WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Saturday, April 9, 2011

ಪ್ರಜಾಪ್ರಭುತ್ವಕ್ಕೆ ನಿಜ ಅರ್ಥ ಕೊಟ್ಟ ಅಣ್ಣಾ

ಕುಗ್ರಾಮವೊಂದರಲ್ಲಿ ಜನಸಿ, ಮುಂದೆ ಭೂಸೇನೆಯಲ್ಲಿ ಸೇರಿ, ಜೀಪ್ ಡ್ರೈವರ್ ಆಗಿದ್ದ ಕಿಶನ್ ಬಾಬುರಾವ್ ಹಜಾರೆ ಇಂದು ದೇಶವನ್ನೇ ಸತ್ಯ ಮಾರ್ಗಕ್ಕೆ ಒಯ್ಯುವ ಸಾಧಕ ಎನಿಸಿದ್ದಾರೆ. ಯುದ್ಧದಲ್ಲಿ ಎದುರಾಳಿಗಳ ದಾಳಿಗೆ ಅಂಜದೆ ಎದೆಯೊಡ್ಡಿದ್ದ ಅಣ್ಣಾ, ಇಂದು ಭ್ರಷ್ಟರ ವಿರುದ್ಧ ಸಾರಿರುವ ಸಮರ, ಇಡೀ ದೇಶವನ್ನು ಒಗ್ಗೂಡಿಸಿದೆ.

72 ವರ್ಷದ ಹಜಾರೆ ಅವರು ಭ್ರಷ್ಟಾಚಾರ   ವಿರೋಧಿ ಕಾಯ್ದೆಗಾಗಿ ಒತ್ತಾಯಿಸಿ, ನಡೆಸಿರುವ ಹೋರಾಟದಿಂದ ಸರ್ಕಾರದ ಕಣ್ಣು ತೆರದು,ಲೋಕ್ ಜನಪಾಲ್ ಮಸೂದೆ ಮಂಡನೆಯಾದರೆ ಸಂಘಟಿತ ಹೋರಾಟಕ್ಕೆ ಬೆಲೆ ಬರುತ್ತದೆ. ಮತ್ತೊಂದು ಸಂತೋಷದ ವಿಚಾರ ಎಂದರೆ, ಸತ್ತಂತ್ತಿರುವ ಜನತೆಯನ್ನು ಬಡಿದೆಚ್ಚರಿಸಿ ನಾಗರೀಕ ಪ್ರಜ್ಞೆ ಹಾಗೂ ಜಾಗೃತಿ ಮೂಡಿಸಿದ ಕೆಲಸವಾಗುತ್ತದೆ.

ಯಡವ್ ಬಾಬಾ ದೇಗುಲ ಬಳಿಯ ಸಣ್ಣ ಕೋಣೆಯಲ್ಲೇ ಕೂತು, ಸತ್ಯ ಮಾರ್ಗವನ್ನು ಅನುಸರಿಸಿ, ಮಹಾರಾಷ್ಟ್ರದ ಭ್ರಷ್ಟ ಸಚಿವರನ್ನು ಕೆಡವಿದ ಅಣ್ಣಾ ಅವರ ಇತ್ತೀಚಿನ ಬಲಿ ಶರದ್ ಪವಾರ್. ಭ್ರಷ್ಟಾಚಾರ ನಿರ್ಮೂಲನೆ ಸಚಿವರ ಸಮೂಹದಲ್ಲಿ ಭ್ರಷ್ಟ ಶರದ್ ಏಕೆ ಎಂದು ಗಾಂಧೀವಾದಿ ಅಣ್ಣಾ ಪಟ್ಟು ಹಿಡಿದಿದ್ದು ಫಲ ನೀಡಿದೆ.

1960ರಲ್ಲಿ ಆರ್ಮಿಯಲ್ಲಿ ಟ್ರಕ್ ಚಾಲಕರಾಗಿದ್ದ ಅಣ್ಣಾ, ಬಿಡುವಿನ ವೇಳೆಯಲ್ಲಿ ಓದಿದೆಲ್ಲಾ ಸ್ವಾಮಿ ವಿವೇಕಾನಂದ, ಮಹಾತ್ಮಾ ಗಾಂಧಿ ಹಾಗೂ ಆಚಾರ್ಯ ವಿನೋಬಾ ಭಾವೆ ಅವರ ಪುಸ್ತಕಗಳನ್ನು ಮಾತ್ರ.

ಗಾಂಧಿ ಕಂಡ ರಾಮರಾಜ್ಯ: ಆರ್ಮಿಯಿಂದ ಸ್ವಯಂ ನಿವೃತ್ತಿ ಪಡೆದು 1975ರಲ್ಲಿ ಸ್ವಗ್ರಾಮ ರಲೆಗಾನ್ ಸಿದ್ಧಿಗೆ ಭೇಟಿ ನೀಡಿದಾಗ, ಗ್ರಾಮದ ಪರಿಸ್ಥಿತಿ ಕಂಡು ದಂಗಾಗಿಬಿಟ್ಟರು. ಎಲ್ಲೆಡೆ ಕಿತ್ತು ತಿನ್ನುವ ಬಡತನ, ಬರಗಾಲ, ಕಳ್ಳ ಖದೀಮರ ಕಾಟ, ಮದ್ಯ ವ್ಯಸನಿಗಳ ಕೂಟವೇ ರಾರಾಜಿಸುತ್ತಿತ್ತು. ಆದರೆ, ಯುವಕರನ್ನು ಒಗ್ಗೂಡಿಸಿ ಶ್ರಮದಾನದ ಮೂಲಕ ಗ್ರಾಮದಲ್ಲಿ ಕುಡಿಯುವ ನೀರು , ವಿದ್ಯುತ್, ರಸ್ತೆ ಹೀಗೆ ಸಕಲ ಸೌಕರ್ಯಗಳು ಸಿಕ್ಕಿವೆ, ಅದು ಸರ್ಕಾರದ ನೆರವಿಲ್ಲದೆ, ಗ್ರಾಮಸ್ಥರ ನೆರವಿನಿಂದ ಸುಗ್ರಾಮವಾಗಿ ಬೆಳೆದಿದೆ. ಈ ಗ್ರಾಮ ಸಂಪೂರ್ಣ ಮದ್ಯ ಪಾನ, ಮಾದಕ ದ್ರವ್ಯ ತಂಬಾಕು ಮುಕ್ತವಾಗಿರುವುದು ವಿಶೇಷ. ಅಸ್ಪೃಶ್ಯತೆ ನಿವಾರಣೆ, ಬದಲಾದ ಶಿಕ್ಷಣ ವ್ಯವಸ್ಥೆ, ಸಾಮೂಹಿಕ ವಿವಾಹಗಳು, ಗ್ರಾಮ ಸಭೆ ಮುಂತಾದವುಗಳನ್ನು ಪರಿಚಯಿಸಿ ನಿಜವಾಗಿ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಿಸಲು ಅಣ್ಣಾ ಶ್ರಮಿಸಿದ್ದಾರೆ.

2002ರಲ್ಲಿ ತಾಯಿ ಲಕ್ಷ್ಮಿ ಬಾಯಿ ಅವರನ್ನು ಕಳೆದುಕೊಂಡ ಅಣ್ಣಾ ಅವರಿಗೆ ಇಬ್ಬರು ಸೋದರಿಯರಿದ್ದಾರೆ. ಒಬ್ಬರು ಮುಂಬೈನಲ್ಲಿ ಮತ್ತೊಬ್ಬರು ಅಹಮದಾಬಾದ್ ಜಿಲ್ಲೆಯಲ್ಲಿ ವಾಸವಾಗಿದ್ದಾರೆ.

ಸತ್ಯಾಗ್ರಹ ಮಂತ್ರ: ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹವನ್ನು ಪ್ರಬಲ ಅಸ್ತ್ರವಾಗಿ ಬಳಸಿದ ಗಾಂಧೀಜಿ ಮಾರ್ಗದಲ್ಲೇ ಅಣ್ಣಾ ನಡೆದಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸೇನಾ ಸರ್ಕಾರ ಇಬ್ಬರ್ಯ್ ಭ್ರಷ್ಟ ಸಂಪುಟ ಸಚಿವರನ್ನು ಹಾಗೂ ಕಾಂಗ್ರೆಸ್ ಎನ್ ಸಿಪಿ ಅವಧಿಯಲ್ಲಿ ನಾಲ್ಕು ಸಚಿವರನ್ನು ಕೆಳಗಿಳಿಸಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಶಿವ ಸೇನಾ ಬಿಜೆಪಿ, ಕಾಂಗ್ರೆಸ್ ಎನ್ ಸಿಪಿ ಭ್ರಷ್ಟ ಸಚಿವರುಗಳಿಗೆ ಇದೇ ರೀತಿ ಚುರುಕು ಅಣ್ಣಾ ಮುಟ್ಟಿಸಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಬಳಕೆ ಮಾಡುತ್ತಾ ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದಾರೆ. ಶಿವ ಸೇನಾ ಬಾಳಾಠಾಕ್ರೆ ಹಿಂದೊಮ್ಮೆ ’ಕಪಟ ಮುಖದ ಗಾಂಧಿ’ ಎಂದು ಅಣ್ಣಾ ಅವರನ್ನು ಜರಿದಿದ್ದರು. ಆದರೆ, ಇಂದು ಜಂತರ್ ಮಂತರ್ ನಲ್ಲಿ ನಡೆದಿರುವ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಕೂಡಾ ವಿಧಿಯಿಲ್ಲದೆ ಅಣ್ಣಾ ಹಜಾರೆ ಅವರ ಸುದ್ದಿ ಬಿತ್ತರಿಸುತ್ತಿವೆ.

ಪದ್ಮಭೂಷಣ, ಪದ್ಮಶ್ರೀ, ವೃಕ್ಷಮಿತ್ರ ಮುಂತಾದ ಎಲ್ಲಾ ಪ್ರಶಸ್ತಿಗಳಿಗಿಂತ ಹೆಚ್ಚಿನ ಹಾಗೂ ಅತಿ ದೊಡ್ಡ ಪ್ರಶಸ್ತಿಯನ್ನು ಇಂದು ದೇಶದ ಮಹಾಜನತೆ ಅವರಿಗೆ ನೀಡಿದೆ. ಅವರಿಂದ ಋತ ಮಾರ್ಗದಲ್ಲಿ ನಡೆದರೆ ಜಯ ಎಂಬ ಸದ್ಭೋದೆಯನ್ನು ಜನತೆ ಪಡೆದಿದೆ. ವಿಜಯೀಭವ ಅಣ್ಣಾ..................

