WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, June 20, 2012

ಆಂಡ್ರಾಯ್ಡ್ ಮೋಬೈಲ್ ಗೆ ಬರುವ ವೈರಸ್ ಗಳು

ಡ್ರಾಯ್ಡ್ 09 -----> ಬ್ಯಾಂಕಿಂಗ್ ಫಿಶಿಂಗ್ ಅಪ್ಲಿಕೇಷನ್
ಬೂಟ್ ನೆಟ್ -----> ಆನ್ ಲೈನ್ ಬ್ಯಾಂಕಿಂಗ್ ಮಾಹಿತಿ ಕದಿಯಲು 
ಟಾಪ್ ಸ್ನೇಕ್ -----> ಜಿಪಿಎಸ್ ನ ವ್ಯವಸ್ಥೆಯನ್ನು ಹಾಳುಮಾಡುವ ವೈರಸ್
ಫೇಕ್ ಪ್ಲೇಯರ್ 13 -----> ತಾನೇ ಸ್ವಯಂ ಚಾಲಿತವಾಗಿ ಅನಾಮಿಕ ಸಂಖ್ಯೆ ಗಳಿಗೆ ಎಸ್ ಎಂ ಎಸ್ ಕಳುಹಿಸುವ ವೈರಸ್ 
ಎಂ.ಎಸ್.ಒ -----> ಮೊಬೈಲ್ ಮೂಲಕ ನಡೆಯುವ ಹಣಕಾಸು ವಹಿವಾಟು ಕದಿಯುವ ವೈರಸ್.
ಬಿಟ್ ಇನ್ಪೋ ಸ್ಟೀಲರ್ -----> ಮೆಮೊರಿ ಕಾರ್ಡ್ಗಳಿಗೆ ಹರಡುವ ವೈರಸ್
ಮೈ ಅವರ್ ನೆಟ್, ಡ್ರೀಮ್, ಜೆಮಿನಿ  ಹೀಗೆ ಇನ್ನೂ ಹಲವಾರು ವೈರಸ್ ಗಳಿದ್ದು. ವೈರಸ್ ಗಳಿಂದ ಮೊಬೈಲ್ ಪೋನ್ ಗಳನ್ನು ರಕ್ಷಿಸಿಕೊಳ್ಳಲು ಇರುವ ಬುಲ್ ಗಾರ್ಡ್ ಮೊಬೈಲ್ ಸೆಕ್ಯೂರಿಟಿ, ಕ್ಯಾಸ್ಟ್ರಸ್ಕಿ ಮೊಬೈಲ್ ಸೆಕ್ಯೂರಿಟಿ,ಇ ಎಸ್ ಇ ಟಿ ಮುಂತಾದ 20 ಕ್ಕಿಂತ ಹೆಚ್ಚಿನ ವೈರಸ್ ಗಳಿಂದ ರಕ್ಷಿಸುವ ತಂತ್ರಾಂಶಗಳು ಗೂಗಲ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಗೂಗಲ್ ಪ್ಲೇ ಜಾಲತಾಣದಲ್ಲಿ ವೈರಸ್ ಗಳಿಂದ ರಕ್ಷಿಸುವ ಉಚಿತ ತಂತ್ರಾಂಶಗಳಿಗಾಗಿ ಬೇಟಿ ನೀಡಿ :http://goo.gl/1pDt7

ಎಟಿಎಂ ಕಾರ್ಡ್ ಬದಲು ಮೊಬೈಲ್ ಬಳಕೆ

'ಆಟೊಮ್ಯಾಟಿಕ್ ಟೆಲ್ಲರ್ ಮೆಷಿನ್' ಅರ್ಥಾತ್ ಸ್ವಯಂಚಾಲಿತ ಹಣ ವಿತರಿಸುವ ಯಂತ್ರ ಅಂದರೆ ಎಟಿಎಂ. (ATM) ಯಂತ್ರದಿಂದ ಹಣ ಪಡೆಯಲು ಇನ್ನು ಮುಂದೆ 'ಡೆಬಿಟ್ ಕಾರ್ಡ್' ಆಗಲೀ 'ಕ್ರೆಡಿಟ್ ಕಾರ್ಡ್' ಆಗಲೀ ಇರಲೇಬೇಕು ಎಂದೇನಿಲ್ಲ!
ಹೌದು ನಿಮ್ಮ ಮೊಬೈಲ್ ಪೋನ್ ಬಳಸಿಯೇ ಎಟಿಎಂನಿಂದ ನಿಮಗೆ ಬೇಕಾದಷ್ಟು ಹಣ ಪಡೆಯಬಹುದು! ಎಲ್ಲಾದರೂ ಉಂಟೆ? ಇದು ಹೇಗೆ ಸಾಧ್ಯ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ.

ಬ್ರಿಟನ್ ಮೂಲದ ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸುವ ತಜ್ಞರು 'ಗೆಟ್ ಕ್ಯಾಷ್' ಎನ್ನುವ ಹೊಸತಂತ್ರಾಂಶ ಆಧಾರಿತ ಸೌಲಭ್ಯವೊಂದನ್ನು ಅಭಿವೃದ್ದಿಪಡಿಸಿದ್ದಾರೆ. ಸ್ಮಾರ್ಟ್ ಪೋನ್ ನಲ್ಲಿ ಈ ತಂತ್ರಾಂಶ ಅನುಸ್ಥಾಪಿಸಿಕೊಂಡರೆ ಪ್ರತಿ ಬಾರಿ 100 ಪೌಂಡ್ ನಷ್ಟು (ಸದ್ಯ ಈ ಅಪ್ಲಿಕೇಷನ್ ಬ್ರಿಟನ್ ನಲ್ಲಿ ಮಾತ್ರ ಬಿಡುಗಡೆಯಾಗಿದೆ) ನಗದನ್ನು 'ಎಟಿಎಂ' ನಿಂದ ಡ್ರಾ ಮಾಡಿಕೊಳ್ಳಬಹುದು.
ರಾಯಲ್ ಬ್ಯಾಂಕ್ ಆಫ್ ಸ್ಕಟ್ಲೆಂಡ್ ( ಆರ್ ಬಿ ಎಸ್ ) ತನ್ನ ಗ್ರಾಹಕರಿಗೆ ಇತ್ತೀಚೆಗೆ 'ಗೆಟ್ ಕ್ಯಾಷ್' ಅಪ್ಲಿಕೇಷನ್ ಪರಿಚಯಿಸಿದೆ. ಬ್ಯಾಂಕಿನ 1.80 ಕೋಟಿ ಗ್ರಾಹಕರು ಈ ಸೌಕರ್ಯ ಪಡೆಯಬಹುದು ಎಂದು ಹೇಳಿದೆ. ಆದರೆ, ಈಗಿರುವ ಸಮಸ್ಯೆ ಏನೆಂದರೆ, ಈ ಅಪ್ಲಿಕೇಷನ್ ಬಳಸಿ ಕೇವಲ 'ಆರ್ ಬಿ ಎಸ್' "ಎಟಿಎಂ"ನಿಂದ ಮಾತ್ರ ನಗದು ಪಡೆದುಕೊಳ್ಳಬಹುದು. ಇತರೆ ಬ್ಯಾಂಕ್ 'ಎಟಿಎಂ'ಗಳಿಗೂ ಈ ಸೌಲಭ್ಯ ವಿಸ್ತರಿಸುವ ಕುರಿತು ಬ್ಯಾಂಕ್ ಚಿಂತನೆ ನಡೆಸುತ್ತಿದೆ. ಸದ್ಯ ಲಂಡನ್ ನಲ್ಲಿರುವ 8 ಸಾವಿರ ಆರ್ ಬಿ ಎಸ್ ಎಟಿಎಂಗಳಲ್ಲಿ  "ಗೆಟ್ ಕ್ಯಾಷ್" ಅಪ್ಲಿಕೇಷನ್ ಬಳಕೆಗೆ ಅವಕಾಶವಿದೆ ಎಂದು ಆರ್ ಬಿ ಎಸ್ ಬ್ಯಾಂಕ್ ನ ಜಾಲತಾಣದಲ್ಲಿ ಪ್ರಕಟಿಸಿದೆ. 
ಸ್ಮಾರ್ಟ್ ಪೋನ್ ನಲ್ಲಿ "ಗೆಟ್ ಕ್ಯಾಷ್" ಅಪ್ಲಿಕೇಷನ್ ತೆರೆದು ವಿತ್ ಡ್ರಾ ಆಯ್ಕೆ ಮಾಡಿಕೊಂಡು ಎಷ್ಟು ಮೊತ್ತಬೇಕು ಎಂಬುದನ್ನು ನಮೂದಿಸಿದರೆ " ಆರ್ ಅಂಕಿಗಳ ಗುಪ್ತ ಸಂಖ್ಯೆಯನ್ನು ಕೇಳೂತ್ತದೆ. ಆ ಸಂಖ್ಯೆಯನ್ನು ದಾಖಲಿಸುತ್ತಿದ್ದಂತೆ 'ಎಟಿಎಂ' ನಿಂದ ಹಣ ಹೊರಬಹುತ್ತದೆ. ಈ ಸೇವೆಗಾಗಿ ಗ್ರಾಹಕರು ಬ್ಯಾಂಕ್ ಗೆ ಮೊಬ್ಐಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕು. ಪ್ರತಿ ವಹಿವಾಟಿಗೂ ಗುಪ್ತ ಸಂಖ್ಯೆ ಬದಲಾಗುತ್ತಿರುತ್ತದೆ. ಬ್ಯಾಂಕ್ ಮೂಲಕ ಗಂಟೆಗಳ ವಾಯಿದೆ ಹೊಂದಿರುತ್ತದೆ.
ಈ ಆಪ್ಲಿಕೇಷನ್ ಬಳಸಿ ಈಗ ಒಮ್ಮೆ 100 ಪೌಂಡ್ ಮಾತ್ರ ವಿತ್ ಡ್ರಾ ಮಾಡಿಕೊಳ್ಳಬಹುದು. ಗ್ರಾಹಕರ ಪ್ರತಿಕ್ರಿಯೆ ಆದರಿಸಿ 250 ಪ್ಔಂಡ್ ವರೆಗೂ ವಿಸ್ತರಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ನಿಂದ ಬರುವ ಗುಪ್ತ ಸಂಖ್ಯೆಯನ್ನು ಸ್ನೇಹಿತರಿಗೆ ಕಳುಹಿಸಿದರೆ ಅವರು ಕೂಡ ಎಟಿಎಂ ನಿಂದ ನಗದು ಡ್ರಾ ಮಾಡಿಕೊಳ್ಳಬಹುದಾಗಿದೆ. ಈ ಸೇವೆಗಾಗಿ ಐಪೋನ್, ಐಪ್ಯಾಡ್, ಬ್ಲಾಕ್ ಬೆರಿ ಸೇರಿದಂತೆ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಿಗೆ ಬಳಕೆದಾರರು ಗೆಟ್ ಕ್ಯಾಷ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವಂತೆಯೂ ಬ್ಯಾಂಕ್ ತನ್ನ ಖಾತೆದಾದದರಿಗೆ ಹೇಳಿದೆ. 

