Pages

Tuesday, September 18, 2012

ವಿಎಂವೇರ್ ವಿಕ್ಲೌಡ್ 5.1 (VMware VCloud) 5.1



ಉದ್ಯಮ ಕ್ಷೇತ್ರದ ಅತ್ಯಂತ ಸಮಗ್ರ ಕ್ಲೌಡ್ ಇನ್‌ಫ್ರಾಕಸ್ಟ್ರಕ್ಚರ್ ಮತ್ತು ಮ್ಯಾನೇಜ್‌ಮೆಂಟ್ ಪರಿಹಾರಗಳನ್ನು ಹೊರತಂದ ವಿಎಂವೇರ್


ವಿಎಂವೇರ್ ವಿಕ್ಲೌಡ್(ರಿ) 5.1 ತನ್ನ ಸಾಫ್ಟ್‌ವೇರ್ ವ್ಯಾಖ್ಯೆಯ ಡಾಟಾ ಸೆಂಟರ್‌ ಅನ್ನು  ಅನಾವರಣಗೊಳಿಸಿದೆ.
ಗ್ರಾಹಕರಿಗೆ ಅತ್ಯಧಿಕ ಸಾಮರ್ಥ್ಯವನ್ನು ಹೊಂದಲು ಹಾಗೂ ಕಾರ್ಯನಿರ್ವಹಣಾ ಅವಧಿಯನ್ನು ಸುಧಾರಿಸಲು ನೆರವಾಗುವ ಕ್ಲೌಡ್ ಮೂಲಸೌಲಭ್ಯ ಮತ್ತು ನಿರ್ವಹಣಾ ಉತ್ಪನ್ನದ ಸಮಗ್ರ ಪರಿಹಾರವೊಂದನ್ನು ವಿಎಂವೇರ್ ಇತ್ತೀಚೆಗೆ "ವಿಎಂವರ್ಲ್ಡ್(ರಿ)2012"ನಲ್ಲಿ ಅನಾವರಣಗೊಳಿಸಿದೆ. 
ಹೊಸ "ವಿಎಂವೇರ್ ವಿಕ್ಲೌಡ್(ರಿ) ಸೂಟ್ 5.1" ಮೊತ್ತಮೊದಲ ತಂತ್ರಾಂಶ ವ್ಯಾಖ್ಯೆಯ ಡಾಟಾಸೆಂಟರ್ ಆಗಿದೆ. ವಿಎಂವೇರ್‌ನ ಪ್ರಮುಖ ವರ್ಚುವಲೈಶೇಷನ್, ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ನಿರ್ವಹಣಾ ಖಾತೆಗಳ ಏಕೀಕೃತ ಪರಿಹಾರಸೂತ್ರ ಇದಾಗಿದ್ದು, ಕ್ಲೌಡ್‌ ಯುಗದ ತಂತ್ರಜ್ಞಾನದ ಅಳವಡಿಕೆಯನ್ನು ಸರಳೀಕರಿಸಲಿದೆ.

"ಮಾಹಿತಿ ತಂತ್ರಜ್ಞಾನವನ್ನು ಇನ್ನಷ್ಟು ಸರಳೀಕರಿಸುವಲ್ಲಿ ವಿಎಂವೇರ್ ಮತ್ತು ಅದರ ಪಾಲುದಾರರು ಇವತ್ತು ಬಹುದೊಡ್ಡ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಗ್ರಾಹಕರು ತಮ್ಮ ಕ್ಲೌಡ್ ಪರಿಸರವನ್ನು ನಿರ್ಮಿಸಿ, ಜಾರಿಗೊಳಿಸಿ ನಿರ್ವಹಿಸಲು ಬೇಕಾದ ಎಲ್ಲ ಅಗತ್ಯಗಳನ್ನೂ ಒದಗಿಸಿದ್ದಾರೆ" ಎಂದು ವಿಎಂವೇರ್‌ನ ಸಿಇಓ ಪೌಲ್ ಮಾರಿಜ್ ಹೇಳಿದರು. "ವಿಎಂವೇರ್ ವಿಕ್ಲೌಡ್(ರಿ)ಸೂಟ್, ಕ್ಲೌಡ್ ಕಂಪ್ಯೂಟಿಂಗ್ ಜಾರಿಯ ಶಿಲ್ಪಿಯಾಗಿರುವ ತಂತ್ರಾಂಶ ವ್ಯಾಖ್ಯೆಯ ಡಾಟಾಸೆಂಟರ್ ಆಗಿದೆ" ಎಂದು ಅವರು ಬಣ್ಣಿಸಿದರು.