Friday, April 8, 2011

ಈ ಹೋರಾಟ ಗೆಲ್ಲಲೇ ಬೇಕು, ಅಣ್ಣಾ

ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು  ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ಭ್ರಷ್ಟಾಚಾರವೆಂಬ ಮಹಾ ಪಿಡುಗು: ಭಾರತದಲ್ಲಿ ದಿನಗಳೆದಂತೆ ಭ್ರಷ್ಟಾಚಾರವೆನ್ನುವುದು ಆಳವಾಗಿ ಬೇರೂರತ್ತಲೇ ಹೋಗುತ್ತಿದೆ. ಈ ರೋಗವು ರಾಜಕಾರಣದ ಮೊಗಸಾಲೆಯನ್ನೂ ಬಿಟ್ಟಿಲ್ಲದಿರುವಾಗ, ನಾಡಿನ ವ್ಯವಸ್ಥೆಗಳನ್ನು ಕಟ್ಟಿ ನಿರ್ವಹಿಸಬೇಕಾದ ಜನಪ್ರತಿನಿಧಿ ಸಭೆಗಳು ಕೂಡಾ ಭ್ರಷ್ಟಾಚಾರವನ್ನು ಇಲ್ಲವಾಗಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ನೋವು ಜನರಲ್ಲಿದೆ. ಇಡೀ ವ್ಯವಸ್ಥೆಯೇ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿ ನಲುಗುತ್ತಿರುವಾಗ ಇದಕ್ಕೊಂದು ಮದ್ದು ಬೇಕು ಎಂದು ಜನಾಂದೋಲನ ರೂಪಿಸುವಲ್ಲಿ ಈ ಹಿರಿಯ ಜೀವ ತೊಡಗಿದೆ.

ಜನ್ ಲೋಕಪಾಲ್ ಮಸೂದೆಯನ್ನು ಸರಿಯಾಗಿ ರೂಪಿಸಿ ಜಾರಿಗೊಳಿಸಲು ಪ್ರಧಾನಮಂತ್ರಿಗಳಿಗೆ ಮೊರೆಯಿಡುತ್ತಿದ್ದರೂ ಅದು ಫಲಿಸಲಿಲ್ಲವೆಂದು ಇದೀಗ ಅಣ್ಣಾ ಹಜಾರೆಯವರು ಸಾಯೋವರೆಗೆ ಉಪವಾಸ ಮಾಡುವುದಾಗಿ ಘೋಷಿಸಿ, ಅದರಂತೆ ಇಂದು ಸತ್ಯಾಗ್ರಹ ಆರಂಭಿಸಿದ್ದಾರೆ.

ಲೋಕಪಾಲ ಮಸೂದೆ ಮತ್ತು ಜನ್ ಲೋಕಪಾಲ್ ಮಸೂದೆ
2010ರಲ್ಲಿ ಭಾರತ ಸರ್ಕಾರ ಭ್ರಷ್ಟಾಚಾರ ನಿಯಂತ್ರಣದ ಉದ್ದೇಶದಿಂದ ಲೋಕ್‍ಪಾಲ್ ಮಸೂದೆಯನ್ನು ಜಾರಿಗೊಳಿಸಲು ಮುಂದಾಯಿತು. ಈ ಮಸೂದೆಯಲ್ಲಿದ್ದ ಹಲವಾರು ಕುಂದುಕೊರತೆಗಳು ಭ್ರಷ್ಟಾಚಾರವನ್ನು ನಿಯಂತ್ರಿಸಲು ಪರಿಣಾಮಕಾರಿಯಾಗಿಲ್ಲವೆಂದು ಅಣ್ಣಾ ಒಂದು ಚಳವಳಿಯನ್ನು ಶುರುಮಾಡಿದರು. ಇದರ ಅಂಗವಾಗಿ "ಭ್ರಷ್ಟಾಚಾರದ ವಿರುದ್ಧ ಭಾರತ" ಎನ್ನುವ ಸಂಘಟನೆ ಸದಸ್ಯರ ಜೊತೆಗೂಡಿ "ಜನ್ ಲೋಕ್‍ಪಾಲ್" ಮಸೂದೆಯನ್ನು ಸಿದ್ಧಪಡಿಸಲಾಯಿತು. ಈ ಮಸೂದೆಯನ್ನು ನ್ಯಾಯಮೂರ್ತಿ ಡಾ. ಸಂತೋಶ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರುಗಳು ಸಿದ್ಧಪಡಿಸಿದ್ದಾರೆ. ಇದರಲ್ಲಿ ಭ್ರಷ್ಟರಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯೂ, ಜನರ ನೇರ ಪಾಲ್ಗೊಳ್ಳುವಿಕೆಯೂ, ಲೋಕಾಯುಕ್ತರ ವ್ಯಾಪ್ತಿಯ ಹೆಚ್ಚಳವೂ ಅಡಗಿದ್ದು ಭ್ರಷ್ಟಾಚಾರ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಈ ಮಸೂದೆಯಂತೆ ಲೋಕಪಾಲ್ ಮಸೂದೆ ರೂಪುಗೊಳ್ಳಬೇಕು ಎಂದು ಒತ್ತಾಯಿಸಿ ಅಣ್ಣಾ ಹಜಾರೆ ಈಗ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ. ಅವರನ್ನು ಬೆಂಬಲಿಸಿ ದೇಶಾದ್ಯಂತ ಜನಸಾಮಾನ್ಯರು ದನಿ ಎತ್ತಿದ್ದಾರೆ. ಈ ದನಿ ಮತ್ತಷ್ಟು ಗಟ್ಟಿಯಾಗಿ ಸಂಸತ್ತಿನಲ್ಲಿ ಕುಳಿತವರ ಕಿವಿಗಳನ್ನು, ಕಣ್ಣುಗಳನ್ನು ತೆರೆಸಬೇಕಾಗಿದೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನಮ್ಮದೂ ಒಂದು ದನಿ ಇರಲಿ. ಅಣ್ಣಾ ಅವರನ್ನು ಬೆಂಬಲಿಸಿ, ಕೂಡಲೇ ಜನ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ಮುಂದಾಗುವಂತೆ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸೋಣ.

ನೀವು ಕೈ ಜೋಡಿಸಿ: ಅನುಕೂಲವಿದ್ದವರು ಬೆಂಗಳೂರಿನಲ್ಲೂ ಏಪ್ರಿಲ್ 5ರಿಂದ 10ರವರೆಗೆ ಸ್ವಾತಂತ್ರ್ಯ ಉದ್ಯಾನವನ (Freedom park)ಅಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬಹುದು. ಭ್ರಷ್ಟಾಚಾರ ವಿರುದ್ಧ ಏ.5ರಿಂದ ನಡೆದಿರುವ ಈ ಹೋರಾಟಕ್ಕೆ ಲೋಕ್ ಸತ್ತಾ, ಫಾರ್ವರ್ಡ್ 150, ಬನವಾಸಿ ಬಳಗ, ಪ್ರಜಾ, ಎಸ್ ಎನ್ ಎನ್ ಎ, ಅವಿರತ, ಎಡಿಆರ್, ಸ್ವರಾತ್ಮ, ನಮ್ಮ ಬೆಂಗಳೂರು ಪ್ರತಿಷ್ಠಾನ, ದಕ್ಷ್, ಥರ್ಮಲ್ ಅಂಡ್ ಎ ಕ್ವಾರ್ಟರ್, ಎಂಪವರ್ಡ್ ಬೆಂಗಳೂರು, ಸ್ಮಾರ್ಟ್ ವೋಟ್.ಇನ್, ಐ ಪೇಯ್ಡ್ ಬ್ರೈಬ್, ಐ ವೊಂಟ್ ಗೀವ್/ಟೆಕ್ ಬ್ರೈಬ್, ಯುಎನ್ ಒಡಿಸಿ, ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಸ್ವಾಮಿ ವಿವೇಕಾನಂದ ಯುವ ಸಂಘ ಮೈಸೂರು, ಡಬ್ಲ್ಯೂ ಎ ವೈಇ, ಯುವ ಬೆಂಗಳೂರು, ಸಾಕು.ಇನ್ ಸೇರಿದಂತೆ ನಗರದ ಅನೇಕ ಸಂಘ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
http://www.jnss.in/

Thursday, April 7, 2011

ಇಂದು ವಿಶ್ವ ಆರೋಗ್ಯ ದಿನ












ಇಂದು ವಿಶ್ವ ಆರೋಗ್ಯ ದಿನ. ಈ ದಿನ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.

ಅದೇ ರೀತಿ ಹಲವಾರು ಸ೦ಘ ಸ೦ಸ್ಥೆಗಳು , ವ್ಯಕ್ತಿಗಳು ಇಲ್ಲವೇ ನಾಗರೀಕರು ಆರೋಗ್ಯ ಕುರಿತ೦ತೆ ಹಲವಾರು ಕಾರ್ಯಗಳನ್ನು ಈಗಾಗಲೇ ನಡೆಸಿದ್ದಾರೆ ಮತ್ತು ಮು೦ದುವರೆಸಿಕೊ೦ಡು ಬ೦ದಿದ್ದಾರೆ. ಅ೦ತಹವರನ್ನು ಗುರುತಿಸಿ, ಶ್ಲಾಘಿಸಿ, ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಇ೦ದಿನ ಯುವ ಪೀಳಿಗೆಯನ್ನು ಈ ಕಾರ್ಯಕ್ರಮದ ಮುಖಾ೦ತರ ಪ್ರೇರೇಪಿಸುವುದು ಕೂಡ ಇನ್ನೊ೦ದು ಉದ್ದೇಶವಾಗಿದೆ. ಈ ಕಾರಣದಿ೦ದ ಈ ದಿನದ೦ದು ಅ೦ತಹ ವ್ಯಕ್ತಿ ಅಥವಾ ಸ೦ಘ ಸ೦ಸ್ಥೆಯನ್ನು ಚಾ೦ಪಿಯನ್ ಎ೦ದು ಗುರುತಿಸಿ ಅವರು ಮಾಡುತ್ತಿರುವ ಗುಣಮಟ್ಟದ ಕೆಲಸ ಕಾರ್ಯವನ್ನು ವರದಿ ಮಾಡಬೇಕಾಗಿದೆ.
ನಮ್ಮ  ಆರೋಗ್ಯ ಸುಧಾರಿಸಲು ನಾವೆಲ್ಲಾ ಒ೦ದಾಗಿ ಸೇರೋಣ. ಎಲ್ಲರೂ ಆಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆರೋಗ್ಯವನ್ನು ಸುಧಾರಿಸುವತ್ತಾ ಮು೦ದುವರಿಯೋಣ.  ಈ ಸಲದ ವಿಶ್ವ ಆರೋಗ್ಯ ದಿನಾಚರಣೆ 2011 ರ ಸಾರಾ೦ಶ. 

