WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Tuesday, May 15, 2012

ಕೆಲಸ ಹುಡುಕುವ ಮುನ್ನ

ಯಾವುದಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಕಾಲ ಈಗಿಲ್ಲ. ತಮ್ಮ ತಮ್ಮ ಆಸಕ್ತಿಗೆ ಸರಿಹೊಂದುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆದು. ಅದಕ್ಕೆ ಸರಿಯಾದ ಕಂಪೆನಿ ಹುಡುಕಬೇಕು. ಕಂಪೆನಿ ಸೇರುವ ಮುನ್ನ ಅಥವಾ ಕಂಪೆನಿಗೆ ಅರ್ಜಿ ಗುಜರಾಯಿಸುವ ಮುನ್ನ ಆ ಕಂಪೆನಿ ಬಗ್ಗೆ ಪೂರ್ತಿ ವಿವರ ತಿಳಿದಿದ್ದರೆ ಒಳ್ಳೆಯದು. ಕಂಪೆನಿಯ ಜಾಲತಾಣದಲ್ಲೇನೋ ಕಂಪೆನಿಯ ಬಗ್ಗೆ ವಿವರ ಇರುತ್ತದೆ. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡಿದವರಿಂದ ಹಿಂಮಾಹಿತಿ (feedback) ಸಿಗುವುದಿಲ್ಲ. ಅಲ್ಲಿ ಕೆಲಸ ಮಾಡಿದವರನ್ನು ಪರಿಚಯ ಮಾಡಿಕೊಂಡು ಅವರಿಂದ ಮಾಹಿತಿ ತಿಳಿದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಅಸಾಧ್ಯ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಇರುವ ಜಾಲತಾಣ www.glassdoor.com. ಈ ಜಾಲತಾಣದಲ್ಲಿ ಕಂಪೆನಿಗಳ ವಿಮರ್ಶೆ ಮಾತ್ರವಲ್ಲ, ಅಲ್ಲಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ಸಂಬಳ ಎಷ್ಟಿರಬಹುದು, ಇತ್ಯಾದಿ ಎಲ್ಲ ಮಾಹಿತಿಗಳಿವೆ.

ಬಿಡುವಿನ ವೇಳೆ ಕೆಲಸ ಮಾಡಲು

 

ಬಿಡುವಿನ ವೇಳೆಯಲ್ಲಿ ಫ್ರೀ ಇದ್ದಾಗ ಗಣಕ ಯಂತ್ರದ ಮೇಲೆ ಬೇರೆ ಕೆಲಸ ಮಾಡಲು ವೆಬ್‌ಸೈಟ್‌ನ ಮಾಹಿತಿ www.freelanceindia.com ಜಾಲತಾಣ ನೋಡಿ. 


ಪಾಠ ಮಾಡುತ್ತಲೇ ಹಣ ಗಳಿಸಿ

 


ನಿಮಗೆ ಪಾಠ ಮಾಡುವ ಉತ್ಸಾಹವಿದೆಯೇ? ಹಾಗಾದರೆ ಇಲ್ಲಿದೆ ನೋಡಿ ನಿಮಗೊಂದು ಅದ್ಭುತ ಅವಕಾಶ. ಈ ಕೆಳಗಿನ ಲಿಂಕ್ ಗಳಿಗೆ ಭೇಟಿ ನೀಡಿ.
ನಿಮ್ಮ ಇಷ್ಟದ ವಿಷಯಗಳ ಬಗ್ಗೆ ಪಾಠ ಮಾಡಿ. ಮತ್ತು ಪಾಠ ಮಾಡುತ್ತಲೇ ಹಣ ಗಳಿಸಿ.


ಭಾರತದಲ್ಲಿ ಮಾತ್ರ

 
“ನಿಮ್ಮ ಜೀವಕ್ಕೆ ಬೆಲೆ ಇಲ್ಲದಿರಬಹುದು ಆದರೆ ಪೆಟ್ರೋಲ್ ತುಂಬ ದುಬಾರಿ. ಇಲ್ಲಿ ಧೂಮಪಾನ ಮಾಡಬೇಡಿ” -ಇದು ಪೆಟ್ರೋಲ್ ಬಂಕ್ ಒಂದರ ಮುಂದೆ ಇರುವ ಫಲಕ. ಇನ್ನೊಂದು ಉದಾಹರಣೆ -ಒಬ್ಬಾಕೆ ತನ್ನ ಚಿಕ್ಕ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಆಕೆಯ ಹೆಗಲಲ್ಲಿ ಒಂದು ಬುಟ್ಟಿ ಇದೆ. ಆ ಬುಟ್ಟಿಯಲ್ಲಿ ಆಕೆಯ ಮುದ್ದಿನ ನಾಯಿ ಇದೆ. ಅಂದರೆ ಆಕೆ ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಳೆ ಮತ್ತು ಅದೇ ಸಮಯದಲ್ಲಿ ತನ್ನ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇವೆಲ್ಲ ಎಲ್ಲಿ ಎನ್ನುತ್ತೀರಾ? ನಮ್ಮದೇ ಭಾರತ ದೇಶದಲ್ಲಿ ಸ್ವಾಮಿ. ಹೌದು ಇದಕ್ಕೆ ಎಲ್ಲಿದೆ ಪುರಾವೆ ಎನ್ನುತ್ತೀರಾ? ಬನ್ನಿ. onlyinindia.in ಜಾಲತಾಣಕ್ಕೆ ಭೇಟಿ ನೀಡಿ.

ರಕ್ತದಾನಿಗಳು ಬೇಕೇ?


 
ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ.ರಕ್ತ ಬೇಕಾದವರು ತಮ್ಮ ಊರು, ರಕ್ತದ ಗುಂಪು ನೀಡಿ, ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು. ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ, ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು. ಸಂಪರ್ಕ ವಿಳಾಸಗಳು ತಪ್ಪಿದ್ದರೆ, ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ, ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.http://www.friends2support.org/

Thursday, May 10, 2012

LookeeTV ಎಚ್ಡಿ ಡೆಸ್ಕ್ಟಾಪ್ ಇಂಟರ್ನೆಟ್ ಟಿವಿ ಮತ್ತು ರೇಡಿಯೋ

ಅದೊಂದು ಕಾಲವಿತ್ತು ರೋಡಿಯೋ, ಕಪ್ಪುಬಿಳಿಪಿನ ದೂರದರ್ಶನವೆಂಬ ಮಾಯಪೆಟ್ಟಿಗೆಯ ಕಾಲ. ಶುಕ್ರವಾರದ ಚಿತ್ರಮಂಜರಿ, ಭಾನುವಾರದ ಸಂಜೆ ಪ್ರಸಾರವಾಗುತ್ತಿದ್ದ ಚಲನಚಿತ್ರಕ್ಕೆ ಎದರುನೊಡುತ್ತಿದ್ದ ಕಾಲ. ಹಳ್ಳಿಗಳಲ್ಲಿ ಕೆಲಸ ಕಾರ್ಯಗಳನ್ನು ಮುಗಿಸಿ ದೂರದರ್ಶನ ಮುಂದೆ ಹಾಜರು. ಟಿವಿ ನೋಡಲು ಗೌಡರ ಮನೆ ಮುಂದೆ ಸರತಿ ಸಾಲು ಕಟ್ಟಿ ನಿಲ್ಲುವುದು ರೂಡಿ. ಅರ್ಧ ಕಾರ್ಯಕ್ರಮ ಮುಗಿಯುವುದರಲ್ಲಿ ಜಾಹಿರಾತು ಅಷ್ಟೊತ್ತಿಗೆ ಗೌಡರ ಊಟದ ಸಮಯ ಆಮೇಲೆ ಬನ್ನಿ ಎಂಬ ಗೌಡರ ಶ್ರೀಮತಿಯವರ ಆಜ್ಞೆ. ನಿರಾಸೆಯಿಂದ ಪೆಚ್ಚುಮೊರೆಯ ಜೊತೆಗೆ ಮನೆಗೆ ವಾಪಸ್ಸು. ಭಾನುವಾರ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ರಾಮಾಯಣ, ಮಹಾಭಾರತ ಧಾರವಾಹಿಯನ್ನು ವೀಕ್ಷಿಸಲು ಗೌಡರ ಮನೆಯೊಡತಿಗೆ ನಾಲ್ಕಾಣೆ ಶುಲ್ಕ ನೀಡಿ ಕಪ್ಪುಬಿಳುಪಿನ ದೂರದರ್ಶನ ಮುಂದೆ ಹಾಜರು. ಆದರೆ ಈಗ ತಂತ್ರಜ್ಞಾನ ಯಾವ ಮಟ್ಟಿಗೆ ಮುಂದುವರೆದಿದೆಯೆಂದರೆ ಬಣ್ಣಬಣ್ಣದ ದೂರದರ್ಶನಗಳ ಜೊತೆಗೆ ಗಣಕಯಂತ್ರ, ದೂರವಾಣಿ, ಬಸ್ಸು, ಕಾರು, ರೈಲು, ವಿಮಾನ ಎಲ್ಲಿ ನೋಡಿದರೂ ದೂರದರ್ಶನಗಳ ದರ್ಶನದ ಕಾಲ.