ಆರ್ ಬಿ ಎಸ್ ಬ್ಯಾಂಕಿನ ಜಾಲತಾಣದಲ್ಲಿ ಹೆಚ್ಚಿನ ಮಾಹಿತಿ ಹಾಗೂ ತಂತ್ರಾಂಶಗಳಿಗಾಗಿ ಕೊಂಡಿ: http://goo.gl/4emb6

ಭಾರತದಲ್ಲಿಯ ಎಲ್ಲಾ ರಾಷ್ಟ್ರೀಯ, ಅಂತರಾಷ್ಟ್ರೀಯ ಬ್ಯಾಂಕ್ ಗಳೂ ಇಂತಹ ಸೇವೆಯನ್ನು ನೀಡುವುದಾದರೇ ಹೇಗಿರುತ್ತದೆ ಯೋಚಿಸಿ? 

Monday, June 18, 2012

ಜಾನಪದ ಲೋಕ

ಪ್ಯಾಟಿ ಮಂದಿ ನೋಡಿ, ಹಳ್ಳಿ ಲೈಪು.......
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದಿಂದ 8 ಕಿ.ಮೀ. ದೂರದಲ್ಲಿ ಬಲಗಡೆಗೆ 15 ಎಕರೆ ವಿಶಾಲವಾದ ಜಾಗದಲ್ಲಿ ಜಾನಪದ ಲೋಕ ಸೃಷ್ಟಿಯಾಗಿದ್ದು, ಪ್ರವಾಸಿಗರನ್ನು ಜನಪದ ವಿಶೇಷತೆಗಳಿಂದ ಸ್ವಾಗತಿಸುತ್ತಿದೆ. ಮುಖ್ಯ ದ್ವಾರದಲ್ಲಿ ನಗುತ್ತಿರುವ ನಿಗಿ ನಿಗಿ ಸೂರ್ಯ ನಂದಿ ಧ್ವಜಗಳ ಮಧ್ಯೆ "ಬನ್ನಿ ಒಳ ಬನ್ನಿ" ಎನ್ನುತ್ತಾನೆ. 1994ರ ಮಾ.12ರಂದು ಆರಂಭವಾದ ಈ ವಿಸ್ಮಯ ಲೋಕ ಜಗತ್ತಿನ ಪ್ರಮುಖ ಸಾಂಸ್ಕೃತಿಕ ಲೋಕಗಳಲ್ಲೊಂದು ಎಂಬುದು ಕನ್ನಡಿಗ ಹೆಮ್ಮೆ. 'ಗಜಮುಖನೇ ಗಣಪತಿಯೇ ನಿನಗೆ ವಂದನೆ' ಎಂದೆನ್ನೆಲು ಅಲ್ಲೊಂದು ಪುಟ್ಟದಾದ, ಚೊಕ್ಕವಾದ ಗಣೇಶ ಮಂದಿರ. ಅನಂತರ ಅನಾವರಣಗೊಳ್ಳುತ್ತೆ ನಮ್ಮ ಮುಂದೊಂದು ಅನುಪಮ 'ಜಾನಪದ ಜಗತ್ತು'.
ಏನುಂಟು..... ಏನಿಲ್ಲ.......
ಲೋಕಮಹಲ್, ಶಿಲ್ಪಮಾಳ,ಆಯಗಾರರ ಮಾಳ,ತೊಟ್ಟಿಮನೆ,ಕಂಬಗಳ ಮನೆ ಹೀಗೆ ಒಂದೊಂದು ವಸ್ತು ಸಂಗ್ರಹಾಗರಕ್ಕೆ ಒಂದೊಂದು ವಿಶ್ಇಷ್ಟ ಹೆಸರು.ದಾರಿ ದಿಕ್ಕು ತೋರಲು ಗೋಕುಲಾಷ್ಟಮಿ ಕೃಷ್ಣನ ಪಾದದ ಗುರುತು. ತೊಗಲು ಗೊಂಬೆ, ಆಯುಧಗಳು, ಮದುವೆ,ಸೀಮಂತ ಮುಂತಾದ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು,ಜನಪದ ವಾದ್ಯಗಳು, ಆಟಿಕೆಗಳು, ವರ್ಣಚಿತ್ರಗಳು, ಗ್ರಾಮೀಣ ಕಸಬುಗಳ ಉಪಕರಣಗಳು, ತಾಳೆ ಗರಿಗಳು ಇನ್ನೂ ಮುಂತಾದ 500ಕ್ಕೂ ಹೆಚ್ಚು ಜಾನಪದ ಸಲಕರಣೆಗಳನ್ನು ಕಲಾತ್ಮಕವಾಗಿ ವೈಜ್ಞಾನಿಕವಾಗಿ ಜತನದಿಂದ ಕಾಪಾಡಲಾಗಿದೆ. ಇಲ್ಲಿ 1200 ವರ್ಷಗಳಿಗೂ ಹಳೆಯದಾದ ಶಾಸನ, ವೀರಗಲ್ಲು, ಲಿಪಿಗಳು ಕಾಣಸಿಗುತ್ತವೆ. 
ಇಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ ಸ್ವಚ್ಛಂದ ಕೊಳ, ನೆಮ್ಮದಿಯಿಂದ ಈಜುತ್ತಿರುವ ಬಾತು ಕೋಳಿಗಳು, ಮತ್ತು ಮಕ್ಕಳಿಗಾಗಿ ದೋಣಿ ವಿಹಾರ 1000 ಜನ ಕುಳಿತುಕೊಳ್ಳಲು ಸಾಧ್ಯವಾಗುವಂಥ ಗ್ರೀಕ್ ಮಾದರಿಯ ರಂಗ ಮಂದಿರ, ಅಲ್ಲೆ ವಸ್ತುಗಳನ್ನು ತಯಾರು ಮಾಡುತ್ತಿರುವ ಕರಕುಶಲ ಕರ್ಮಿಗಳು, ತಮ್ಮಷ್ಟಕ್ಕೆ ತಾವೇ ಗೀಗಿ ಪದ ಹಾಡಿಕೊಳ್ಳುತ್ತಿರುವ ಜನಪದರು, ನೃತ್ಯಾಭ್ಯಾಸ ಮಾಡುತ್ತಿರುವ ಕಲಾವಿದರು ಎಲ್ಲರನ್ನೂ ಕಾಣಬಹುದು.
ಕೇಳಲು.......... ನೋಡಲು..........
ಅಚ್ಚರಿ ಮತ್ತು ಅಷ್ಟೇ ಹೆಮ್ಮೆ ಪಡಬಹುದಾದ ಮತ್ತೊಂದು ವಿಷಯವೆಂದರೆ ಜಾನಪದ ಕಲೆಗಳ ಬಗ್ಗೆ ಒಂದೇ ಸಮನೆ 1800 ಗಂಟೆಗಳ ಕಾಲ ಕುಳಿತು ನೋಡಬಹುದಾದಷ್ಟು ವಿಡಿಯೋ ಸಂಗ್ರಹವಿದೆ. ಸುಮಾರು 800 ಗಂಟೆಗಳಷ್ಟು ಬಿಡುವಿಲ್ಲದೇ ಕೇಳಬಹುದಾದಷ್ಟು ಧ್ವನಿಮುದ್ರಿಕೆಗಳ ಸಂಗ್ರಹವಿದೆ. ಇಲ್ಲಿ ವಿಡಿಯೋ ಥಿಯೇಟರ್ ಕೂಡ ಇದೆ.ಬಗಲಲ್ಲೆ ಒಂದು ಜಾನಪದ ಸಂಶೋಧನಾ ಕೇಂದ್ರವಿದ್ದು, ಸಂಬಂಧಪಟ್ಟ ಕಲೆಗಳಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.
ಜಾನಪದ ಸೊಗಡು ಮರೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ಲೋಕದಲ್ಲಿ ನಡೆಸುತ್ತಿರುವ ಕೋರ್ಸ್ ಗಳು, ಸಾಹಸ ಮೆಚ್ಚುವಂಥದ್ದು. ಮಂಗಳವಾರ ಹೊರತುಪಡಿಸಿ ಮಿಕ್ಕೆಲ್ಲ ದಿನಗಳಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆವಿಗೂ ಚಟುವಟಿಕೆಯಿಂದಿರುವ ಈ ಕೆಂದ್ರದಲ್ಲಿ ಪ್ರತಿ ತಿಂಗಳ ಕೋನೆ ಭಾನುವಾರ ಹಲವಾರು ಜನಪದ ಕಲೆಗಳ ಪ್ರದರ್ಶನ ಇರುತ್ತದೆ. ಜಾನಪದ ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವಂಥ ಈ ಕಾರ್ಯಕ್ರಮ ತಪ್ಪದೇ ವೀಕ್ಷಿಸುವ ಮನಸ್ಸು ಎಲ್ಲರದ್ದಾಗಲಿ.
200 ವರ್ಷಗಳ ಹಳೆಯ ಬಂಡಿ, ಜೇಡಿ ಮಣ್ಣಿನಿಂದಾದ ಮಡಕೆ, ಕುಡಿಕೆ, ದೀಪದ ಬುಡ್ಡಿಗಳು ಇಂದಿನ ಐಟಿ-ಬಿಟಿ ಮಂದಿ ಜೀವನ ಹಾಗೂ ಹಳ್ಳಿ ಜನರ ಝೀವನಕ್ಕೆ ಇರುವ ಅಜ-ಗಜಾಂತರ ವ್ಯತ್ಯಾಸದ ಬಗ್ಗೆ ಚಿಂತನೆ ಹಚ್ಚುತ್ತವೆ. ತರಾವರಿ ತಿಂಡಿ-ತಿನಿಸುಗಳೂ ಇಲ್ಲಿ ಲಭ್ಯ. 
ಹೀಗೇ ಬನ್ನಿ
ಜಾನಪದ ಪರಿಷತ್ ನಡೆಸುತ್ತಿರುವ ಈ ಜಾನಪದ ಲೋಕ 15 ಎಕರೆ ಪ್ರದೇಶ ಹೊಂದಿದೆ. ಇಲ್ಲಿನ ಬಯಲು ರಂಗ ಮಂದಿರದಲ್ಲಿ ಜಾನಪದ ಸಂಸ್ಕೃತಿಯ ತರಬೇತಿ ನಡೆಯುತ್ತದೆ. ಬೆಂಗಳೂರಿನಿಂದ 53 ಕಿ.ಮಿ. ದೂರದಲ್ಲಿದ್ದು, ಬಸ್ ವ್ಯವಸ್ಥೆ ಇದೆ.
ಭೇಟಿ ನೀಡಿ.. http://www.janapadaloka.org/


