Pages

Monday, July 22, 2013

ಕನ್ನಡ ತಂತ್ರಾಂಶ ಉಪಕರಣಗಳು (ಉಚಿತ CD)

ಕನ್ನಡ ತಂತ್ರಾಂಶ (ಕನ್ನಡ ವರ್ಡ್, ಎಕ್ಸೆಲ್ ಮುಂತಾದ ಒಪೆನ್ ಆಫಿಸ್ ತಂತ್ರಾಂಶಗಳು ಕನ್ನಡದಲ್ಲಿ), ಕನ್ನಡ ಆಟಗಳು, ಕನ್ನಡ ಡಿಕ್ಷನರಿ ಮತ್ತು ಕನ್ನಡ ಫಾಂಟ್ ಗಳನ್ನು ಒಳಗೊಂಡ ಉಚಿತ CD (ಅಡಕ ಮುದ್ರಿಕೆ) ಬೇಕೆ...... ಇಲ್ಲಿ ಕ್ಲಿಕ್ಕಿಸಿ.
ಕೇಂದ್ರ ಸರ್ಕಾರವು ಗಣಕದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಅನೇಕ ಉಚಿತ ಕನ್ನಡ ತಂತ್ರಾಂಶ, ಕನ್ನಡ ಫಾಂಟ್ ಹಾಗೂ ಇನ್ನೀತರ ಕನ್ನಡಕ್ಕೆ ಸಂಬಂಧ ಪಟ್ಟ ಟೂಲ್ಸ್ ಗಳನ್ನು ಒಳಗೊಂಡ ಉಚಿತ CD ಯನ್ನು ಹಂಚುತ್ತಿದೆ. ಈ ಅಡಕ ಮುದ್ರಿಕೆಯಲ್ಲಿ ಏನೇನಿದೆ ಎಂಬ ಸಿಂಹಾವಲೋಕನವನ್ನು ಇಲ್ಲಿ ಬರೆದಿದ್ದೇನೆ.
೧] ಟ್ರೂ ಟೈಪ್ ಫಾಂಟ್ಸ್ ಮತ್ತು ಕೀಬೊರ್ಡ್ ಡ್ರೈವರ್
೩] ಮಲ್ಟಿಫಾಂಟ್ ಕೀಬೊರ್ಡ್ ಇಂಜಿನ್ ಫಾರ್ ಟ್ರು ಟೈಪ್ ಫಾಂಟ್ಸ್
೩] ಯುನಿಕೋಡ್ ಒಪೆನ್ ಟೈಪ್ ಫಾಂಟ್ಸ್
೪] ಯುನಿಕೋಡ್ ಕೀಬೊರ್ಡ್ ಡ್ರೈವರ್
೫] ಜೆನೆರಿಕ್ ಫಾಂಟ್ಸ್ ಕೋಡ್ ಮತ್ತು ಸ್ಟೋರೆಜ್ ಕೋಡ್ ಕನ್ವರ್ಟರ್
೬] ಸ್ಪ್ರೆಡ್ ಶೀಟ್ (Excel), ಸಂಪಾದಕ (Word), ಪ್ರಸ್ತುತಿ (Powerpoint) ಹಾಗೂ ಡ್ರಾಯಿಂಗ್ ಟೂಲ್ಸ್ ಗಳು ಇಷ್ಟೇ ಅಲ್ಲದೇ ಫೈರ್ ಫಾಕ್ಸ್, ಥಂಡರ್ ಬರ್ಡ್ ಹಾಗೂ ಗೈಮ್ ಎಲ್ಲವೂ ಕನ್ನಡದಲ್ಲಿ
೭] ಪದ ಪರೀಕ್ಷಕ
೮]ಬೈಲ್ಯಾಂಗ್ಯುಅಲ್ ಡಿಕ್ಷನರಿ
೯] ಡೆಕೊರೇಟಿವ್ ಫಾಂಟ್ಸ್ ಡಿಸೈನ್ ಟುಲ್
೧೦] ಡಾಟಾಬೆಸ್ ಸಾರ್ಟಿಂಗ್ ಟೂಲ್
೧೧] ಟೈಪ್ ಅಸಿಸ್ಟೆಂಟ್
೧೨] ಮೈಕ್ರೊಸಾಫ್ಟ್ ವರ್ಡ್ ಟುಲ್ಸ್
೧೩] ಮೈಕ್ರೊಸಾಫ್ಟ್ ಎಕ್ಸೆಲ್ ಟುಲ್ಸ್
೧೪] ಟ್ರಾಂಸ್ಲಿಟರೆಶನ್ ಟುಲ್ಸ್
೧೫] ಟೈಪಿಂಗ್ ಟೂಟರ್ ಫಾರ್ ಕನ್ನಡ
೧೬] ಕನ್ನಡ ಟೆಕ್ಸ್ಟ ಟು ಸ್ಪೀಚ್
೧೭] ಕನ್ನಡ ಟೆಕ್ಸ್ಟ ಎಡಿಟರ್ (ನುಡಿ)
೧೮] ಕಂಟೆಂಟ್ ಮ್ಯಾನೆಜ್ ಮೆಂಟ್ ಸಿಸ್ಟಮ್ ಫಾರ್ ಕನ್ನಡ
೧೯] ಕನ್ನಡ ಲೈಬ್ರರಿ ಮ್ಯಾನೆಜ್ ಮೆಂಟ್ ಸಿಸ್ಟಮ್
೨೦] ಕನ್ನಡ ಲ್ಯಾಂಗ್ವೇಜ್ ಟೂಟರ್ ಪ್ಯಾಕೆಜ್
೨೧] ಕನ್ನಡ ಪರ್ಸನಲ್ ಯುಟಿಲಿಟಿಸ್
೨೨] ಕನ್ನಡ ಗೇಮ್ಸ್ ಮತ್ತು ಪಜಲ್ಸ್
೨೩] ಕನ್ನಡ ಲೋಗೊ
೧೪] ಕನ್ನಡ ಸೀಮಲೆಸ್ ಇ-ಮೇಲ್ ಕ್ಲೈಂಟ್
 ಮಾಹಿತಿಗಾಗಿ ಕೊಂಡಿ: http://www.ildc.gov.in/

