Pages

Saturday, September 7, 2013

ವಿಶ್ವದ ಮೊದಲ ತೆಳ್ಳಗಿನ ಕೀಲಿಮಣೆ

ವಿಶ್ವದ ತೆಳು ವಾಚ್‌, ತೆಳು ಮೊಬೈಲ್‌ ಪ್ಯಾನಲ್‌ ಸುದ್ದಿಯನ್ನು ಈ ಹಿಂದೆ ಓದಿರಬಹುದು ಈಗ ಕೀ ಬೋರ್ಡ್ ಸರದಿ. ವಿಶ್ವದ ತೆಳ್ಳಗಿನ ಕೀ ಬೋರ್ಡ್‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸಿದ್ದಾರೆ. ಇಂಗ್ಲೆಂಡ್‌ನ ಕಂಪೆನಿಯೊಂದು ಅರ್ಧ ಮಿಲಿಮೀಟರ್‌ ದಪ್ಪವಿರುವ ವಿಶ್ವದ ಪ್ರಥಮ ಆಲ್ಟ್ರಾ ಸ್ಲಿಮ್‌ ಕಂಪ್ಯೂಟರ್‌ ಕೀ ಬೋರ್ಡ್‌ನ್ನು ತಯಾರಿಸಿದೆ. 
ಕೇಂಬ್ರಿಡ್ಜ್‌ ಸಿಲಿಕಾನ್‌ ರೇಡಿಯೋ ಕಂಪೆನಿ ಅಭಿವೃದ್ಧಿ ಪಡಿಸಿದ ಬ್ಲೂಟೂತ್‌ ಸ್ಮಾರ್ಟ್‌ ಟೆಕ್ನಾಲಜಿಯಿಂದ ತಯಾರದ ಈ ಕೀಬೋರ್ಡ್‌ ಕೇವಲ 0.5 ಮಿಲಿ ಮೀಟರ್‌ ದಪ್ಪವಿದೆ. ಕೀಬೋರ್ಡ್‌ ಹ್ಯಾಂಡ್‌ರೈಟಿಂಗ್‌ ರೆಕಗ್ನಿಷನ್‌ ಹೊಂದಿದ್ದು ಸ್ಟೈಲಸ್‌ ಪೆನ್‌ನಿಂದ ಇದರ ಮೇಲೆ ಬರೆಯಬಹುದು. ಚಿತ್ರವನ್ನು ಬಿಡಿಸಬಹುದು.
 
 ಟಚ್‌ ಲೆಟೆನ್ಸಿ(Touch latenc) 12 ಮಿಲಿಸೆಕೆಂಡ್‌‌ಗಿಂತಲೂ ಕಡಿಮೆ ಇದೆ ಎಂದು ತಯಾರಿಸಿದ ಕಂಪೆನಿ ಹೇಳಿದೆ.ಹೊಸದಾಗಿ ಬಂದಿರುವ iOS 7 ಮೊಬೈಲ್‌ ಸಾಧನಗಳು, ಮತ್ತು ವಿಂಡೋಸ್‌ 8 ಪಿಸಿ ಗಳಿಗೆ ಈ ಸಿಎಸ್‌ಆರ್‌ ಕೀ ಬೋರ್ಡ್ ಸಪೋರ್ಟ್‌ ಮಾಡುತ್ತದೆ. ಹೀಗಾಗಿ ಈ ವಿಶ್ವದ ಸ್ಲಿಮ್‌ ಕೀಬೋರ್ಡ್‌ ಹೇಗಿದೆ ಎನ್ನುವುದಕ್ಕೆ ಇಲ್ಲಿ ಆ ಕೀಬೋರ್ಡ್‌ ಚಿತ್ರ ಮತ್ತು ವೀಡಿಯೋವಿದೆ.http://www.youtube.com/watch?v=asOOL7YHIRg

ಹೆಚ್ಚಿನ ಮಾಹಿತಿಗೆ ಜಾಲತಾಣ ಕೊಂಡಿ: http://www.csr.com/news/pr/2013/csr-ultra-thin-keyboard