣಗಳಲ್ಲಿ ವಿಡಿಯೋ ತುಣುಕುಗಳನ್ನು ಹಂಚಿಕೊಂಡರೆ! ಕೆಲವು ಜಾಲತಾಣಗಳು ಕೇವಲ ಛಾಯಾಚಿತ್ರಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿದೆ. ಅಂತಹ ಹಲವು ಜಾಲತಾಣಗಳ ಪೈಕಿ "ಪ್ಲಿಕ್ಕರ್" ಜಾಲತಾಣವೂ ಒಂದ. ನೀವು ಕ್ಯಾಮೆರಾ, ಮೊಬೈಲ್ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಈ ಜಾಲತಾಣದಲ್ಲಿ ಹಂಚಿಕೊಳ್ಳಬಹುದು. ಈ ಜಾಲತಾಣದಲ್ಲಿ ಕ್ಷಣ ಮಾತ್ರಕ್ಕೆ ವಿಶ್ವದ್ಯಾಂತ ಸಾವಿರಾರು ಪೋಟೋಗಳು ಅಂತರ್ಜಾಲಕ್ಕೆ ಅಪ್ ಲೋಡ್ ಆಗುತ್ತದೆ. ಈ ಜಾಲತಾಣಕ್ಕೆ ಯಾಹೂ, ಪೇಸ್ ಬುಕ್ ಹಾಗೂ ಗೂಗಲ್ ಜಾಲತಾಣಗಳ ಮಿಂಚಂಚೆ ಮುಖಾಂತರ ಪ್ರವೇಶ ಪಡೆದು ನೀವು ತಿಂಗಳಿಗೆ ಸುಮಾರು 100 ಎಂಬಿಗಳಷ್ಟು ಪೋಟೋ ಹಂಚಿಕೊಳ್ಳಬಹುದು. ಬ್ಲಾಗ್ ಗಳು ಹಾಗೂ ಖಾಸಗಿ ಜಾಲತಾಣಗಳಿಗೂ ಸಹ ಅಪ್ ಲೋಡ್ ಆದಂತಹ ಪೋಟೋಗಳನ್ನು ಶೇರ್ ಮಾಡಿಕೊಳ್ಳಬಹುದು. ಆಪಲ್ ಕಂಪನಿಯ ಐಪೋನ್ ಮೊಬೈಲ್ಗೆ ಆಪ್ ಸಹ ಪ್ಲಿಕ್ಕರ್ ಜಾಲತಾಣದಿಂದ ಪಡೆಯಬಹುದಾಗಿದೆ. ವಿಶ್ವದ ಪ್ರಖ್ಯಾತ ಛಾಯಾಗ್ರಾಹಕರ ಅತ್ಯುತ್ತಮ ಪೋಟೋಗಳನ್ನು ವೀಕ್ಷಿಸಲು ಅವಕಾಶವಿದೆ. ನೀವು ಅಪ್ ಲೋಡ್ ಮಾಡಿದಂತಹ ಛಾಯಾಚಿತ್ರಗಳನ್ನು ನೀವು ಖಾಸಗಿಯಾಗಿ ಸಹ ಇಡಬಹುದು. ಅಥವಾ ಮಿತ್ರರಿಗೆ ಹಂಚಿಕೊಳ್ಳಲೂ ಬಹುದು. ಜಾಲತಾಣ ಕೊಂಡಿ ವಿಳಾಸ: www.flickr.com
ವಸತಿ ಹುಡುಕಾಟಕ್ಕೆ ವೆಬ್‌ಸೈಟ್
