Pages

Sunday, June 16, 2013

ಸುಗಮವಾದ ಪ್ರಯಾಣಕ್ಕೆ "ಸವಾರಿ"

ಪ್ರಯಾಣ ಮಾಡುವವರಿಗಾಗಿ ಸವಾರಿ ಸಂಸ್ಥೆ "ಸವಾರಿ ಕ್ಯಾಬ್" ಹೊಸ ಸೇವೆಯನ್ನು ಪರಿಚಯಿಸುತ್ತಿದೆ. ಪ್ರಯಾಣಿಕರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಗ್ರಾಹಕರು ತಲುಪಬೇಕಾದ ಸ್ಥಳಗಳ ಚಿತ್ರಣ ನೀಡಲಾಗುತ್ತದೆ. ಸವಾರಿ ಸೇವೆಪಡೆಯುವ ಪ್ರಯಾಣಿಕರಿಗಾಗಿ ನೀರಿನ ಬಾಟಲಿಗಳು, ನ್ಯೂಸ್ ಪೇಪರ್ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಹಕರು 8 ಬಗೆಯ ಕಾರ್ ಗಳಲ್ಲಿ ಆಯ್ಕೆ ಮಾಡಬಹುದು. ಕರೆ ಮಾಡಿ ಅಥವಾ ಜಾಲತಾಣದಲ್ಲಿ ಮುಂಚಿತವಾಗಿ ಕಾದಿರಿಸುವ ಮೂಲಕ ಸೇವೆ ಪಡೆಯಬಹುದು. ಹೆಚ್ಚಿನ ವಿವರಗಳಿಗೆ www.savaari.com ಜಾಲತಾಣಕ್ಕೆ ಭೇಟಿನೀಡಬಹುದು.

Friday, June 7, 2013

ಆಲ್ಟ್ರಾ ಸೌಂಡ್‌ ನಿಂದ ಚಾರ್ಜಿಂಗ್


 ಇತ್ತೀಚೆಗಷ್ಟೆ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು ಇಂಡಿಯಾ - ಅಮೇರಿಕಾದ 18 ವರ್ಷದ ಪೋರಿಯೊಬ್ಬಳು ಕೇವಲ 20 ಸೆಕೆಂಡುಗಳಲ್ಲಿ ವಿದ್ಯುತ್ ನಿಂದ ಮೊಬೈಲ್ ಅನ್ನು ಚಾರ್ಜ್ ಮಾಡಲು ಸಾದ್ಯ ಎಂಬುದನ್ನು ಸಾಬೀತುಪಡಿಸಿ. ಇಂಟೆಲ್ ಕಂಪನಿಯವರು ಕ್ಯಾಲಿಪೋರ್ನಿಯದಲ್ಲಿ ನಡೆಸಿದ ತಂತ್ರಜ್ಞಾನ ಸಮಾವೇಶದಲ್ಲಿ ಯುವ ವಿಜ್ಞಾನಿ ಎಂಬ ಪಟ್ಟವನ್ನು ಪಡೆದದ್ದು.
ಸೌರಶಕ್ತಿ, ಜಲಶಕ್ತಿ, ವಾಯುಶಕ್ತಿ, ಕೋಕಾಕೋಲದಿಂದ, ಮಣ್ಣಿನಿಂದ, ಮರಗಳಿಂದ ಹೀಗೆ ಎಲ್ಲೆಲ್ಲಿಂಧ ನಾವು ಇಂದನವನ್ನು ಪಡೆಯಲು ಸಾದ್ಯವೋ ಅದೆಲ್ಲವನ್ನೂ ಆವಿಷ್ಕರಿಸಿದ್ದು ಆಯಿತು. ವಿದ್ಯುತ್‌ನಿಂದ ನಾವು ನಮ್ಮಲ್ಲಿರುವ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಚಾರ್ಜ್‌ ಮಾಡುತ್ತೇವೆ. ಆದರೆ ಇನ್ನು ಮುಂದೆ ಚಾರ್ಜ್‌ ಮಾಡಲು ವಿದ್ಯುತ್‌ ಬೇಡವಂತೆ.! 
UBeam ಎನ್ನುವ ಕಂಪೆನಿಯೊಂದು ವಾತಾವರಣದಲ್ಲಿರುವ ಆಲ್ಟ್ರಾ ಸೌಂಡ್‌ನ್ನು ಬಳಸಿ ಚಾರ್ಜ್‌ ಮಾಡುವ ಚಾರ್ಜ್‌ರನ್ನು ಕಂಡು ಹಿಡಿಯಲು ಸಂಶೋಧನೆ ನಡೆಸುತ್ತಿದ್ದಾರೆ.ಮಾಹಿತಿಗೆ ಜಾಲತಾಣಕೊಂಡಿ: www.ubeam.com