Tuesday, April 5, 2011

ಬಡವರಿಗೆ ಅಕ್ಕಿ ನೀಡಿ

ಪ್ರಪಂಚದಲ್ಲಿ ಕೋಟಿಗಟ್ಟಳೆ ಜನ ಬಡವರಿದ್ದಾರೆ. ಭಾರತದಲ್ಲೂ ಇದ್ದಾರೆ. ಬಡವರಿಗೆ ಆಹಾರ ದೊರಕಿಸಲು ಪ್ರಯತ್ನ ಮಾಡುವ ಸಂಸ್ಥೆಗಳು ಸಾವಿರಾರಿವೆ. ವಿಶ್ವ ಸಂಸ್ಥೆಯೂ ತನ್ನದೇ ಪ್ರಯತ್ನ ಮಾಡುತ್ತಿದೆ. ಹೀಗೆ ಕೆಲಸ ಮಾಡುವ ಸಂಸ್ಥೆಗಳು ಜನರಿಂದ ದೇಣಿಗೆ ಪಡೆದು ಕೆಲಸ ಮಾಡುತ್ತವೆ. ದೇಣಿಗೆ ಪಡೆಯುವುದು ಮಾತ್ರವಲ್ಲ, ನೀವು ರಸಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಹಾಯ ಮಾಡುವ ಜಾಲತಾಣವೊಂದಿದೆ. ಇದನ್ನು ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಯೋಜನೆ ನಡೆಸುತ್ತಿದೆ. ಇದರಲ್ಲಿ ಕೆಲವು ರಸಪ್ರಶ್ನೆಗಳಿವೆ. ಇವುಗಳನ್ನು ಆಡುವ ಮೂಲಕ ನಿಮ್ಮ ಸಾಮಾನ್ಯ ಜ್ಞಾನ, ಇಂಗ್ಲಿಶ್ ಜ್ಞಾನ, ಮತ್ತು ಇತರೆ ವಿಷಯಗಳಲ್ಲಿಯ ಅರಿವು ಜಾಸ್ತಿ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ, ಪ್ರತಿ ಸರಿ ಉತ್ತರಕ್ಕೂ ಒಂದು ಕಾಳು ಅಕ್ಕಿಯನ್ನು ನಿಮ್ಮ ಪರವಾಗಿ ಬಡವರಿಗೆ ವಿಶ್ವ ಸಂಸ್ಥೆ ದಾನವಾಗಿ ನೀಡುತ್ತದೆ. ಈ ಜಾಲತಾಣದ ವಿಳಾಸ freerice.com. ಈ ಜಾಲತಾಣಕ್ಕೆ ದಿನಾ ಭೇಟಿ ನೀಡಿ, ರಸಪ್ರಶ್ನೆಗಳಲ್ಲಿ ಭಾಗವಹಿಸಿ, ನಿಮ್ಮ ಜ್ಞಾನಭಂಡಾರ ಬೆಳೆಸಿಕೊಳ್ಳಿ, ಜೊತೆಗೆ ಹಸಿದವರಿಗೆ ಅನ್ನ ನೀಡಿ ನೆರವಾಗಿ.

Sunday, April 3, 2011

PIN CODES FOR BANGALORE CITY

ADUGUDI 560 030
AGARAM 560 007
AIRFORCE STATION 560 063
ARABIC COLLEGE 560 045
BANASHANKARI 560 050
BANASHANKARI II STAGE 560 070
BANASHANKARI III STAGE 560 085
BANGALORE G P O 560 001
BANGALORE CITY H O 560 002
BANGALORE UNIVERSITY 560 056
BANNERGHATTA 560 083
BANNERGHATTA ROAD 560 076
BANASWADI 560 043
BASAVANAGUDI 560 004
BASVESHWARA NAGAR 560 079
BENSON TOWN 560 046
BROADWAY ROAD 560 051
BYATARAYANAPURA 560 092
CARMELRAM 560 035
CHAMRAJAPET WEST 560 018
CHICKPET 560 053
CHICKABANAVARA 560 090
C V RAMAN NAGAR 560 093
DASARAHALLI 560 057
DHARMARAM COLLEGE 560 029
DODDAKALLASANDRA 560 062
DOMLUR 560 071
DOORAVANI NAGAR 560 016
FRAZER TOWN 560 005
GANDHINAGAR 560 009
GAVIPURAM EXTENSION 560 019
G K V K 560 065
GOKULA EXTENSION 560 054
GOVT ELEC. FACTORY 560 026
HEBBAL AGRI FARM 560 024
HESSARGHATTA 560 088
HESSARGHATTA LAKE 560 089
H K P ROAD 560 051
H M T 560 031
HOSPITAL TOWN EAST 560 014
HOSPITAL TOWN WEST 560 015
INDIRANAGAR 560 038
J C NAGAR 560 006
JALAHALLI 560 013
JAYANAGAR 3RD BLOCK 560 011
JAYANAGAR EAST 560 069
JAYANAGAR SOUTH 560 041
J P NAGAR 560 078
KADUGODI 560 067
KENGERI 560 060
KOTHANUR 560 077
KRISHNARAJAPURAM 560 036
KUMBALGODU 560 074
KORAMANGALA 560 034
KORAMANGALA 6th BLOCK 560 095
MADIVALA 560 068
MAGADI ROAD 560 023
MAHADEVAPURA 560 048
MAHALAKSHMI LAYOUT 560 086
MALLESHWARAM 560 003
MALLESHWARAM WEST 560 055
MARATHAHALLY COLONY 560 037
MARUTHISEVANAGAR 560 033
MATHIKERE 560 054
NAGARBHAVI 560 072
NAGASANDRA 560 073
NAGASETTY HALLI 560 094
NANDINI LAYOUT 560 096
NAYANDAHALLI 560 039
NEW TIPPASANDRA 560 075
PEENYA 560 058
RAJAJINAGAR 560 010
RICHMOND TOWN 560 025
R T NAGAR 560 032
R V NIKETAN 560 059
SCIENCE INSTITUTE 560 012
SESHADRIPURAM 560 020
SHANTHINAGAR 560 027
SIVAN CHETTY GARDENS 560 042
SRIRAMAPURAM 560 021
ST.JOHNS 560 034
ST THOMAS TOWN 560 084
SUBRAMANYAPURA 560 061
THYAGARAJANAGAR 560 028
ULSOOR 560 008
VASANTHANAGAR 560 052
VIJAYANAGAR 560 040
VIMANAPURA 560 017
VIRGONAGAR 560 049
VISWANEEDAM 560 091
VYALIKAVAL 560 003
VIVEKNAGAR 560 047
WHITEFIELD 560 066
WILSON GARDENS 560 027
YELAHANKA 560 064
YESHWANTHPUR 560 022

Monday, March 28, 2011

ಟಿಐನಿಂದ ಭಾರತದ ಮೊದಲ ಕಾರ್ಬನ್ ಬೈಸಿಕಲ್


ಚೆನ್ನೈ ಮೂಲದ ಟಿಐ ಸೈಕಲ್ಸ್ ನೂತನ ಟಿಐ ಮೊಂತ್ರಾ ಎಂಬ ಭಾರತದ ಪ್ರಪ್ರಥಮ ಕಾರ್ಬನ್ ಬೈಸಿಕಲ್ ಗಳನ್ನು ಹೊರತಂದಿದೆ. ದೇಶದ ಯುವಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ನೂತನ ಹೈಎಂಡ್ ಬೈಸಿಕಲ್ ನ್ನು ಪರಿಚಯಿಸಿದೆ. ಕಾರ್ಬನ್ ಬೈಸಿಕಲ್ ದರ ಸುಮಾರು 21 ಸಾವಿರ ರೂ.ನಿಂದ 1.5 ಲಕ್ಷ ರೂ.ವರೆಗಿದೆ. .


ಕಂಪನಿಯ ಅಂಬಾಚುರ್ ಘಟಕದಲ್ಲಿ ನೂತನ ವಿನ್ಯಾಸದ ಬೈಸಿಕಲ್ ಗಳನ್ನು ಉತ್ಪಾದಿಸಲು ಕಂಪನಿ ನಿರ್ಧರಿಸಿದೆ. ವರ್ಷಕ್ಕೆ ಸುಮಾರು 12 ಸಾವಿರ ಕಾರ್ಬನ್ ಬೈಸಿಕಲ್ ಮಾರಾಟ ಮಾಡುವ ಗುರಿಯನ್ನು ಹೊಂದಿರುವುದಾಗಿ ಕಂಪನಿಯ ಅಧ್ಯಕ್ಷರು ಹೇಳಿದ್ದಾರೆ. ಕಳೆದ ವರ್ಷ ಸುಮಾರು 36 ಲಕ್ಷ ಬೈಸಿಕಲ್ ಮಾರಾಟ ಮಾಡಿದ್ದು, ಪ್ರಸಕ್ತ ವರ್ಷ ಸುಮಾರು 41.5 ಲಕ್ಷ ಯೂನಿಟ್ ಮಾರಾಟದ ಗುರಿಯನ್ನು ಟಿಐ ಹೊಂದಿದೆ.

ನೂತನ ಹೈಎಂಡ್ ಬೈಸಿಕಲ್ ಹಗುರವಾಗಿದ್ದು, ಒಂದಿಷ್ಟು ದುಬಾರಿಯೂ ಆಗಿದೆ. ನಗರ ಮತ್ತು ಪಟ್ಟಣಗಳಲ್ಲಿ ರೈಡ್ ಮಾಡಲು ಸೂಕ್ತವಾಗುವಂತೆ ಟಿಐ ಮೊಂತ್ರಾವನ್ನು ವಿನ್ಯಾಸ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಒಂದು ಪೂರ್ಣಪ್ರಮಾಣದ ಕಾರ್ಬನ್ ಬೈಸಿಕಲ್ ಮತ್ತು ಕಾರ್ಬನ್ ಬಿಡಿಭಾಗದ ಮತ್ತು ಅಲಾಯ್ ಫ್ರೇಮ್ ನ ಎರಡು ಸಾಮಾನ್ಯ ಬೈಸಿಕಲ್ ಗಳನ್ನೂ ಹೊರತಂದಿದೆ.

Wednesday, March 23, 2011

ಫೈರ್ ಫಾಕ್ಸ್ 4 vs ಕ್ರೋಮ್ 10 vs ಐಇ 9


ವೆಬ್ ಬ್ರೌಸರ್ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಲು ಮೈಕ್ರೋ ಸಾಫ್ಟ್, ಮೋಝಿಲ್ಲಾ ಹಾಗೂ ಗೂಗಲ್ ತೀವ್ರ ಕಾದಾಟ ನಡೆಸುತ್ತಿರುವುದು, ಗ್ರಾಹಕರಿಗೆ ಒಂದು ರೀತಿ ಅನುಕೂಲವಾಗಿದೆ. ಐಇ 9 ಹಾಗೂ ಫೈರ್ ಫಾಕ್ಸ್ 4 ಲೋಕಾರ್ಪಣೆಯಾಗಿದ್ದು, ಗೂಗಲ್ ಸಹ ಕ್ರೋಮ್ ನ ಹೊಸ ಆವೃತ್ತಿಯೊಂದಿಗೆ ಪೈಪೋಟಿಗೆ ಇಳಿಯಲಿದೆ. ವೆಬ್ ಬ್ರೌಸರ್ ನ ಗ್ರಾಹಕ ಸ್ನೇಹಿ ಸೌಲಭ್ಯಗಳು, ಸುರಕ್ಷತೆ, ವೇಗ, ಉನ್ನತ ತಂತ್ರಜ್ಞಾನ ಬೆಂಬಲ, ಸ್ಥಿರತ ಹಾಗೂ ವೆಬ್ ಸ್ಟಾಂಡರ್ಡ್ಸ್ ಮುಂತಾದ ಅಂಶಗಳನ್ನು ಗಮನಿಸಿ ಫೈರ್ ಫಾಕ್ಸ್ 4 ಹಾಗೂ ಇಂಟರ್ ನೆಟ್ ಎಕ್ಸ್ ಪ್ಲೋರರ್ ನ ಹೋಲಿಕೆ ನೀಡಲಾಗಿದೆ.