ಒನ್ ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ

ಇನ್ನೂ ಮುಂದೆ ನೀವು ಕುಳಿತಲ್ಲಿಯೇ ಇಂಟರ್‌ನೆಟ್‌ ಮೂಲಕ ಸುಲಭವಾಗಿ ಬಸ್‌ ಟಿಕೆಟ್‌ ಬುಕ್‌ ಮಾಡಬಹುದು. ಭಾರತದ ನಂ.1 ಪ್ರಾದೇಶಿಕ ಪೋರ್ಟಲ್ ಒನ್ಇಂಡಿಯಾ ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದೆ.
ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯಲ್ಲಿ ಅಗ್ರಗಣ್ಯರಾಗಿರುವ ರೆಡ್‌ಬಸ್.ಇನ್ ಸಹಯೋಗದೊಂದಿಗೆ ಒನ್ಇಂಡಿಯಾ ಬಸ್ ಟಿಕೆಟ್ ಬುಕ್ಕಿಂಗ್ ಸೇವೆಯನ್ನು ಆರಂಭಿಸಿದ್ದು, ಓದುಗರು ಇಂದಿನಿಂದಲೇ bus.oneindia.in ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಸೇವೆಯನ್ನು ಪಡೆದುಕೊಳ್ಳಬಹುದು.
 ರಾಜ್ಯ ಸೇರಿದಂತೆ ದೇಶದ ಉದ್ದಗಲಕ್ಕೂ ಸಂಚರಿಸುವ ಬಸ್ಸುಗಳ ಮಾಹಿತಿ, ಯಾವ ಬಸ್‌, ಬೇಕಾದ ಸೀಟ್‌ಗಳನ್ನು ನೀವು ಮುಂಚಿತವಾಗಿಯೇ ಈ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್‌ ಮಾಡಬಹುದು. ಒನ್ ಇಂಡಿಯಾದಿಂದ ಬಸ್ ಟಿಕೆಟ್ ಬುಕ್ಕಿಂಗ್ ಸೇವೆ bus.oneindia.in ವೆಬ್‌ಸೈಟ್‌ನಲ್ಲಿ ಹೀಗೆ ಟಿಕೆಟ್ ಬುಕ್‌ ಮಾಡಿ :
ಊರು ಮತ್ತು ದಿನಾಂಕ : ಎಲ್ಲಿಂದ ಎಲ್ಲಿಗೆ ಹೋಗಬೇಕು, ಯಾವ ದಿನಾಂಕದಂದು ಹೋಗಬೇಕು ಆಯ್ಕೆ ಮಾಡಿಕೊಂಡು, ಸರ್ಚ್ ಬಸಸ್ ಬಟನ್ ಕ್ಲಿಕ್ಕಿಸಿ. ಬಸ್ ಮತ್ತು ಸೀಟು : ಮೊದಲಿಗೆ ಬಸ್ ಆಪರೇಟರ್ ಆಯ್ಕೆ ಮಾಡಿಕೊಳ್ಳಿ. ಸೀಟುಗಳು ಎಷ್ಟಿವೆ ಎಂದು ನೋಡಿಕೊಂಡು, ಬೇಕಾದ ಸೀಟು ಆಯ್ದುಕೊಳ್ಳಿ. ಹತ್ತಬೇಕಾದ ಸ್ಥಳ ಕ್ಲಿಕ್ಕಿಸಿ ಮುಂದುವರಿಯುವ ಬಟನ್ ಒತ್ತಿರಿ. 
 