LookeeTV ಎಚ್ಡಿ ಡೆಸ್ಕ್ಟಾಪ್ ಇಂಟರ್ನೆಟ್ ಟಿವಿ ಮತ್ತು ರೇಡಿಯೋ 90 ದೇಶಗಳ 65 ವಿವಿಧ ಭಾಷೆಗಳಲ್ಲಿ 2,000 ಇಂಟರ್ನೆಟ್ ಟಿವಿ ವಾಹಿನಿಗಳು ಮತ್ತು 30,000 ರೇಡಿಯೋ ಕೇಂದ್ರಗಳು ಪ್ರವಹಿಸಬಲ್ಲ ಲೂಕಿ ಟಿವಿ ಎಂಬ ಪ್ಲೇಯರ್ ನೀವು ಆನಂದಿಸಲು ಶಕ್ತಗೊಳಿಸುತ್ತದೆ. ಈ ಯಂತ್ರಾಂಶ ವೈಫೈ ನೆಟ್ವರ್ಕ್ ನಲ್ಲಿ ಐದು ಇತರ ಸಾಧನಗಳಿಗೆ ಜೊತೆಯಾಗಿ ಹಂಚಿಕೊಂಡು ಸಿಂಕ್ ಮತ್ತು ಸಂಯೋಜನೆ ಮಾಡಬಹುದು. ಇದು ಆಪಲ್ ನ  IOS, ವಿಂಡೋಸ್, ಆಂಡ್ರಾಯ್ಡ್, ಅಥವಾ ಲಿನಕ್ಸ್ ಕಾರ್ಯ ವ್ಯವಸ್ಥೆಗಳು ಹೊಂದಿಕೊಳ್ಳಬಲ್ಲದಾಗಿದೆ. LookeeTV ಎಚ್ಡಿ ಪ್ಲೇಯರ್ ನ ಮಾರಾಟ ಬೆಲೆ ಸುಮಾರು 9950.00 ರೂಗಳಾಗಿದೆ.  ಹೆಚ್ಚಿನ ನೋಟಕ್ಕೆ ಜಾಲತಾಣ ವಿಳಾಸ:

ಗೂಗಲ್ ಟಿವಿ


ಜಗತ್ತಿನಲ್ಲಿ ನಾಲ್ಕುನೂರು ಕೋಟಿ ಜನರು ಟಿವಿ ವೀಕ್ಷಣೆಯಲ್ಲಿ ತೊಡಗುತ್ತಾರೆ. ಅಮೆರಿಕಾದ ಜನರು ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಟಿವಿ ವೀಕ್ಷಣೆಯಲ್ಲಿ ತೊಡಗಿರುವುದು ಸಾಮಾನ್ಯ. ಆದರೆ ನೂರಾರು ಚಾನೆಲ್‌ಗಳ ಕಾರ್ಯಕ್ರಮ ಪಟ್ಟಿಯನ್ನು
ಜಾಲಾಡಿ, ನಮಗಿಷ್ಟವಾದ ಕಾರ್ಯಕ್ರಮದ ವೇಳೆಯನ್ನು ಪತ್ತೆ ಹಚ್ಚಿ, ಆ ವೇಳೆಗೆ ಸರಿಯಾಗಿ ಟಿವಿಯ ಮುಂದೆ ಕುಳಿತು ಟಿವಿ ವೀಕ್ಷಿಸುವುದು, ಈಗಿನ ಜನರಿಗೆ ಕಷ್ಟವೆನಿಸತೊಡಗಿದೆ.ಅಂತರ್ಜಾಲವು ಸುಲಭ ಶೋಧ ಸೌಕರ್ಯವನ್ನು ಕೊಡುವುದು, ನೇರ ಟಿವಿಪ್ರಸಾರವನ್ನೂ ಒದಗಿಸುತ್ತಿರುವ ಕಾರಣ, ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರಿನಲ್ಲಿ ನೋಡುವವರೂ ಹೆಚ್ಚುತ್ತಿದ್ದಾರೆ. ಇದನ್ನು ಮನಗಂಡು ಗೂಗಲ್  "ಗೂಗಲ್ ಟಿವಿ"ಯನ್ನು ಒದಗಿಸಲು ಯೋಜಿಸಿದೆ.ಇದರ ಮೂಲಕ ಟಿವಿಯ ಮೂಲಕವೇ ಅಂತರ್ಜಾಲವನ್ನೂ ನೋಡಬಹುದು. ಗೂಗಲ್ ಕ್ರೋಮಿನ ಮೂಲಕ ಶೋಧ ನಡೆಸಿ, ಟಿವಿ ಕಾರ್ಯಕ್ರಮಗಳನ್ನು ನೋಡಬಹುದು. ಆಟಗಳನ್ನೂ ಆಡಬಹುದು.ಇಲ್ಲವೇ ಅಂತರ್ಜಾಲದಲ್ಲಿರುವ ಬಂಧು ಮಿತ್ರರ ಚಿತ್ರಗಳನ್ನೂ ಟಿವಿಯಲ್ಲಿಯೇ
ನೋಡಬಹುದು. ಗೂಗಲ್ ಟಿವಿಯು ಎರಡು ಮಾದರಿಗಳಿದ್ದು.
ಮಾದರಿ ಒಂದು.  ಲಾಜಿಟೆಕ್ ರೆವ್ಯೂ ಸೆಟ್‌ಟಾಪ್ ಪೆಟ್ಟಿಗೆ
ಮಾದರಿ ಎರಡು.  ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಗಳೂ ಲಭ್ಯವಿದೆ.
ಜತೆಗೆ ಅಂತರ್ಜಾಲ ತಾಣಗಳು ಗೂಗಲ್ ಟಿವಿಗೆ ತಮ್ಮನ್ನು ಅಣಿಗೊಳಿಸಲು ಸಹಾಯವನ್ನೂ ಗೂಗಲ್ ಒದಗಿಸಲಿದೆ. ತಂತ್ರಾಂಶ ಅಭಿವೃದ್ಧಿ ಪಡಿಸುವವರು, ಗೂಗಲ್ ತಂತ್ರಾಂಶ ಅಭಿವೃದ್ಧಿ ಕಿಟ್‌ಗಳನ್ನು ಬಳಸಿ, ಹೊಸ ಸೇವೆಗಳಿಗೆ ಗೂಗಲ್ ಟಿವಿಯನ್ನು ಸಜ್ಜುಗೊಳಿಸಬಹುದು.