http://www.findyourpg.com ತಾಣವನ್ನು ವಿದ್ಯಾರ್ಥಿಗಳೇ ರೂಪಿಸಿದ್ದಾರೆ. ದೇಶದ
ಬೇರೆಡೆಯಿಂದ ಕಲಿಕೆ, ನೌಕರಿಗೆ ಆಗಮಿಸುವವರಿಗೆ ದೆಹಲಿಗೆ ಬಂದೊಡನೆ ಪಿಜಿ ವಸತಿಯನ್ನು
ಹುಡುಕುವುದೇ ಪ್ರಯಾಸದ ಕೆಲಸವಾಗಿದ್ದನ್ನು ಅನುಭವಿಸಿದ ಕೆಲವರು, ದೆಹಲಿಯ ಪಿಜಿ ಸೇವೆಗಳ
ದತ್ತಾಂಶ ಸಂಗ್ರಹಿಸಿ,ಮಾಲೀಕರನ್ನು ಸಂಪರ್ಕಿಸಿ,ಅವರಿಂದ ವಸತಿ ದರ,ಲಭ್ಯ
ಸೇವೆಗಳು, ಸ್ಥಾನ,ನೀತಿ ನಿಯಮಾವಳಿಗಳನ್ನು ಪಟ್ಟಿ ಮಾಡಿ, ತಾಣದಲ್ಲಿ ವಿವರ ನೀಡಲು ಅನುಮತಿ
ಯಾಚಿಸಿದರು.ಕೆಲವರು ಈ ಬಗ್ಗೆ ಉತ್ಸಾಹ ತೋರಲಿಲ್ಲವಾದರೂ ನಿಧಾನವಾಗಿ ಪರಿಸ್ಥಿತಿ
ಬದಲಾಗಿದೆ.ಪಿಜಿ ಸೇವೆ ಬಯಸುವವರು ತಾಣದ ಬಗ್ಗೆ ಉತ್ಸಾಹ ಹೊಂದಿದ್ದರೆ.
ಭಾಷಾವಿಜ್ಞಾನದ ಪಿತಾಮಹ ನೋಮ್ ಚಾಮ್ ಸ್ಕಿ ಜಾಲತಾಣ
ಇತ್ತೀಚೆಗೆ ನಮ್ಮ ಗುರುಗಳಾದ ಶೂದ್ರ ಶ್ರೀನಿವಾಸ್ ರವರ "ಶೂದ್ರ" ಪತ್ರಿಕೆಯ 40ನೇ ವಾರ್ಷಿಕೋತ್ಸವ ಜೆ.ಪಿ.ನಗರದ ಕಾವಿ ಮನೆ ಶಾಲೆಯ ನೆಲದ ಮಾತು ವೇದಿಕೆಯಲ್ಲಿ ನಡೆಯಿತು. ನಾನೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆ ಕಾರ್ಯಕ್ರಮದಲ್ಲಿ ನೋಮ್ ಚಾಮ್ ಸ್ಕಿ ರವರ ಬಗ್ಗೆ ಒಂದು ಉಪನ್ಯಾಸವನ್ನು ಏರ್ಪಡಿಸಿದ್ದರು. ಅವರ ಬಗ್ಗೆ ಉಪನ್ಯಾಸ ವನ್ನು ಕೇಳಿದ ಮೇಲೆ ಚಾಮ್ ಸ್ಕಿ ರವರ ಬಗ್ಗೆ ಜಾಲತಾಣದಲ್ಲಿ ಜಾಲಾಡಿದಾಗ! ಅವರ ವಿಚಾರಗಳ ಮಹಾ ಬಂಡಾರವೆ ನನಗೆ ದೊರಕಿತು.