ಮೈಸೂರು ಅರಮನೆ 3D

ಮೈಸೂರು ಅಂಬಾವಿಲಾಸ ಅರಮನೆ ಜಗದ್ವಿಖ್ಯಾತ. ಇದೊಂದನ್ನೇ ನೋಡಲೆಂದು ಭಾರತಕ್ಕೆ ಬರುವ ಪ್ರವಾಸಿಗರಿದ್ದಾರೆ. ನೀವು ಮೈಸೂರು ಅರಮನೆ ನೊಡಿದ್ದೀರಾ? ನೋಡಿಲ್ಲವಾದರೆ ಅದನ್ನು ನೋಡಬೇಕಾದರೆ ಮೈಸೂರಿಗೇ ಹೋಗಬೇಕಾಗಿಲ್ಲ. ಅರಮನೆಯ ಪೂರ್ತಿ ಮೂರು ಆಯಾಮಗಳ ಚಿತ್ರ ಹಾಗೂ ವಾಸ್ತವ ಸದೃಶ ಪ್ರತಿಕೃತಿ ನೋಡಬೇಕಾದರೆ ನೀವು mysorepalace.tv ಜಾಲತಾಣಕ್ಕೆ ಭೇಟಿ ನೀಡಬೇಕು. ಅರಮನೆಯ ಒಳಗೆಲ್ಲ ಓಡಾಡಿದಂತೆ ನಿಮಗೆ ಭಾಸವಾಗುವ ಪ್ರತಿಕೃತಿಗಳು ಇಲ್ಲಿವೆ. ಅರಮನೆಯ ಬಗ್ಗೆ ಇತರೆ ಮಾಹಿತಿಗಳೂ ಇಲ್ಲಿವೆ. ಅರಮನೆ ನೋಡಿದವರಿಗೂ ನೋಡಿದ ಅನುಭವ ಮತ್ತೊಮ್ಮೆ ಮೂಡುವಂತೆ ಮಾಡುವ ಅತ್ಯತ್ತಮ ಜಾಲತಾಣ ಇದು. ಕನ್ನಡ ಭಾಷೆಯಲ್ಲೂ ಇದೆ.

ಭ್ರಮಾಲೋಕ

ಕೆಲವು ಚಿತ್ರಗಳನ್ನು ನೋಡಿದಾಗ ಅದರೊಳಗೆ ಇನ್ನೋನೋ ಇದ್ದಂತೆ ಭಾಸವಾಗುತ್ತದೆ. ಮತ್ತೆ ಕೆಲವು ಚಿತ್ರಗಳು ಚಲನೆಯ ಭ್ರಮೆಯನ್ನು ಮೂಡಿಸುತ್ತವೆ. ನಿಜವಾಗಿ ನೋಡಿದರೆ ಚಿತ್ರ ಚಲಿಸುತ್ತಿರುವುದಿಲ್ಲ. ಇಂತಹ ಭ್ರಮೆಗಳನ್ನು ಸೃಷ್ಟಿಸುವ ಹಲವು ನಮೂನೆಯ ಚಿತ್ರಗಳನ್ನು ನೋಡಬೇಕಾದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.moillusions.com. ಇಲ್ಲಿರುವ ಚಿತ್ರಗಳನ್ನು ಹಲವು ವಿಭಾಗಗಳಲ್ಲಿ ನೀಡಲಾಗಿದೆ. ನಿಮಗಿಷ್ಟವಾದ ವಿಭಾಗಕ್ಕೆ ನೀವು ಭೇಟಿ ನೀಡಬಹುದು.

ಗ್ರಹ, ನಕ್ಷತ್ರ, ಬ್ರಹ್ಮಾಂಡ

ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆಯೇ? ಗ್ರಹ, ನಕ್ಷತ್ರ, ಬ್ರಹ್ಮಾಂಡಗಳ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆಯೇ? ಕುತೂಹಲಭರಿತ ಮಕ್ಕಳಿಗೆ ಸೌರವ್ಯೂಹ, ಗ್ರಹ, ನಕ್ಷತ್ರಗಳ ಬಗ್ಗೆ ತಿಳಿಹೇಳುವ ಕೆಲವು ಅಂತರಜಾಲ ತಾಣಗಳಿವೆ. ಅವು www.solarviews.com, kids.msfc.nasa.gov, www.dustbunny.com/afk.ಇಲ್ಲಿ ಖಗೋಳಶಾಸ್ತ್ರದ ತಿಳಿವಳಿಕೆ ಪಡೆಯವುದರ ಜೊತೆ ಕೆಲವು ಅಟಗಳನ್ನೂ ಅಡಬಹುದು.

ಒಡಿಸ್ಸಿ360.ಕಾಂ ಪುಸ್ತಕದಂಗಡಿ

ಇಂಟರ್ನೆಟ್, ಮೊಬೈಲ್, ಟ್ಯಾಬ್ಲೆಟ್, ಐಪ್ಯಾಡ್ ಜಮಾನಾದಲ್ಲಿ ನಮಗಿಷ್ಟವಾದ ಪುಸ್ತಕ ಕೊಳ್ಳಲು ಅಂಗಡಿಯಿಂದ ಅಂಗಡಿಗೆ ಓಡಾಡಬೇಕಾಗೇ ಇಲ್ಲ. ಆನ್ ಲೈನ್ ಪುಸ್ತಕದಂಗಡಿ ಹೊಕ್ಕುಬಿಟ್ಟರೆ ಬೆರಳತುದಿಯಲ್ಲೇ ಕೊಳ್ಳುವ ವಹಿವಾಟು ಮಾಡಿಮುಗಿಸಬಹುದು. ಇದಕ್ಕಾಗಿ ಕೂಡ ಆ ಈ ಆನ್ ಲೈನ್ ಸ್ಟೋರ್ ಶೋಧಿಸಬೇಕಿಲ್ಲ. ಒಡಿಸ್ಸಿ ಇಂಡಿಯಾ ಲಿ.ನ ಒಡಿಸ್ಸಿ360.ಕಾಂ 50 ಲಕ್ಷಕ್ಕೂ ಹೆಚ್ಚಿನ ವೈವಿಧ್ಯಮಯ ಪುಸ್ತಕಗಳನ್ನು ನಿಮ್ಮ ಮುಂದೆ ಹರವಿ ಕೂಡುತ್ತದೆ. ಆಯ್ಕೆ ಮಾಡಬೇಕಾದ ಕೆಲಸ ಮಾತ್ರ ನಿಮ್ಮದು.

ಆರ್ಚರ್ ನಂಥ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳಿಂದ ದಿ ಡಾ ವಿನ್ಸಿ ಕೋಡ್ ಪುಸ್ತಕ ಬರೆದಂಥ ಡಾನ್ ಬ್ರೌನ್ ಬರೆದ ಪುಸ್ತಕಗಳವರೆಗೆ ಎಲ್ಲ ಪುಸ್ತಕಗಳು ಇಲ್ಲಿ ಲಭ್ಯ. ಪುಸ್ತಕಗಳನ್ನು ಓದುತ್ತಲೇ ನಮ್ಮನ್ನು ನಾವು ವಿಭಿನ್ನ ದೃಷ್ಟಿಕೋನಗಳಿಂದ ನೋಡುವಂತಹ, ನಮ್ಮ ಜೀವನವನ್ನೇ ಹೊಸದಾಗಿ ಶೋಧಿಸಿಕೊಳ್ಳುವಂತಹ ಸಾಹಿತ್ಯ, ಸಂಸ್ಕೃತಿಯಿಂದ ಶ್ರೀಮಂತವಾಗಿರುವಂಥ ಹೊತ್ತಗೆಗಳು ಕಂಪ್ಯೂಟರ್ ಸ್ಕ್ರೀನ್ ಮೇಲೆ ಹರವಿಕೊಳ್ಳುತ್ತವೆ.