ಗೂಗಲ್ ಟಿವಿಯ ವೈಶಿಷ್ಠಗಳು 
ಟಿವಿಯಲ್ಲಿ ಆನ್ಲೈನ್ ವಿಡಿಯೋಗಳನ್ನು ವೀಕ್ಷಿಸಬಹುದು ಹಾಗೆ ಅಂರ್ತಜಾಲವನ್ನೂ ಶೋಧಿಸಬಹುದು. ಚಿತ್ರದಿಂದ ಚಿತ್ರಗಳನ್ನೂ ವೀಕ್ಷಿಸಬಹುದು. ಆಂಡ್ರಾಯ್ಡ್  ಅಥವಾ ಐಪೋನ್ ಮೊಬೈಲ್ ಅಪ್ಲಿಕೇಷನ್ ಲಭ್ಯವಿದ್ದು ಅದರಿಂದಲೇ ಗೋಗಲ್ ಟಿವಿಯನ್ನು ನಿಯಂತ್ರಿಸಬಹುದು. ಆಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಜಾಲತಾಣದಿಂದ  ಡೌನ್ಲೋಡ್ ಮಾಡಿಕೊಂಡು ಕಾಲಕಾಲಕ್ಕೆ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ಮಲ್ಟಿಮೀಡಿಯಾ ವಿಡಿಯೋ ಹಾಗೂ ಆಡಿಯೋ ಪಾರ್ಮಾಟ್ಗಳಾದ
  • Video
    H.264 (MP4, MKV, MOV, AVCHD, 3GP, TS), MPEG-4 part 2 (MP4, DIVX, AVI, 3GP, TS), WMV9 (ASF, AVI), MPEG-2 (MPG, TS), H.263 (MP4, 3GP, FLV).
  • Audio
    MP3, AAC, Vorbis/OGG, MIDI, PCM/WAV, WMA, FLAC, AC.
  • Images
    JPEG, GIF, PNG, BMP ಇನ್ನೂ ಇತರೆ ಪಾರ್ಮಾಟ್ ಗಳನ್ನು ಬೆಂಬಲಿಸುತ್ತದೆ.
ವೈಪೈನಿಂದಲೂ ಚಾಲೂ ಮಾಡಬಹುದಾಗಿದ್ದು. ಡಿವಿಆರ್ ಬಾಕ್ಸ್ ನಿಂದ ಒಂದು ಬಟನ್ ಕ್ಲಿಕ್ಕಿಸಿ ರೆರ್ಕಾಡ್ ಮಾಡಬಹುದು.
ಹೆಚ್ಚಿನ ವಿವರಗಳಿಗೆ ಜಾಲತಾಣ: http://www.google.com/tv ನೋಡಬಹುದು.
ಸೋನಿ ಕಂಪೆನಿ ನಿರ್ಮಿತ ಗೂಗಲ್ ಟಿವಿಯನ್ನು ಅಂರ್ತಜಾಲದ ಮೂಲಕ ಖರೀದಿಸಲು. http://goo.gl/ndTg2
ಲಾಜಿಟೆಕ್ ರೆವ್ಯೂ ಸೆಟ್‌ಟಾಪ್ ಪೆಟ್ಟಿಗೆ ಅಂರ್ತಜಾಲದ ಮೂಲಕ ಖರೀದಿಸಲು: http://goo.gl/pBfwZ

ಯಾವ ಆಸ್ಪತ್ರೆ ಅಗ್ಗ?

ಆರೋಗ್ಯ ವಿಮೆ ಹೊಂದಿರುವ ಅಮೆರಿಕನ್ನರು ಆಸ್ಪತ್ರೆ ಶುಲ್ಕದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಡಿಮೆ.ಆದರೀಗ ನಿಧಾನವಾಗಿ ಆ ಪರಿಪಾಠ ಬದಲಾಗುತ್ತಿದೆ. ಉದ್ಯೋಗದಾತರು ತಮ್ಮ ನೌಕರರ ಆರೋಗ್ಯ ವಿಮಾ ಸೌಲಭ್ಯವನ್ನು ಹಿಂದೆಗೆದು ಕೊಳ್ಳುತ್ತಿರುವುದರೊಂದಿಗೆ,  ನೌಕರರು ಸ್ವತ: ವಿಮೆ ಮಾಡಿಸಬೇಕಿದೆ. ಆದುದರಿಂದ ಹಣ ನೀಡದೇ, ಆಸ್ಪತ್ರೆವಾಸ ಅನುಭವಿಸುವ ದಿನಗಳು ಇನ್ನು ಮುಂದೆಯೂ ಸಿಗದಿರಬಹುದು. ಕಿಸೆಯಿಂದ ತೆತ್ತು ಚಿಕಿತ್ಸೆ ಪಡೆಯುವಾಗ, ಕಡಿಮೆ ದರದಲ್ಲಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆ ಅಥವಾ ವೈದ್ಯರ ಹುಡುಕಾಟ ಅಗತ್ಯವಿದೆ.http://www.castlighthealth.comಅಂತಹ ಅಂತರ್ಜಾಲ ತಾಣಗಳು ಆರೋಗ್ಯ ಸೇವೆಯಲ್ಲಿ ಪಾರದರ್ಶಕತೆಯನ್ನು ತರಲು ಶ್ರಮಿಸುತ್ತಿವೆ. ಶಸ್ತ್ರಕ್ರಿಯೆಗೆ ವಿವಿಧ ಆಸ್ಪತ್ರೆಗಳಲ್ಲಿ ವಿಧಿಸಲಾಗುವ ದರವನ್ನು ಹೋಲಿಸಿ, ರೋಗಿಗೆ ಅನುಕೂಲ ಕಲ್ಪಿಸುವುದು ಇವರ ಕಾರ್ಯತಂತ್ರ. ವಿಮಾ ಕಂಪೆನಿಗಳು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿವಿಧ ಚಿಕಿತ್ಸೆಗಳಿಗೆ ತಮ್ಮದೇ ದರ ನಿಗದಿ ಪಡಿಸುವ ಪದ್ಧತಿ ಸದ್ಯ ಚಾಲ್ತಿಯಲ್ಲಿದೆ. ಹಾಗಾಗಿ ಚಿಕಿತ್ಸೆಯ ನಿಜವಾದ ದರ ಎಷ್ಟು ಎನ್ನುವುದು ಗುಪ್ತವಾಗಿರುವುದು ಸದ್ಯದ ರೂಢಿ. ನೌಕರರಿಗೆ ಚಿಕಿತ್ಸೆ ಬೇಕಾದಾಗ, ದರ ಪಟ್ಟಿ ಆಧರಿಸಿದ ಪರಿಹಾರವನ್ನು ಉದ್ಯೋಗದಾತರು ನೀಡುತ್ತಾರೆ. ದುಬಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಯಸುವವರು ಹೆಚ್ಚಿನ ಹಣವನ್ನು ಸ್ವಂತವಾಗಿ ಭರಿಸುವುದು ಅನಿವಾರ್ಯ.