ತಂತ್ರಾಂಶ ವ್ಯಾಖ್ಯೆಯ ಡಾಟಾಸೆಂಟರ್ ಒಂದು ಸಮಗ್ರ, ಸಮರ್ಥ ಮತ್ತು ವಿಶ್ವಾಸಾರ್ಹ ಐಟಿ ಸೇವೆಯಾಗಿದ್ದು, ವರ್ಚುವಲೈಶೇಷನ್‌ನ ಲಾಭಗಳನ್ನು ಡಾಟಾಸೆಂಟರ್‌ನ ಎಲ್ಲ ಅಂಗಗಳಾದ ಗಣಕೀಕರಣ, ಸಂಗ್ರಹ, ನೆಟ್‌ವರ್ಕಿಂಗ್ ಮತ್ತು ಭದ್ರತಾ ಸೇವೆಗಳ ಸಹಸೌಲಭ್ಯಕ್ಕೂ ಒದಗಿಸಲಿದೆ. ಇದು ಎಲ್ಲ ಹಾರ್ಡ್‌ವೇರ್ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಅವುಗಳ ಗರಿಷ್ಠ ಸಾಮರ್ಥ್ಯಕ್ಕೆ ಹೊಂದಿಸಲಿದೆ. ತಂತ್ರಾಂಶ ವ್ಯಾಖ್ಯೆಯ ಡಾಟಾಸೆಂಟರ್ ಹೊಂದಲಿರುವ ಗ್ರಾಹಕರು ಈ ಮೂಲಕ ತಮ್ಮ ಸ್ವಂತ ವರ್ಚುವಲ್ ಡಾಟಾಸೆಂಟರ್‌ಅನ್ನು ಹೊಂದಬಹುದು.

"ಕ್ಲೌಡ್ ಕಂಪ್ಯೂಟಿಂಗ್‌ನ ಹೊಸ ಯುಗಕ್ಕೆ ಕಾಲಿಟ್ಟಿರುವ ಈ ದಿನಗಳಲ್ಲಿ ಐಟಿ ಉದ್ಯಮವು ತನ್ನ ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯ ಸಮಗ್ರ ಧೋರಣೆಯನ್ನು ತಳೆಯಬೇಕಿದೆ. ನಾವು ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ ಯೂರೋನೆಕ್ಸ್ಟ್‌ನಲ್ಲಿ ನಮ್ಮ ಕಾರ್ಪೊರೇಟ್ ಐಟಿ ವ್ಯೂಹಕ್ಕೆ ಕ್ಲೌಡ್ ಕಂಪ್ಯೂಟಿಂಗ್‌ಅನ್ನೇ ಆಧರಿಸಿದ್ದೇವೆ. ವಿಎಂವೇರ್ ಕ್ಲೌಡ್ ತಂತ್ರಜ್ಞಾನವನ್ನು ಬಳಸುವ ಮೂಲಕ ನಮ್ಮ ಹಣಕಾಸು ಸೇವಾ ಸಂಸ್ಥೆಗಳಿಗೂ ಸೇವೆ ವಿಸ್ತರಿಸಲಿದ್ದೇವೆ" ಎಂದು ಎನ್‌ವೈಎಸ್‌ಇ ಟೆಕ್ನಾಲಜೀಸ್‌ನ ಮುಖ್ಯ ತಂತ್ರಜ್ಞಾನ    ಅಧಿಕಾರಿ ಡಾನ್ ಹೆಂಡರ್‌ಸನ್ ಹೇಳಿದರು.

* ವಿಎನ್‌ವೇರ್ ವಿಸ್ಫಿಯರ್(ರಿ) 5.1 - ಯಾವುದೇ ಅಪ್ಲಿಕೇಶನ್‌ಗಳಿಗೆ ಸೂಕ್ತ ಪ್ಲಾಟ್‌ಫಾರಂ.
ವಿಎಂವೇರ್ ವಿಕ್ಲೌಡ್ ಸೂಟ್‌ನ ತಳಪಾಯವು, ಜಗತ್ತಿನ ಅತ್ಯಂತ ವ್ಯಾಪಕ ಬಳಕೆಯ ವರ್ಚುವಲೈಶೇಷನ್ ಪ್ಲಾಟ್‌ಫಾರಂನ ಅಪ್‌ಡೇಟ್ ಮಾಡಲಾದ ವಿಧಾನವಾಗಿದೆ. ಎಲ್ಲ ಅಪ್ಲಿಕೇಶನ್‌ಗಳ ಗರಿಷ್ಠ ಸೇವಾ ಮಟ್ಟದ ಅನುಷ್ಠಾನಕ್ಕೆ ಬೇಕಾಗುವ ೧೦೦ಕ್ಕೂ ಹೆಚ್ಚು ವಿಸ್ತರಣೆ ಹಾಗೂ ಹೊಸ ಲಕ್ಷಣಗಳನ್ನು ಇದು ಹೊಂದಿದೆ.