ಪ್ರಯಾಣದ ವಿವರ : ಮೊಬೈಲ್ ನಂಬರ್, ಇಮೇಲ್ ವಿವರಗಳನ್ನು ನಮೂದಿಸಿ. ಟಿಕೆಟ್ ಬುಕ್ ಆಗಿರುವ ಬಗ್ಗೆ ಎಸ್ಎಂಎಸ್ ಅಥವಾ ಈಮೇಲ್ ಮುಖಾಂತರ ತಿಳಿಸಲು ಈ ವಿವರಗಳು ಅಗತ್ಯ. ಎಸ್ಎಂಎಸ್ ಎಮ್‌ಟಿಕೆಟ್ (mTicket) ಆಗಿದ್ದು, ಎಲ್ಲ ಬಸ್ಸುಗಳು ಸ್ವೀಕರಿಸುತ್ತವೆ. ಇದಾದ ನಂತರ ಮತ್ತೆ ಮುಂದುವರಿಯಿರಿ. 
 
ಹಣ ಪಾವತಿ : ನಿಮ್ಮ ವೈಯಕ್ತಿಕ ಮಾಹಿತಿ, ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಒದಗಿಸಿ 'ಸಬ್ಮಿಟ್' ಬಟನ್ ಒತ್ತಿರಿ. ದೃಢೀಕರಣ : ನಿಮ್ಮ ಟಿಕೆಟ್ ಯಶಸ್ವಿಯಾಗಿ ಬುಕ್ ಆಗಿರುತ್ತದೆ. ಎಲ್ಲ ವಿವರಗಳು ನೀವು ಒದಗಿಸಿರುವ ಇಮೇಲ್ ವಿಳಾಸಕ್ಕೆ ಅಥವಾ ಮೊಬೈಲ್ ನಂಬರಿಗೆ ಎಸ್ಎಂಎಸ್ ಮೂಲಕ ರವಾನಿಸಲಾಗುವುದು. ವೀಸಾ ಮತ್ತು ಮಾಸ್ಟರ್‌ ಕಾರ್ಡ್ ಇರುವ ಕ್ರೆಡಿಟ್ ಕಾರ್ಡ್ ಬಳಕೆದಾರರು ಮತ್ತು ವೀಸಾ, ವೀಸಾ ಎಲೆಕ್ಟ್ರಾನ್, ಮಾಸ್ಟರ್‌ಕಾರ್ಡ್ ಮತ್ತು ಮೇಸ್ಟ್ರೋ ಕಾರ್ಡ್ ಇರುವ ಡೆಬಿಟ್ ಕಾರ್ಡ್ ಬಳಕೆದಾರರು ತಮ್ಮ ಕಾರ್ಡ್ ಬಳಸಿ ಬಸ್ ಟಿಕೆಟ್ ಬುಕ್ ಮಾಡಬಹುದು. ಎಲ್ಲಾ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಆಗಿರುವುದರಿಂದ ನೆಟ್ ಬ್ಯಾಂಕಿಂಗ್ ಮುಖಾಂತರವೂ ಬಸ್ ಟಿಕೆಟ್ ಬುಕ್ ಮಾಡಬಹುದು.