ವಿಪ್ರೋ ಮಿಷನ್10ಎಕ್ಸ್

ಐಟಿ ದಿಗ್ಗಜ ವಿಪ್ರೋ ಟೆಕ್ನಾಲಜಿಯ ಮಿಷನ್10ಎಕ್ಸ್ ಎನ್ನುವ ಕಾರ್ಯಕ್ರಮವು ದೇಶದ ತಾಂತ್ರಿಕ ಕಾಲೇಜುಗಳ ಶಿಕ್ಷಕರಿಗೆ ತರಗತಿಗಳಲ್ಲಿ ಹೊಸತನ ತುಂಬುವುದು ಹೇಗೆಂದು ತರಬೇತಿ ನೀಡುವ ಕಾರ್ಯಕ್ರಮ. ಶಿಕ್ಷಕರು ಬರೇ ಮಾತಿನ ಮೂಲಕ ತರಗತಿಗಳಲ್ಲಿ ಏಕತಾನತೆ ಹುಟ್ಟಿಸದೆ, ನಾವೀನ್ಯತೆ ತರಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿದೆ. ಶಿಕ್ಷಕರ ತರಬೇತಿಯನ್ನು ನೀಡಿ ತಯಾರು ಮಾಡುವ ಪಣ ತೊಟ್ಟಿದೆ. ಅತ್ಯುತ್ತಮ ಇಡ್ಲಿ-ಸಾಂಬಾರ್ ಅನ್ನ ಯಾರಿಗಾದರೂ ದಿನಕ್ಕೆ ಮೂರು ಬಾರಿ ಬಡಿಸಿದರೆ, ಅದು ಕೆಲವೇ ದಿನದಲ್ಲಿ ಬೋರು ಹುಟ್ಟಿಸುವಂತೆ, ಬೋಧನೆಯಲ್ಲಿ ಏಕತಾನತೆ ಇದ್ದರೆ, ಅದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸದಿರಬಹುದು ಎಂಬಂತಹ ಉಪಮಾನಗಳ ಮೂಲಕ, ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ, ಕಲಿಸುವ ಪ್ರಯತ್ನ ನಡೆಸಲು ಶಿಕ್ಷಕರನ್ನು ಪ್ರಚೋದಿಸುತ್ತಿದೆ. ವಿವಿಧ ವಿಷಯಗಳ ಬಗ್ಗೆ ಪ್ರಯೋಗಗಳನ್ನು ನಡೆಸಲು, ಪ್ರಾಜೆಕ್ಟ್‌ಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ನೀಡುವ ಶೈಕ್ಷಣಿಕ ಕಲಿಕಾ ಕಿಟ್ ಒಂದರ ಮಾದರಿಯನ್ನೂ ಮಿಷನ್10ಎಕ್ಸ್ ಅಡಿ ಸಿದ್ಧ ಪಡಿಸಲಾಗಿದೆ. ಯೋಜನೆಯ ವಿವರಗಳಿಗೆ http://www.mission10x.com ನೋಡಿ.

ಶುಭ ಸಮಾರಂಭಗಳಿಗೊಂದು ಅರ್ತಾಜಾಲ ತಾಣ

ನಿಮ್ಮ ಯಾವುದೇ ರೀತಿಯ ಶುಭ ಸಮಾರಂಭಗಳು ಹಾಗೂ ಇನ್ಯಾವುದೇ ರೀತಿಯ ಆಹ್ವಾನ ಪತ್ರಿಕೆಗಳನ್ನು ನಿಮ್ಮದೇ ರೀತಿಯ ವರ್ಣರಂಜಿತ ಉಚಿತ ಅರ್ತಾಜಾಲ ತಾಣವನ್ನು ರಚಿಸಿ ನಿಮ್ಮ ಸ್ನೇಹಿತರು, ಬಂಧು-ಬಳಗಕ್ಕೆ ನಿಮ್ಮ ಮಿಂಚಂಚೆ ಮುಖಾಂತರ  ಕಳುಹಿಸಲು ಈ ತಾಣಕ್ಕೆ ಬೇಟಿಕೊಡಬಹುದು.http://www.mywedding.com

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ. ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲನ್ನು ತಿಳಿದುಕೊಂಡು, ಆತನ ಮರಣಾನಂತರ, ಆತನ ಅಂತಿಮ ಅಭಿಲಾಷೆಯನ್ನು ನೆರವೇರಿಸಿಕೊಡಲು ಸಹಾಯ ಮಾಡುತ್ತವೆ. ಡಿಜಿಟಲ್ ಉಯಿಲು ಮುಖ್ಯವಾಗಿ, ವ್ಯಕ್ತಿಯ ಅಂತರ್ಜಾಲದ ಬದುಕಿನ ಬಗ್ಗೆ ಇರುತ್ತದೆ. ಆತನ ಮಿಂಚಂಚೆ ಖಾತೆಗಳು, ಫೇಸ್‌ಬುಕ್, ಟ್ವಿಟರ್ ಅಂತಹ ಖಾತೆಗಳು, ಆತನ ಬ್ಲಾಗುಗಳು ಇವನ್ನು ಮರಣಾನಂತರ ಹೇಗೆ ನಿರ್ವಹಿಸಬೇಕೆನ್ನುವುದು ವ್ಯಕ್ತಿಯ ಅಂತಿಮ ಆಸೆ ಎನ್ನುವುದನ್ನು ತಿಳಿದುಕೊಂಡು, ಆ ಪ್ರಕಾರ ಕ್ರಮ ತೆಗೆದುಕೊಳ್ಳಲು ಈ ಅಂತರ್ಜಾಲ ತಾಣಗಳು ಸಹಾಯ ಮಾಡುತ್ತವೆ. ಸತ್ತ ನಂತರವೂ ಖಾತೆಗಳು ಚಾಲೂ ಇರುವುದು, ಆಭಾಸಕ್ಕೆ ದಾರಿ ಮಾಡಿಕೊಡುವುದನ್ನು ತಡೆಯಲು ಈ ಕ್ರಮ ಸಹಾಯ ಮಾಡುತ್ತದೆ. ವ್ಯಕ್ತಿ ಬಯಸಿದರೆ, ಆತನ ಮಿಂಚಂಚೆ ಸಂಪರ್ಕಗಳಿಗೆ, ಆತನ ಮರಣದ ಬಗ್ಗೆ ತಿಳಿಸುವುದು, ಬ್ಲಾಗ್-ಸಾಮಾಜಿಕ ಜಾಲತಾಣಗಳ ಆತನ ಸ್ನೇಹಿತರಿಗೆ ವ್ಯಕ್ತಿಯ ಅಂತ್ಯದ ಬಗ್ಗೆ ತಿಳಿಸುವುದೇ ಮುಂತಾದ ಅಗತ್ಯ ಕ್ರಮಗಳನ್ನು ಈ ತಾಣಗಳು ತೆಗೆದುಕೊಳ್ಳುತ್ತವೆ. ಬಯಸಿದರೆ, ಖಾತೆಗಳನ್ನು ಅಮಾನತುಗೊಳಿಸಲೂ ಸಾಧ್ಯ. ಈ ಸೇವೆಯು ಉಚಿತವಾಗಿ ಲಭ್ಯವಿದೆ. ಈ ಸೇವೆಯಲ್ಲಿ ಹತ್ತು ಖಾತೆಗಳನ್ನು ಅಮಾನತು ಮಾಡುವ ಸೇವೆಯಷ್ಟೇ ಸಿಗುತ್ತದೆ. ಆದರೆ ಮುನ್ನೂರು ಡಾಲರು ತೆತ್ತರೆ, ಬಯಸಿದ ಸೇವೆಯನ್ನು ನೀಡಲಾಗುತ್ತದೆ. http://legacylocker.com