ವೇಗ: ಸಾಮಾನ್ಯ ವೇಗ ಗಣಕದಲ್ಲಿ ಸನ್ ಸ್ಪೈಡರ್[SunSpider, a JavaScript benchmark] ಬಳಸಿ ವಿವಿಧ ಬ್ರೌಸರ್ ಗಳನ್ನು ಪರೀಕ್ಷಿಸಿದಾಗ ಬಂದ ಫಲಿತಾಂಶ ಅಚ್ಚರಿಯನ್ನು ತರಿಸುತ್ತದೆ. ಕ್ರೋಮ್ 10 ಸರಾಸರಿ 346.0ms, ಫೈರ್ ಫಾಕ್ಸ್ 4 308.5ms ಸರಾಸರಿ ತೆಗೆದುಕೊಂಡರೆ, ಐಇ9 288.8ms ಮಾತ್ರ ತೆಗೆದುಕೊಂಡಿದೆ. ಆದರೆ, ಸಾಮಾನ್ಯ ಬಳಕೆದಾರರ ಪರೀಕ್ಷೆಯಂತೆ ಟೆಕ್ ವೆಬ್ ಪುಟ ತೆರೆಯಲು ಫೈರ್ ಫಾಕ್ಸ್ ಗೆ 5 ಸೆಕೆಂಡ್ ಸಾಕು. ಕ್ರೋಮ್ ಗೆ 4 ಸೆಕೆಂಡ್ ಹಾಗೂ ಐಇ 9ಗೆ 8ರಿಂದ 9 ಸೆಕೆಂಡ್ ಬೇಕಾಗುತ್ತದೆ. ಯೂಟ್ಯೂನ್ ಮುಂತಾದ ವಿಡಿಯೋ ಆಧಾರಿತ ಪುಟ ಓಪನ್ ಆಗಲು ಫೈರ್ ಫಾಕ್ಸ್, ಐಇಗೆ 3ರಿಂದ 4 ಸೆಕೆಂಡ್ ಬೇಕಾದರೆ, ಕ್ರೋಮ್ ಕೊಂಚ ಹಿಂದಿದ್ದು 4 ರಿಂದ 5 ಸೆಕೆಂಡು ತೆಗೆದುಕೊಳ್ಳುತ್ತದೆ.

ಸ್ಥಿರತೆ, ವೆಬ್ ಸ್ಟಾಂಡರ್ಸ್ : ಮೂರು ಬ್ರೌಸರ್ ಗಳು HTML 5 ಸ್ಟಾಂಡರ್ಸ್ ಬೆಂಬಲಿಸುತ್ತದೆ. ಆದರೆ, ಬೇರೆ ಬೇರೆ ವಿಡಿಯೋ ಫಾರ್ಮಟ್ ಗೆ ಬೆಂಬಲಿಸುತ್ತದೆ. ಐಇ 9 ಪ್ರತಿ ಟ್ಯಾಬ್ ಅನ್ನು ಬೇರೆ ಕಾರ್ಯವಾಗಿ ಪರಿಗಣಿಸುವುದರಿಂದ ವಿಡಿಯೋ ನೋಡುವಾಗ ಕಿರಿಕಿರಿ, ಬ್ರೌಸರ್ ಕ್ರಾಶ್ ತಪ್ಪುತ್ತದೆ. ಪ್ಲಗ್ ಇನ್ ನಿಂದ ಉಂಟಾಗುವ ತೊಂದರೆಗೆ ಫೈರ್ ಫಾಕ್ಸ್ ನಲ್ಲಿ ಕ್ರಾಶ್ ಪ್ರೊಟೆಕ್ಷನ್ ಇದ್ದರೂ ಒಮ್ಮೆಗೆ ಒಂದು ಕ್ರಿಯೆಯನ್ನು ಮಾತ್ರ ಕೈ ಗೆತ್ತಿಕೊಳ್ಳುವುದರಿಂದ ಟ್ಯಾಬ್ ಮ್ಯಾನೇಜ್ ಮೆಂಟ್ ನಲ್ಲಿ ಇಇ 9 ಹಾಗೂ ಕ್ರೋಮ್ ಉತ್ತಮ.

ಬ್ರೌಸರ್ ವಿಶೇಷತೆಗಳು: ಟ್ಯಾಬ್ ಗ್ರೂಪಿಂಗ್ ಮೂಲಕ ಈಗಾಗಲೇ ತೆರೆಯಲ್ಪಟ್ಟ ವೆಬ್ ಪುಟಗಳನ್ನು ಸಂಗ್ರಹಿಸಲು ಫೈರ್ ಫಾಕ್ಸ್ ಸೌಲಭ್ಯ ಒದಗಿಸಿದೆ. ಇಮೇಲ್ ಹಾಗೂ ವೆಬ್ ಆಪ್ಸ್ ಉತ್ತಮ ಸೌಲಭ್ಯ ಎನ್ನಬಹುದು. ಹಲವು ಸಾಧಕಗಳಿಂದ ನಿಮ್ಮ ಬ್ರೌಸರ್ ಗೆ ಮಾಹಿತಿ ರವಾನಿಸಲು ಸುಲಭವಾಗಿ synchronisation ಸೌಲಭ್ಯ ಒದಗಿಸಲಾಗಿದೆ. ಓಪನ್ ಟ್ಯಾಬ್ ನಲ್ಲಿನ ಮಾಹಿತಿ ಸೇರಿದಂತೆ ಬುಕ್ ಮಾರ್ಗ್, ಹಿಸ್ಟರಿ ಇತ್ಯಾದಿಗಳನ್ನು ಸುಲಭವಾಗಿ ಈಗಿನ ಬ್ರೌಸರ್ ಗೆ ಸಿಂಕ್ ಮಾಡಬಹುದು. ಕ್ರೋಮ್ ನಲ್ಲಿ ಈ ಸೌಲಭ್ಯವಿದ್ದರು ಅಷ್ಟಾಗಿ ಸುಧಾರಣೆ ಗೊಂಡಿಲ್ಲ. ಇಇ9 ನಲ್ಲಿ ಈ ಬಗ್ಗೆ sync ಅನ್ನೋ ಮಾತಿಲ್ಲ. ಬುಕ್ ಮಾರ್ಕ್ ಸೌಲಭ್ಯ ನೀಡುವಲ್ಲಿ ಎಲ್ಲಾ ಬ್ರೌಸರ್ ಗಳು ಸ್ಕೋರ್ ಮಾಡುತ್ತವೆ.

ಕ್ರೋಮ್ ರೀತಿ ವಿನ್ಯಾಸ ಉಳ್ಳ ಐಇ9 ನಲ್ಲಿ ಫೈರ್ ಫಾಕ್ಸ್ ಗಿಂತ ನೋಡಲು ಚೆಂದವಾಗಿ ಕಾಣಿಸುತ್ತದೆ. ಆದರೆ, ಫೈರ್ ಫಾಕ್ಸ್ ನಲ್ಲಿ ಪರ್ಸೋನಾಗಳು, ವೆಬ್ ಆಡ್ ಆನ್ ಮೂಲಕ ಬ್ರೌಸರ್ ಚೆಂದಗಾಣಿಸಬಹುದು. ಫೈರ್ ಫಾಕ್ಸ್ ನಲ್ಲಿ ಸಿಗುವ ಆಡ್ ಆನ್ ಗಳು, ಅಪ್ಲಿಕೇಷನ್ ಗಳು ಇನ್ನೂ ಐಇ ಕಡೆ ತಲುಪಿಲ್ಲ. ಬಹುಶಃ ತಲುಪುವುದು ಕಷ್ಟ. ಆದರೆ, ಗೂಗಲ್ ಅಪ್ಲಿಕೇಷನ್ ಗಳ ಅಪಾರ ಸಂಗ್ರಹವನ್ನು ತುಂಬಿಕೊಳ್ಳಲು ಕ್ರೋಮ್ ಆರಂಭಿಸಿದೆ. 
ಕೊನೆ ಮಾತು: ಐಇ 9 ಬೆಂಚ ಮಾರ್ಕ್ ಟೆಸ್ಟ್ ನಲ್ಲಿ ವೇಗವಾಗಿ ಓಪನ್ ಆದರೂ, ಬಳಕೆದಾರರ ಪರೀಕ್ಷೆಯಲ್ಲಿ ಸೋತಿದೆ. ಸಾಮಾನ್ಯ ಬಳಕೆದಾರರಿಗೆ ಹೇಳಿಮಾಡಿಸಿದ ಹಾಗೆ ಇದೆ. ವಿಂಡೋಸ್ ವಿಸ್ತಾ ಹಾಗೂ ವಿಂಡೋಸ್ 7 ರಲ್ಲಿ ಮಾತ್ರ ಐಇ9 ಕಾರ್ಯ ನಿರ್ವಹಿಸುವುದು ಅತಿ ದೊಡ್ಡ ಹೊಡೆತ ಎನ್ನಬಹುದು. ಫೈರ್ ಫಾಕ್ಸ್ ವಿಂಡೋಸ್ ಎಕ್ಸ್ಪಿ, ಲೈನಕ್ಸ್, ಮ್ಯಾಕ್, ಆಂಡ್ರ್ಯಾಡ್ ಅಪರೇಟಿಂಗ್ ಸಿಸ್ಟಮ್ ನಲ್ಲೂ ಕಾರ್ಯನಿರ್ವಹಿಸುತ್ತದೆ. HTML 5, CSS 3, JS API, File API, HIstory API ಎಲ್ಲದರಲ್ಲೂ ಫೈರ್ ಫಾಕ್ಸ್ ಉತ್ತಮ ಎಂದು ಸಾಬೀತಾಗಿದೆ.

ಫ್ಲಾಶ್ ತಾಣಗಳು ಗೂಗಲ್ ಕ್ರೋಮ್ ನಲ್ಲಿ ಇನ್ನೂ ವೀಕ್ಷಣೆ ಕಷ್ಟ. ಒಟ್ಟಾರೆ, ಸಾಮಾನ್ಯರಿಗೆ ಐಇ9, ಎಲ್ಲರಿಗೂ ಫೈರ್ ಫಾಕ್ಸ್ ಎನ್ನಬಹುದು. ಮೊದಲ ದಿನ ಐಇ9 2.3 ಮಿಲಿಯನ್ ನಷ್ಟು ಡೌನ್ ಲೋಡ್ ಆಗಿದೆ. ಫೈರ್ ಫಾಕ್ಸ್ 4 ಈ ಸಮಯಕ್ಕೆ ಸರಿಯಾಗಿ 5.8 ಮಿಲಿಯನ್ ಡೌನ್ ಲೋಡ್ ಅಗಿದೆ ಎಂದರೆ, ಜನಪ್ರಿಯತೆಯನ್ನು ಲೆಕ್ಕಾಚಾರ ತಿಳಿಯುತ್ತದೆ.

Sunday, March 20, 2011

ಮೈಕ್ರೋಸಾಫ್ಟ್ ಪರೀಕ್ಷೆಯಲ್ಲಿ ಪೋರನ ವಿಶ್ವ ದಾಖಲೆ

ಅಮೆರಿಕದ ಮೈಕ್ರೋಸಾಫ್ಟ್ ಕಂಪನಿ ಇಂಟರ್ ನೆಟ್ ಮೂಲಕ ನಡೆಸಿದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ 11 ವರ್ಷದ ಬಾಲಕನೊಬ್ಬ 1,000 ಕ್ಕೆ 1,000 ಅಂಕ ಗಳಿಸಿ, ವಿಶ್ವ ದಾಖಲೆ ಮಾಡಿದ್ದಾನೆ. ಗುಜರಾತಿನ ರಾಜಕೋಟೆಗೆ ಇದು ಎರಡನೆಯ ಹಿರಿಮೆಯಾಗಿದೆ.

