| ೧ | ವೇದ | ೩೩ | ಜಲಸ್ತಂಭ |
| ೨ | ವೇದಾಂಗ | ೩೪ | ವಾಯುಸ್ತಂಭ |
| ೩ | ಇತಿಹಾಸ | ೩೫ | ಖಡ್ಗಸ್ತಂಭ |
| ೪ | ಆಗಮ | ೩೬ | ವಶ್ಯಾ |
| ೫ | ನ್ಯಾಯ | ೩೭ | ಆಕರ್ಷಣ |
| ೬ | ಕಾವ್ಯ | ೩೮ | ಮೋಹನ |
| ೭ | ಅಲಂಕಾರ | ೩೯ | ವಿದ್ವೇಷಣ |
| ೮ | ನಾಟಕ | ೪೦ | ಉಚ್ಚಾಟನ |
| ೯ | ಗಾನ | ೪೧ | ಮಾರಣ |
| ೧೦ | ಕವಿತ್ವ | ೪೨ | ಕಾಲವಂಚನ |
| ೧೧ | ಕಾಮಶಾಸ್ತ್ರ | ೪೩ | ವಾಣಿಜ್ಯ |
| ೧೨ | ದೂತನೈಪುಣ್ಯ | ೪೪ | ಪಶುಪಾಲನ |
| ೧೩ | ದೇಶ ಭಾಷಾ ಜ್ಞಾನ | ೪೫ | ಕೃಷಿ |
| ೧೪ | ಲಿಪಿ ಕರ್ಮ | ೪೬ | ಸಮಶರ್ಮ |
| ೧೫ | ವಾಚ | ೪೭ | ಲಾವುಕಯುದ್ಧ |
| ೧೬ | ಸಮಸ್ತಾವಧಾನ | ೪೮ | ಮೃಗಯಾ |
| ೧೭ | ಸ್ವರಪರೀಕ್ಷಾ | ೪೯ | ಪುತಿಕೌಶಲ |
| ೧೮ | ಶಾಸ್ತ್ರಪರೀಕ್ಷಾ | ೫೦ | ದೃಶ್ಯಶರಣಿ |
| ೧೯ | ಶಕುನಪರೀಕ್ಷಾ | ೫೧ | ದ್ಯೂತಕರಣಿ |
| ೨೦ | ಸಾಮುದ್ರಿಕಪರೀಕ್ಷಾ | ೫೨ | ಚಿತ್ರಲೋಹ, ಪಾರ್ಷಾಮೃತ್,ದಾರು ವೇಣು ಚರ್ಮ ಅಂಬರ ಕ್ರಿಯೆ |
| ೨೧ | ರತ್ನಪರೀಕ್ಷಾ | ೫೩ | ಚೌರ್ಯ |
| ೨೨ | ಸ್ವರ್ಣಪರೀಕ್ಷಾ | ೫೪ | ಔಷಧಸಿದ್ಧಿ |
| ೨೩ | ಗಜಲಕ್ಷಣ | ೫೫ | ಮಂತ್ರಸಿದ್ಧಿ |
| ೨೪ | ಅಶ್ವಲಕ್ಷಣ | ೫೬ | ಸ್ವರವಂಚನಾ |
| ೨೫ | ಮಲ್ಲವಿದ್ಯಾ | ೫೭ | ದೃಷ್ಟಿವಂಚನಾ |
| ೨೬ | ಪಾಕಕರ್ಮ | ೫೮ | ಅಂಜನ |
| ೨೭ | ದೋಹಳ | ೫೯ | ಜಲಪ್ಲವನ |
| ೨೮ | ಗಂಧವಾದ | ೬೦ | ವಾಕ್ ಸಿದ್ಧಿ |
| ೨೯ | ಧಾತುವಾದ | ೬೧ | ಘಟಿಕಾ ಸಿದ್ಧಿ |
| ೩೦ | ಖನಿವಾದ | ೬೨ | ಪಾದುಕಾ ಸಿದ್ಧಿ |
| ೩೧ | ರಸವಾದ | ೬೩ | ಇಂದ್ರ ಜಾಲ |
| ೩೨ | ಅಗ್ನಿಸ್ತಂಭ | ೬೪ | ಮಹೇಂದ್ರ ಜಾಲ |
Sunday, April 17, 2011
ಅರವತ್ನಾಲ್ಕು ವಿದ್ಯೆಗಳು
Saturday, April 16, 2011
ದೇಗುಲ ದರ್ಶನ