ಇಂಗ್ಲೀಷ್ ಲೇಖಕ ಹಾಗೂ ಚಿಂತಕ ನೋಮ್ ಚಾಮ್ ಸ್ಕಿ. ಈ ಪ್ರತಿಭಾವಂತ ಲೇಖಕನಿಗೆ ಆಧುನಿಕ ಭಾಷಾವಿಜ್ಞಾನದ ಪಿತಾಮಹ ಎಂದು ಬಿರುದು ಇದೆ. ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಈ ಲೇಖಕರ ಜಾಲತಾಣ ಅಂತರ್ಜಾಲದಲ್ಲಿದೆ. ಇದರಲ್ಲಿ ಅವರ ಉಪನ್ಯಾಸ, ಪತ್ರಗಳು, ಚರ್ಚೆಗಳು, ಆಡಿಯೋ ಮತ್ತು ವಿಡಿಯೋ ತುಣುಕುಗಳು ಹಾಗೂ ಅವರ ಕುರಿತಾದ ಪುಸ್ತಕಗಳು, ಲೇಖನಗಳು, ಸಂದರ್ಶನಗಳು ಹಾಗೂ ಇನ್ನಿತರೆ ವಿಷಯಗಳು ಆಗ್ಗಿಂದಿಗ್ಗೆ ಅಪ್ ಡೇಟ್ ಆಗುತ್ತಿರುತ್ತವೆ. ನೋಮ್ ಚಾಮ್ ಸ್ಕಿ ರವರ ಬಗ್ಗೆ ಆಸಕ್ತಿ ಇರುವ ಆಸಕ್ತರು ಜಾಲತಾಣದಲ್ಲಿ ಜಾಲಾಡಬಹುದು. ಜಾಲತಾಣ ವಿಳಾಸ ಕೋಂಡಿ: www.chomsky.info
Sunday, March 10, 2013
ಕ್ನನಡಿಗನ ಸಾಧನೆ "ಟ್ಯಾನ್ ಪೇಜ್" ಸಾಮಾಜಿಕ ಜಾಲತಾಣ
ಇತ್ತೀಚೆಗಷ್ಟೆ ನಮ್ಮ ದೇಶದ ಸಂಗೀತ ದಿಗ್ಗಜ ಹಾಗೂ ನಟ, ನಿರ್ಮಾಪಕ ಶೇಖರ್ ಕಪೂರ್ ಇಬ್ಬರೂ "ಕ್ಯುಕಿ"
ಎಂಬ ಒಂದು ಸೃಜನಶೀಲ ಸಾಮಾಜಿಕ ಜಾಲತಾಣವನ್ನು ಜಗತ್ತಿಗೆ ಅರ್ಪಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಇಂದು ಜಗತ್ತಿನ ಅಂರ್ತಜಾಲದಲ್ಲಿ ಫೇಸ್ಬುಕ್, ಟ್ವಿಟ್ಟರ್, ಲಿಂಕ್ಡಿನ್, ಗೂಗಲ್ ಪ್ಲಸ್,
ಆರ್ಕುಟ್, ಯೂಟ್ಯೂಬ್ ಗೀಗೆ ಹಲವು ಹತ್ತು ಸಾಮಾಜಿಕ ಮಾಧ್ಯಮಗಳಿವೆ. ಪೇಸ್ ಬುಕ್ ಗೆ ಹೋಲುವಂತಹ "ಟ್ಯಾನ್ ಪೇಜ್" ಎಂಬ ಹೆಸರಿನ ಸಾಮಾಜಿಕ ಜಾಲತಾಣ ಅಭಿವೃದ್ಧಿಪಡಿಸುವ ಮೂಲಕ ಮಾಹಿತಿ ತಂತ್ರಜ್ಞಾನಕ್ಕೆ ಶಿರಸಿಯ ಸಿದ್ದಾಪುರ ತಾಲೂಕಿನ ಮಾವಿನಕೂಡ್ಲು ಎಂಬ ಹಳ್ಳಿಯ ಬಿ.ಎಸ್.ಸಿ. ವಿಧ್ಯಾರ್ಥಿ ನಿರಂಜನ ಭಟ್ ಕಾಲಿಟ್ಟಿದ್ದಾರೆ.
ಟ್ಯಾನ್ ಪೇಜ್ ನಲ್ಲಿ ಏನೇನಿದೆ.