Read more at: http://kannada.gizbot.com/how-to/oneindia-launches-online-bus-ticket-booking-service-004511.html

Monday, July 8, 2013

ಮಕ್ಕಳಿಗಾಗಿ ಕಿಡ್ಸ್ ತಂತ್ರಾಂಶ


ವಿಂಡೋಸ್ ಅಂತಹ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಮಕ್ಕಳು ಯಾವೆಲ್ಲಾ ಮಾಹಿತಿಯನ್ನು ಬಳಸಬಹುದು. ಯಾವ ತಾಣಗಳಿಗವರು ಭೇಟಿ ನೀಡಭಹುದು ಎನ್ನುವುದನ್ನು ನಿಗದಿ ಪಡಿಸಲು ಬರುತ್ತದೆ. ಆದರಿದು ಪ್ರಯಾಸದ ಕೆಲಸ. ಆದರೆ ಕಿಡ್ಸ್ ಎನ್ನುವ ತಂತ್ರಾಂಶ ವ್ಯವಸ್ಥೆಯಲ್ಲಿ ಶೈಕ್ಷಣಿಕ ತಂತ್ರಾಂಶಗಳ ಜತೆ ಲಭ್ಯವಿದೆ. ನಕ್ಷತ್ರ ವೀಕ್ಷಣೆಯಿಂದ ಹಿಡಿದು, ಸಮಾಜ, ವಿಜ್ಞಾನ, ಗಣಿತ ಹೀಗೆ ಬೇರೆ ಬೇರೆ ಕ್ಷೇತ್ರಗಳ ತಂತ್ರಾಂಶ ಇದರಲ್ಲಿದೆ. ಕಿಡ್ಸ್ ಎನ್ನುವುದು ಪುಟಾಣಿಗಳಿಗೆ ಸೂಕ್ತವದದ್ದು. ಇದು ಹೆಚ್ಚು ಸಂಪನ್ಮೂಲಗಳನ್ನು ಬೇಡದ ತಂತ್ರಾಂಶ, ಇದರಲ್ಲಿ ಮಕ್ಕಳ ಮನ ಅರಳಿಸಬಲ್ಲ ಆಟಗಳಿವೆ. ಕಿಡ್ಸ್ ತಂತ್ರಾಂಶ ನಾಲ್ಕರಿಂದ ಹನ್ನೆರಡು ವರ್ಷದ ಪುಟಾಣಿಗಳಿಗೆ ಸೂಕ್ತವಾದದ್ದು. ಇದು ಇಪ್ಪತ್ತು ಭಾಷೆಗಳಲ್ಲೂ ಲಭ್ಯವಿದೆ. ವಿವಿಧ ನಮೊನೆಯ ಆಂಡ್ರಾಯ್ಡ್, ಮ್ಯಾಕ್, ಕ್ರೋಮ್ ಹಾಗೂ ವಿಂಡೋಸ್ ನಲ್ಲಿ ಸುಲಭವಾಗಿ ಬಳಸಬಹುದಾದ  ಉಚಿತವಾಗಿ ಲಭ್ಯವಿರುವ ಈ ತಂತ್ರಾಂಶವನ್ನು ಟ್ಯಾಬ್, ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವುದಾದರೆ, ಇದು ಉಚಿತವಾಗಿ ಲಭ್ಯ. ಹೆಚ್ಚಿನ ವಿವರಗಳಿಗೆ ಜಾಲತಾಣ ಕೊಂಡಿ: http://kidoz.net/