ಐದನೇ ತರಗತಿಯ ಅಕ್ಷಿತ್ ಜಯೇಶ್ ಧ್ರುವ್ ಮಾರ್ಚ್ 16ರಂದು ಈ ಸಾಧನೆ ಮೆರೆದಿದ್ದಾನೆ. ಇನ್ ಸೈಡ್ ಟುಮಾರೊ ಕಂಪ್ಯೂಟರ್ ಅಕಾಡೆಮಿಯಲ್ಲಿ ಓದುತ್ತಿರುವ ಅಕ್ಷಿತ್, 119 ರಾಷ್ಟ್ರಗಳಲ್ಲಿ 3ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೆ ಓದುತ್ತಿರುವವರು 17,000 ಪರೀಕ್ಷಾರ್ಥಿಗಳನ್ನು ಸೋಲಿಸಿದ್ದಾನೆ ಎಂದು ಅಕಾಡೆಮಿ ಮುಖ್ಯಸ್ಥ ಚಿರಾಗ್ ಕೊಠಾರಿ ತಿಳಿಸಿದ್ದಾರೆ.

ಈ ಹಿಂದೆ ಇದೇ ನಗರದ 21 ವರ್ಷದ ಶ್ರುತಿ ದೋಶಿ ಅವರು ಇಂತಹ ಸಾಧನೆಗೈದಿದ್ದರು. 2004ರಲ್ಲಿ ನ್ಯೂಜಿಲಾಂಡ್-ನ ಪೀಟರ್ ಫಿಲ್ 2004ರಲ್ಲಿ 999 ಅಂಕ ಗಳಿಸಿದ್ದೇ ಈ ಹಿಂದಿನ ದಾಖಲೆಯಾಗಿತ್ತು. ಸ್ವಯಂಸೇವಾ ಸಂಸ್ಥೆಯೊಂದು ಈ ಅಕಾಡೆಮಿ ಉಸ್ತುವಾರಿ ವಹಿಸಿದ್ದು, ಕಂಪ್ಯೂಟರ್ ಸಾಕ್ಷರತೆ ಜಾಗೃತಗೊಳಿಸುವುದು ಇದರ ಉದ್ದೇಶವಾಗಿದೆ. ಹೆಚ್ಚಿನ ವಿವರಗಳಿಗೆ ಈ ಅಂತರ್ಜಾಲದಲ್ಲಿ ಜಾಲಾಡಿ:  http://bit.ly/2ViMxe

Friday, March 11, 2011

ಸುನಾಮಿ: ಸಂತ್ರಸ್ತರ ಪತ್ತೆಗೆ ಗೂಗಲ್ ಬಳಸಿ


ರ್ಚ್ ಇಂಜಿನ್ ದೈತ್ಯ ಗೂಗಲ್ ಜಪಾನಿನ ಸುನಾಮಿ ಸಂತ್ರಸ್ಥರ ನೆರವಿಗೆ ತನ್ನದೇ ಆದ ವಿಶಿಷ್ಟ ರೀತಿಯ ಸೇವೆ ಆರಂಭಿಸಿದೆ. ಜಪಾನಿನಲ್ಲಿ ಇಂದು (ಮಾರ್ಚ್ 11) ಸಂಭವಿಸಿದ ಭೀಕರ ಭೂಕಂಪ ಮತ್ತು ಸುನಾಮಿಯಿಂದ ಬಂಧು ಮಿತ್ರರನ್ನು ಕಳೆದುಕೊಂಡವರ ಪತ್ತೆಗಾಗಿ ವಿಶೇಷ ಸೇವೆ ನೀಡತೊಡಗಿದೆ. ಇದರೊಂದಿಗೆ ಗೂಗಲ್, ನಿಜಾರ್ಥದಲ್ಲಿ ಸರ್ಚ್ ಇಂಜಿನ್ ಎನಿಸಿಕೊಂಡಿದೆ.

ಬಂಧು ಮಿತ್ರರನ್ನು ಕಳೆದುಕೊಂಡವರು ಅವರ ಬಗ್ಗೆ ಸೂಕ್ತ ಮಾಹಿತಿಯನ್ನು Google Person Finder Service ಮೂಲಕ ಒದಗಿಸಬಹುದು. ಈ ಮಾಹಿತಿಯನ್ನು ನೋಡಿ ಸಂತ್ರಸ್ತರ ಬಗ್ಗೆ ಮಾಹಿತಿಯಿರುವವರೂ ಹೆಚ್ಚಿನ ಮಾಹಿತಿಯನ್ನು ಗೂಗಲ್ ಗೆ ಒದಗಿಸಬಹುದು. ಈ ಸೇವೆ ಇಂಗ್ಲಿಷ್ ಮತ್ತು ಜಪಾನ್ ಭಾಷೆಗಳಲ್ಲಿ ಲಭ್ಯವಿದೆ.
ಗೂಗಲ್ ಇದಕ್ಕೆ Person Finder: 2011 Japan Earthquake ಎಂದು ಹೆಸರು ನೀಡಿದೆ. ಇದನ್ನು ಎರಡು ರೀತಿ ಬಳಸಿಕೊಳ್ಳಬಹುದು. ಒಂದು, ಬಂಧು ಮಿತ್ರರನ್ನು ಹುಡುಕುವುದಕ್ಕಾಗಿ. ಮತ್ತೊಂದು, ಸಂತ್ರಸ್ತ ಬಂಧು ಮಿತ್ರರ ಬಗ್ಗೆ ಮಾಹಿತಿ ಒದಗಿಸುವುದು. ಆದರೆ ಇಂತಹ ಮಾಹಿತಿಯ ಸತ್ಯಾಸತ್ಯತೆಯನ್ನು ತಾನು ಖಚಿತಪಡಿಸುವ ಹೊಣೆಹೊರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಇತರೆ ವೆಬ್ ಸೈಟ್ ಗಳೂ ಈ ಸೇವೆಯನ್ನು ತನ್ನದರಲ್ಲಿ ಪ್ರಸ್ತುತ ಪಡಿಸಬಹುದು. ಇದಕ್ಕೆ ಅಗತ್ಯವಿರುವ ಕೋಡ್ ಅನ್ನು ಒದಗಿಸಲು ಗೂಗಲ್ ಸಿದ್ಧವಿದೆ.
Link http://japan.person-finder.appspot.com/?lang=en

Japan earthquake: CCTV video of tsunami wave hitting airport

Wednesday, March 9, 2011

ಅಣುಶಕ್ತಿಯಿಂದ ಚಲಿಸೋ ಕಾರ್!! ರೈಡ್ ಗೆ ನೀವು ರೆಡಿನಾ?

 ಪೆಟ್ರೊಲ್ ಅಥವಾ ಡೀಸಲ್ ಟ್ಯಾಂಕ್ ಮರೆತುಬಿಡಿ. ನಿಮ್ಮ ಕಾರ್ ಅಣುಶಕ್ತಿಯಿಂದ ಚಲಿಸೋ ಸೋಜಿಗವನ್ನೊಮ್ಮೆ ಕಲ್ಪಿಸಿಕೊಳ್ಳಿ. ಇಡೀ ಪ್ರಪಂಚವೇ ಅಣುಶಕ್ತಿ ವಿರೋಧಿಯಾಗಿರುವಾಗ ಇದೇನೂ ನಿಮ್ಮ ಹೊಸ ಧಾಟಿ ಎಂದು ದುರುಗಟ್ಟಿ ನೋಡಬೇಡಿ. ಇದು ಸುರಕ್ಷಿತ ಅಣುಶಕ್ತಿ. ಸುರಕ್ಷಿತವಾದ, ಅಗ್ಗದ, ಸಣ್ಣದಾದ ಮತ್ತು ಇಂಧನ ದಕ್ಷತೆಗೆ ಇನ್ನೊಂದು ಹೆಸರು ನೂತನ ಯುರೇನಿಯಂ ಧಾತು. ಯುರೇನಿಯಂ ಅಣು ಕೂಡ ನಿಮ್ಮ ಕಾರಿಗೆ ಪರ್ಯಾಯ ಇಂಧನವಾಗಬಹುದು. ಅದರಿಂದ ನಿಮ್ಮ ಕಾರ್ ಹೆಚ್ಚು ಸರಾಗವಾಗಿ ಓಡಬಹುದು.

ಅಣುಸ್ಥಾವರದಲ್ಲಿ ಹೊಸ ಬಗೆಯ ಯುರೇನಿಯಂ ಆಕೃತಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಇದನ್ನು ಕಾರಿಗೆ ಬದಲಿ ಇಂಧನದಂತೆ ಬಳಸಬಹುದು. ಈ ಅಣು ಕಣದ ಕಣಜವನ್ನಿಟ್ಟುಕೊಂಡು ನಿಮ್ಮ ಕಾರ್ ಹೆಚ್ಚು ಶಕ್ತಿಶಾಲಿಯಾಗಿ ಚಲಿಸುತ್ತದೆ ಎಂಬುದು ವಿಜ್ಞಾನಿಗಳ ಅಂಬೋಣ. ಯುರೇನಿಯಂ ನೈಟ್ರೆಟ್ ನ ಅಣುವೊಂದನ್ನು ಲಾಸ್ ಅಲಾಮೊಸ್ ನ್ಯಾಷನಲ್ ಲ್ಯಾಬೊರೇಟರಿಯ ವಿಜ್ಞಾನಿಗಳ ತಂಡ ರಚಿಸಿದೆ. ಇದು ಅಗ್ಗ, ಸುರಕ್ಷಿತ, ಇಂಧನ ದಕ್ಷತೆ ಮಾತ್ರವಲ್ಲದೇ ಹಳೆಯ ವಾಹನ ಇಂಧನಗಳಿಗೆ ಹೋಲಿಸಿದರೆ ಇದು ಹೆಚ್ಚು ಶಕ್ತಿಯನ್ನು ನೀಡಲಿದೆಯಂತೆ.

"ಆಕ್ಟಿಂಡೆ ನೈಟ್ರೆಟ್ಸ್ ಎಂಬುದು ಭವಿಷ್ಯದ ಅಣುಶಕ್ತಿ ಇಂಧನವಾಗಲಿದೆ" ಎಂದು ಡಿಸ್ಕವರ್ ನ್ಯೂಸ್ ಜಾಕ್ಯೂಲಿನ್ ಕಿಪ್ಲಿಂಗರ್ ಅವರ ಮಾತನ್ನು ಉಲ್ಲೇಖ ಮಾಡಿದೆ. ಅವರು ಲಾಸ್ ಅಲಾಮೊಸ್ ನ್ಯಾಷನಲ್ ಲ್ಯಾಬೊರೇಟರಿಯ ವಿಜ್ಞಾನಿಗಳಲ್ಲಿ ಒಬ್ಬರು. ಇವರು ಕಂಡುಹಿಡಿದ ಅಣು ಇಂಧನ ಪ್ರಾಯೋಗಿಕವಾಗಿ ಹೊರಬರಲು ಇನ್ನೂ ಒಂದಿಷ್ಟು ಸಮಯಬೇಕಾಗಬಹುದು. ಈ ಕುರಿತು ಇನ್ನಷ್ಟು ಅಧ್ಯಯನಗಳು ನಡೆಯುತ್ತಿದೆಯಂತೆ. ನಾವು ಜಸ್ಟ್ ಆಲ್ ದಿ ಬೆಸ್ಟ್ ಹೇಳೋಣವೇ?