ವಿಎಂವೇರ್ ವಿಸ್ಫಿಯರ್ 5.1 ಸುಮಾರು ೬೪ರಷ್ಟು ವರ್ಚುವಲ್ ಸಿಪಿಯು ಗಳ ವರ್ಚುವಲ್ ಮೆಶಿನ್‌ಗಳಿಗೆ ಬಲ ಒದಗಿಸಲಿದೆ. ಈ ವರ್ಚುವಲ್ ಮೆಶಿನ್‌ಗಳು ದಿನದ ೨೪ ತಾಸೂ ನಡೆಯುವಂತೆ ಮಾಡಲು ವಿಎಂವೇರ್ ವಿಮೋಷನ್(ರಿ) ಬೆಂಬಲವನ್ನೂ ವಿಸ್ತರಿಸಿದ್ದು, ವರ್ಚುಲವ್ ಮೆಶಿನ್‌ಗಳು ಸಂಗ್ರಹವನ್ನು ಹಂಚಿಕೊಳ್ಳದೆ ನೇರವಾಗಿ ಕಾರ್ಯಾಚರಿಸಲು ನೆರವಾಗುತ್ತದೆ.

* ವಿಎಂವೇರ್ ವಿಕ್ಲೌಡ್ ಡೈರೆಕ್ಟರ್(ರಿ)೫.೧ - ನಿಮಿಷಗಳಲ್ಲೇ ವರ್ಚುವಲ್ ಡಾಟಾಸೆಂಟರ್‌ನ ಸೌಲಭ್ಯ.
ವಿಎಂವೇರ್ ವಿಕ್ಲೌಡ್ ಡೈರೆಕ್ಟರ್, ಸ್ಟೋರೇಜ್, ನೆಟ್‌ವರ್ಕಿಂಗ್ ಮತ್ತು ಸೆಕ್ಯೂರಿಟಿಗಳ ಕ್ಷೇತ್ರದಲ್ಲಿ ಪೂಲಿಂಗ್ ಮತ್ತು ಅಟೊಮೇಶನ್‌ಗಳ ವರ್ಚುವಲೈಶೇಷನ್ ತತ್ವಗಳನ್ನು ಹೊಂದಿದ್ದು, ಕೆಲವೇ ನಿಮಿಷಗಳಲ್ಲಿ ಬಳಕೆಗೆ ಸಿದ್ಧವಾಗಲಿದೆ.

* ವಿಎಂವೇರ್ ವಿಕ್ಲೌಡ್ ನೆಟ್‌ವರ್ಕಿಂಗ್ ಮತ್ತು ಸೆಕ್ಯೂರಿಟಿ ೫.೧- ನೆಟ್‌ವರ್ಕ್‌ನ ಮರುವ್ಯಾಖ್ಯೆ.
ಯಾವುದೇ ನೆಟ್‌ವರ್ಕ್ ಹಾರ್ಡ್‌ವೇರ್‌ನ ನೆಟ್‌ವರ್ಕ್ ಸಾಮರ್ಥ್ಯದ ಪೂಲ್ ಒಂದನ್ನು ಸೃಷ್ಟಿಸುವ ಮೂಲಕ ವಿಕ್ಲೌಡ್ ನೆಟ್‌ವರ್ಕಿಂಗ್ ಮತ್ತು ಸೆಕ್ಯೂರಿಟಿಯು ಸಾವಿರಾರು ವಿಭಜಿಸಲ್ಪಟ್ಟ ವರ್ಚುವಲ್ ನೆಟ್‌ವರ್ಕ್‌ಗಳನ್ನೂ ಬೆಂಬಲಿಸಲಿದ್ದು, ವರ್ಚುವಲ್ ಮೆಶಿನ್‌ಗಳ ಕಾರ್ಯನಿರ್ವಹಣೆಯನ್ನು ಸರಳವಾಗಿ ಹಾಗೂ ಸುಲಭವಾಗಿ ನಡೆಸಲಿದೆ.