ಕರ್ನಾಟಕದಲ್ಲಿ ನೂರಾರು ದೇವಸ್ಥಾನಗಳಿವೆ. ಅಲ್ಲಿಗೆ ಭೇಟಿ ನೀಡುವ ಬಯಕೆ ಹಲವರಿಗಿರಬಹುದು. ಯಾವ ದೇವಸ್ಥಾನ ಎಲ್ಲಿದೆ? ಯಾವ ದೇವರ ಬಗ್ಗೆ ದೇವಸ್ಥಾನ ಎಲ್ಲಿದೆ? ಯಾವ ಜಿಲ್ಲೆಯಲ್ಲಿ ಯಾವ ದೇವರ ದೇವಸ್ಥಾನ ಇದೆ? ಈ ದೇವಸ್ಥಾನಗಳಿಗೆ ಹೋಗುವುದು ಹೇಗೆ? ಹತ್ತಿರದ ಬಸ್, ರೈಲು, ವಿಮಾನ ನಿಲ್ದಾಣ ಎಲ್ಲಿವೆ? ಈ ರೀತಿಯ ಹಲವು ಮಾಹಿತಿ ನೀಡುವ ಜಾಲತಾಣ karnatakatemples.com. ಬಹುಶಃ ಕನ್ನಡ ಗೊತ್ತಿಲ್ಲದ ಹೊರ ರಾಜ್ಯ ಮತ್ತು ವಿದೇಶದ ಪ್ರವಾಸಿಗಳನ್ನು ಉದ್ದೇಶಿಸಿ ಈ ಜಾಲತಾಣದಲ್ಲಿಯ ವಿವರಗಳು ಇಂಗ್ಲೀಶಿನಲ್ಲಿವೆ. ಇದೇ ಮಾದರಿಯ ಆದರೆ ಎಲ್ಲ ಮಾಹಿತಿಗಳು ಕನ್ನಡದಲ್ಲಿರುವ ಜಾಲತಾಣ ourtemples.in.
Friday, April 15, 2011
ಆಟೋರಿಕ್ಷ ದೂರುತಾಣ

ಆಟೋರಿಕ್ಷಗಳ ಕಿರಿಕಿರಿ ಯಾರಿಗೆ ಅನುಭವವಾಗಿಲ್ಲ? ಹೇಳಿದ ಜಾಗಕ್ಕೆ ಬರುವುದಿಲ್ಲ, ಮೀಟರ್ ಹಾಕುವುದಿಲ್ಲ, ಹಾಕಿದರೂ ಮೀಟರಿಗೆ ಎರಡು ಪಾಲು ಹಣ ಕೇಳುವುದು -ಹೀಗೆ ಹಲವಾರು ರೀತಿಯಲ್ಲಿ ನಾಗರಿಕರಿಗೆ ತೊಂದರೆ ಕೊಡುವ ಆಟೋರಿಕ್ಷ ಚಾಲಕರು ಬೇಕಾದಷ್ಟು ಮಂದಿ ಇದ್ದಾರೆ. ಪ್ರತಿ ಬಾರಿಯೂ ಸರಕಾರದ ಸೂಕ್ತ ಇಲಾಖೆಗೆ ಹೋಗಿ ದೂರು ಸಲ್ಲಿಸುವುದು ದೊಡ್ಡ ತಲೆನೋವಿನ ಕೆಲಸ. ದೂರು ಸಲ್ಲಿಸಿದರೂ ನಿಮ್ಮ ದೂರಿನ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯುವುದು ಹೇಗೆ? ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಒಂದು ಜಾಲತಾಣವಿದೆ. ಅದುವೇ auto404.org. ಈ ಜಾಲತಾಣದಲ್ಲಿ ಆಟೋರಿಕ್ಷದ ನೋಂದಣಿ ಸಂಖ್ಯೆ, ದಿನಾಂಕ, ಸ್ಥಳ, ದೂರಿನ ವಿವರ ಎಲ್ಲ ದಾಖಲಿಸಬಹುದು. ಆಗಾಗ ನೀವು ಇಲ್ಲಿಗೆ ಭೇಟಿ ನೀಡಿ ನಿಮ್ಮ ದೂರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಯಬಹುದು. ಈ ಜಾಲತಾಣಕ್ಕೆ ಸರಕಾದ ಮಾನ್ಯತೆ ಇದೆ.