ಅಪ್ಪಟ ಸಾಮಾಜಿಕ ಜಾಲತಾಣ ಆಗಿರುವ ವೆಬ್ ಸೈಟ್ ಸಂಪೂರ್ಣ ಉಚಿತ.ಗೂಗಲ್ ಮೂಲಕ ಟ್ಯಾನ್ ಪೇಜ್ ಪ್ರವೇಶ ಮಾಡಬಹುದಾಗಿದ್ದು. ನಿಮ್ಮ ಇಮೇಲ್ ಮತ್ತು ಪಾಸ್ ವರ್ಡ್ ನಮೂದಿಸಿ ಟ್ಯಾನ್ ಪೇಜ್ ಖಾತೆ ತೆರೆಯಬಹುದು. ಸೋಷಿಯಲ್ ನೆಟ್ ವರ್ಕಿಂಗ್ ವೆಬ್ ಸೈಟ್ಗಳಲ್ಲಿರುವ ಸೌಲಭ್ಯಗಳು ಟ್ಯಾನ್ ಪೇಜ್ ನಲ್ಲಿವೆ. ಇದಲ್ಲದೆ ಮಾರಾಟವಾಗಬೇಕಿರುವ ವಸ್ತುಗಳ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ವ್ಯಾಪಾರವನ್ನೂ ಮಾಡಬಹುದು. ಬರಹಗಾರರು ತಮ್ಮ ಬರವಣಿಗೆಗಳನ್ನೂ ಸಹ ಈ ಜಾಲತಾಣದ ಮೂಲಕ ಬರೆಯಬಹುದಾಗಿದ್ದು.ಅದಲ್ಲದೆ ಆನ್ ಲೈನ್ ರಸಪ್ರಶ್ನೆ ಕಾರ್ಯಕ್ರಮವನ್ನೂ ಈ ಜಾಲತಾಣದ ಮೂಲಕ ಆಯೋಜಿಸಬಹುದು. ವಿಡಿಯೋ ಹಾಗೂ ಆಡಿಯೋ ತುಣುಕುಗಳನ್ನು ಸಹ ಪೋಸ್ಟ್ ಮಾಡಬಹುದು. ಇಂತಹ ಇನ್ನೂ ಹಲವಾರು ಉಪಯೋಗಗಳನ್ನು ಒಳೊಂಡಿರುವ ಟ್ಯಾನ್ ಪೇಜ್ ಜಾಲತಾಣ ಉಚಿತವಾಗಿದ್ದು. ಜಾಲತಾಣ ವಿಳಾಸ ಕೊಂಡಿ: tanpage.com
Monday, February 18, 2013
ನಿಸರ್ಗ ಪ್ರವಾಸಿತಾಣ
ಇದೀಗ ಪರೀಕ್ಷೆಗಳ ಸಮಯ ಮುಂದಿನೆರಡು ತಿಂಗಳಲ್ಲಿ ಬೇಸಿಗೆ ರಜೆ ಬರುತ್ತಿದ್ದೇಯಲ್ಲವೇ? ರಜೆಯಲ್ಲಿ ಶಿಕ್ಷಕರು, ಪಾಲಕರೊಂದಿಗೆ ಶಾಲಾ ಮಕ್ಕಳು ಸುತ್ತಾಡಲು, ಎಲ್ಲೆಲ್ಲಿ ಸುತ್ತಾಡಬಹುದು ಅಂತ ತೀರ್ಮಾನಿಸಲು "ಈಕೋ ಇಂಡಿಯಾ" ಜಾಲತಾಣಕ್ಕೆ ಭೇಟಿ ನೀಡಬಹುದು. ಜಾಲತಾಣದ ಹೆಸರೇ ಹೇಳುವಂತೆ, ಇದು ವಿಶೇಷವಾಗಿ ನಿಸರ್ಗ ಪ್ರವಾಸೋಧ್ಯಮದ ಮಾಹಿತಿ ಹೊಂದಿರುವ ತಾಣ. ದೇಶದ ನಾನಾ ಭಾಗಗಳ ಉದ್ಯಾನವನ, ಪ್ರಾಣಿ ಸಂಗ್ರಹಾಲಯ, ಗುಹೆಗಳು, ಗಿರಿಶಿಖರ, ಮರಳುಗಾಡು, ಬೆಟ್ಟಗುಡ್ಡಗಳು, ಜಲಪಾತ, ಸಮುದ್ರ ಕಿನಾರೆಗಳಲ್ಲಿ ಉಳಿದುಕೊಳ್ಳಲು ಇರುವ ರೆಸಾರ್ಟ್, ಹೋಟೆಲ್ ವ್ಯವಸ್ಥೆಗಳ ಬಗ್ಗೆ ಪ್ರವಾಸಕ್ಕೆ ಬೇಕಾದ ಸಲಹೆ, ಸೂಚನೆ ಹೀಗೆ ಹಲವಾರು ವಿವರಗಳ ಸಮಗ್ರ ಮಾಹಿತಿ ನೀಡುವ ಜಾಲತಾಣ ವಿಳಾಸ ಕೊಂಡಿ: www.ecoindia.com