Thursday, June 6, 2013

ಅನಾವರಣದಲ್ಲಿ ಸಾಂಪ್ರದಾಯಿಕ ಧ್ವನಿ ಮುದ್ರಣ


ಸಾಮಾನ್ಯವಾಗಿ ನಾಮಕರಣ, ಉಪನಯನ, ಮದುವೆ, ಸತ್ಯನಾರಾಣ ಪೂಜೆ ಹೀಗೆ ವಿವಿಧ ರೀತಿಯ ಶುಭ ಸಮಾರಂಭಗಳ ವಿಡಿಯೋ ಚಿತ್ರೀಕರಣವಾದ ಮೇಲೆ ವಿಡಿಯೋ ಜೊತೆಗೆ ಧ್ವನಿಯನ್ನು ಜೋಡಿಸಿದರೆ ನೋಡಲು ಚಂದ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಹಳೆಯ ಚಲನಚಿತ್ರಗಳ ಗೀತೆಗಳನ್ನು ವಿಡಿಯೋ ಜೊತೆಗೆ ಜೋಡಿಸಲಾಗುತ್ತಿತ್ತು, ಆಗಿನ ಸಿನಿಮಾ ಹಾಡುಗಳೆಂದರೆ ಸುಮಧುರದ ಜೊತೆಯಲ್ಲಿ ಅರ್ಥಪೂರ್ಣವಾಗಿರುತ್ತಿದ್ದವು, ಆದರೆ ಈಗಿನ ಚಲನಚಿತ್ರ ಗೀತೆಗಳನ್ನು ಕೇಳಲು ಆ ದೇವರೇ ಧರೆಗಿಳಿದು ಬರಬೇಕು! ಅರ್ಥವಿರದಿದ್ದರೂ ಆ ಕಿರುಚಾಟದ ಹಾಡುಗಳನ್ನು ಕೇಳುವುದಾದರೂ ಹೇಗೆ? 
ಸಂದರ್ಭಕ್ಕೆ ತಕ್ಕ ಹಾಡುಗಳನ್ನು ವಿಡಿಯೋ ಜೊತೆಯಲ್ಲಿ ಜೋಡಿಸಿ ಕೇಳಲು ಈಗೆಲ್ಲಿ  ಸಿಗಬೇಕು ಅಂಥ ಅರ್ಥಪೂರ್ಣ ಹಾಡುಗಳು, ಹೀಗೆ ನನ್ನ ಹುಡುಕಾಟದಲ್ಲಿ ನನಗೆ ದೊರೆತದ್ದು ಅನಾವರಣ ಸಂಸ್ಥೆ! ಅವರು ಹಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನದಲ್ಲಿ ಅನಾವರಣ ಎಂಬ ಸಂಸ್ಥೆಯ ಸಾಂಪ್ರದಾಯಿಕ ಹಾಡುಗಳ ಧ್ವನಿ ಮುದ್ರಣವನ್ನು 4 ಅವತರಣಿಕೆಗಳಲ್ಲಿ ಇತ್ತಿಚೆಗೆ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ.
ನಮ್ಮ  ಹಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಮೂಲ ಉದ್ದೇಶದಿಂದ ಈ ಧ್ವನಿ ಮುದ್ರಣವನ್ನು ಹೊರಗೆ ತಂದಿದ್ದು, ಇದರಲ್ಲಿ ಮದುವೆ, ಪುನಯನ, ಸತ್ಯನಾರಾಯಣ ಪೂಜೆ, ಗೋಪೂಜೆ, ತುಳಸಿ ಪೂಜೆ ಮುಂತಾದ ಸಂದರ್ಭಗಳಲ್ಲಿ ಹಾಡುವ ಹಾಡುಗಳನ್ನು ಕಲಾವಿದರು ಸುಶ್ರಾವ್ಯವಾಗಿ ಹಾಡಿದ್ದಾರೆ.
ಇದು 3 ಭಾಗಗಳಲ್ಲಿ ಲಭ್ಯವಿದ್ದು, ಮದುವೆಯ ಕಾರ್ಯಕ್ರಮದ್ದೇ ಪ್ರತ್ಯೇಕ ಧ್ವನಿ ಮುದ್ರಣ ಇರುತ್ತದೆ ಎಂದು ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಗಣೇಶ್ ಕೆ.ಎಸ್ ತಿಳಿಸಿದ್ದಾರೆ. ಹಾಡುಗಳ ಮಾದರಿ ತುಣುಕುಗಳನ್ನು ಜಾಲತಾಣದಲ್ಲಿ ಕೇಳುವ ಅವಕಾಶವನ್ನು ಕಲ್ಪಿಸಲಾಗಿದೆ.
ಇಷ್ಟೇ ಅಲ್ಲಾ ಅನಾವರಣ ಸಂಸ್ಥೆಯಲ್ಲಿ ಸಾಕ್ಷ್ಯಚಿತ್ರಗಳ ನಿರ್ಮಾಣ, ಜಾಹೀರಾತುಗಳ ನಿರ್ಮಾಣ, ಜಾಲತಾಣಗಳ ಅಭಿವೃದ್ಧಿ, ಕಲೆ ಮತ್ತು ಕುಶಲಕಲೆ, ಕಾರ್ಯಕ್ರಮಗಳ ನಿರ್ವಹಣೆ, ವಾಣಿಜ್ಯ ಮತ್ತು ಕೈಗಾರಿಕಾ ಪೋಟೋಗ್ರಫಿ, ದೃಶ್ಯ ಸಂಕಲನ, 3ಡಿ ಆನಿಮೇಷನ್, ಸಂಗೀತ ನಿರ್ಮಾಣ, ಭಾಷಾಂತರ, ವ್ಯವಹಾರ ಸಮಾಲೋಚನೆ, ಪ್ರಸರಣ ಸಮಾಲೋಚನೆ ಹೀಗೆ ಹತ್ತು ಹಲವು ಸೇವೆಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸಂಚಾರಿ: 9742349990, ಅಥವಾ ಮಿಂಚಂಚೆ ವಿಳಾಸ: contact@anaavarana.com  ಜಾಲತಾಣ ವಿಳಾಸ ಕೊಂಡಿ www.anaavarana.com ಗೆ ಸಂಪರ್ಕಿಸಬಹುದಾಗಿದೆ.