Wednesday, April 13, 2011
"ಕಣಜ" ಅಂತರಜಾಲ ಕನ್ನಡ ಜ್ಞಾನಕೋಶ
ಕರ್ನಾಟಕ ಸರಕಾರ ಆರಂಭಿಸಿರುವ ಕನ್ನಡ ಜ್ಞಾನಕೋಶಕ್ಕೆ "ಕಣಜ" ಎಂದು ಹೆಸರಿಡಲಾಗಿದೆ.ಈ ಜ್ಞಾನಕೋಶದ ಅಂತರ್ಜಾಲ ತಾಣವನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು http://kanaja.in/ ವಿಳಾಸದಲ್ಲಿ ಲಭ್ಯವಿದೆ."ಕರ್ನಾಟಕ ಜ್ಞಾನ ಆಯೋಗದ ಪ್ರಯತ್ನದ ಈ ಯೋಜನೆಗೆ ಕರ್ನಾಟಕ ಸರ್ಕಾರವು ಎರಡು ಕೋಟಿ ಅನುದಾನವನ್ನು ನೀಡಿದೆ. ಕನ್ನಡ ವಿಕಿಪೀಡಿಯಾದ ತಾಣವನ್ನು ಹೊಂದಿದೆ, ಈ ತಾಣ ಪ್ರತ್ಯೇಕ ವಿನ್ಯಾಸವನ್ನು ತನ್ನದಾಗಿಸಿಕೊಂಡಿದೆ. ಯುನಿಕೋಡಿನಲ್ಲಿ ಬರಹಗಳು ಲಭ್ಯವಿರುವುದು ಪ್ಲಸ್ ಪಾಯಿಂಟ್. ಅಂತರ್ಜಾಲ ಶೋಧ ಸಾಧ್ಯವಾಗಲು, ಈ ಅಂಶ ನೆರವಾಗಲಿದೆ. ಈ ಜ್ಞಾನಕೋಶವನ್ನು ಸಮೃದ್ಧಗೊಳಿಸಲು, ಕನ್ನಡಿಗರೆಲ್ಲಾ ಕೈಗೂಡಿಸಿಬೇಕಿದೆ .ತಮ್ಮ ಬರಹಗಳನ್ನು ಈ ವಿಶ್ವಕೋಶಕ್ಕೆ ಸೇರಿಸಿ, ಇದನ್ನು ಜ್ಞಾನದ ಕಣಜವಾಗಿಸುವುದು ಅವಶ್ಯಕ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಕೋಶಕ್ಕೆ ಬರಹವನ್ನು ಸೇರಿಸುವಂತಹ ಕೆಲಸಗಳನ್ನು ನೀಡಿ, ಆ ಮೂಲಕ ವಿದ್ಯಾರ್ಥಿ ಸಮುದಾಯದ ಸಹಭಾಗಿತ್ವವನ್ನು ಪಡೆಯಲು ಪ್ರಯತ್ನಿಸಬೇಕು. ಜ್ಞಾನ ಎಂಬುವುದು ಎಲ್ಲರಲ್ಲೂ ಇದೆ, ಮತ್ತು ಜ್ಞಾನ ಎಲ್ಲರಿಗಾಗಿ ಎನ್ನುವ ಧ್ಯೇಯ ವಾಕ್ಯವನ್ನು ಹೊಂದಿದ ಕಣಜ, ಸರಕಾರದ ಬೊಕ್ಕಸವನ್ನು ಮಾತ್ರಾ ಬರಿದಾಗಿಸದೆ, ಕನ್ನಡಿಗರ ಪ್ರಯೋಜನಕ್ಕೆ ಸಿಗಲಿ. ಅತ್ತ ಜನರ ಸಹಭಾಗಿತ್ವದಿಂದ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾ ಮುಕ್ತ ವಿಶ್ವಕೋಶ, http://kn.wikipedia.org/wiki ಈಗಾಗಲೇ ೧೦,೫೪೯ ಲೇಖನಗಳನ್ನು ಕಲೆ ಹಾಕಿ ದಾಪುಗಾಲು ಹಾಕುತ್ತಿದೆ. ವಿಕಿಪೀಡಿಯಾಕ್ಕೆ ಯಾರು ಬೇಕಾದರೂ ಬರಹಗಳನ್ನು ಸೇರಿಸಲು ಅವಕಾಶವಿದೆ. ಆನ್‌ಲೈನ್‌ನಲ್ಲಿ ಇರುವಾಗ ಈ ಬರಹಗಳನ್ನು ಸೇರಿಸಬಹುದು, ಇತರರ ಬರಹಗಳನ್ನು ತಿದ್ದಬಹುದು.ಸರ್ಕಾರಿ ವಿಶ್ವಕೋಶವಾದರೋ, ಜನರಲ್ಲಿ ಬರಹಗಳನ್ನು ಬರೆದು ಕಳುಹಿಸಿ ಎಂದು ವಿನಂತಿಸುತ್ತಿದೆ! ಆನ್‌ಲೈನಿನಲ್ಲಿದ್ದು ಬರಹ ಸೇರಿಸುವ ಅವಕಾಶವನ್ನು ಸದ್ಯಕ್ಕಂತೂ ಕೊಟ್ಟಿಲ್ಲ.