ಮಾಹಿತಿ ಕಣಜ
ಇತ್ತೀಚೆಗೆ ಪಿ.ಎಚ್.ಡಿ , ಎಂಪಿಲ್ ಮಾಡುವವರು ಹೆಚ್ಚು. ಆದರೆ ತಾವು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ಇದುವರೆವಿಗೆ ಯಾರಾದರೂ ಸಂಶೋಧನೆ ಮಾಡಿರುವ ಬಗ್ಗೆ ಮಾಹಿತಿ ತಿಳಿದುಕೊಂಡಿರುವುದಿಲ್ಲ. ಮತ್ತು ಮಾಹಿತಿ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ.ಇನ್ನು ಮುಂದೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ವಿವಿದ ವಿಶ್ವವಿದ್ಯಾಯಲಯಗಳಲ್ಲಿ ಮಂಡಿಸಲಾದ ಪಿ.ಎಚ್.ಡಿ ಗಳ ಮಹಾ ಪ್ರಬಂಧಗಳ ಬಂಡಾರ ಈಗ ಅಂತರಜಾಲತಾಣದಲ್ಲಿ ಲಭ್ಯವಿದೆ. ಇಂತಹ ವಿಷಯಗಳ ಸಂಪೂರ್ಣ ಜ್ಞಾನಭಂಡಾರವನ್ನು ಹೊಂದಿರುವ ಶೋಧಗಂಗಾ ಎಂಬ ಜಾಲತಾಣದಲ್ಲಿ ಲಭ್ಯ. ವಿವಿದ ವಿಶ್ವವಿದ್ಯಾಲಯಗಳಲ್ಲಿ ಮಂಡಿಸಲಾದ ಪಿ.ಎಚ್.ಡಿ ಮಹಾ ಪ್ರಬಂಧಗಳ ಪಿ.ಡಿ.ಎಫ್ ರೂಪದಲ್ಲಿ ಲಭ್ಯವಿದೆ. ಪೂರಕ ಮಾಹಿತಿ ಕಣಜವಾಗಿ ಅನುಕೂಲ ಪಡೆಯಲು ಜಾಲತಾಣ ವಿಳಾಸ ಕೋಂಡಿ: shodhganga.inflibnet.ac.in
Tuesday, January 22, 2013
ಸ್ಟನ್ ಗನ್ ಶಾಕ್ ಟ್ರೀಟ್ಮೆಂಟ್
ದೆಹಲಿ ಗ್ಯಾಂಗ್ ರೇಪ್ ನಡೆದ ನಂತರ ಇತ್ತೀಚೆಗೆ ಅತೀ ಹೆಚ್ಚೆಚ್ಚು ಸುದ್ದಿಗಳು ಮಿದ್ಯನ್ಮಾನ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ದಿನಕ್ಕೆ ಹಲವಾರು ರೇಪ್ ಸುದ್ದಿಗಳು ವರದಿಯಾಗಿತ್ತಿರುತ್ತವೆ ಅಲ್ಲವೇ?
ನಮ್ಮ ಹೆಣ್ಮಕ್ಕಳು ಈಗ ಹೆಚ್ಚತ್ತುಕೊಂಡಿದ್ದಾರೆ, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ, ಕುಂಗ್ ಪು, ಇತರೇ ರಕ್ಷಣಾ ವಿದ್ಯೆಗಳ ಕಲಿಕೆಯ ಜೊತೆಗೆ! ಕಾರದ ಪುಡಿ, ಪೆಪ್ಪರ್ ಸ್ಪ್ರೇ, ಸ್ಟನ್ ಗನ್ ಗಳ ಮೊರೆಹೋಗುತ್ತಿದ್ದಾರೆ.