ಇಂದಿನ ದಿನಗಳಲ್ಲಿ ಪುಸ್ತಕ ಓದುವವರೇ ಕಡಿಮೆಯಾಗಿದ್ದಾರೆ ಎಂದು ಹಲಬುವವರು ಹಲಬುತ್ತಲೇ ಇರಲಿ ಎನ್ನುವಂತೆ ಪುಸ್ತಕಲೋಕ ಜನಮಾನಸವನ್ನು ಹೊಕ್ಕಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ಮಕ್ಕಳು, ವಿಜ್ಞಾನ, ತಂತ್ರಜ್ಞಾನ, ಯೋಗ, ವ್ಯಕ್ತಿತ್ವ ವಿಕಸನ, ಪ್ರೀತಿ ಪ್ರೇಮ, ಡೇಟಿಂಗ್, ಲೈಂಗಿಕತೆ... ವಿಷಯಸೂಚಿ ಯಾವುದೇ ಇರಲಿ ಎತ್ತಿಕೊಂಡು ಓದುವಂಥ ಸ್ಥಿತಿ ನಿರ್ಮಾಣವಾಗಿದೆ. ಬಿಟ್ಟಿ ಓದುವವರ ಸಂಖ್ಯೆ ಕುಗ್ಗುತ್ತಿದ್ದು, ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಮ್ಮನ್ನು ಹಿಡಿದಿಡುವಂಥ ಅನೇಕಾನೇಕ ಪುಸ್ತಕಗಳು ಓಡಿಸ್ಸೆಯಲ್ಲಿವೆ.
ಅದರಲ್ಲೂ ಮಕ್ಕಳ ಕಲ್ಪನೆಗೆ ಇಂಬು ಹಚ್ಚುವ ಅಮರಚಿತ್ರ ಕಥಾ, ಪೌರಾಣಿಕ, ಐತಿಹಾಸಿಕ, ಸಾಹಿತ್ಯ, ಜಾನಪದ ಪುಸ್ತಕಗಳು, ಎಲ್ಲ ವಯಸ್ಸಿನವರನ್ನು ಸೆಳೆಯುತ್ತಿರುವ ಗ್ರಾಫಿಕ್ಸ್ ನಲ್ಲಿರುವ ಕಾದಂಬರಿಗಳು ಇಲ್ಲಿ ದೊರೆಯುತ್ತವೆ. ದೇಶದ ಯಾವುದೇ ಪುಸ್ತಕದ ಅಂಗಡಿಗಳಲ್ಲಿ ದೊರೆಯದಂಥ ವೈವಿಧ್ಯಮಯ ಪುಸ್ತಕಗಳು ಇಲ್ಲಿ ಲಭ್ಯವಿವೆ. ಇಷ್ಟು ಮಾತ್ರವಲ್ಲ, ಆಕರ್ಷಕ ರಿಯಾಯಿತಿ ಮತ್ತು ಅನೇಕ ಕೊಡುಗೆಗಳನ್ನು ಒಡಿಸ್ಸಿ ಪುಸ್ತಕ ಕೊಳ್ಳುವವರಿಗೆ ನೀಡುತ್ತಿದೆ. ಪುಸ್ತಕದ ರವಾನೆ ಕೂಡ ಉಚಿತ.

ಪುಸ್ತಕಗಳ ಹೊರತಾಗಿ, ಈ ಇ-ಕಾಮರ್ಸ್ ಪೋರ್ಟಲ್ ನಲ್ಲಿ ಎಲ್ಲಾ ಬಗೆಯ ಸಿನೆಮಾ ಮತ್ತು ಆಟಿಕೆಗಳು ದೊರೆಯುತ್ತವೆ. ಮದುವೆ, ಹುಟ್ಟುಹಬ್ಬ, ಮುಂಜಿ ಸಂದರ್ಭ ಯಾವುದೇ ಇರಲಿ ಮೆಚ್ಚಿನವರಿಗೆ ಉಡುಗೊರೆ ನೀಡಲು ಒಡಿಸ್ಸಿ ಗಿಫ್ಟ್ ವೋಚರ್ ಗಳು ಇಲ್ಲಿ ದೊರೆಯುತ್ತವೆ. ಇಲ್ಲಿ ಪುಸ್ತಕ ಮತ್ತು ಇತರೆ ವಸ್ತುಗಳನ್ನು ಓಡಿಸ್ಸೆ ಆನ್ ಲೈನ್ ಪುಸ್ತಕ ಮಳಿಗೆಯಲ್ಲಿ ಕೊಳ್ಳುವುದೇ ಒಂದು ವಿಭಿನ್ನ, ವಿಶಿಷ್ಟ ಅನುಭವ. ಕಿರಿಕಿರಿ ಇಲ್ಲದ ವಿಶಿಷ್ಟ ಅನುಭವಕ್ಕೆ ನಿಮ್ಮನ್ನು ನೀವು ತೆರೆದುಕೊಳ್ಳಿ. ದಿನದ ಇಪ್ಪತ್ನಾಲ್ಕು ಗಂಟೆಯೂ ಒಡಿಸ್ಸಿ ಪುಸ್ತಕದಂಗಡಿ ನಿಮಗಾಗಿ ಬಾಗಿಲು ತೆರೆದಿದೆ.

Sunday, June 17, 2012

ಏಸರ್ ಐಕಾನಿಯ ಟ್ಯಾಬ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್

ಲ್ಯಾಪ್ಟಾಪ್ ಉತ್ಪಾದನೆಯಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಏಸರ್ ಕಂಪನಿಯು, ಐಕಾನಿಯ ಬ್ರಾಂಡ್ ನ ಸರಣಿಯಲ್ಲಿ ಹೊಸ ಟ್ಯಾಬ್ಲೆಟ್ ಅನ್ನು ಅನಾವರಣಗೊಳಿಸಿದೆ.
ಏಸರ್ ಐಕಾನಿಯ ಟ್ಯಾಬ್ A110 ಹೆಸರಿನ ಈ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ನ ವಿಶೇಷ ಏನೆಂದರೆ, ಇದು ಖ್ಯಾತ ಗ್ರಾಫಿಕ್ ಕಾರ್ಡ್ ಉತ್ಪಾದಕ NVIDIAದ, NVIDIA ಟೆಗ್ರಾ 3 ಪ್ರೋಸೆಸರ್ ಹೊಂದಿದೆ.
ಇದರ ಫೀಚರುಗಳು ಈ ರೀತಿ ಇವೆ:
  • 7 ಇಂಚ್ ನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
  • 1024 x 600 ಪಿಕ್ಸೆಲ್ ರೆಸಲ್ಯೂಶನ್
  •  ಲೈಟ್ ಸೆನ್ಸರ್ ಹಾಗು ಪ್ರಾಕ್ಸಿಮಿಟಿ ಸೆನ್ಸರ್
  • ಕ್ವಾಡ್ ಕೋರ್ NVIDIA ದ ಟೆಗ್ರಾ 3 ಪ್ರೋಸೆಸರ್
  • 1 GB ರಾಮ್
  • 2 ಮೆಗಾಪಿಕ್ಸೆಲ್ ಮುಂಬದಿಯ ಕ್ಯಾಮರಾ(ವಿಡಿಯೋ ಕಾಲಿಂಗ್ ಅನುಕೂಲ ಒದಗಿಸುತ್ತದೆ)
  • 8000 MB ಆಂತರಿಕ ಮೆಮೊರಿ
  • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
  • 3G ಸೌಲಭ್ಯ
  • ಬ್ಲೂಟೂತ್ 3.0,ವೈಫೈ,USB 2.0, ಜಿಪಿಎಸ್
  • ಸ್ಟೀರಿಯೋ ಸ್ಪೀಕರ್ ಗಳು
  • ಆಂತರಿಕ ಯೂಟ್ಯೂಬ್ (ಡೌನ್ಲೋಡ್ ಮಾಡಿ ವೀಡಿಯೋ ನೋಡುವ ಪ್ರಮೇಯ ಇರುವುದಿಲ್ಲ)
  • ಫೇಸ್ ಬುಕ್ ಹಾಗು ಟ್ವಿಟರ್ ಆಪ್
  • ವೆಬ್ ಬ್ರೌಸಿಂಗ್ ಗೆ ಸಹಾಯ ಮಾಡುವ HTML, HTML5, XHTML ಮತ್ತು ಫ್ಲಾಶ್
  • ಟ್ಯಾಬ್ಲೆಟ್ ನಿಂದ ಟಿವಿಗೆ ಕನೆಕ್ಟ್ ಮಾಡಲು ಮೈಕ್ರೋ HDMI ಪೋರ್ಟ್
 ಜುಲೈ ವೇಳೆಗೆ ಮಾರುಕಟ್ಟೆಗೆ ಬರಲಿರುವ ಈ ಟ್ಯಾಬ್ಲೆಟ್ ನ ಬೆಲೆಯನ್ನು ಏಸರ್ ಇನ್ನೂ ನಿಗದಿಪಡಿಸಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://goo.gl/sIz9c 

Friday, June 15, 2012

ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ನನ್ನ ಜಾಲತಾಣ ಹಾಗೂ ಬ್ಲಾಗ್ ಗಳ ಬಗ್ಗೆ ಅಂಕಣ.

ಪ್ರಜಾವಾಣಿ ದಿನ ಪತ್ರಿಕೆಯ ಜೂನ್ 1ರ ಮೆಟ್ರೊ ಬೆಂಗಳೂರು ಪುರವಣಿಯಲ್ಲಿ ಪ್ರಕಟಗೊಂಡ ಬ್ಲಾಗಿಲನು ತೆರೆದು ಕನ್ನಡ ಬ್ಲಾಗ್ ಗಳ ಇಣುಕು ನೋಟದಲ್ಲಿ "ಹಲವು ಚಂದ್ರರು"! ಎಂಬ ಶಿರ್ಷಿಕೆಯಲ್ಲಿ ನನ್ನ ಜಾಲತಾಣ ಹಾಗೂ ಬ್ಲಾಗ್ ಗಳ ಬಗ್ಗೆ ಅಂಕಣ.