Saturday, April 9, 2011
ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಕೊಟ್ಟ ಅಣ್ಣಾ
ಕುಗ್ರಾಮವೊಂದರಲ್ಲಿ ಜನಸಿ, ಮುಂದೆ ಭೂಸೇನೆಯಲ್ಲಿ ಸೇರಿ, ಜೀಪ್ ಡ್ರೈವರ್ ಆಗಿದ್ದ ಕಿಶನ್ ಬಾಬುರಾವ್ ಹಜಾರೆ ಇಂದು ದೇಶವನ್ನೇ ಸತ್ಯ ಮಾರ್ಗಕ್ಕೆ ಒಯ್ಯುವ ಸಾಧಕ ಎನಿಸಿದ್ದಾರೆ. ಯುದ್ಧದಲ್ಲಿ ಎದುರಾಳಿಗಳ ದಾಳಿಗೆ ಅಂಜದೆ ಎದೆಯೊಡ್ಡಿದ್ದ ಅಣ್ಣಾ, ಇಂದು ಭ್ರಷ್ಟರ ವಿರುದ್ಧ ಸಾರಿರುವ ಸಮರ, ಇಡೀ ದೇಶವನ್ನು ಒಗ್ಗೂಡಿಸಿದೆ. 72 ವರ್ಷದ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಕಾಯ್ದೆಗಾಗಿ ಒತ್ತಾಯಿಸಿ, ನಡೆಸಿರುವ ಹೋರಾಟದಿಂದ ಸರ್ಕಾರದ ಕಣ್ಣು ತೆರದು,ಲೋಕ್ ಜನಪಾಲ್ ಮಸೂದೆ ಮಂಡನೆಯಾದರೆ ಸಂಘಟಿತ ಹೋರಾಟಕ್ಕೆ ಬೆಲೆ ಬರುತ್ತದೆ. ಮತ್ತೊಂದು ಸಂತೋಷದ ವಿಚಾರ ಎಂದರೆ, ಸತ್ತಂತ್ತಿರುವ ಜನತೆಯನ್ನು ಬಡಿದೆಚ್ಚರಿಸಿ ನಾಗರೀಕ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸಿದ ಕೆಲಸವಾಗುತ್ತದೆ.
ಯಡವ್ ಬಾಬಾ ದೇಗುಲ ಬಳಿಯ ಸಣ್ಣ ಕೋಣೆಯಲ್ಲೇ ಕೂತು, ಸತ್ಯ ಮಾರ್ಗವನ್ನು ಅನುಸರಿಸಿ, ಮಹಾರಾಷ್ಟ್ರದ ಭ್ರಷ್ಟ ಸಚಿವರನ್ನು ಕೆಡವಿದ ಅಣ್ಣಾ ಅವರ ಇತ್ತೀಚಿನ ಬಲಿ ಶರದ್ ಪವಾರ್. ಭ್ರಷ್ಟಾಚಾರ ನಿರ್ಮೂಲನೆ ಸಚಿವರ ಸಮೂಹದಲ್ಲಿ ಭ್ರಷ್ಟ ಶರದ್ ಏಕೆ ಎಂದು ಗಾಂಧೀವಾದಿ ಅಣ್ಣಾ ಪಟ್ಟು ಹಿಡಿದಿದ್ದು ಫಲ ನೀಡಿದೆ.
1960ರಲ್ಲಿ ಆರ್ಮಿಯಲ್ಲಿ ಟ್ರಕ್ ಚಾಲಕರಾಗಿದ್ದ ಅಣ್ಣಾ, ಬಿಡುವಿನ ವೇಳೆಯಲ್ಲಿ ಓದಿದೆಲ್ಲಾ ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಆಚಾರ್ಯ ವಿನೋಬಾ ಭಾವೆ ಅವರ ಪುಸ್ತಕಗಳನ್ನು ಮಾತ್ರ.