Saturday, March 5, 2011

ಕಲಾಂ ಮಾಡಿದ ಜಾದು…!

ದೇಶದ ವೈಜ್ನಾನಿಕ ಸಂಶೋಧನಾ ಕೇಂದ್ರವೊಂದರಲ್ಲಿ ರಕ್ಷಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯನ್ನು ಅತಿ ಶೀಘ್ಹ್ರದಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ತಲೆದೋರಿತ್ತು. ಮೇಲಾಗಿ ಪೂರ್ಣಗೊಳಿಸಲು ಕೇಂದ್ರ ನೀಡಿದ ಅವಧಿ ಸಹ ಅತಿ ಕಡಿಮೆ ಇತ್ತು.
೭೦ ಜನ ವಿಜ್ನಾನಿಗಳು ಹಗಲು-ಇರುಳುಗಳನ್ನು ಏಕಗೊಳಿಸಿ ದೇಶಕ್ಕಾಗಿ ದುಡಿಯುತ್ತಿದ್ದರು. ರಜೆಯ ಮಾತಿರಲಿ, ವಾರದ ರಜೆಯನ್ನೂ ಸಹ ಪಡೆದುಕೊಳ್ಳುವ ಅವಕಾಶವಿರಲಿಲ್ಲ. ಹಾಗೆಯೇ ೪ ತಿಂಗಳುಗಳ ಕಾಲ ಸತತ ದುಡಿದ ವಿಜ್ನಾನಿಗಳು ಕೆಲಸದ ಒತ್ತಡ ಹಾಗು ‘ಬಾಸ್’ನ ಬೇಡಿಕೆಗಳನ್ನು ಈಡೇರಿಸಲು ಹೆಣಗಿ ಸುಸ್ತಾಗಿದ್ದರು. ಆದರೆ ಆ ಬಾಸ್ ಹಾಗಿದ್ದರು. ಅವರ ನಡೆ-ನುಡಿಯಿಂದಾಗಿ ಎಲ್ಲರೂ ‘ಫೋರ್ಸ್ದ್ ವಿಧೇಯರಾಗಿದ್ದರು’! ಮಾತ್ರವಲ್ಲ ಅಂತಹ ಅಪರಿಮಿತ ಒತ್ತಡದ ಮಧ್ಯೆ ಬೇರೆ ಉದ್ಯೋಗ ಹುಡುಕುವ ಬಗ್ಗೆ ಯಾರೂ ಯೋಚಿಸುವ ಗೊಡವೆಗೂ ಹೋಗಿರಲಿಲ್ಲ!

ಇಂತಹ ಪರಿಸ್ಥಿಯಲ್ಲಿ ಆ ಕೇಂದ್ರದ ವಿಜ್ನಾನಿಯೊಬ್ಬರು ಬಾಸ್ ಬಳಿಗೆ ಬಂದು, “ಸಾರ್..ನಾನು ಇವತ್ತು ಬೇಗ ಮನೆಗೆ ಹೋಗಬೇಕು. ನಮ್ಮ ಮನೆಯ ಪಕ್ಕದ ಬೃಹತ್ ಮೈದಾನದಲ್ಲಿ ವಸ್ತು ಪ್ರದರ್ಶನ ಬಂದಿದ್ದು ನನ್ನ ಪುಟ್ಟ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುವುದಾಗಿ ಭರವಸೆ ಕೊಟ್ಟಿದ್ದೇನೆ” ಎಂದರು. ಬಾಸ್ ಅಂದು ಅರ್ಧ ಗಂಟೆ ಮುಂಚೆ ಮನೆಗೆ ಹೋಗಲು ಕೇಂದ್ರದ ಆ ಹಿರಿಯ ವಿಜ್ನಾನಿಗೆ ಅನುಮತಿ ನೀಡಿದರು.
ಆ ವಿಜ್ನಾನಿ ಎಂದಿನಂತೆ ಕೆಲಸದಲ್ಲಿ ತೊಡಗಿಕೊಂಡರು. ಮಧ್ಯಾನ್ಹ ಊಟದ ಬಳಿಕವೂ ಅವರ ಕೆಲಸ ಮುಂದುವರೆದಿತ್ತು. ಅವರ ಕೆಲಸ ಮುಗಿಯುವ ಹಂತದಲ್ಲಿತ್ತು. ಆದರೆ ಕೆಲಸದಲ್ಲಿ ಅವರು ಎಷ್ಟು ತನ್ಮಯರಾಗಿದ್ದರು ಎಂದರೆ ಅವರು ತಮ್ಮ ಕೈಗಡಿಯಾರ ನೋಡಿಕೊಂಡಿದ್ದು ರಾತ್ರಿ ೮.೩೦ಕ್ಕೆ. ಮಕ್ಕಳಿಗೆ ಅವರು ಕೊಟ್ಟ ಮಾತು ನೆನಪಿಗೆ ಬಂತು. ಓಡೋಡಿ ಬಾಸ್ ಚೇಂಬರ್ ಗೆ ಬಂದರು. ಅವರು ಅಲ್ಲಿರಲಿಲ್ಲ. ಕೊನೆಗೆ ಉಪಾಯಗಾಣದೇ ಅಪರಾಧಿ ಮನೋಭಾವದಿಂದ ಮನೆ ಕೆಡೆಗೆ ನಡೆದರು.
ಮನೆಯಲ್ಲಿ ಪೂರ್ತಿ ಮೌನ. ವಾತಾವರಣ ಸ್ಫೋಟಕ ಸ್ಥಿತಿ ತಲುಪಿತ್ತು. ಮಕ್ಕಳೂ ಕಾಣಿಸಲಿಲ್ಲ. ಪತ್ನಿ ಸೋಫಾದಲ್ಲಿ ಕುಳಿತು ಪತ್ರಿಕೆಯ ಮೇಲೆ ಕಣ್ಣಾಡಿಸುತ್ತಿದ್ದರು. ಈ ವಿಜ್ನಾನಿ ತಾನು ಏನು ಮಾತನಾಡಿದರೂ ಸ್ಪೋಟಕ ಪ್ರತಿಕ್ರಿಯೆ ಬಂದೇ ಬರುತ್ತದೆ ಎಂದು ಮಾತು ಆರಂಭಿಸಲು ತಡವರಿಸುತ್ತಿದ್ದರು. ಆದರೆ ಹೇಗಾದರೂ ಮಾಡಿ ತಪ್ಪು ಮಾಡಿದವರು ಮೊದಲು ಪ್ರಾರಂಭಿಸಬೇಕು ಎನ್ನುವುದು ಲೋಕಾರೂಢಿ!
ಆದರೆ ಅವರ ಪತ್ನಿಯೇ ಮೊದಲು ಮಾತಿಗಿಳಿದರು. “ಕಾಫಿ ಮಾಡಿಕೊಡಲೇ ಅಥವಾ ಹಸಿವಾಗಿದ್ದರೆ ಊಟಕ್ಕೆ ಬಡಿಸಲೇ?”
ಸ್ವಲ್ಪ ಸಮಾಧಾನ ಎನಿಸಿತು ಇವರಿಗೆ. ‘ನೀನು ಕಾಫಿ ಕುಡಿಯುವುದಾದರೆ ನಾನೂ ಕುಡಿಯುತ್ತೇನೆ.. ಅದಿರಲಿ ಮಕ್ಕಳೆಲ್ಲ ಎಲ್ಲಿ?’ ಸ್ವಲ್ಪ ಹಿಂಜರಿಕೆಯಿಂದಲೇ ಪ್ರಶ್ನಿಸಿದರು.
‘ನಿಮಗೊತ್ತಿಲ್ಲವೇ?..! ನಿಮ್ಮ ಬಾಸ್ ಬಂದು ಮಕ್ಕಳನ್ನು ವಸ್ತು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದಾರೆ..’
ವಿಜ್ನಾನಿಗೆ ಅಚ್ಚರಿಯಾಯಿತು.
ನಿಜವಾಗಿ ಆಗಿದ್ದೇನು ಎಂದರೆ..
ವಿಜ್ನಾನಿಗೆ ಬಹು ಬೇಗ ಮನೆಗೆ ಹೋಗಲು ಅನುಮತಿ ನೀಡಿದ್ದ ಬಾಸ್, ಅವರು ಕೆಲಸದಲ್ಲಿ ತನ್ಮಯರಾಗಿ ತಮ್ಮನ್ನು ತೋಡಗಿಸಿಕೊಳ್ಳುತ್ತಿದ್ದ ರೀತಿ ನೋಡಿ, ಈ ವ್ಯಕ್ತಿ ಬೇಗ ಮನೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ ಎಂದು ಅರಿತರು. ಆದರೆ ಅವರ ಮನೆಯಲ್ಲಿ ಪುಟ್ಟ ಮಕ್ಕಳು ಅವರಿಗಾಗಿ ಕಾಯುತ್ತಿದ್ದಾರೆ ಎಂಬ ಅರಿವು ಅವರಿಗಿತ್ತು. ನಮ್ಮ ಕೆಲಸಗಳಿಗಾಗಿ ಮನೆಯವರು ಪರಿತಪಿಸುವಂತಾಗಬಾರದು ಎಂದುಕೊಂಡವರೆ, ಮಕ್ಕಳನ್ನು ಪ್ರದರ್ಶನಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡರು.
ನಮ್ಮ ಬಾಸ್ ಯಾವತ್ತೂ ಇಂತಹ ಕೆಲಸಗಳನ್ನು ಮಾಡಬೇಕು ಅಂತಲ್ಲ. ಒಂದು ಸಲವಾದರೂ ಹೀಗೆ ನಡೆದುಕೊಂಡರೆ ಅವರ ಕೈ ಕೆಳಗಿನ ಸಿಬ್ಬಂದಿ ವಿಧೇಯರಾಗಿ ನಡೆಯುವುದರಲ್ಲಿ ಯಾವ ಸಂದೇಹವಿಲ್ಲ.
ಅತ್ಯಂತ ಒತ್ತಡ ಹಾಗು ತುಂಬಾ ಕೆಲಸಗಳ ಹೊರತಾಗಿಯೂ ವಿಜ್ನಾನಿಗಳು ತಮ್ಮ ಬಾಸ್ ಅವರ ಆಜ್ನೆ ಹಾಗು ಸಲಹೆಗಳನ್ನು ಪಾಲಿಸುತ್ತ ಮೈಮುರಿದು ದುಡಿಯಲು ಇದು ಕಾರಣವಾಗಿತ್ತು. ಅಂದ ಹಾಗೆ ಆ ಬಾಸ್ ಯಾರು ಗೊತ್ತೆ?
ನಮ್ಮ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ! ತಮಿಳುನಾಡಿನ ರಾಮೇಶ್ವರಂ ನ ಬಡ ಬೆಸ್ತರ ಕುಟುಂಬದಲ್ಲಿ ಜನಿಸಿ, ವೃತ್ತ ಪತ್ರಿಕೆಗಳನ್ನು ಅಣ್ಣ ಜಲಾಲುದ್ದೀನ್ ನೊಂದಿಗೆ ಮನೆ ಮನೆಗೆ ಹಂಚಿದ ವ್ಯಕ್ತಿ. ನಮ್ಮ ಪೀಳಿಗೆಗೆ ಕನಸುಗಳನ್ನು, ಆಸೆಗಳನ್ನು ಬಿತ್ತಿದ ಮಹಾನ್ ಮಾನವತಾವಾದಿ. ೩೫ಕ್ಕೂ ಹೆಚ್ಚು ದೇಶಿ-ವಿದೇಶಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟ್ರೇಟ್ ಪಡೆದ, ನಮ್ಮ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಪಾತ್ರರಾದ ಜಾತಿ-ಮತದ ಎಲ್ಲೆಗಳನ್ನು ಮೀರಿ ನಿಂತ ಆಸ್ತಿ.