Tuesday, May 8, 2012

3D ಮುದ್ರಕ

Cubify 3D ಮುದ್ರಕ ಈಗ ಸುಮಾರು 70,000 ಸಾವಿರ ರೂಗಳ ಪೂರ್ವ ಆದೇಶಕ್ಕೆ ಲಭ್ಯವಿದೆ. ಈ 3D ಮುದ್ರಕ ಅಪ್ ವ್ಯಾಸದಲ್ಲಿ 5.5 ಇಂಚು (14cm) ಸಿಂಗಲ್ ಬಣ್ಣ ಪ್ಲಾಸ್ಟಿಕ್ ವಸ್ತುಗಳು ಮುದ್ರಿಸುತ್ತದೆ. ಪ್ರತಿ ಖರೀದಿ ಒಂದು ಪ್ರಿಂಟರ್ ಮತ್ತು ಒಂದು ನಿಯಾನ್ ಹಸಿರು ವಸ್ತುಗಳನ್ನು ನಳಿಗೆಯನ್ನು ಸಜ್ಜುಗೊಂಡ ಬರುತ್ತದೆ. ಈ ಮುದ್ರಕವನ್ನು ವೈಪೈ ಮೂಲಕವೂ ಮುದ್ರಿಸಲು ಅನುಕೂಲಿಸುತ್ತದೆ.  ಜೊತೆಗೆ ತ್ರಿಡಿ ಮುದ್ರಿಸಬಲ್ಲ 25 ವಿನ್ಯಾಸಗಳನ್ನು ಉಚಿತವಾಗಿ ಕೊಡಲಾಗುತ್ತದೆ. ತ್ರಿಡಿ ಆಟಿಕೆ ವಿನ್ಯಾಸಗಳನ್ನು ಸೃಷ್ಟಿಸಲು ತಂತ್ರಾಂಶಗಳು ಸಹ ಜಾಲತಾಣದಲ್ಲಿ ಲಭ್ಯವಿದೆ. ನೀವು ವಿವಿಧ ಬಣ್ಣಗಳ ಹೆಚ್ಚುವರಿ ಕಾರ್ಟ್ರಿಜ್ಗಳನ್ನು ಸುಮಾರು 2500 ರೂಗಳಂತೆ ಖರೀದಿ ಆದೇಶ ಮಾಡಬಹುದು. ಮನೆಗೆ ಒಂದು 3D ಮುದ್ರಕ ಎಂಬ ಧ್ಯೇಯ ವಾಕ್ಯದೊಂದಿಗೆ Cubify 3D ಮುದ್ರಕ ಮೇ 25, 2012 ರಂದು ಬಿಡುಗಡೆ ಆಗುತ್ತದೆ. ಪ್ರೀ ಆರ್ಡರ್ ಆಗಿ ಬುಕಿಂಗ್ ಮಾಡುವ ವ್ಯವಸ್ಥೆ ಜಾಲತಾಣದಲ್ಲಿ ಲಭ್ಯವಿದೆ. ಜಾಲತಾಣ ವಿಳಾಸ ಕೊಂಡಿ: http://cubify.com

ಕನ್ನಡದಲ್ಲಿ ಪಾಡುಕಾಸ್ಟು

ಕನ್ನಡದ ಪಾಡುಕಾಸ್ಟು ಸ್ಯಾಟ್ ಲೈಟ್ ನಿಂದ ಸೈಕಲ್ ಪಂಚರ್ ನ ವರೆಗೆ ಎಂಬ ಘೋಷವಾಕ್ಯದಲ್ಲಿ ಮೊದಲುಗೊಂಡು. ಈಗ ಬ್ರಾಡ್‌ಬ್ಯಾಂಡ್ ತ್ರಿ.ಜಿ, ಪೋರ್.ಜಿ ಎಂಬ ಸೌಲಭ್ಯ ದೇಶದ ಮೂಲೆ ಮೂಲೆಗೂ ಹಬ್ಬಿದ್ದು, ಧ್ವನಿ, ವಿಡಿಯೋ, ಚಿತ್ರಗಳನ್ನು ಅಂತರ್ಜಾಲ ತಾಣಗಳಲ್ಲಿ ಸಮರ್ಥವಾಗಿ ಬಳಸುವ ಪ್ರಯತ್ನಗಳು ಹೆಚ್ಚುತ್ತಿವೆ.ಅಂತರ್ಜಾಲದಲ್ಲಿ ತಮ್ಮ ಅನಿಸಿಕೆಗಳನ್ನು ಬರೆದು ತಿಳಿಸುವ ಬ್ಲಾಗ್ ಮಾಧ್ಯಮ ಬಹು ಜನಪ್ರಿಯ. ಜತೆಗೆ ಸಂಭಾಷಣೆ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನಗಳು ಇಂಗ್ಲೀಷಿನಲ್ಲಿ ಹೆಚ್ಚೆಚ್ಚು ನಡೆದಿವೆ. ಈಗ ಕನ್ನಡದಲ್ಲೂ ಅಂತಹ ಪಾಡುಕಾಸ್ಟ್ ಲಭ್ಯವಿದೆ. ಅನಿವಾಸಿ ಕನ್ನಡಿಗ ಸುದರ್ಶನ್ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಕನ್ನಡದ ಬರಹಗಾರ ಮತ್ತು ಸಿನೆಮಾ ನಿರ್ಮಾಪಕ. ಇವರು ಸುಮಾರು ಹದಿನಾಲ್ಕು ಪಾಡುಕಾಸ್ಟಗಳನ್ನು ಅಂತರ್ಜಾಲ ತಾಣದ ಮೂಲಕ ಲಭ್ಯವಾಗಿಸಿದ್ದಾರೆ. ಚಿತ್ರಗೀತೆಗಳಿಂದ ತೊಡಗಿ, ಆಯೋಗದ ವರದಿಗಳ ಬಗೆಗಿನ ವಿವಿಧ ಸುದ್ದಿಗಳ ಬಗ್ಗೆ ಹರಟೆ ನಸುನಗೆ ಮೂಡಿಸಲು ಯಶಸ್ವಿಯಾಗಿದೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ನೆನಪಿಸುವ ಈ ಧ್ವನಿಕಡತವನ್ನು ಆಲಿಸಲು ಕಂಪ್ಯೂಟರಿನಲ್ಲಿರುವ ಮೀಡಿಯಾಪ್ಲೇಯರ್ ಅಂತಹ ತಂತ್ರಾಂಶ ಬೇಕಾಗುತ್ತದೆ. http://paaducastu.wordpress.com

ದೂರವಾಣಿ ಸಂಖ್ಯೆಯನ್ನು ಶಬ್ದವಾಗಿಸಿ

ದೂರವಾಣಿ ಸಂಖ್ಯೆಯನ್ನು ನೆನಪಿಡುವುದು ತ್ರಾಸದಾಯಕ.ಆದರೀಗ ಸೆಲ್‌ಪೋನ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವ ಕೆಲಸ ಮಾಡುವುದರಿಂದ, ನಮ್ಮ ಕೆಲಸ ಸಲೀಸಾಗಿದೆ. ಆದರೂ ತುರ್ತಿನ ಸಂದರ್ಭದಲ್ಲಿ ಕೆಲವು ಸಂಖ್ಯೆಗಳನ್ನಾದರೂ ನೆನಪಿನಲ್ಲಿಟ್ಟುಕೊಳ್ಳುವುದು ಕ್ಷೇಮ. ಸೆಲ್‌ಫೋನ್ ಕಳೆದುಹೋದಾಗ ಅಥವಾ ಕೈಕೊಟ್ಟಾಗ ತುರ್ತಾಗಿ ಕರೆ ಮಾಡಲು ಕೆಲವು ಸಂಖ್ಯೆಗಳಾದರೂ ನೆನಪಿನಲ್ಲಿದ್ದರೆ ಒಳ್ಳೆಯದು. ದೂರವಾಣಿ ಸಂಖ್ಯೆಗಳನ್ನು ಶಬ್ದಗಳಿಗೆ ಬದಲಿಸಿ, ನೆನಪಿನಲ್ಲಿಡುವ ಕ್ರಮವನ್ನು ಬಳಸುವುದು ಒಂದು ಪರಿಹಾರ. ಈ ರೀತಿ ನೀವು ನೀಡುವ ಸಂಖ್ಯೆಯನ್ನು ಶಬ್ದವಾಗಿ ಬದಲಿಸಿಕೊಡುವ ಕೆಲಸವನ್ನು ಮಾಡುವ ಅಂತರ್ಜಾಲ ತಾಣಗಳಿವೆ.www.dialabc.com, www.phonetic.com, www.phonespell.com ಇವೆಲ್ಲಾ ಅಂತಹ ಸೇವೆ ಒದಗಿಸುವ ತಾಣಗಳು. ಹಾಗೆಯೇ ನಿಮಗೆ ದೂರವಾಣಿ ಸಂಖ್ಯೆಯನ್ನು ಆರಿಸಿಕೊಳ್ಳುವಾಗ, ನಿಮ್ಮ ಹೆಸರಿನ ಅಥವಾ ಇನ್ಯಾವುದೇ ಶಬ್ದಕ್ಕೆ ನಿಕಟವಾದ ಸಂಖ್ಯೆಯನ್ನು ಕಂಡುಹಿಡಿಯಲು ಈ ಸೇವೆಗಳನ್ನು ಬಳಸಬಹುದು.