ಗಾಂಧಿ ಕಂಡ ರಾಮರಾಜ್ಯ: ಆರ್ಮಿಯಿಂದ ಸ್ವಯಂ ನಿವೃತ್ತಿ ಪಡೆದು 1975ರಲ್ಲಿ ಸ್ವಗ್ರಾಮ ರಲೆಗಾನ್ ಸಿದ್ಧಿಗೆ ಭೇಟಿ ನೀಡಿದಾಗ, ಗ್ರಾಮದ ಪರಿಸ್ಥಿತಿ ಕಂಡು ದಂಗಾಗಿಬಿಟ್ಟರು. ಎಲ್ಲೆಡೆ ಕಿತ್ತು ತಿನ್ನುವ ಬಡತನ, ಬರಗಾಲ, ಕಳ್ಳ ಖದೀಮರ ಕಾಟ, ಮದ್ಯ ವ್ಯಸನಿಗಳ ಕೂಟವೇ ರಾರಾಜಿಸುತ್ತಿತ್ತು. ಆದರೆ, ಯುವಕರನ್ನು ಒಗ್ಗೂಡಿಸಿ ಶ್ರಮದಾನದ ಮೂಲಕ ಗ್ರಾಮದಲ್ಲಿ ಕುಡಿಯುವ ನೀರು , ವಿದ್ಯುತ್, ರಸ್ತೆ ಹೀಗೆ ಸಕಲ ಸೌಕರ್ಯಗಳು ಸಿಕ್ಕಿವೆ, ಅದು ಸರ್ಕಾರದ ನೆರವಿಲ್ಲದೆ, ಗ್ರಾಮಸ್ಥರ ನೆರವಿನಿಂದ ಸುಗ್ರಾಮವಾಗಿ ಬೆಳೆದಿದೆ. ಈ ಗ್ರಾಮ ಸಂಪೂರ್ಣ ಮದ್ಯ ಪಾನ, ಮಾದಕ ದ್ರವ್ಯ ತಂಬಾಕು ಮುಕ್ತವಾಗಿರುವುದು ವಿಶೇಷ. ಅಸ್ಪೃಶ್ಯತೆ ನಿವಾರಣೆ, ಬದಲಾದ ಶಿಕ್ಷಣ ವ್ಯವಸ್ಥೆ, ಸಾಮೂಹಿಕ ವಿವಾಹಗಳು, ಗ್ರಾಮ ಸಭೆ ಮುಂತಾದವುಗಳನ್ನು ಪರಿಚಯಿಸಿ ನಿಜವಾಗಿ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಲು ಅಣ್ಣಾ ಶ್ರಮಿಸಿದ್ದಾರೆ.
2002ರಲ್ಲಿ ತಾಯಿ ಲಕ್ಷ್ಮಿ ಬಾಯಿ ಅವರನ್ನು ಕಳೆದುಕೊಂಡ ಅಣ್ಣಾ ಅವರಿಗೆ ಇಬ್ಬರು ಸೋದರಿಯರಿದ್ದಾರೆ. ಒಬ್ಬರು ಮುಂಬೈನಲ್ಲಿ ಮತ್ತೊಬ್ಬರು ಅಹಮದಾಬಾದ್ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.
ಸತ್ಯಾಗ್ರಹ ಮಂತ್ರ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಬಲ ಅಸ್ತ್ರವಾಗಿ ಬಳಸಿದ ಗಾಂಧೀಜಿ ಮಾರ್ಗದಲ್ಲೇ ಅಣ್ಣಾ ನಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸೇನಾ ಸರ್ಕಾರ ಇಬ್ಬರ್ಯ್ ಭ್ರಷ್ಟ ಸಂಪುಟ ಸಚಿವರನ್ನು ಹಾಗೂ ಕಾಂಗ್ರೆಸ್ ಎನ್ ಸಿಪಿ ಅವಧಿಯಲ್ಲಿ ನಾಲ್ಕು ಸಚಿವರನ್ನು ಕೆಳಗಿಳಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಶಿವ ಸೇನಾ ಬಿಜೆಪಿ, ಕಾಂಗ್ರೆಸ್ ಎನ್ ಸಿಪಿ ಭ್ರಷ್ಟ ಸಚಿವರುಗಳಿಗೆ ಇದೇ ರೀತಿ ಚುರುಕು ಅಣ್ಣಾ ಮುಟ್ಟಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಬಳಕೆ ಮಾಡುತ್ತಾ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದಾರೆ. ಶಿವ ಸೇನಾ ಬಾಳಾಠಾಕ್ರೆ ಹಿಂದೊಮ್ಮೆ ’ಕಪಟ ಮುಖದ ಗಾಂಧಿ’ ಎಂದು ಅಣ್ಣಾ ಅವರನ್ನು ಜರಿದಿದ್ದರು. ಆದರೆ, ಇಂದು ಜಂತರ್ ಮಂತರ್ ನಲ್ಲಿ ನಡೆದಿರುವ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಕೂಡಾ ವಿಧಿಯಿಲ್ಲದೆ ಅಣ್ಣಾ ಹಜಾರೆ ಅವರ ಸುದ್ದಿ ಬಿತ್ತರಿಸುತ್ತಿವೆ.
