WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, November 2, 2011

ಶೌಚಾಲಯ ಹಂಚಿಕೊಳ್ಳಲು ತಂತ್ರಾಂಶ

 
ಯಾವುದೋ ಒಂದು ನಗರದ ಮಧ್ಯದಲ್ಲಿದ್ದೀರಿ. ಬಾತ್‌ರೂಮ್ ಬಳಸಬೇಕಾಗಿದೆ. ಸ್ವಚ್ಛ ಟಾಯ್‌ಲೆಟ್ ಬೇಕಾಗಿದೆ. ಏನು ಮಾಡುವುದು? ಸುಲಭ್ ಇದೆಯಲ್ಲ ಎನ್ನುತೀರಾ? ಆದರೆ ಸುಲಭ್ ಸ್ವಚ್ಛ ಇರುತ್ತದೆ ಎಂದು ಏನು ಗ್ಯಾರಂಟಿ? ಇಷ್ಟಕ್ಕೂ ಸುಲಭ್ ಇರುವುದು ಭಾರತದಲ್ಲಿ ಮಾತ್ರ. ಅಮೆರಿಕದಲ್ಲಿ? ಹೀಗೆ ಮಾಡಿದರೆ ಹೇಗೆ? ನಿಮ್ಮ ಮನೆಯಲ್ಲಿರುವ ಬಾತ್‌ರೂಮನ್ನೇ ಸ್ವಲ್ಪ ಶುಲ್ಕಕ್ಕೆ ಬಾಡಿಗೆಗೆ ನೀಡಿದರೆ ಹೇಗೆ? ಹೌದು. ಅಂತಹ ಒಂದು ತಂತ್ರಾಂಶ ತಯಾರಾಗಿದೆ. ತಮ್ಮ ಮನೆಯ ಬಾತ್‌ರೂಮನ್ನು ಬಾಡಿಗೆಗೆ ನೀಡಲು ಸಿದ್ಧರಿರುವವರು ಈ ತಂತ್ರಾಂಶ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಾತ್‌ರೂಮ್ ಅಗತ್ಯ ಇರುವವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಇದೇ ತಂತ್ರಾಂಶ ಮೂಲಕ ತಾವಿರುವ ಸ್ಥಳಕ್ಕೆ ಹತ್ತಿರದಲ್ಲಿರುವ ಶೌಚಾಲಯ ಯಜಮಾನರನ್ನು ಸಂಪರ್ಕಿಸಿ ಅವರು ಒಪ್ಪಿದರೆ ಹಣ ನೀಡಿ ಬಾತ್‌ರೂಮ್ ಬಳಸಬಹುದು! ಈ ತಂತ್ರಾಂಶದ ಜಾಲತಾಣ - cloo-app.com

Tuesday, October 18, 2011

ನುಡಿಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವ ವಿಧಾನ

ನುಡಿ(ANSI)ಯಲ್ಲಿ ಬರೆದಿರುವುದನ್ನು ಯೂನಿಕೋಡ್‌ಗೆ ಪರಿವರ್ತಿಸುವುದು ಹೇಗೆಂದು ತುಂಬಾ ಜನರಿಗೆ ಗೊಂದಲಗಳಿವೆ. ಆದರೆ ಬರಹ ತಂತ್ರಾಂಶದ ಜೊತೆ ಬರುವ Baraha Convert ಸಲಕರಣೆಯ ಸಹಾಯದಿಂದ ನುಡಿಯಲ್ಲಿ ಬರೆದಿರುವುದನ್ನು ಸುಲಭವಾಗಿ ಯೂನಿಕೋಡ್‌ಗೆ ಪರಿವರ್ತಿಸಬಹುದು. ಅದಕ್ಕಾಗಿ ಮೊದಲು ಬರಹ ತಂತ್ರಾಂಶವನ್ನು ಇಲ್ಲಿಂದ (http://baraha.com) ಡೌನ್ಲೋಡ್‌ ಮಾಡಿಕೊಂಡು ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿಸಿ (install). (Baraha 7.0 ಆದರೆ ಸುಲಭ)

ಮೊದಲು ನೀವು ನುಡಿಯಲ್ಲಿ ಬರೆದಿರುವುದನ್ನು ಕಾಪಿ ಮಾಡಿಕೊಳ್ಳಿ.
 
ನಂತರ Baraha Convert ಸಲಕರಣೆಯನ್ನು ಚಾಲನೆ ಮಾಡಿ. Start--> All programs--> Baraha--> Baraha convert. (ಬರಹ10.0 ಆದರೆ Start--> All programs--> Baraha Software--> Baraha 10--> Tools--> BarahaConvert)  ಬರಹ ಕನ್ವರ್ಟ್ ಸಲಕರಣೆಯ ಬಲಭಾಗದಲ್ಲಿ ANSI: ಎಂಬ ಕೆಳಗೆ ಬಿಳಿ ಬಣ್ಣದ ಬಾಕ್ಸ್ ಇರುತ್ತದೆ. ಅಲ್ಲಿ ನೀವು ನುಡಿ(ANSI)ಯಲ್ಲಿ ಬರೆದಿರುವುದನ್ನು ಪೇಸ್ಟ್ ಮಾಡಿ, ಮತ್ತು ಅದರ ಪಕ್ಕ BRHCODE ಕಡೆಗೆ ಮುಖಮಾಡಿರುವ ಬಾಣದ ಗುರುತನ್ನು ಒತ್ತಿ.

ಮುಂದೆ BRHCODEನಲ್ಲಿ ಒಂದಿಷ್ಟು ಅಕ್ಷರಗಳು ಬರುತ್ತದೆ. ಆಗ BRHCODEನಿಂದ UNICODE ಕಡೆಗೆ ಮುಖ ಮಾಡಿರುವ ಬಾಣದ ಗುರುತನ್ನು ಒತ್ತಿ.
ಅಲ್ಲಿಗೆ ನೀವು ನುಡಿಯಲ್ಲಿ ಬರೆದಿರುವುದು ಯೂನಿಕೋಡ್‌ಗೆ ಪರಿವರ್ತನೆಯಾಗಿರುತ್ತದೆ. ಅದನ್ನು ನೋಡಲು UNICODE ಪಕ್ಕದಲ್ಲಿರುವ View ಬಟನ್ ಒತ್ತಿ.

ಈಗ ಯೂನಿಕೋಡ್‌ಗೆ ಪರಿವರ್ತನೆಯಾಗಿರುವ ಪಠ್ಯವು ನೋಟ್‌ಪ್ಯಾಡ್‌ನಲ್ಲಿ ಓಪನ್ ಆಗುತ್ತದೆ. ಅದನ್ನು ನೀವು ಸೇವ್ ಮಾಡಿಕೊಳ್ಳಬಹುದು.