Saturday, May 5, 2012

ವೈದ್ಯ ಸಲಹೆಗೆ ಆನ್‌ಲೈನ್ ಸಹಾಯ

ಹೋಮಿಯೋಪತಿ ಪದ್ಧತಿಯಲ್ಲಿ ವೈದ್ಯ ಸಲಹೆಗೆ ಬಹಳ ಸಮಯ ಹಿಡಿಸುತ್ತದೆ. ರೋಗಿಯ ವ್ಯಕ್ತಿತ್ವವನ್ನು ಅರಿತು, ಆತನಿಗೆ ಸರಿಹೊಂದುವ ಚಿಕಿತ್ಸೆಯನ್ನು ನೀಡಬೇಕಾಗುವುದರಿಂದ, ಮೊದಲ ಭೇಟಿಯಲ್ಲಿ ವೈದ್ಯರು ಬಹಳಷ್ಟು ಪ್ರಶ್ನೆಗಳನ್ನು ರೋಗಿಗೆ ಕೇಳುತ್ತಾರೆ. ಆದರೆ ವೈದ್ಯ ಭೇಟಿಗೆ ಹಲವರು ಕಾದಿರುವಾಗ, ವಿಸ್ತೃತ ಮಾತುಕತೆ ನಡೆಸಲೂ ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಆನ್‌ಲೈನ್ ಸಹಾಯ ಪಡೆಯುವುದು ಈಗಿನ ಶೈಲಿ. ವೈದ್ಯರು ತಮ್ಮ ಅಂತರ್ಜಾಲತಾಣದಲ್ಲಿ ವೈದ್ಯ ಸಲಹೆ ಪುಟವನ್ನು ಒದಗಿಸಿ, ರೋಗಿಯು ತನ್ನ ವಿವರವನ್ನು ಲಿಖಿತವಾಗಿ ನೀಡಲು ಅನುಕೂಲ ಕಲ್ಪಿಸುವುದಿದೆ. ವೈದ್ಯರ ಭೇಟಿಗೆ ವೇಳೆ ಗೊತ್ತು ಪಡಿಸಿ ಭೇಟಿ ನೀಡಿದಾಗ, ರೋಗಿಯ ಲಿಖಿತ ವಿವರಗಳನ್ನು ನೋಡಿ, ಸಲಹೆ ನೀಡಲು ವೈದ್ಯರಿಗೆ ಸಾಧ್ಯವಾಗುತ್ತದೆ. ಮಂಗಳೂರಿನ ಹೋಮಿಯೋಪಥಿ ವೈದ್ಯ ಡಾ.ಪ್ರಸನ್ನಕುಮಾರ್ ಅವರ ಅಂತರ್ಜಾಲತಾಣದಲ್ಲೂ ಇದಕ್ಕೆ ಅವಕಾಶ ಕಲ್ಪಿಸಿದ್ದಾರೆ.ಇಲ್ಲಿ ವ್ಯಕ್ತಿಯ ನಿದ್ದೆ, ಹಸಿವು, ಶೌಚ ಅಭ್ಯಾಸ, ಬೆವರುವಿಕೆ ಇಂತವುಗಳ ಬಗ್ಗೆ ತಿಳಿದುಕೊಳ್ಳಲು ವಿವರವಾದ ಪ್ರಶ್ನೆಗಳನ್ನು ನೀಡಲಾಗಿದೆ. ಆನ್‌ಲೈನಿನಲ್ಲಿ ಉತ್ತರಿಸುವಾಗ, ವ್ಯಕ್ತಿಯು ತನ್ನ ಅರಿವಿಗೆ ಬಾರದ ವಿಷಯಗಳನ್ನು ಗಮನಿಸಿಕೊಂಡು ಉತ್ತರಿಸಲು ಸಾಧ್ಯವಾಗುತ್ತದೆ. ಅದೇ ರೀತಿ ವೈದ್ಯರಿಗೂ, ಅದನ್ನು ಸರಿಯಾಗಿ ತಿಳಿದು, ನಿರ್ಧಾರಕ್ಕೆ ಬರಲು ಸಮಯ ಸಿಗುತ್ತದೆ. ವಿವಿಧ ವಿಷಯಗಳ ಬಗ್ಗೆ ತಮ್ಮ ಬರಹಗಳನ್ನು ಒದಗಿಸಿ, ಜನರಲ್ಲಿ ಅರಿವು ಮೂಡಿಸಲೂ ಸಾಧ್ಯವಾಗುತ್ತದೆ. http://doctorprasanna.com

ಅಂತರ್ಜಾಲದ ಕಡತ ಖಜಾನೆ

ಅಂತರ್ಜಾಲದಲ್ಲಿ ವಿವಿಧ ನಮೂನೆಯ ಕಡತಗಳನ್ನು ಪೇರಿಸಿಡಲು ಅವಕಾಶ ನೀಡುವ ತಾಣಗಳು ಹಲವಿವೆ. ಅವುಗಳಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ತಾಣವೆಂದರೆ  ಸ್ಕ್ರಿಬ್ಡ್.ಕಾಮ್ ಜಾಲತಾಣ ಇಲ್ಲಿ ಜನರು ತಮ್ಮ ಕಡತಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಅವಕಾಶವೂ ಇರುವುದರಿಂದ ವಿವಿಧ ಬಗೆಯ ಮಾಹಿತಿಗಳನ್ನು ಹೊತ್ತ ಕಡತಗಳನ್ನು ಇಲ್ಲಿಂದ ಇಳಿಸಿಕೊಳ್ಳಲೂ ಸಾಧ್ಯ. ಪುಸ್ತಕಗಳ ಇ-ಪ್ರತಿಗಳು, ವಿವಿಧ ವಿಷಯಗಳ ಬಗ್ಗೆ ಪವರ್ ಪಾಯಿಂಟ್ ಸ್ಲೈಡುಗಳು ಹಾಗೂ ಪಿ.ಡಿ.ಎಫ್ ಕಡತಗಳು ಇಲ್ಲಿ ಸಿಗುತ್ತವೆ. ಹೆಚ್ಚು ಜನರು ಡೌನ್‌ಲೋಡ್ ಮಾಡಿಕೊಳ್ಳುತ್ತಿರುವ ಕಡತಗಳ ಪಟ್ಟಿ ಇಲ್ಲಿ ಲಭ್ಯವಿರುವುದರಿಂದ, ಉತ್ತಮ ಕಡತಗಳನ್ನು ಆಯ್ದುಕೊಳ್ಳುವುದಿಲ್ಲಿ ಬಹು ಸುಲಭ. ಹಣ ಪಾವತಿ ಮಾಡಿ ಉಪಯೋಗಿಸಬಹುದಾದ ಕಡತಗಳೂ ಇಲ್ಲಿವೆ. ಜಾಲತಾಣ ವಿಳಾಸ ಕೊಂಡಿ.  www.scribd.com.

Thursday, May 3, 2012

SMS ,Email ಮೂಲಕ ನಿಮ್ಮ ಕಂಪ್ಯೂಟರನ್ನು ಬಂದ್ ಮಾಡಿ!