ಪದ್ಮಭೂಷಣ, ಪದ್ಮಶ್ರೀ, ವೃಕ್ಷಮಿತ್ರ ಮುಂತಾದ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಿನ ಹಾಗೂ ಅತಿ ದೊಡ್ಡ ಪ್ರಶಸ್ತಿಯನ್ನು ಇಂದು ದೇಶದ ಮಹಾಜನತೆ ಅವರಿಗೆ ನೀಡಿದೆ. ಅವರಿಂದ ಋತ ಮಾರ್ಗದಲ್ಲಿ ನಡೆದರೆ ಜಯ ಎಂಬ ಸದ್ಭೋದೆಯನ್ನು ಜನತೆ ಪಡೆದಿದೆ. ವಿಜಯೀಭವ ಅಣ್ಣಾ..................

Friday, April 8, 2011
ಈ ಹೋರಾಟ ಗೆಲ್ಲಲೇ ಬೇಕು, ಅಣ್ಣಾ
ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ಭ್ರಷ್ಟಾಚಾರವೆಂಬ ಮಹಾ ಪಿಡುಗು: ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.
ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಇಂದು ಸತ್ಯಾಗ್ರಹ ಆರಂಭಿಸಿದ್ದಾರೆ.
ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ "ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ "ಜನ್ ಲೋಕ್‍ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂ ಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.
ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿ ಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನಮ್ಮದೂ ಒಂದು ದನಿ ಇರಲಿ. ಅಣ್ಣಾ ಅವರನ್ನು ಬೆಂಬಲಿಸಿ, ಕೂಡಲೇ ಜನ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ಮುಂದಾಗುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸೋಣ.
ನೀವು ಕೈ ಜೋಡಿಸಿ: ಅನುಕೂಲವಿದ್ದವರು ಬೆಂಗಳೂರಿನಲ್ಲೂ ಏಪ್ರಿಲ್ 5ರಿಂದ 10ರವರೆಗೆ ಸ್ವಾತಂತ್ರ್ಯ ಉದ್ಯಾನವನ (Freedom park)ಅಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು. ಭ್ರಷ್ಟಾಚಾರ ವಿರುದ್ಧ ಏ.5ರಿಂದ ನಡೆದಿರುವ ಈ ಹೋರಾಟಕ್ಕೆ ಲೋಕ್ ಸತ್ತಾ, ಫಾರ್ವರ್ಡ್ 150, ಬನವಾಸಿ ಬಳಗ, ಪ್ರಜಾ, ಎಸ್ ಎನ್ ಎನ್ ಎ, ಅವಿರತ, ಎಡಿಆರ್, ಸ್ವರಾತ್ಮ, ನಮ್ಮ ಬೆಂಗಳೂರು ಪ್ರತಿಷ್ಠಾನ, ದಕ್ಷ್, ಥರ್ಮಲ್ ಅಂಡ್ ಎ ಕ್ವಾರ್ಟರ್, ಎಂಪವರ್ಡ್ ಬೆಂಗಳೂರು, ಸ್ಮಾರ್ಟ್ ವೋಟ್.ಇನ್, ಐ ಪೇಯ್ಡ್ ಬ್ರೈಬ್, ಐ ವೊಂಟ್ ಗೀವ್/ಟೆಕ್ ಬ್ರೈಬ್, ಯುಎನ್ ಒಡಿಸಿ, ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಸ್ವಾಮಿ ವಿವೇಕಾನಂದ ಯುವ ಸಂಘ ಮೈಸೂರು, ಡಬ್ಲ್ಯೂ ಎ ವೈಇ, ಯುವ ಬೆಂಗಳೂರು, ಸಾಕು.ಇನ್ ಸೇರಿದಂತೆ ನಗರದ ಅನೇಕ ಸಂಘ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
http://www.jnss.in/

Thursday, April 7, 2011
ಇಂದು ವಿಶ್ವ ಆರೋಗ್ಯ ದಿನ
ಇಂದು ವಿಶ್ವ ಆರೋಗ್ಯ ದಿನ. ಈ ದಿನ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.