Friday, March 4, 2011

ಕಿರಿಕಿರಿ ಕರೆ ತಪ್ಪಿಸಿ

“ಹಲೋ, ನಾನು xyz ಬ್ಯಾಂಕಿನಿಂದ ಮಾತನಾಡುತ್ತಿದ್ದೇನೆ. ನಿಮಗೆ ಕ್ರೆಡಿಟ್ ಕಾರ್ಡ್ ಬೇಕೇ?” ಎಂಬ ಮಾದರಿಯ ಕರೆಗಳು ನಿಮ್ಮ ಚರ ಅಥವಾ ಸ್ಥಿರ ದೂರವಾಣಿಗೆ ಬರುತ್ತಲೇ ಇವೆಯಾ? ಇಂತಹ ಕಿರಿಕಿರಿ ಕರೆಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಿಮ್ಮ ದೂರವಾಣಿಯನ್ನು ರಾಷ್ಟ್ರೀಯ ಕರೆ ಮಾಡಬೇಡಿ ಎಂಬ ಪಟ್ಟಿಯಲ್ಲಿ ಸೇರಿಸಬೇಕು. ವಾಣಿಜ್ಯಕ ಕರೆ ಮಾಡುವವರು ಕರೆ ಮಾಡುವ ಮೊದಲು ತಾವು ಕರೆ ಮಾಡಲು ಹೊರಟ ದೂರವಾಣಿ ಸಂಖ್ಯೆ ಈ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿ ನೋಡತಕ್ಕದ್ದು. ಈ ಪಟ್ಟಿಯಲ್ಲಿ ಇರುವ ದೂರವಾಣಿಗೆ ಕರೆ ಮಾಡಿದರೆ ದಂಡ ತೆರಬೇಕಾಗುತ್ತದೆ. ಈ ಜಾಲತಾಣದ ವಿಳಾಸ - ndncregistry.gov.in. ಈ ಪಟ್ಟಿಯಲ್ಲಿ ನಿಮ್ಮ ದೂರವಾಣಿ ಸಂಖ್ಯೆ ದಾಖಲಾಗಿದೆಯೇ ಎಂದು ಪರಿಶೀಲಿಸಿ. ಇಲ್ಲವಾದಲ್ಲಿ ಕೂಡಲೆ ದಾಖಲಿಸಿ. ಕಿರಿಕಿರಿ ಕರೆಗಳಿಂದ ಮುಕ್ತವಾಗಿ.

Monday, February 28, 2011

ಎಸ್ ಎಂ ಎಸ್ ಕ್ರಾಂತಿ

 ನೀವು ಮೆಡಿಕಲ್ ಶಾಪ್ ಗೆ ಹೋಗಿ ಔಷಧಿ ಹಾಗೂ ಮಾತ್ರೆ ಕೋಳ್ಳುತ್ತೀರಿ. ಅದು ಅಸಲಿಯೋ ನಕಲಿಯೋ ಕಂಡುಹಿಡಿಯುವುದು ಹೇಗೆ, 'ನಮ್ಮ ಕೈಯಲಂತೂ ಸಾಧ್ಯವೇ ಇಲ್ಲ, ದೇವರ ಮೇಲೆ ಭಾರ ಕೊಳ್ಳುವುದು, ಎಂದು ಹತಾಶೆಯಿಂದ ಮರುಗಬೇಡಿ. ಇನ್ನು ಮುಂದೆ ಕೇವಲ ಒಂದು ಎಸ್ ಎಂ. ಎಸ್. ಮಾಡಿ ನೀವು ಕೊಂಡ ಔಷಧಿ ಅಸಲಿಯೋ, ನಕಲಿಯೋ ತಿಳಿದುಕೊಳ್ಳಬಹುದು.
ಹೌದು, ಕೇಂದ್ರ ಔಷಧ ಸಲಹಾ ಸಮಿತಿ ಔಷಧಗಳ ಮೇಲೆ ವಿಶೇಷ ಕೋಡ್ ನಮೂದಿಸಿ, ಅದರ ಬಗ್ಗೆ ಮಾಹಿತಿ ಒದಗಿಸುವ ಪ್ರಸ್ತಾಪಕ್ಕೆ ಓಕೆ ಎಂದಿದೆ. ಹೀಗಾಗಿ ಈ ಪ್ರಸ್ತಾಪವೀಗ ಔಷದ ತಾಂತ್ರಿಕ ಸಲಹಾ ಮಂಡಳಿ ಮುಂದಿದೆ. ಅಲ್ಲಿಯೂ ಓಕೆಯಾದಲ್ಲಿ ಕೇಂದ್ರ ಆರೋಗ್ಯ ಇಲಾಖೆ ಅಂತಿಮ ಅದೇಶ ಹೊರಡಿಸಲಿದೆ.
ಈ ಆದೇಶ ಹೊರಬಿದ್ದಲ್ಲಿ ನಮ್ಮ ದೇಶದಲ್ಲಿ ಮಾರಲಾಗುವ ಪ್ರತಿಯೊಂದು ಔಷದದ ಮೇಲೂ 2ಡಿ ಬಾರ್ ಕೋಡ್ ಮತ್ತು ಯೂನಿಕ್ ರಾಂಡ್ಯಾಮ್ಲಿ ಜನರೇಟೆಡ್ ನ್ಯೂಮರಿಕ್ ಕೋಡ್ (ಯುಐಡಿ) ನಮೂದಿಸಲಾಗುತ್ತದೆ. ಈ ಬಾರ್ ಕೋಡ್ ನ ಮೇಲೆ ಪೋನ್ ನಂಬರನ್ನೂ ಹಾಕಲಾಗುತ್ತದೆ. ಔಷದಿ ಕೊಳ್ಳುವ ಗ್ರಾಹಕರು ಯುಐಡಿ ನಂಬರನ್ನು ಪೋನ್ ನಂಬರಗೆ ಎಸ್ ಎಂ ಎಸ್ ಮಾಡಿದರೆ ಸಾಕು, ಕೂಡಲೇ ಈ ಔಷದಿ ಅಸಲಿ ಹೌದೋ, ಅಲ್ಲವೋ ಎಂ ಮಾಹಿತಿ ನಿಮ್ಮ ಮೊಬೈಲ್ ಗೆ ಒಂದು ಸೇರುತ್ತದೆ. ಈ ರೀತಿ ಬಾರ್ ಕೋಡ್ ಅಂಟಿಸಲು ಹೆಚ್ಚೇನೂ ಖರ್ಚಾಗುವುದಿಲ್ಲ. ಹೆಚ್ಚೆಂದರೆ 30ಪೈಸೆಯಷ್ಟೆ ಖರ್ಚಾಗುತ್ತದೆಯಂತೆ. ಎಲ್ಲ ಔಷದ ತಯಾರಕರು ಈ ಸಿಸ್ಟಂ ಅಳವಡಿಸಿಕೊಂಡಲ್ಲಿ ಈ ಖರ್ಚು 10 ಪೈಸೆಗಿಳಿಯಲಿದೆ ಎಂದು ಡ್ರಗ್ ಕಂಟ್ರೋಲರ್ ಹೇಳಿದ್ದಾರೆ. ಆದರೆ ಸಣ್ಣ ಔಷಧ ತಯಾರಕರು ಖರ್ಚು ಜಾಸ್ತಿಯಾಗುತ್ತದೆ ಎಂದು ತಗಾದೆ ತೆಗೆದಿದ್ದಾರೆ. ಈ ಸಿಸ್ಟಂ ನಮ್ಮ ದೇಶದಲ್ಲಿಯೇ ಮೊದಲಿಗೆ ಜಾರಿಗೆ ಬರುತ್ತಿಲ್ಲ. ಈಗಾಗಲೇ ಇಟಲಿ, ಮಲೇಷಿಯಾ, ಐರೋಪ್ಯ ರಾಷ್ಟ್ರಗಳು ಇದನ್ನು ಅಳವಡಿಸಿಕೊಂಡು ನಕಲಿ ಔಷಧಗಳ ಮಾರಾಟದ ಮೇಲೆ ನಿಯತ್ರಣ ಸಾದಿಸಿವೆ. ನಮ್ಮ ದೇಶದಲ್ಲಿಯೂ ನಕಲಿ ಹಾವಳಿ ಜಾಸ್ತಿಯಾಗಿದೆ. ಕೇಂದ್ರ ಆರೋಗ್ಯ ಇಲಾಖೆ ಪ್ರಕಾರವೇ ಮಾರಾಟವಾಗುತ್ತಿರುವ ಔಷಧಗಳಲ್ಲಿ ಶೇ5.6 ಕಳಪೆ ಗುಣಮಟ್ಟದವು ಮತ್ತು ಶೇ0.26 ನಕಲಿ ಔಷಧಿಗಳು. ಹೀಗಾಗಿ ಈ ಸಿಸ್ಟಂ ಅಳವಡಿಸುವುದು ಅತಿ ಅಗತ್ಯವಾಗಿದೆ. ಆದರೆ ಜಾರಿಗೆ ಬರಲು ಇನ್ನೆಷ್ಟು ದಿನ ಬೇಕೋ ?
ಹೆಚ್ಚಿನ ಮಾಹಿತಿಗೆ: http://www.maya-biotech.com

Thursday, February 24, 2011

ಶೀಘ್ರದಲ್ಲೇ 150 ರೂಪಾಯಿಗಳ ಮೌಲ್ಯದ ನಾಣ್ಯ


150 ರೂಪಾಯಿ ಮೌಲ್ಯದ ನಾಣ್ಯದಂತೆ 5 ರೂಪಾಯಿ ನಾಣ್ಯವನ್ನು ಕೂಡಾ ತಯಾರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ, ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿಗಳ ಮೌಲ್ಯದ ನಾಣ್ಯವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.