ಮುಕ್ತ ಗ್ರಂಥಾಲಯ

ಅಂತರಜಾಲದಲ್ಲಿ ಪುಸ್ತಕಗಳ ಅಂಗಡಿಗಳು ಇರುವುದು ತಿಳಿದೇ ಇರಬಹುದು. ಅಂತೆಯೇ ಗ್ರಂಥಾಲಯಗಳೂ ಇವೆ. ಅಂತಹ ಒಂದು ಮುಕ್ತ ಗ್ರಂಥಾಲಯ openlibrary.org. ಇದರ ವೈಶಿಷ್ಟ್ಯವೇನೆಂದರೆ ಇದಕ್ಕೆ ನಾವು ನೀವು ಎಲ್ಲರೂ ಪುಸ್ತಕ ಅಥವಾ ಪುಸ್ತಕದ ಸೂಚಿ ಹಾಗೂ ಕೊಂಡಿ ಸೇರಿಸಬಹುದು. ಇದರಲ್ಲಿ ಲಕ್ಷಕ್ಕಿಂತಲೂ ಅಧಿಕ ವಿದ್ಯುನ್ಮಾನ ಪುಸ್ತಕಗಳಿವೆ. ಮೊದಲೇ ತಿಳಿಸಿದಂತೆ ಇದು ಗ್ರಂಥಾಲಯ. ಅಂದರೆ ಪುಸ್ತಕವನ್ನು ನೀವು ಓದಿ ಹಿಂತಿರುಗಿಸಬೇಕು. ಅಂತರಜಾಲದ ಮೂಲಕ ದೊರಕುವ ವಿ-ಪುಸ್ತಕಗಳನ್ನು ಓದಿ ಹಿಂತಿರುಗಿಸುವುದು ಎಂದರೆ ಹೇಗೆ ಎಂಬ ಅನುಮಾನವೇ? ಅದಕ್ಕೆ ಹಲವು ವಿಧಾನಗಳಿವೆ. ಒಂದು ಅತಿ ಸರಳ ವಿಧಾನವೆಂದರೆ ಜಾಲತಾಣದಲ್ಲೇ ಓದುವುದು. ಭೌತಿಕ ಪುಸ್ತಕದ ಪುಟ ಮಗುಚಿದಂತೆ ಜಾಲತಾಣದಲ್ಲೂ ಪುಟ ಮಗುಚಿದ ಅನುಭವ ಮೂಡುವಂತೆ ಮಾಡುವ ತಂತ್ರಾಂಶದ ಬಳಕೆ ಇಲ್ಲಿ ಆಗಿದೆ. ಇತರೆ ವಿಧಾನಗಳೂ ಇವೆ. ಈ ಜಾಲತಾಣವಲ್ಲದೆ ಇತರೆ ಜಾಲತಾಣಗಳಲ್ಲಿ ದೊರೆಯುವ ಪುಸ್ತಕಗಳಿಗೆ ಕೊಂಡಿಯೂ ಇಲ್ಲಿದೆ.  

Thursday, June 14, 2012

ಮೊಬೈಲ್ ಪತ್ತೆ ಸಲೀಸು

(IMEI) ಐಎಂಇಐ  ಇದೊಂದು ಯೂನಿಕ್ ಐಡೆಂಟಿಟಿ ಸಂಖ್ಯೆ. ಪ್ರತಿಯೊಂದು ಮೊಬೈಲ್ ಹ್ಯಾಂಡ್ ಸೆಟ್ ಗೂ ಆ ಸಂಖ್ಯೆ ಬದಲಾಗುತ್ತದೆ. ಅಷ್ಟೆ ಅಲ್ಲ, ಯಾರಾದರೂ ಸಿಮ್ ಕಾರ್ಡ್ ಬದಲಾಯಿಸಿದರೆ ಅದರ ಸುಳಿವು ಮೊಬೈಲ್ ಆಪರೇಟರ್ ಗಳಿಗೆ ಸಿಗುತ್ತದೆ. http://www.indiatrace.com ಯು.ಆರ್.ಎಲ್ ಲಿಂಕ್ ನಲ್ಲಿ 10 ಅಂಕೆಯ ಮೊಬೈಲ್ ಸಂಖ್ಯೆ ನಮೂದಿಸಿ, ಆಪರೇಟರ್ ವಿವರ ಸೇರಿದಂತೆ, ಆ ಹ್ಯಾಂಡ್ ಸೆಟ್ ಬಳಕೆಯಲ್ಲಿ ಇರುವ ಸ್ಥಳ ಪತ್ತೆ ಹಚ್ಚಬಹುದು. ಇದೊಂದು ಉಚಿತ ಸಾಪ್ಟ್ ವೇರ್. ಇದರ ಸಹಾಯದಿಂದ ಲ್ಯಾಂಡ್ ಲೈನ್, ವೆಹಿಕಲ್ ಟ್ರ್ಯಾಕಿಂಗ್ ,ಐಪಿ (ಇಂಟರ್ ನೆಟ್ ಪ್ರೋಟೋಕಾಲ್)ಅಡ್ರೆಸ್ ಪತ್ತೆಗೂ ಸಹಕಾರಿಯಾಗಿದೆ. 
ಟ್ರ್ಯಾಕಿಂಗ್ ಸಾಪ್ಟ್ ವೇರ್
ಗ್ರಿಂಪ್ಸ್, ಗೂಗಲ್ ಲ್ಯಾಟಿಟೂಡ್, ಬಡ್ಡಿವೇ, ಸಾರ್ಟ್ ಪ್ರೋಟೆಕ್ಟ್, ಡಿಎಸ್ಎಂಪಿ, ರಿಮೋಟ್ ಟ್ರ್ಯಾಕರ್, ಟೋಟಕ್ ಕೇರ್, ಮೋಬೈಲ್ ಡಿಪೆನ್ಸ್, ಮೋಲೋಗೋಗೋ, ಲೀಕೆಟ್ ಎ, ಎಫ್ ಸೆಕ್ಯೂರ್, ಎಂ ಗಾರ್ಡ್ (ಸೋನಿ ಎರಿಕ್ಸನ್)  ಕೆಪ್ರೋಸ್ಕಿ, ಥೆಪ್ಟ್ ಅವೇರ್ ಮತ್ತು ಅಡ್ವಾನ್ಸ್ ಡಿವೈಸ್ ಲಾಕ್ ಪ್ರೋ ಮೊದಲಾದ ತಂತ್ರಜ್ಞಾನಗಳು ಹ್ಯಾಂಡ್ ಸೆಟ್  ಪತ್ತೆಗೆ ನೆರವಾಗುತ್ತವೆ. 
ನೀವೂ ಇಂತಹ ತಂತ್ರಜ್ಞಾನಗಳನ್ನು ಬಳಸಿ ನಿಮ್ಮ ಮೊಬೈಲ್ ನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬಾರದೇಕೆ?

ಆಪಲ್ iOS 6.0

 ಆಪಲ್ ಕಂಪನಿ ಹೊಸ ಆವೃತ್ತಿಯ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ iOS 6 ಎಂಬ ತಂತ್ರಾಂಶವನ್ನು ಅನಾವರಣಗೊಳಿಸುತ್ತಿದೆ. ಮತ್ತು ಇದು ನಿಮ್ಮ ಐಪೋನ್, ಐಪಾಡ್ ಅಥವಾ ಐಪಾಡ್ ಟಚ್ ಗಳನ್ನು ನಿಸ್ತಂತು ರೂಪದಲ್ಲಿ ಆಪ್ಗ್ರೇಡ್ ಮಾಡಬಹುದಾಗಿದೆ.


ಜೂನ್ 11 ರಿಂದ ಜೂನ್ 15 ರ ವರೆಗೆ ನಡೆಯುವ ಈ ಕಾನ್ಫರೆನ್ಸ್ ನಲ್ಲಿ ಈಗಾಗಲೇ iOS 6 ಬಿಡುಗಡೆಯ ಬಗ್ಗೆ ಬ್ಯಾನರ್ ಗಳನ್ನು ಹಾಕಲಾಗಿದ್ದು ಸಾಕಷ್ಟು ಸುದ್ದಿಯಾಗಿದೆ. ಆಪಲ್ ನ iOS 6.0 ದಲ್ಲಿ ಹೊಸ ಹೊಸ ಫೀಚರುಗಳ ನಿರೀಕ್ಷೆ ಇದ್ದು, ಗೂಗಲ್ ಮ್ಯಾಪ್ಸ್ ರೀತಿಯಲ್ಲಿ 3D ಮ್ಯಾಪ್ಸ್ ಬರಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಬರಿ iOS 6.0 ತಂತ್ರಾಂಶದ ಅನಾವರಣವಷ್ಟೇ ಅಲ್ಲದೆ ಐಪ್ಯಾಡ್ ಗಳಿಗೆ ಸಿರಿ ವಾಯ್ಸ್ ರೆಕಗ್ನಿಶನ್ ತಂತ್ರಾಂಶ ಹಾಗು iOS ಗೆ ಫೇಸ್ ಬುಕ್ ಅನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕಲನ ಮಾಡಬಹುದು ಎಂಬ ನಿರೀಕ್ಷೆಯೂ ಇದೆ.
ಪಾಸ್ ಬುಕ್ ಎಂಬ ತಂತ್ರಾಂಶದಲ್ಲಿ ನಿಮ್ಮ ಬೋರ್ಡಿಂಗ್ ಪಾಸುಗಳನ್ನು, ಚಲನಚಿತ್ರ ಟಿಕೆಟ್ಗಳನ್ನು  ಮತ್ತು ಠೇವಣಿ ಪುಸ್ತಕ ಮುಂತಾದ ವೈಯಕ್ತಿಕ ದಾಖಲೆಗಳನ್ನು ನಿಮ್ಮ ಐಫೋನ್ ಅಥವಾ ಐಪಾಡ್ ಟಚ್ ನಲ್ಲಿ ಸ್ಕ್ಯಾನ್ ಮಾಡಬಹುದು.
ಇದು ಮೊದಲನೇ ಆವೃತ್ತಿಯ ಐಪ್ಯಾಡ್  ಹಾಗು ಹಳೆಯ ಐಪಾಡ್ ಟಚ್ ಗಳಿಗೆ ಹೊಂದಾಣಿಕೆಯಾಗಲಿಕ್ಕಿಲ್ಲ ಎಂಬ ಗುಮಾನಿಯೂ ಇದೆ.
ಆಪಲ್ ನ  iOS 6.0 ತಂತ್ರಾಂಶದ  ಹೆಚ್ಚಿನ ಮಾಹಿತಿಗಾಗಿ ಜಾಲತಾಣ: http://www.apple.com/ios/ios6