ಕಾನೂನಿನ ಕಡಿವಾಣ, ಕಟ್ಟುಪಾಡುಗಳಿದ್ದರೂ ಸಹ ಸ್ಟನ್ ಗನ್ ಗಳಂತಹ ರಕ್ಷಣಾ ಸಾಧನಗಳನ್ನು ಹೆಣ್ಮಕ್ಕಳು ಆನ್ಲೈನ್ ಜಾಲತಾಣಗಳಿಂದ ಖರೀದಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ರಕ್ಷಣಾ ಸಾಧನಗಳನ್ನು ಮಾರಾಟ ಮಾಡುತ್ತಿರುವ ಸ್ಮಾರ್ಟ್ ಸ್ಟನ್ ಕಂಪನಿಯ ಸ್ಟನ್ ಗನ್ ಉತ್ಪನ್ನದ ಪರಿಚಯ:
ಸ್ಟನ್ ಗನ್ಗಳ ಕಾರ್ಯವೈಕರಿ / ಉಪಯೋಗ
ಸ್ವನ್ ಗನ್ ಬಳಸಿ ಸುಮಾರು 150 ಕೆವಿಯಿಂದ 500 ಕೆವಿಯ ವರೆಗೂ ವಿದ್ಯತ್ ಶಾಕ್ ಕೊಡಬಹುದು. ಸ್ಟನ್ ಗನ್ ಆನ್ ಮಾಡಿ ಅದರ ಬೆಳಕು ಅತ್ಯಾಚಾರಿಗಳಿಗೆ ಬೀಳುವಂತೆ ಮಾಡಿದರೆ ಸಾಕು, ಅವರು ಶಕ್ತಿ ಕಳೆದುಕೊಳ್ಳುತ್ತಾರೆ. 30 ಸೆಕೆಂಡ್ ನಿಂದ 1 ನಿಮಿಷದವರೆಗೂ ಶಾಕ್ ಕೊಟ್ಟರೆ ಸಾಕು ದಾಳಿಕೋರರು ಚೇತರಿಸಿಕೊಳ್ಳಲು ಅರ್ಧತಾಸು ಬೇಕು ಎನ್ನುತ್ತಾರೆ ತಯಾರಕರು. ಒಂದು ಬಾರಿ ಚಾರ್ಜ್ ಮಾಡಿದರೆ 2 ಗಂಟೆಗಳವರೆಗೆ ಬಳಸಬಹುದಂತೆ. ಇಂತಹ ಹಲವಾರು ರಕ್ಷಣಾ ಸಾಧನಗಳನ್ನು ಅನ್ಲೈನ್ ನಲ್ಲಿ ಮಾರಾಟ ಮಾಡುತ್ತಿರುವ ವಿದೇಶಿ ಜಾಲತಾಣವಾದ ಸ್ಮಾರ್ಟ್ ಸ್ಟನ್ ಡಾಟ್ ಕಾಂ ನಲ್ಲಿ ಮತ್ತಷ್ಟು ರಕ್ಷಣಾ ಸಾಧನಗಳನ್ನು ಕೊಳ್ಳಲು ವಿಳಾಸ: www.smartstun.com
ಭ್ರಷ್ಟಾಚಾರದ ವಿರುದ್ದ ಹೋರಾಡಲು ವೆಬ್ ಸೈಟ್
ಜನಾಗ್ರಹ ಸಂಘಟನೆಯು ಭ್ರಷ್ಟಾಚಾರದ ವಿರುದ್ದ ಹೋರಾಡಲು ಐ ಪೇಡ್ ಎ ಬ್ರೈಬ್ ಡಾಟ್ ಕಾಮ್ ಎಂಬ ಜಾಲತಾಣವನ್ನು ಆರಂಭಿಸಿದೆ.
ಯಾವ
ಇಲಾಖೆಯ ಅಧಿಕಾರಿಗೆ ಎಷ್ಟು ಲಂಚ ನೀಡಲಾಗಿದೆ, ಯಾರು ನಿಷ್ಠಾವಂತ ಅಧಿಕಾರಿ ಮತ್ತು ಭ್ರಷ್ಟಾಚಾರ ಹೋರಾಟಗಾರರ ಬಗ್ಗೆ ಇತ್ಯಾದಿ ವಿವರಗಳನ್ನು ಜಾಲತಾಣದಲ್ಲಿ
ಬರೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ವಾಹನಗಳ ನೋಂದಣಿ ಮಾಡುವಾಗ, ಮನೆ, ಭೂಮಿ ಮಾರಾಟಕ್ಕೆ ಅಗತ್ಯವಿರುವ ಪ್ರಮಾಣಪತ್ರ ಅಥವಾ ಮತ್ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರಿ ಸಿಬ್ಬಂದಿಗೆ ಲಂಚ
ನೀಡಿರಬಹುದು. ಈ ಭ್ರಷ್ಟಾಚಾರದ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆ ತರಲು ಐ ಪೇಡ್ ಎ ಬ್ರೈಬ್ ಡಾಟ್ ಕಾಮ್ ಜಾಲತಾಣವನ್ನು ಆರಂಭಿಸಲಾಗಿದೆ.