ಅದೇ ರೀತಿ ಹಲವಾರು ಸ೦ಘ ಸ೦ಸ್ಥೆಗಳು , ವ್ಯಕ್ತಿಗಳು ಇಲ್ಲವೇ ನಾಗರೀಕರು ಆರೋಗ್ಯ ಕುರಿತ೦ತೆ ಹಲವಾರು ಕಾರ್ಯಗಳನ್ನು ಈಗಾಗಲೇ ನಡೆಸಿದ್ದಾರೆ ಮತ್ತು ಮು೦ದುವರೆಸಿಕೊ೦ಡು ಬ೦ದಿದ್ದಾರೆ. ಅ೦ತಹವರನ್ನು ಗುರುತಿಸಿ, ಶ್ಲಾಘಿಸಿ, ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಇ೦ದಿನ ಯುವ ಪೀಳಿಗೆಯನ್ನು ಈ ಕಾರ್ಯಕ್ರಮದ ಮುಖಾ೦ತರ ಪ್ರೇರೇಪಿಸುವುದು ಕೂಡ ಇನ್ನೊ೦ದು ಉದ್ದೇಶವಾಗಿದೆ. ಈ ಕಾರಣದಿ೦ದ ಈ ದಿನದ೦ದು ಅ೦ತಹ ವ್ಯಕ್ತಿ ಅಥವಾ ಸ೦ಘ ಸ೦ಸ್ಥೆಯನ್ನು ಚಾ೦ಪಿಯನ್ ಎ೦ದು ಗುರುತಿಸಿ ಅವರು ಮಾಡುತ್ತಿರುವ ಗುಣಮಟ್ಟದ ಕೆಲಸ ಕಾರ್ಯವನ್ನು ವರದಿ ಮಾಡಬೇಕಾಗಿದೆ.
ನಮ್ಮ ಆರೋಗ್ಯ ಸುಧಾರಿಸಲು ನಾವೆಲ್ಲಾ ಒ೦ದಾಗಿ ಸೇರೋಣ. ಎಲ್ಲರೂ ಆಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರೋಗ್ಯವನ್ನು ಸುಧಾರಿಸುವತ್ತಾ ಮು೦ದುವರಿಯೋಣ. ಈ ಸಲದ ವಿಶ್ವ ಆರೋಗ್ಯ ದಿನಾಚರಣೆ 2011 ರ ಸಾರಾ೦ಶ.
Tuesday, April 5, 2011
ಬಡವರಿಗೆ ಅಕ್ಕಿ ನೀಡಿ
ಪ್ರಪಂಚದಲ್ಲಿ ಕೋಟಿಗಟ್ಟಳೆ ಜನ ಬಡವರಿದ್ದಾರೆ. ಭಾರತದಲ್ಲೂ ಇದ್ದಾರೆ. ಬಡವರಿಗೆ ಆಹಾರ ದೊರಕಿಸಲು ಪ್ರಯತ್ನ ಮಾಡುವ ಸಂಸ್ಥೆಗಳು ಸಾವಿರಾರಿವೆ. ವಿಶ್ವ ಸಂಸ್ಥೆಯೂ ತನ್ನದೇ ಪ್ರಯತ್ನ ಮಾಡುತ್ತಿದೆ. ಹೀಗೆ ಕೆಲಸ ಮಾಡುವ ಸಂಸ್ಥೆಗಳು ಜನರಿಂದ ದೇಣಿಗೆ ಪಡೆದು ಕೆಲಸ ಮಾಡುತ್ತವೆ. ದೇಣಿಗೆ ಪಡೆಯುವುದು ಮಾತ್ರವಲ್ಲ, ನೀವು ರಸಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಹಾಯ ಮಾಡುವ ಜಾಲತಾಣವೊಂದಿದೆ. ಇದನ್ನು ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಯೋಜನೆ ನಡೆಸುತ್ತಿದೆ. ಇದರಲ್ಲಿ ಕೆಲವು ರಸಪ್ರಶ್ನೆಗಳಿವೆ. ಇವುಗಳನ್ನು ಆಡುವ ಮೂಲಕ ನಿಮ್ಮ ಸಾಮಾನ್ಯ ಜ್ಞಾನ, ಇಂಗ್ಲಿಶ್ ಜ್ಞಾನ, ಮತ್ತು ಇತರೆ ವಿಷಯಗಳಲ್ಲಿಯ ಅರಿವು ಜಾಸ್ತಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಪ್ರತಿ ಸರಿ ಉತ್ತರಕ್ಕೂ ಒಂದು ಕಾಳು ಅಕ್ಕಿಯನ್ನು ನಿಮ್ಮ ಪರವಾಗಿ ಬಡವರಿಗೆ ವಿಶ್ವ ಸಂಸ್ಥೆ ದಾನವಾಗಿ ನೀಡುತ್ತದೆ. ಈ ಜಾಲತಾಣದ ವಿಳಾಸ freerice.com. ಈ ಜಾಲತಾಣಕ್ಕೆ ದಿನಾ ಭೇಟಿ ನೀಡಿ, ರಸಪ್ರಶ್ನೆಗಳಲ್ಲಿ ಭಾಗವಹಿಸಿ, ನಿಮ್ಮ ಜ್ಞಾನಭಂಡಾರ ಬೆಳೆಸಿಕೊಳ್ಳಿ, ಜೊತೆಗೆ ಹಸಿದವರಿಗೆ ಅನ್ನ ನೀಡಿ ನೆರವಾಗಿ.