ಆದಾಯ ತೆರಿಗೆ ಇಲಾಖೆ (1860-2010) ಆರಂಭವಾಗಿ 150 ವರ್ಷಗಳನ್ನು ಪೂರೈಸಿದ ನೆನಪಿಗಾಗಿ ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಬಜೆಟ್ ಭಾಷಣಕ್ಕಿಂತ ಮುಂಚೆ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ.
ಕೇಂದ್ರ ಸರಕಾರ ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ ಎಂದು ವಿತ್ತಸಚಿವಾಲಯದ ಆಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಸಚಿವಾಲಯ ಅಧಿಕೃತ ಸೂಚನೆಯನ್ನು ಹೊರಡಿಸಿದೆ.
150 ರೂಪಾಯಿ ನಾಣ್ಯವನ್ನು ಬೆಳ್ಳಿ, ತಾಮ್ರ, ಉಕ್ಕು ಮತ್ತು ಸತವುನಿಂದ ತಯಾರಿಸಲಾಗುತ್ತದೆ. ಅಂತಾರಾಷ್ಟ್ರೀಯ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ‘ಸತ್ಯಮೇವ ಜಯತೇ’ ಮತ್ತು ‘ಭಾರತ’ ಹಾಗೂ ಹಿಂಭಾಗದಲ್ಲಿ ‘ಚಾಣಕ್ಯ’ನ ಭಾವಚಿತ್ರ ಮತ್ತು ಜೇನುಹುಳುವಿನೊಂದಿಗಿರುವ ಕಮಲದ ಚಿತ್ರವಿರುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಆರಂಭವಾಗಿ 150 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನೆನಪಿನಂಗವಾಗಿ, ಮೊದಲ ಬಾರಿಗೆ 150 ರೂಪಾಯಿ ಮೌಲ್ಯದ ನಾಣ್ಯವನ್ನು ಸರಕಾರ ಬಿಡುಗಡೆ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Tuesday, February 15, 2011

ಮನೆಮನೆ ಮತಯಾಚನೆ ನಿಷೇಧ. ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ : ಎಸ್.ವೈ.ಖುರೇಷಿ


 
ಚುನಾವಣೆಯ ನಿರ್ಣಾಯಕ ಹಂತವಾದ ಮತದಾನಕ್ಕೂ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಮನೆ-ಮನೆಗೆ ತೆರಳಿ ಮತ ಯಾಚಿಸುವುದೂ ಸೇರಿದಂತೆ ಎಲ್ಲ ಬಗೆಯ ಪ್ರಚಾರವನ್ನೂ ನಿಷೇಧಿಸುವತ್ತ ಕೇಂದ್ರ ಚುನಾವಣಾ ಆಯೋಗ ಹೆಜ್ಜೆಯಿಟ್ಟಿದೆ.
ಕೇಂದ್ರ ಕಾನೂನು ಸಚಿವಾಲಯ ಮತ್ತು ಕೇಂದ್ರ ಚುನಾವಣಾ ಆಯೋಗ ಜಂಟಿಯಾಗಿ ನಗರದ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ಕುರಿತ ಪ್ರಾದೇಶಿಕ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಈ ವಿಷಯ ಪ್ರಕಟಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಕಾನೂನುಗಳ ಪ್ರಕಾರ ಮತದಾನಕ್ಕೂ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾರವನ್ನು ಮಾತ್ರ ನಿಷೇಧಿಸಲಾಗುತ್ತದೆ. ಆದರೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆಮನೆಗೆ ತೆರಳಿ ಮತ ಯಾಚಿಸಲು ಅವಕಾಶ ಇದೆ. ಈ ಅವಧಿಯಲ್ಲಿ ಮತದಾರರಿಗೆ ಹಣ, ವಸ್ತುಗಳು ಮತ್ತು ಮದ್ಯ ವಿತರಿಸಿ ಆಮಿಷ ಒಡ್ಡುತ್ತಿರುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನೆ-ಮನೆ ಪ್ರಚಾರವನ್ನೂ ನಿಷೇಧಿಸಲು ಆಯೋಗ ಯೋಚಿಸಿದೆ.
‘ಮತದಾನಕ್ಕೂ ಮುಂಚಿನ ಅವಧಿಯಲ್ಲಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ಖುರೇಷಿ ಹೇಳಿದರು.
‘ಮತದಾರರು ಯಾವುದೇ ಪೂರ್ವಗ್ರಹ ಇಲ್ಲದೇ ಮತ ಚಲಾಯಿಸುವ ವಾತಾವರಣ ಸೃಷ್ಟಿಯಾಗಬೇಕು. ಇದಕ್ಕಾಗಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳಾಗಲೀ, ಅವರ ಬೆಂಬಲಿಗರಾಗಲೀ ಮತದಾರರನ್ನು ಸಂಪರ್ಕಿಸದಂತೆ ನಿಷೇಧ ಹೇರಲು ಚಿಂತನೆ ನಡೆದಿದೆ. ಮತದಾನಕ್ಕೂ ಮುನ್ನ ಮತದಾರರಿಗೆ ಆಮಿಷ ಒಡ್ಡಲು ಅವಕಾಶ ಇಲ್ಲದಿದ್ದರೆ ಮುಕ್ತ ಮತ್ತು ನಿಷ್ಪಕ್ಷಪಾತ ಮತದಾನ ನಡೆಯುತ್ತದೆ’ ಎಂದರು.
‘ಚುನಾವಣಾ ಸಮೀಕ್ಷೆಗಳನ್ನು ನಿಷೇಧಿಸುವ ಮತ್ತು ಚುನಾವಣೆಯ ದಿನ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಮೇಲೆ ನಿಗಾ ಇಡುವ ಅಗತ್ಯವಿದೆ. ‘ಕಾಸಿಗಾಗಿ ಸುದ್ದಿ’ ಸಮಸ್ಯೆ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ನಿಷೇಧಿಸಲೇಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಶುದ್ಧೀಕರಣವೇ ಗುರಿ: ತ್ವರಿತಗತಿಯಲ್ಲಿ ಚುನಾವಣಾ ಸುಧಾರಣೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿದ ಖುರೇಷಿ, ‘ರಾಜಕೀಯ ವ್ಯವಸ್ಥೆಯನ್ನು ಅಪರಾಧ ಮುಕ್ತಗೊಳಿಸುವುದೇ ನನ್ನ ಮೊದಲ ಕಾರ್ಯಸೂಚಿ’ ಎಂದರು.
‘ಐದು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸಬಹುದಾದ ಆರೋಪದಡಿ ವಿಚಾರಣೆ ಎದುರಿಸುತ್ತಿರುವವರನ್ನು ಅನರ್ಹಗೊಳಿಸುವ ಸಂಬಂಧ ‘ಪ್ರಜಾಪ್ರತಿನಿಧಿ ಕಾಯ್ದೆ-1951’ರ ಕಲಂ 8ಕ್ಕೆ ತಿದ್ದುಪಡಿ ತರುವಂತೆ ಚುನಾವಣಾ ಆಯೋಗ 2004ರಲ್ಲೇ ಸಲಹೆ ಮಾಡಿತ್ತು. ಈ ಅವಕಾಶ ದುರುಪಯೋಗ ಆಗದಂತೆ ತಡೆಯಲು ಚುನಾವಣೆಗೂ ಆರು ತಿಂಗಳ ಮುನ್ನ ದಾಖಲಾದ ಪ್ರಕರಣಗಳನ್ನು ಮಾತ್ರ ಪರಿಗಣಿಸಬೇಕೆಂಬ ಅಂಶ ತಿದ್ದುಪಡಿಯಲ್ಲಿರಬೇಕು’ ಎಂದು ಪ್ರತಿಪಾದಿಸಿದರು.
ಶೀಘ್ರದಲ್ಲಿ ಕಾಯ್ದೆಗೆ ತಿದ್ದುಪಡಿ: ದೇಶದ ಚುನಾವಣಾ ವ್ಯವಸ್ಥೆಗೆ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗದ ಸಲಹೆ ಪಡೆದು ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಆಗಸ್ಟ್ ಒಳಗೆ ಸಮಗ್ರ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ರಾಜಕೀಯ ಪಕ್ಷಗಳು, ಕಾನೂನು ತಜ್ಞರು, ಸರ್ಕಾರೇತರ ಸಂಸ್ಥೆಗಳು, ಶೈಕ್ಷಣಿಕ ವಲಯದ ಪ್ರಮುಖರು ಸೇರಿದಂತೆ ಚುನಾವಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಸಲಹೆ ಪಡೆದ ಬಳಿಕ ಚುನಾವಣಾ ಸುಧಾರಣೆ ಪ್ರಸ್ತಾವವನ್ನು ಅಂತಿಮಗೊಳಿಸಲಾಗುವುದು ಎಂದರು.
ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವವರೂ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿರ್ಬಂಧಿಸುವುದು ಚುನಾವಣಾ ಸುಧಾರಣೆಯ ಮುಖ್ಯ ಅಂಶ. ಅದರೊಂದಿಗೆ ಚುನಾವಣಾ ವೆಚ್ಚ, ಗಂಭೀರವಲ್ಲದ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು, ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು ಮತ್ತು ವಾಪಸ್ ಪಡೆಯುವುದು, ಆಸ್ತಿ ಮತ್ತು ಬಾಧ್ಯತೆಗಳ ವಿವರ ಪ್ರಕಟ ಮತ್ತಿತರ ಅಂಶಗಳೂ ಈ ಸುಧಾರಣೆಯ ಭಾಗವಾಗಲಿವೆ ಎಂದು ಮೊಯಿಲಿ ಹೇಳಿದರು.
‘ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಸಮಿತಿಯು ಈಗಾಗಲೇ ಐದು ಪ್ರಾದೇಶಿಕ ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದು, ಸಲಹೆಗಳನ್ನು ಸ್ವೀಕರಿಸಿದೆ. ಚುನಾವಣಾ ವ್ಯವಸ್ಥೆಯನ್ನು ಬಲಗೊಳಿಸುವ ಸಂಬಂಧ ಸಲಹೆ ಪಡೆಯಲು ಏಪ್ರಿಲ್ 2 ಮತ್ತು 3ರಂದು ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಸಭೆ ನಡೆಯಲಿದೆ. ಬಳಿಕ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಚುನಾವಣಾ ಸಂಬಂಧಿ ಕಾಯ್ದೆಗಳಿಗೆ ಸಮಗ್ರ ತಿದ್ದುಪಡಿ ತರಲಾಗುವುದು’ ಎಂದರು.
‘ಚುನಾವಣಾ ಸಂಬಂಧಿ ಕಾಯ್ದೆಗಳಲ್ಲಿ ಇರುವ ಲೋಪಗಳನ್ನು ಗುರುತಿಸಲಾಗಿದೆ. ಅವುಗಳನ್ನು ಸರಿಪಡಿಸುವ ನೀಲಿನಕ್ಷೆಯೂ ಸಿದ್ಧವಿದೆ. ಈಗ ಜನತೆಯ ಅಭಿಪ್ರಾಯವನ್ನು ಪಡೆಯೋಣ. ಸುಧಾರಣೆಯ ಪರವಾಗಿ ರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುವ ಜನಾಭಿಪ್ರಾಯವನ್ನು ಸಂಸತ್ತು ತಿರಸ್ಕರಿಸುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಆರು ತಿಂಗಳೊಳಗೆ ಇತ್ಯರ್ಥಗೊಳಿಸಬೇಕಿದೆ. ಇದಕ್ಕಾಗಿ ಕ್ರಿಮಿನಲ್ ನ್ಯಾಯ ಪದ್ಧತಿಯನ್ನು ಶುಚಿಗೊಳಿಸಬೇಕಿದೆ. 2012ರ ಡಿಸೆಂಬರ್ ಬಳಿಕ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿ ಅವಧಿಯನ್ನು ಮೂರು ವರ್ಷಕ್ಕೆ ಸೀಮಿತಗೊಳಿಸುವ ಮೂಲಕ ನ್ಯಾಯಾಂಗದಲ್ಲೂ ಸುಧಾರಣೆ ತರಲಾಗುವುದು ಎಂದರು.