ಈ ಜಾಲತಾಣವನ್ನು ಈಗಾಗಲೇ ವಿಶ್ವಾದ್ಯಾಂತ ಲಕ್ಷಾಂತರ ಜನರು ವೀಕ್ಷಿಸಿ, ತಮ್ಮ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಪಿಡುಗು ಭಾರತ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ
ವಿಶ್ವಾದ್ಯಂತವಿದ್ದು ಭಾರತ, ಕೀನ್ಯ, ಗ್ರೀಸ್, ಜಿಂಬಾಂಬ್ವೆ, ಪಾಕಿಸ್ತಾನ ಹಾಗೂ (ಪಿಲಿಪೈನ್ಸ್ ಮತ್ತು ಮಾಂಗೋಲೀಯ) ದೇಶಗಳ ಮಾಹಿತಿ ಶೀಘ್ರದಲ್ಲಿ ಸಿಗಲಿದೆ. ಸುಮಾರು 7 ದೇಶಗಳ ಭ್ರಷ್ಟಾಚಾರದ ಮಾಹಿತಿ ಈ ಜಾಲತಾಣದಲ್ಲಿ ಸಿಗುವುದರಿಂದ ಈ ಸಮಸ್ಯೆ ಎಷ್ಟು ಇದೆ ಎಂಬುದು ಇದರಿಂದ ಗೊತ್ತಾಗಲಿದೆ.
ಈಗಾಗಲೇ ಜಾಲತಾಣದಲ್ಲಿ 493 ನಗರಗಳ 22,337 ಮಾಹಿತಿಗಳು, 82,58,63,606 ರೂಪಾಯಿಗಳಷ್ಟು ಭ್ರಷ್ಟಾಚಾರದ ಮಾಹಿತಿ ಜಾಲತಾಣದಲ್ಲಿ ಲಭ್ಯವಿದ್ದು. ನೀವೂ ಸಹ ಈ ಆಂದೋಲನದಲ್ಲಿ ಭಾಗವಹಿಸಿ ಭ್ರಷ್ಟಾಚಾರದ ಕಥೆಯನ್ನು ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಬಾರದೇಕೆ ?. ಹೆಚ್ಚಿನ ಮಾಹಿತಿಗೆ ಜಾಲತಾಣ ವಿಳಾಸ ಕೊಂಡಿ: www.ipaidabribe.com
Sunday, January 13, 2013
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾಲತಾಣ
ಪ್ರಾಕೃತಿಕವಾಗಿ ಮೋಹಕವಾಗಿದ್ದು ತನ್ನ ತಗ್ಗು ದಿಣ್ಣೆಗಳಿಂದ ಕಣ್ಮನ ಸೆಳೆಯುವ ಸುಮಾರು 700 ಎಕರೆಗಳ ವಿಸ್ತಾರವಾದ ಆವರಣವಿದು. ಇಲ್ಲಿಯ ಕಟ್ಟಡಗಳು ವಿಜಯನಗರ ಕಾಲದ ಮಂಟಪಗಳ ವಿಶಿಷ್ಟತೆಯಲ್ಲಿ ರೂಪುಗೊಂಡಿದೆ. ವಿಶ್ವವಿದ್ಯಾಲಯದ ಮುಂಭಾಗಗಳಲ್ಲಿರುವ 'ಅಕ್ಷರ'ದಲ್ಲಿ ಗ್ರಂಥಾಲಯ ಮತ್ತು ವಸ್ತುಸಂಗ್ರಹಾಲಯಗಳಿವೆ. "ಕ್ರಿಯಾಶಕ್ತಿ'' ಆಡಳಿತದ ಕೇಂದ್ರ. ಸಾಂಸ್ಕೃತಿಕ ಚಟುವಟಿಕೆಗಳ ತಾಣ. 