Sunday, April 3, 2011
PIN CODES FOR BANGALORE CITY
| ADUGUDI | 560 030 |
| AGARAM | 560 007 |
| AIRFORCE STATION | 560 063 |
| ARABIC COLLEGE | 560 045 |
| BANASHANKARI | 560 050 |
| BANASHANKARI II STAGE | 560 070 |
| BANASHANKARI III STAGE | 560 085 |
| BANGALORE G P O | 560 001 |
| BANGALORE CITY H O | 560 002 |
| BANGALORE UNIVERSITY | 560 056 |
| BANNERGHATTA | 560 083 |
| BANNERGHATTA ROAD | 560 076 |
| BANASWADI | 560 043 |
| BASAVANAGUDI | 560 004 |
| BASVESHWARA NAGAR | 560 079 |
| BENSON TOWN | 560 046 |
| BROADWAY ROAD | 560 051 |
| BYATARAYANAPURA | 560 092 |
| CARMELRAM | 560 035 |
| CHAMRAJAPET WEST | 560 018 |
| CHICKPET | 560 053 |
| CHICKABANAVARA | 560 090 |
| C V RAMAN NAGAR | 560 093 |
| DASARAHALLI | 560 057 |
| DHARMARAM COLLEGE | 560 029 |
| DODDAKALLASANDRA | 560 062 |
| DOMLUR | 560 071 |
| DOORAVANI NAGAR | 560 016 |
| FRAZER TOWN | 560 005 |
| GANDHINAGAR | 560 009 |
| GAVIPURAM EXTENSION | 560 019 |
| G K V K | 560 065 |
| GOKULA EXTENSION | 560 054 |
| GOVT ELEC. FACTORY | 560 026 |
| HEBBAL AGRI FARM | 560 024 |
| HESSARGHATTA | 560 088 |
| HESSARGHATTA LAKE | 560 089 |
| H K P ROAD | 560 051 |
| H M T | 560 031 |
| HOSPITAL TOWN EAST | 560 014 |
| HOSPITAL TOWN WEST | 560 015 |
| INDIRANAGAR | 560 038 |
| J C NAGAR | 560 006 |
| JALAHALLI | 560 013 |
| JAYANAGAR 3RD BLOCK | 560 011 |
| JAYANAGAR EAST | 560 069 |
| JAYANAGAR SOUTH | 560 041 |
| J P NAGAR | 560 078 |
| KADUGODI | 560 067 |
| KENGERI | 560 060 |
| KOTHANUR | 560 077 |
| KRISHNARAJAPURAM | 560 036 |
| KUMBALGODU | 560 074 |
| KORAMANGALA | 560 034 |
| KORAMANGALA 6th BLOCK | 560 095 |
| MADIVALA | 560 068 |
| MAGADI ROAD | 560 023 |
| MAHADEVAPURA | 560 048 |
| MAHALAKSHMI LAYOUT | 560 086 |
| MALLESHWARAM | 560 003 |
| MALLESHWARAM WEST | 560 055 |
| MARATHAHALLY COLONY | 560 037 |
| MARUTHISEVANAGAR | 560 033 |
| MATHIKERE | 560 054 |
| NAGARBHAVI | 560 072 |
| NAGASANDRA | 560 073 |
| NAGASETTY HALLI | 560 094 |
| NANDINI LAYOUT | 560 096 |
| NAYANDAHALLI | 560 039 |
| NEW TIPPASANDRA | 560 075 |
| PEENYA | 560 058 |
| RAJAJINAGAR | 560 010 |
| RICHMOND TOWN | 560 025 |
| R T NAGAR | 560 032 |
| R V NIKETAN | 560 059 |
| SCIENCE INSTITUTE | 560 012 |
| SESHADRIPURAM | 560 020 |
| SHANTHINAGAR | 560 027 |
| SIVAN CHETTY GARDENS | 560 042 |
| SRIRAMAPURAM | 560 021 |
| ST.JOHNS | 560 034 |
| ST THOMAS TOWN | 560 084 |
| SUBRAMANYAPURA | 560 061 |
| THYAGARAJANAGAR | 560 028 |
| ULSOOR | 560 008 |
| VASANTHANAGAR | 560 052 |
| VIJAYANAGAR | 560 040 |
| VIMANAPURA | 560 017 |
| VIRGONAGAR | 560 049 |
| VISWANEEDAM | 560 091 |
| VYALIKAVAL | 560 003 |
| VIVEKNAGAR | 560 047 |
| WHITEFIELD | 560 066 |
| WILSON GARDENS | 560 027 |
| YELAHANKA | 560 064 |
| YESHWANTHPUR | 560 022 |
Subscribe to:
Posts (Atom)