ಗೂಗಲ್ ಮ್ಯಾಗಜೀನ್

ಗೂಗಲ್ ಸದ್ದಿಲ್ಲದೆ ಮಾಧ್ಯಮ ಜಗತ್ತಿಗೆ ಕಾಲಿರಿಸಿದೆ.ಆನ್‌ಲೈನ್ ಮ್ಯಾಗಜೀನ್ ಥಿಂಕ್ ಕ್ವಾರ್ಟರ್ಲೀಯನ್ನದು ಪ್ರಕಟಿಸಲಾರಂಭಿಸಿದೆ.http://thinkquarterly.co.uk ಐಪಿ ವಿಳಾಸದಲ್ಲಿದು ಲಭ್ಯವಿದೆ.ದತ್ತಾಂಶ ಮತ್ತದು ಹೇಗೆ ಮುಖ್ಯ ಎನ್ನುವುದನ್ನು ಪತ್ರಿಕೆಯಲ್ಲಿ ಚರ್ಚಿಸಲಾಗಿದೆ.ಸದ್ಯಕ್ಕಂತೂ ಪತ್ರಿಕೆಯು ಉಚಿತವಾಗಿ ಲಭ್ಯ.ಗೂಗಲ್ ತನ್ನ ಬಳಗದವರಿಗಾಗಿ ಇದನ್ನು ಪ್ರಕಟಿಸಿರುವುದಾಗಿ ಹೇಳಿಕೊಂಡಿದೆ.ಸಂದರ್ಶನ,ಲೇಖನಗಳು,ಚಿತ್ರಗಳು ಮ್ಯಾಗಜೀನ್ ಮುಖ್ಯ ತಿರುಳು.ಗೂಗಲ್ ಇದನ್ನು ಪತ್ರಿಕೆ ಎಂದು ಕರೆಯದೆ "ಪುಸ್ತಕ" ಎಂದು ಕರೆದುಕೊಂಡಿರುವುದು ವಿಶೇಷ.ಲಂಡನ್‌ನಿಂದ ಪ್ರಕಾಶಿತ ಥಿಂಕ್ ಕ್ವಾರ್ಟರ್ಲಿಯನ್ನು,ಚರ್ಚ್ ಆಫ್ ಲಂಡನ್ ಎನ್ನುವ ಏಜನ್ಸಿ ಸಿದ್ಧ ಪಡಿಸಿದೆ.

Friday, May 25, 2012

ವೈದ್ಯರ ಸಾಮರ್ಥ್ಯ ಹೆಚ್ಚಿಸುವ ಕ್ಲಿನೀಕಲ್ ಕೀ ಜಾಲತಾಣ

ವೈದ್ಯಕೀಯ ಟಿಪ್ಪಣಿ ಮತ್ತು ಪರಿಹಾರಕ್ಕೆ ಪ್ರಸಿದ್ದಿ ಪಡೆದಿರುವ ಎಲ್ಸೆವಿಯರ್ ಕಂಪನಿಯು ಕ್ಲಿನಿಕಲ್ ಕೀ ಎಂಬ ಜಾಲತಾಣ ಮಾಹಿತಿ ಭಂಡಾರವನ್ನು ಬಿಡುಗಡೆಗೊಳಿಸಿದೆ. ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸೆ ಪ್ರಕಾರಗಳ ಬಗ್ಗೆ ಇದರಲ್ಲಿ ಮಾಹಿತಿ ಲಭ್ಯ.
700 ಪಠ್ಯಪುಸ್ತಕ 400 ವೈದ್ಯಕೀಯ ಟಿಪ್ಪಣಿಗಳು ದೊರೆಯಲಿವೆ. ಇದರಿಂದಾಗಿ ವೈದ್ಯಕೀಯಕ್ಕೆ ಸಂಬಂದಿಸಿದ ಮಾಹಿತಿಯನ್ನು ಅಂಗೈಯಲ್ಲಿಯೇ ಸಿಗಲಿದೆ. 
ವೈದ್ಯರಿಗೆ ಅಗತ್ಯವಿರುವ ಮಾಹಿತಿ ಶೀಘ್ರ ದೊರೆಯಲಿದೆ. ಕ್ಲಿನಿಕಲ್ ಕೀ ವೈದ್ಯರ ಗುಳಮಟ್ಟ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಲಿದೆ. http://www.clinicalkey.com

ಕಸದಿಂದ ರಸ ಮಾಡುವ ಕಸದತೊಟ್ಟಿ.ಕಾಂ

ಗುಜರಿ ವಸ್ತುಗಳು ನಿಮ್ಮ ಮನೆಯಲ್ಲಿದೆಯೇ? ಹಾಗಾದರೆ ಕಸ ಎಂದು ಹೊರಕ್ಕೆ ಎಸೆಯಬೇಡಿ. ಅದಕ್ಕೆ ಬೆಲೆ ಕಟ್ಟಿ ಆನ್ ಲೈನ್ ಮೂಲಕ ಮಾರಾಟ ಮಾಡಬಹುದು!
ಅಚ್ಚರಿ ಆಯ್ತಾ? ಹೌದು. ಉಪಯೋಗಕ್ಕೆ ಬಾರದ ಹಳೆ ಕಂಪ್ಯೂಟರ್, ಬಳಸದೆ ಮೂಲೆಯಲ್ಲಿ ಬಿದ್ದಿರೋ ಮೋಬೈಲ್, ಅಪಘಾತ ನಡೆದಾಗ ತೆಗೆದಿರಿಸಿದ ಎಕ್ಸ್ ರೇ ಗಳನ್ನು ನಿಷ್ಪ್ರಯೋಜಕ ವಸ್ತುಗಳ ಪಟ್ಟಿಗೆ ಸೇರಿಸಬೇಡಿ. ಅವೆಲ್ಲವನ್ನೂ ಜೋಪಾನವಾಗಿ ಇಟ್ಟುಕೊಳ್ಳಿ. ನಿಮ್ಮ ಮನೆಗೆ ಬಂದು ಇವೆಲ್ಲಾ ಗುಜರಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತೆ "ಕಸದತೊಟ್ಟಿ".
ಕಸದತೊಟ್ಟಿ ಅನ್ನೋದು ವೆಬ್ ಸೈಟ್ ಹೆಸರು. ನಿಮ್ಮ ಮನೆಯಲ್ಲಿರುವ ನಿಷ್ಪ್ರಯೋಜಕ ವಸ್ತುಗಳ ಬಗ್ಗೆ http://www.kasadhathotti.com ನಲ್ಲಿ ಮಾಹಿತಿ ನಮೂದಿಸಿದರೆ ಸಾಕು, ಅವರೇ ಮನೆಗೆ ಬಂದು ಅವನ್ನು ಕೊಂಡ್ಯೂಯುತ್ತಾರೆ. ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತಾರೆ. 
ಕಸದಿಂದ ರಸ
ಕಸವನ್ನು ರಸ ಮಾಡುವ ಉದ್ದೇಶದಿಂದ http://www.kasadhathotti.com ಎಂಬ ವೆಬ್ ಸೈಟ್ ಶುರುವಾಗಿದೆ. ಮನೆಯಲ್ಲಿ ಕೆಲಸಕ್ಕೂ ಬಾರದಿರುವ ವಸ್ತುಗಳನ್ನು ಇದು ಖರೀದಿಸುತ್ತದೆ. ಗ್ರಾಹಕರಿಂದ ಖರೀದಿಸಿದ ವಸ್ತುಗಳನ್ನು ಪನರ್ ಬಳಕೆ ಘಟಕದಲ್ಲಿ ಬೇರೆ ರೂಪ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. 
ಮಾರಾಟ ಹೇಗೆ? 
ಗುಜರಿ ವಸ್ತುಗಳ ಮಾರಾಟ ಮಾಡಬೇಕೆಂದರೆ ವೆಬ್ ಸೈಟ್ ಗೆ ಬೇಟಿ ನೀಡಬೇಕು. ಅಲ್ಲಿ ತಮ್ಮದೊಂದು ಖಾತೆ ತೆಗೆಯಬೇಕು. ನಂತರ ತಮ್ಮಲ್ಲಿರುವ ಉಪಯೋಗಕ್ಕೆ ಬಾರದ ವಸ್ತು ಯಾವುದು ಮತ್ತು ಎಷ್ಟು ತೂಕವಿದೆ ಎಂಬ ಮಾಹಿತಿ ತುಂಬಿಸಬೇಕು. ಮನೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿದರೆ ಸಾಕು, ವೆಬ್ ಸೈಟ್ ನವರು ಮನೆಗೆ ಬಂದು ಒಯ್ಯುತ್ತಾರೆ. 
ಹೈಟೆಕ್ ಟಚ್
ಗುಜರಿ ವ್ಯಾಪಾರಕ್ಕೆ ಹೈಟೆಕ್ ಟಚ್ ನೀಡಿರುವವರು ಚಂದ್ರಶೇಖರ್. ಕೇವಲ ಎಸ್.ಎಸ್.ಎಲ್.ಸಿ ಓದಿರುವ ಇವರು ಮೊದಲು ಮನೆ, ಮನೆಗೆ ತೆರಳಿ ಗುಜರಿ ವಸ್ತುಗಳನ್ನು ಖರೀದಿಸಿ ತರುತ್ತಿದ್ದರು. ವ್ಯಾಪಾರದಲ್ಲಿ ಹೊಸತನದ ತುಡಿತದಿಂದ ಸ್ನೇಹಿತರೊಂದಿಗೆ ಸೇರಿ "ಕಸದತೊಟ್ಟಿ" ವೆಬ್ ಸೈಟ್ ಆರಂಭಿಸಿದ್ದಾರೆ.
ಗುಬ್ಬಚ್ಚಿ ಗೂಡು ಗಿಫ್ಟ್
"ಕಸದತೊಟ್ಟಿ" ಪರಿಸರ ಹಾಗೂ ಪಕ್ಷಿ ಸಂಕುಲದ ಕಾಳಜಿ ಇಟ್ಟುಕೊಂಡಿದೆ. 10 ಕೆಜಿಗಿಂತ ಹೆಚ್ಚು ನಿರುಪಯುಕ್ತ ವಸ್ತುಗಳನ್ನು ಮಾರಿದವರಿಗೆ ಗುಬ್ಬಚ್ಚಿಗೂಡು ಹಾಗೂ ಗಿಡವನ್ನು ಉಚಿತವಾಗಿ ನೀಡಲಾಗುತ್ತದೆ. 
ಗೆಳೆಯರೇ ಮತ್ತೇಕೆ ತಡ ಚಂದ್ರಶೇಖರ್ ರವರ ಪರಿಸರ ಕಾಳಜಿಗೆ ನಿಮ್ಮ ಕೈಜೋಡಿಸಿದರೆ ಮತ್ತಷ್ಟು ಬಲಪಡಿಸಿದ ಹಾಗೇ ಆಗುತ್ತದೆ ಅಲ್ಲವೇ? ನೀವೊಮ್ಮೆ ಬೇಟಿ ನೀಡಿ:  http://www.kasadhathotti.com
 