'ಭುವನ ವಿಜಯ'. ವಿವಿಧ ನಿಕಾಯಗಳ ವಿವಿಧ ವಿಭಾಗಗಳು 'ತ್ರಿಪದಿ', 'ಕೂಡಲಸಂಗಮ', 'ತುಂಗಭದ್ರ', 'ಘಟಿಕಾಲಯ', 'ಕೇಶೀರಾಜ', 'ಹರಿಹರ', 'ನಾಗವರ್ಮ', 'ಅಕ್ಕ', 'ಅಲ್ಲಮ', 'ನಾದಲೀಲೆ', 'ಕಂಠಪತ್ರ', 'ಜಕ್ಕಣ ಮಂಟಪ' ಮುಂತಾದ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಪಂಪ ಸಭಾಂಗಣ ಸಾಹಿತ್ಯ ಚಟುವಟಿಕೆಗಳ ತಾಣ. "ಸಿರಿಗನ್ನಡ'' ಸಂಶೋಧನಾ ಗ್ರಂಥಾಲಯ "ಸರ್ವಜ್ಞ" ಕಟ್ಟಡದಲ್ಲಿ ಆವರಣದ ಹೃದಯಭಾಗದಲ್ಲಿ ತಲೆಯೆತ್ತಿ ನಿಂತಿದೆ. ಬುಡಕಟ್ಟು ಮತ್ತು ಜಾನಪದ ಅಧ್ಯಯನದ ನೆಲೆಯಾಗಿ ಗ್ರಾಮೀಣ ವಾಸ್ತು ಶೈಲಿಯಲ್ಲಿರುವುದು 'ಗಿರಿಸೀಮೆ'. ಗ್ರೀಕ್ ರಂಗಭೂಮಿಯ ವಿನ್ಯಾಸದಲ್ಲಿ ರೂಪುಗೊಂಡ 'ನವರಂಗ' ಬಯಲು ರಂಗಭೂಮಿ ಕೆರೆಯ ತಟದಲ್ಲಿ ಸುಂದರವಾಗಿ ಮೈದೆಳೆದು ನಿಂತಿದೆ. ಪ್ರಸಾರಾಂಗ ಸೇರಿದಂತೆ ವಿಶ್ವವಿದ್ಯಾಲಯದ ಇಡೀ ಆವರಣ ವಿಶಿಷ್ಟ ರೀತಿಯಲ್ಲಿ ರೂಪುಗೊಂಡಿದ್ದು ಬಸವಣ್ಣನವರ 'ಅಂತರಂಗ-ಬಹಿರಂಗ' ಸೌಂದರ್ಯದ ಸಮನ್ವಯ ಇಲ್ಲಿ ನಡೆದಿದೆ. ವಿಶ್ವವಿದ್ಯಾಲಯದ ಉದ್ದೇಶ ಸಾಧಿಸಲು ಆಡಳಿತ ವಿನ್ಯಾಸ, ಶಿಕ್ಷಣ ವಿನ್ಯಾಸ ಮತ್ತು ಪೂರಕ ವಿನ್ಯಾಸಗಳೆಂಬ ತ್ರಿಮುಖ ವಿನ್ಯಾಸಗಳನ್ನು ರೂಪಿಸಲಾಗಿದೆ. ಮತ್ತಷ್ಟು ಮಾಹಿತಿ ಹೆಕ್ಕಲು ಅಂತರ ಜಾಲತಾಣ ಕೊಂಡಿ: www.kannadauniversity.org
ಹಾಗೆಯೇ ಶ್ರೀ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಕನ್ನಡ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಕುವೆಂಪು ಕನ್ನಡ ತಂತ್ರಾಂಶ ಆವೃತ್ತಿ 2.0 ನ್ನು ಪಡೆಯಲು>
( File Format : Zip File Size : 13.7 MB Updated Date : 04.02.2011 )
ಯೂನಿಕೋಡ್ ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 8.85 MB Updated Date : 04.02.2011 )
ಕುವೆಂಪು ಕನ್ನಡ ತಂತ್ರಾಂಶ ಎನ್.ಟಿ. ಆವೃತ್ತಿ 1.0ನ್ನು ಡೌನ್ ಲೋಡ್ ಮಾಡಿಕೊಳ್ಳಲುಇಲ್ಲಿ ಕ್ಲಿಕ್ ಮಾಡಿ
( File Format : Zip File Size : 3.93 MB Updated Date : 04.02.2011)
Subscribe to:
Posts (Atom)

