ಕಚೇರಿಯಿಂದ ಯಾವುದೋ ಕಾರಣಕ್ಕೆ ಹೊರಬಂದು ಮಳೆಗೆ ಸಿಕ್ಕಿ ಹಾಕಿಕೊಂಡು ಮತ್ತೆ ಕಚೇರಿಗೆ ಹೋಗಲಾಗುತ್ತಿಲ್ಲವೇ? ಕಚೇರಿಯ ಕಂಪ್ಯೂಟರನ್ನು ಬಂದು ಮಾಡಿಲ್ಲವೇ? ಕಚೇರಿಗೆ ಕರೆ ಮಾಡಿದರೆ,  ನಿಮ್ಮ ಅಕ್ಕಪಕ್ಕ ಕುಳಿತುಕೊಳ್ಳುವವರೂ ಕಚೇರಿ ಬಿಟ್ಟಿದ್ದಾರೆಯೇ? ನಿಮ್ಮ ಕಂಪ್ಯೂಟರನ್ನು SMS ಅಥವಾ Email ಕಳುಹಿಸಿ ಬಂದು ಮಾಡಲಾಗುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ಇದು ಸಾಧ್ಯ. ಅದರೆ ಅದಕ್ಕೆ tweetmyPC ಅನ್ನು ನಿಮ್ಮ ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಂಡಿರಬೇಕಾಗುತ್ತದೆ. ಟ್ವೀಟ್‌ಮೈಪಿಸಿ ತಾಣದಲ್ಲಿ ಲಭ್ಯವಿದೆ. ನೀವು Gmail mail ID ಮತ್ತು Twitter ಖಾತೆಯನ್ನೂ ಹೊಂದಿರಬೇಕಾಗುತ್ತದೆ. ಟ್ವೀಟ್‌ಮೈಪಿಸಿ ತಂತ್ರಾಂಶವನ್ನು ಅನುಸ್ಥಾಪಿಸಿದ ಬಳಿಕ, ನಿಮ್ಮ Twitter ಮತ್ತು Gmail ಖಾತೆಗಳ ವಿವರಗಳನ್ನೂ ಕೇಳುತ್ತದೆ. ನಿಮಗೆ ಕಂಪ್ಯೂಟರನ್ನು ಬಂದು ಮಾಡಬೇಕಿದ್ದರೆ twitter@posterous.com ವಿಳಾಸಕ್ಕೆ ಮಿಂಚಂಚೆ ಕಳುಹಿಸಿ. ನಿಮ್ಮ ಟ್ವಿಟರ್ ಖಾತೆಯ ಮೂಲಕ ಸಂದೇಶ ಕಂಪ್ಯೂಟರನ್ನು ತಲುಪಿ, ಕಂಪ್ಯೂಟರನ್ನು ಬಂದು ಮಾಡುತ್ತದೆ. ನಿಮ್ಮ ಟ್ವಿಟರ್ ಖಾತೆಗೆ Turnoff, Log Off, Lock ಮುಂತಾದ ಸಂದೇಶ ಕಳುಹಿಸಿದರೂ, ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿದ ತಂತ್ರಾಂಶ, ಟ್ವಿಟರ್ ಸಂದೇಶದ ಮೇಲೆ ಅನವರತ ಕಣ್ಣಿರಿಸುವ ಮೂಲಕ ಸಂದೇಶ ಬಂದೊಡನೆ ಅದರನುಸಾರ ನೀವು ನೀಡಿದ ಸಂದೇಶದಂತೆ ಕೆಲಸ ಮಾಡುತ್ತದೆ.SMS ಮೂಲಕವೂ Twitter ಸಂದೇಶ ಕಳುಹಿಸುವ ಅನುಕೂಲ ಇರುವ ಕಾರಣ SMS ಮೂಲಕವೂ ಕಂಪ್ಯೂಟರನ್ನು ನಿಯಂತ್ರಿಸಬಹುದು. ಅಂದ ಹಾಗೆ ಕಂಪ್ಯೂಟರಿನ ಸ್ಥಿತಿಯ ಬಗ್ಗೆ ನಿಮಗೆ ಮಿಚಂಚೆಯನ್ನೂ ಟ್ವೀಟ್‌ಮೈಪಿಸಿ ತಂತ್ರಾಂಶ ಕಳುಹಿಸುತ್ತದೆ. ಜಾಲತಾಣ ವಿಳಾಸ: http://tweetmypc.codeplex.com

ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ

www.pressdisplay.com  ನಲ್ಲಿ ವಿಶ್ವದ ನೂರಾರು ಪತ್ರಿಕೆಗಳ ಇ-ಪತ್ರಿಕೆ ಲಭ್ಯವಿದೆ. ಇಲ್ಲಿ ನೋಂದಾಯಿಸಿಕೊಂಡರೆ, ಸೀಮಿತ ಅವಧಿಗೆ ಉಚಿತ ಪ್ರಯೋಗಾರ್ಥ ಸೇವೆ ಲಭ್ಯವಿದೆ. ನಂತರ ಹಣ ಪಾವತಿಸಿ ಚಂದಾದಾರರಾಗಬಹುದು.ಸದ್ಯ ಕನ್ನಡಪತ್ರಿಕೆಗಳ ಪೈಕಿ "ಉದಯವಾಣಿ", ಕನ್ನಡಪ್ರಭ, ವಾರ್ತಾಭಾರತಿ ಮಾತ್ರ ಲಭ್ಯವಿದೆ. ವಿದೇಶಗಳ ಪತ್ರಿಕೆಗಳೂ ಇಲ್ಲಿ ಲಭ್ಯವಿದೆ. ದೇಶಾವಾರು ರೀತ್ಯ ಪತ್ರಿಕೆಗಳನ್ನು ವಿಭಾಗಿಸಿಟ್ಟಿರುವುದರಿಂದ ಪತ್ರಿಕೆಗಳನ್ನು ಹುಡುಕುವುದು ಸುಲಭ.

Wednesday, May 2, 2012

ಮನರಂಜನೆಯ ಜತೆ ಮಾರ್ಕೆಟಿಂಗ್

ಸೆಕೆಂಡ್‌ಲೈಫ್ ಅಂತರ್ಜಾಲ ತಾಣ ಮಿಥ್ಯಾಪ್ರಪಂಚದ ಅನುಭವ ನೀಡುವ ಮೂಲಕ ವಿಶಿಷ್ಟವಾಗಿವೆ. ಈ ತಾಣಗಳು ಮನರಂಜನೆಗೆಂದೇ ಬಳಸಲ್ಪಡುವುದು ಹೆಚ್ಚು. ಈ ಮೂಲಕವೇ ಜನಪ್ರಿಯವಾಗಿರುವ ಕಾರಣ, ಈ ತಾಣ ದೊಡ್ದ ದೊಡ್ಡ ಕಂಪೆನಿಗಳನ್ನೂ ಆಕರ್ಷಿಸುತ್ತವೆ. ಮೂರು ಆಯಾಮದಲ್ಲೂ ಅಂತರ್ಜಾಲ ತಾಣವನ್ನು ರಚಿಸಲು ತಂತ್ರಾಂಶ ತಜ್ಞರ ಅವಶ್ಯಕತೆ ಇದೆ. ಹಾಗಾಗಿ ಸೆಕೆಂಡ್‌ಲೈಫ್ ಅಂತಹ ತಾಣಗಳಿಗೆ ಸೂಕ್ತವಾದ ಅಂತರ್ಜಾಲ ತಾಣಗಳನ್ನು ಅಭಿವೃದ್ಧಿ ಪಡಿಸುವ ಸೇವೆ ನೀಡುವ ಕಂಪೆನಿಗಳೂ ಹುಟ್ಟಿಕೊಂಡಿವೆ. ಸೆಕೆಂಡ್‌ಲೈಫ್ ತಾಣದ ಮೂಲಕ ಸಮಾವೇಶ, ಕಾನ್ಫರೆನ್ಸ್, ತರಗತಿಗಳನ್ನು ನಡೆಸುವುದು ಸಾಧ್ಯ. ಐಬಿಎಂ, ವಿಪ್ರೋ, ಇಂಟೆಲ್ ಅಂತಹ ಕಂಪೆನಿಗಳು ಮಾತ್ರವಲ್ಲದೆ ಪಾರ್ಚೂನ್ ಪಟ್ಟಿಯಲ್ಲಿ ಸೇರಿರುವ ಒಂದು ಸಾವಿರ ಪ್ರತಿಷ್ಠಿತ ಕಂಪೆನಿಗಳೂ ಇಲ್ಲಿ ಕಾಣಿಸಿಕೊಂಡಿವೆ. ಅರ್ಕುಟ್, ಫೇಸ್‌ಬುಕ್‌ಗಳಂತೆ ಸೆಕೆಂಡ್‌ಲೈಫಿನಲ್ಲೂ ಜನ ಸಮುದಾಯಗಳು ಇವೆ. http://secondlife.com