 

Onlineನಲ್ಲಿ ದಿನಬಳಕೆ ವಸ್ತು ಖರೀದಿ ಮಾಡಿ

ದಿನಬಳಕೆಯ ಸಾಬೂನಿನಂತಹ ಖರೀದಿಯನ್ನು ಅಂತರ್ಜಾಲದ ಇ-ವ್ಯವಹಾರದ ಮೂಲಕ ಮಾಡುವವರು ಹೆಚ್ಚಿಲ್ಲ. ಆದರೆ ಜನರಲ್ಲಿ ಅಂತಹ ಪ್ರವೃತ್ತಿಯನ್ನು ಹುಟ್ಟುಹಾಕಲು ಬಯಸಿರುವ ತಾಣ www.soap.com ಈಗ ಆರಂಭವಾಗಿದೆ. ಸಾಬೂನಿನಂತಹ ವಸ್ತುಗಳು ವಿಶೇಷ ಮುತುವರ್ಜಿವಹಿಸಿ ಖರೀದಿಸ ಬೇಕಾದ ವಸ್ತುವಲ್ಲ. ಟೂತ್‌ಪೇಸ್ಟ್, ಬ್ರಶ್, ಶಾಂಪೂ, ಡಿಟರ್ಜಂಟ್ ಮುಂತಾದ ಹಲವು ಸಾಮಗ್ರಿಗಳನ್ನು ನಾವು ನಿಗದಿತ ಬ್ರಾಂಡ್ ಹೆಸರಿನ ಮೂಲಕ ಖರೀದಿಸುವುದೇ ಹೆಚ್ಚು. ಹಾಗಾಗಿ ಇವುಗಳನ್ನು ಆನ್‌ಲೈನಿನಲ್ಲಿ ಖರೀದಿಸಿ, ಕೊರಿಯರ್ ಮೂಲಕ ತಕ್ಷಣ ಪಡೆಯಲು ಅವಕಾಶ ನೀಡುವ ಸೇವೆಯನ್ನು ಅಂತರ್ಜಾಲ ತಾಣವು ಒದಗಿಸುತ್ತದೆ. 

http://www.diapers.com/ ಅಂತರ್ಜಾಲ ತಾಣದ ಯಶಸ್ಸಿನಿಂದ ಉತ್ತೇಜಿತರಾದವರು ಸೋಪ್.ಕಾಂ ತಾಣವನ್ನು ಆರಂಬಿಸಿದ್ದಾರೆ. ಡಯಾಪರ್.ಕಾಂ ತಾಣವು ಮಕ್ಕಳಿಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
 http://www.casa.com/ ಅಂತರ್ಜಾಲ ತಾಣದಲ್ಲಿ ಮಲಗುವ ಕೋಣೆ, ಶೌಚಗೃಹ, ಮಲಗುವ ಕೋಣೆ, ಊಟದ ಕೋಣೆ, ಸಂಗ್ರಹ ಕೋಣೆ, ಮನೆ ಅಲಂಕಾರಿಕ ವಸ್ತುಗಳಿಗಾಗಿ ಕಾಸಾ.ಕಾಂ ತಾಣವನ್ನು ಆರಂಬಿಸಿದ್ದಾರೆ. ಕಾಸಾ.ಕಾಂ ತಾಣವು ಮನೆಗೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.
 http://www.yoyo.com/ ಅಂತರ್ಜಾಲ ತಾಣದಲ್ಲಿ ಹುಟ್ಟಿದ ಮಕ್ಕಳಿಂದ ಹಿಡಿದು ಹದಿಮೂರರ ವಯಸ್ಸಿನ ಮಕ್ಕಳಿಗೆ ಮೋಜಿನ ಜೊತೆಗೆ ಮನರಂಜನೆಯ ಸಿಡಿ, ಡಿವಿಡಿ, ಮಕ್ಕಳ ಡಿಜಿಟಲ್ ಕ್ಯಾಮೆರ, ವಿಡಿಯೋ ಆಟಿಕೆಗಳು, ಜನ್ಮದಿನದ ಉಡುಗೊರೆ, ಸೈಕಲ್, ಆಹಾರ ಸಾಮಗ್ರಿಗಳು, ಕ್ರೀಡಾ ಆಟಿಕೆಗಳು ಮುಂತಾದ ಮಕ್ಕಳಿಕೆ ಮನರಂಜನೆಗೆ ಅವಶ್ಯಕತೆಯಿರುವ ಸಾಮಗ್ರಿಗಳನ್ನು ಒದಗಿಸುವ  ಯೊಯೊ.ಕಾಂ ತಾಣವನ್ನು ಆರಂಬಿಸಿದ್ದಾರೆ.
 http://www.wag.com/ ಅಂತರ್ಜಾಲ ತಾಣದಲ್ಲಿ ನಾಯಿ, ಬೆಕ್ಕು, ಆಮೆ, ಮೊಲ, ಮೀನು, ಪಕ್ಷಿಗಳಿಗೆ ಅಗತ್ಯವಿರುವ ಆಹಾರ, ಪಂಜರ, ಬುಟ್ಟಿ, ಗೂಡುಗಳು, ಶೃಂಗಾರ ಬಿಡಿ ಭಾಗಗಳು, ಶುದ್ಧೀಕರಿಸುವ ವಸ್ತು ಮತ್ತಿತರೆ ವಸ್ತುಗಳನ್ನು ಅನ್ಲೈನ್ ನಲ್ಲಿ ಖರೀದಿಸಲು ವ್ಯಾಗ್.ಕಾಂ ಜಾಲತಾಣವನ್ನು ಆರಂಬಿಸಿದ್ದಾರೆ. ವ್ಯಾಗ್.ಕಾಂ ಜಾಲತಾಣವು ಪ್ರಾಣಿ ಪಕ್ಷಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಅವಕಾಶ ನೀಡುವ ತಾಣ.

ಆಸುಸ್ ಕಂಪನಿಯ ಜೆನ್ ಬುಕ್ ಎಂಬ ಅಲ್ಟ್ರಾಬುಕ್

ಸ್ನೇಹಿತರೆ ಮೊನ್ನೆಯಷ್ಟೆ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳ ಬಗ್ಗೆ ವರದಿಯನ್ನು ಓದಿದ್ದೀರಿ ತಾನೆ? ಆಗ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ನಿಖರವಾದ ಬೆಲೆಯ ಬಗ್ಗೆ ವರಿದಿಯಾಗಿರಲಿಲ್ಲ. ಇದೀಗ ಆಸುಸ್ ಕಂಪನಿಯು ಹೊರತಂದಿರುವ ಜೆನ್ ಬುಕ್ ಎಂಬ ಅಲ್ಟ್ರಾಬುಕ್ ಲ್ಯಾಪ್‌ಟಾಪುಗಳ ಬೆಲೆ ಕೋರ್ ಐ3 ಲ್ಯಾಪ್ ಟಾಪು ಸುಮಾರು 48,760.00 ರೂಗಳಿಗೆ ಪ್ಲಿಪ್ ಕಾರ್ಟ್ ಆನ್ಲೈನ್ ಜಾಲತಾಣದಲ್ಲಿ ಲಭ್ಯವಿದ್ದು. ಕೋರ್ ಐ7 ಲ್ಯಾಪ್ ಟಾಪಿನ ಬೆಲೆ ಸುಮಾರು 89,900.00 ರೂಗಳ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಉಲ್ಟ್ರಾಬುಕ್‌ಗಳೆಂದರೆ ಲೋಹದ ಮೇಲ್ಮೈಹೊಂದಿರುವ ತೆಳುವಾದ ಲ್ಯಾಪ್‌ಟಾಪುಗಳು. ಇವುಗಳನ್ನು ಹಗುರ ಮಾಡಲು, ಇವುಗಳಲ್ಲಿ ಹಾರ್ಡ್‌ಡಿಸ್ಕ್ ಬದಲಿಗೆ ಫ್ಲಾಶ್ ಸ್ಮರಣಕೋಶಗಳನ್ನು ಬಳಸಲಾಗುತ್ತಿದೆ. ಡೆಸ್ಕ್ಟಾಪ್ ಗಳಲ್ಲಿ ಸ್ಪರ್ಶಸಂವೇದಿ ತೆರೆಗಳು ಜನಪ್ರಿಯವಾಗಿಲ್ಲವಾದರೂ ಅಲ್ಟ್ರಾಬುಕ್‌ಗಳಲ್ಲಿ ಇಂತಹ ತೆರೆಗಳು ಕಡ್ಡಾಯವಾಗಿ ಬೇಕೇ ಬೇಕು. ಆಸುಸ್ ಕಂಪೆನಿಯು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನು ಹಾಗೂ ಟ್ಯಾಬ್ಲೆಟ್+ಸ್ಮಾರ್ಟ್‌ಫೋನು=ಪ್ಯಾಡ್ ಪೋನ್ ತಯಾರಿಸಿ ಮಾರಾಟಕ್ಕೆ ಒದಗಿಸಿ ಯಶಸ್ಸು ಕಂಡಿದ್ದು ಇದೀಗ ಅಲ್ಟ್ರಾಬುಕ್ ಎಂಬ ಲ್ಯಾಪ್‌ಟಾಪುಗಳನ್ನು ತಯಾರಿಸಿದ್ದು. ಇತ್ತೀಚಿನ ಎರಡನೆಯ ಪೀಳಿಗೆ ಕೋರ್ ಪ್ರೊಸೆಸರ್ (ಮೊಬೈಲ್ ಬಳಕೆ ಹೊಂದುವಂತೆ) ಶಕ್ತಿಯನ್ನು ಹೊಂದಿರುವ ಲ್ಯಾಪ್ ಟಾಪುಗಳ ಮಾದರಿಗಾಗಿ ASUS ಕಂಪನಿಯ ಅಂತರ್ಜಾಲ ತಾಣ ನೋಡಿ. http://zenbook.asus.com/zenbook

ಟ್ಯಾಬ್ಲೆಟ್ + ಸ್ಮಾರ್ಟ್ ಫೋನ್ = ಅಸುಸ್ Padfone

ವಿಶ್ವದ ಕಂಪ್ಯೂಟರ್ ಉತ್ಪಾದಕ ಕಂಪನಿಗಳಲ್ಲೇ ನಾವೀನ್ಯತೆಯ ಉತ್ಪನ್ನಗಳನ್ನು ಹೊರತರುತ್ತಿರುವ ಹೆಸರುವಾಸಿ ಕಂಪನಿ ಅಸುಸ್, ಈಗ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್, ಎರಡೂ ಒಂದರಲ್ಲೇ ಇರುವ ಪ್ಯಾಡ್ ಫೋನ್ ಎಂಬ ಹೆಸರಿನ ಫ್ಯಾಬ್ಲೆಟ್ ಒಂದನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.
ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2012 ರಲ್ಲಿ ಈ ಪ್ಯಾಡ್ ಫೋನ್ ಅನ್ನು ಪ್ರದರ್ಶಿಸಿ ಹಲವರನ್ನು ಬೆರಗುಗೊಳಿಸಿದ್ದ ಅಸುಸ್ ನ ಈ ಫ್ಯಾಬ್ಲೆಟ್, ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಎರಡೂ ಒಳಗೊಂಡಿದೆ.
ಇದರಲ್ಲಿರುವ ಸ್ಮಾರ್ಟ್ ಫೋನ್ 4.3 ಇಂಚ್ ಡಿಸ್ಪ್ಲೇ ಹೊಂದಿದ್ದು, ಟ್ಯಾಬ್ಲೆಟ್ 10.1 ಇಂಚ್ ಟಚ್ ಸ್ಕ್ರೀನ್ ಹೊಂದಿದ್ದು, 5 ಮೆಗಾ ಪಿಕ್ಸೆಲ್ ಕ್ಯಾಮರಾ, ಆಂಡ್ರಾಯ್ಡ್ 4.0 ತಂತ್ರಾಂಶ ಹಾಗು ಶಕ್ತಿಶಾಲಿ ಬ್ಯಾಟರಿ ಹೊಂದಿದೆ.
 ಬೇಕಾದಾಗ ಹೊರಗೆ ತೆಗೆದು ಈ ಸ್ಮಾರ್ಟ್ ಫೋನ್ ಅನ್ನು ಉಪಯೋಗಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಪ್ಯಾಡ್ ಫೋನಿನ ಎಲ್ಲಾ ಫೀಚರುಗಳು ಹಾಗು ಬೆಲೆಯ ಬಗ್ಗೆ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿಗೆ ಜಾಲತಾಣ.

ರೆಸ್ಟೋರೆಂಟ್ ಬುಕ್ ಮಾಡಲು ವೆಬ್ಸೈಟ್

ವೀಕೆಂಡ್ ಬಂದಿದೆ. ಮನೆಯಲ್ಲಿ ಅಡಿಗೆ ಮಾಡಲು ಬೇಜಾರಿರಬಹುದು ಇಲ್ಲವೆ ಉತ್ತಮ ರೆಸ್ಟೋರೆಂಟ್ ಗೆ ಹೋಗಿ ವಿವಿಧ ದೇಶದ ತಿನಿಸುಗಳನ್ನು ಸವಿಯಲು ನಾಲಿಗೆ ಹಾತೊರೆಯುತ್ತಿರಬಹುದು. ಆದರೆ ಜನಜಂಗುಳಿ ಇರುವುದರಿಂದ ಗಂಟೆಗಟ್ಟಲೆ ಕಾಯಬೇಕಾಗಬಹುದು. ಇದಕ್ಕೆ ಪರಿಹಾರ, ಮೊದಲೇ ಬೂಕಿಂಗ್ ಮಾಡಬೇಕು ಇಲ್ಲವೆ ಹೋಮ್ ಡೆಲಿವರಿ ಗೆ ಆರ್ಡರ್ ಮಾಡಬೇಕು.
ಅಂತಹ ಆನ್ಲೈನ್ ಬುಕಿಂಗ್ ವ್ಯವಸ್ತೆ ಇರುವ ವೆಬ್ಸೈಟ್ ಒಂದು ಇದೆ. ನಿಮ್ಮ ಏರಿಯಾದ, ಫೆವರಿಟ್ ರೆಸ್ಟೋರೆಂಟ್ ಅನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲೇ ಕೂತು ಬುಕ್ ಮಾಡಬಹುದು, ಜಸ್ಟ್ಈಟ್.ಇನ್ ಜಾಲತಾಣದ ಮೂಲಕ ಯಾವುದೇ ಸರ್ವೀಸ್ ಚಾರ್ಜ್ ಇಲ್ಲದೆ.ಪಂಜಾಬಿ, ಉತ್ತರಭಾರತ, ದಕ್ಷಿಣಭಾರತದ ತಿನಿಸು, ಚೈನೀಸ್, ಮಾಂಸಹಾರಿ, ಕೇಕ್ ಮತ್ತು ಸಿಹಿ ತಿನಿಸುಗಳು, ಮನೆಊಟ ಮುಂತಾದ ಶುಚಿರುಚಿಯಾದ ತಿಂಡಿತಿನಿಸುಗಳನ್ನು ಮನೆಯಲ್ಲೇ ಕುಳಿತು ಸವಿಯಿರಿ.
ಆನ್ಲೈನ್ ಹಣ ಪಾವತಿ ಮಾಡಿದರೆ 10 % ಡಿಸ್ಕೌಂಟ್ ಕೂಡ ಸಿಗುತ್ತದೆ.ಜಾಲತಾಣ ವಿಳಾಸ http://justeat.in/bangalore

ಸಂಸ್ಕೃತ ವಿಶ್ವವಿದ್ಯಾನಿಲಯದ ತ್ರಿಭಾಷಾ ಜಾಲತಾಣ

ಸಂಸ್ಕೃತ ವಿಶ್ವವಿದ್ಯಾನಿಲಯದ ಹುಟ್ಟು,ಬೆಳವಣಿಗೆ ಹಾಗೂ ಕೋರ್ಸ್ ಗಳ ಸಂಪೂರ್ಣ ಮಾಹಿತಿ ಇರುವ ಸಂಸ್ಕೃತ,ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳಲ್ಲಿ ವಿಶೇಷವಾದ ಜಾಲತಾಣ ಇದಾಗಿದೆ. ಕೆ.ಎಸ್.ಯು ಜಾಲತಾಣಕ್ಕೆ ಬೇಟಿ ನೀಡಿದರೆ ವಿವಿಯಲ್ಲಿರುವ ಕೋರ್ಸ್ ಗಳು ಇತರ ಸಂಪೂರ್ಣ ವಿವರಗಳು ದೊರೆಯುತ್ತದೆ. 
ವಿವಿಯಿಂದ ಸಂಶೋಧಕರಿಗೆ ಕೊಡುವ ಫೆಲೋಶಿಪ್ ಗಳು, ಸಂಸ್ಕೃತ ಶಿಕ್ಷಕರಿಗೆ ನೀಡುತ್ತಿರುವ ಪ್ರಶಸ್ತಿಗಳು, ಸಂಸ್ಕೃತ ಕೃತಿಗಳನ್ನು ಹೊರತರುತರಲು ಇರುವ ಕರ್ನಾಟಕ ಸಾರಸ್ವತೋಪಾಸಕ ಪುಸ್ತಕ ಮಾಲೆ, ಪ್ರೋ.ಎಂ.ಹಿರಿಯಣ್ಣ ಗ್ರಂಥ ಪುಸ್ಕಾರ ಯೋಜನೆಗಳ ಮಾಹಿತಿ ಜಾಲತಾಣದಲ್ಲಿದೆ.
3 ಭಾಷೆಗಳಲ್ಲಿ ಮಾಹಿತಿ ನೀಡುವ ಜಾಲತಾಣ, ಓಲೆಗರಿ, ಹಸ್ತಪ್ರತಿಗಳ ಗಣಕೀಕರಣ ಯೋಜನೆ, ಇ-ಲರ್ನಿಂಗ್ ಕೋರ್ಸ್ ಆರಂಭದ ಚಿಂತನೆಯಲ್ಲಿರುವ ಸಂಸ್ಕೃತ ವಿವಿಯ ಜಾಲತಾಣದ ನೋಟಕ್ಕೆ ಕೊಂಡಿ: http://www.ksu.ac.in/ka