ಆಟದ ಮೂಲಕ ಪಾಠ ಹೇಳುವ ಅರವಿಂದ್ ಗುಪ್ತಾ

ಆಟದ ಮೂಲಕ ಪಾಠ ಹೇಳಿದರೆ, ಮಕ್ಕಳಿಗೆ ಕಲಿಕೆ ಶಿಕ್ಷೆಯಾಗದು ತಾನೇ? ಮಕ್ಕಳು ಸ್ವತ: ಸಣ್ಣ ಸಣ್ಣ ಪ್ರಯೋಗಗಳ ಮೂಲಕ ಕಲಿಯುವಂತಿದ್ದರೆ,ಕಲಿಕೆಯ ಮಜಾವೇ ಬೇರೆ.ಆದರೆ ಈ ಪ್ರಯೋಗಗಳಿಗೆ ದುಬಾರಿ ಪರಿಕರಗಳು ಬೇಕಾದರೆ, ಹೀಗೆ ಕಲಿಯುವುದು ಕನಸಿನ ಮಾತಾದೀತು.ಆದರೆ http://www.arvindguptatoys.com ಅಂತರ್ಜಾಲ ತಾಣವನ್ನು ನೋಡಿದರೆ, ಕಲಿಕೆಗೆ ನೆರವಾಗುವ ಆಟಿಕೆಗಳನ್ನು ತಯಾರಿಸುವುದು ಎಷ್ಟು ಸುಲಭ ಎನ್ನುವುದು ಸ್ಪಷ್ಟವಾದೀತು.
ವಿದ್ಯುತ್,ಮೋಟಾರು-ಜನರೇಟರುಗಳು,ಖಗೋಳ ಶಾಸ್ತ್ರ,ಜೀವಶಾಸ್ತ್ರ,ಗಣಿತ,ಗಾಳಿ ಮತ್ತು ನೀರು,ತಿರುಗುವ ಆಟಿಕೆಗಳು,ಹಾರುವ ಆಟಿಕೆಗಳು,ಕಸದಿಂದ ಆಟಿಕೆಗಳು ಹೀಗೆ ಹಲವಾರು ಗುಂಪಿಗೆ ಸೇರಿದ ಆಟಿಕೆಗಳನ್ನು ಅದು ಹೇಗೆ ಸುಲಭವಾಗಿ ಮತ್ತು ಅಗ್ಗವಾಗಿ ತಯಾರಿಸಬಹುದು ಎನ್ನುವ ವಿವರಗಳನ್ನಿಲ್ಲಿ ಚಿತ್ರ ಸಹಿತವಾಗಿ ನೀಡಲಾಗಿದೆ.ವಿವರಣೆಯೂ ಇದೆ. ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲು ಸುಲಭವಾಗಿಸುವ ತಂತ್ರಗಳು ಇಲ್ಲಿವೆ.ಹಿರಿ-ಕಿರಿಯರಿಗೆ ಆಸಕ್ತಿ ಹುಟ್ಟಿಸುವ ಪ್ರಯೋಗಗಳನ್ನು ಮಾಡುವ ಸುಲಭ ವಿಧಾನ ಅರವಿಂದ ಗುಪ್ತರ ತಾಣದಲ್ಲಿ ಲಭ್ಯ.
ಐಐಟಿ ಖರಗ್‌ಪುರದಲ್ಲಿ ಇಂಜಿನಿಯರಿಂಗ್ ಡಿಗ್ರಿ ಮುಗಿಸಿದ ಅರವಿಂದ್‌ಗುಪ್ತಾರು ಪುಣೆಯ ಟೆಲ್ಕೋ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.ಜಯಂತ್ ನಾರ್ಳೀಕರ್ ಅವರ ಪ್ರೋತ್ಸಾಹದೊಂದಿಗೆ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಆಟಿಕೆ ತಯಾರಿಸುವುದು ಹೇಗೆನ್ನುವುದರತ್ತ ಚಿಂತಿಸಲು ತೊಡಗಿದ ಅರವಿಂದ್,ಈಗ ಅಂತಹ ನೂರಾರು ಆಟಿಕೆಗಳನ್ನು ಮಾಡುವುದು ಹೇಗೆನ್ನುವುದನ್ನು ಕಂದುಕೊಂಡಿದ್ದಾರೆ.ಹಲವಾರು ಪುಸ್ತಕಗಳನ್ನೂ ಬರೆದಿರುವ ಗುಪ್ತ,ತಮ್ಮ ತಾಣದಲ್ಲಿ ನೂರಾರು ಪುಸ್ತಕಗಳ ಕೊಂಡಿಗಳನ್ನೂ ಹಂಚಿಕೊಂಡಿದ್ದಾರೆ.ಅಗ್ಗದ ಮನೆ ನಿರ್ಮಾಣ ಮಾಡುವ ವಿಧಾನಗಳ ಬಗ್ಗೆ ಲಾರೀ ಬೇಕರ್ ಅವರು ಬರೆದಿರುವ ಪುಸ್ತಕಗಳೂ ಇಲ್ಲಿವೆ.ಇಂಗ್ಲಿಷ್ ಮಾತ್ರವಲ್ಲದೆ,ಮರಾಠಿ ಮತ್ತು ಹಿಂದಿ ಭಾಷೆಯ ಪುಸ್ತಕಗಳ ಕೊಂಡಿಗಳೂ ಇಲ್ಲಿವೆ. ಪುಸ್ತಕಗಳು ಡೌನ್‌ಲೋಡಿಗೂ ಲಭ್ಯ.ಬೇಕೆಂದರೆ ಮನಿ ಆರ್ಡರ್ ಕಳಿಸಿ,ಪುಸ್ತಕಗಳನ್ನು ತರಿಸಿಕೊಳ್ಳಬಹುದು.ಪುಣೆಯಲ್ಲಿ ಆಟಿಕೆ ತಯಾರಿಕಾ ಘಟಕವನ್ನೂ ಗುಪ್ತಾ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಈ ತಾಣದಲ್ಲಿ ಹಲವಾರು ವೀಡಿಯೋಗಳ ಕೊಂಡಿಗಳೂ ಇರುವುದು ಇನ್ನೊಂದು ವಿಶೇಷ.ಆಟಿಕೆಗಳನ್ನು ತಯಾರಿಸುವ ವಿಧಾನವನ್ನು ತೋರಿಸುವ ವಿಡಿಯೋ ಕ್ಲಿಪ್ಪಿಂಗ್‌ಗಳಿಲ್ಲಿ ಧಾರಾಳ ಇವೆ. ಜತೆಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪ್ರಸಿದ್ಧ ವ್ಯಕ್ತಿಗಳ ಅನಿಸಿಕೆ,ಸಾಕ್ಷ್ಯಚಿತ್ರಗಳೂ ಇಲ್ಲಿವೆ. http://www.arvindguptatoys.com