* ವಿಸೆಂಟರ್ ಸೈಟ್ ರಿಕವರಿ ಮ್ಯಾನೇಜ್‌ಮೆಂಟ್(ಟಿಎಂ) 5.1- ಎಲ್ಲ ಅಪ್ಲಿಕೇಶನ್‌ಗಳ ಸ್ವಯಂಚಾಲಿತ ದುರಂತ ಪುನಶ್ಚೇತನ.
ತಂತ್ರಾಂಶ ವ್ಯಾಖ್ಯೆಯ ಡಾಟಾಸೆಂಟರ್‌ನ ಅಪ್ಲಿಕೇಶನ್‌ಗಳು ತಕ್ಷಣ ಪುನಶ್ಚೇತನಗೊಳ್ಳಲು ಅನುಕೂಲವಾಗುವಂತೆ ವಿಸೆಂಟರ್ ಸೈಟ್ ರಿಕವರಿ ಮ್ಯಾನೇಜ್‌ಮೆಂಟ್ 5.1 ದುರಂತ ಪುನಶ್ಚೇತನ ಯೋಜನೆಯನ್ನು ಸರಳೀಕರಿಸಿದ್ದು, ಸ್ವಯಂಚಾಲಿತ ಪರೀಕ್ಷೆ ಮತ್ತು ಯೋಜನೆ ಅನುಷ್ಠಾನ ನಡೆಸಲಿದೆ.

ಉದ್ಯಮದ ವ್ಯಾಪಕ ಬೆಂಬಲ: ಮಾರಾಟಗಾರರ ಸಹಿತ ಪ್ರಮುಖ ಜಾಗತಿಕ ಹಾರ್ಡ್‌ವೇರ್ ಉತ್ಪಾದಕರ ಬೆಂಬಲವನ್ನೂ ಹೊಂದಿದೆ.

ಬೆಲೆ ಮತ್ತು ಲಭ್ಯತೆ:
ನಿಗದಿತ ಅವಧಿಗಾಗಿ ವಿಎಂವೇರ್ ವಿ ಸ್ಫಿಯರ್ ಎಂಟರ್‌ಪ್ರೈಸ್ ಪ್ಲಸ್ ಗ್ರಾಹಕರಿಗೆ ವಿಎಂವೇರ್ ವಿಕ್ಲೌಡ್ ಸೂಟ್ ೫.೧ಗೆ ಉನ್ನತೀಕರಣದ ಉಚಿತ ಸೌಲಭ್ಯ ಒದಗಿಸಲಾಗುವುದು. ಹಾಗೆಯೇ ವಿಕ್ಲೌಡ್ ಸೂಟ್ 5.1 ಎಂಟರ್‌ಪ್ರೈಸ್‌ಗೆ ಬೆಲೆ ಪಟ್ಟಿಯ ಶೇಕಡಾ 35 %ರಷ್ಟು ಕಡಿತದ ದರ ವಿಧಿಸಲಾಗುವುದು.

ವಿಎಂವೇರ್ ವಿಕ್ಲೌಡ್ ಸೂಟ್ 5.1 ಮಾರುಕಟ್ಟೆಯಲ್ಲಿ ಸ್ಟಾಂಡರ್ಡ್, ಅಡ್ವಾನ್ಸ್‌ಡ್ ಮತ್ತು ಎಂಟರ್‌ಪ್ರೈಸಸ್ ಎಂಬ ಮೂರು ವಿಧಗಳಲ್ಲಿ ಸೆಪ್ಟೆಂಬರ್ 11 ರಿಂದ ಲಭ್ಯವಿದೆ.

ವಿಎಂವೇರ್ ಬಗ್ಗೆ:
VMware ವಿಎಂವೇರ್, ವರ್ಚುವಲೈಶೇಷನ್ ಮತ್ತು ಕ್ಲೌಡ್ ಇನ್‌ಫ್ರಾಸ್ಟ್ರಕ್ಚರ್ ಸೊಲ್ಯೂಷನ್ ಕ್ಷೇತ್ರದ ಮುಂಚೂಣಿಯ ಸಂಸ್ಥೆ. ಗ್ರಾಹಕರು ವಿಎಂವೇರ್ ಮೇಲೆ ವಿಶ್ವಾಸವಿಟ್ಟಿದ್ದು, ಅವರ ವ್ಯಾಪಾರವನ್ನು ನಿರ್ಮಿಸಲು, ಪೂರೈಸಲು ಮತ್ತು ಮಾಹಿತಿ ತಂತ್ರಜ್ಞಾನ ಸಂಪನ್ಮೂಲವನ್ನು ನಿರ್ದಿಷ್ಟ ಉದ್ದೇಶಕ್ಕೆ ತಕ್ಕಂತೆ ಬಳಸಲು ವಿಎಂವೇರ್ ನೆರವಾಗುತ್ತದೆ. 2011ರಲ್ಲಿ 3.77 ಶತಕೋಟಿ ಡಾಲರ್ ಆದಾಯ ಹೊಂದಿರುವ ವಿಎಂವೇರ್, 4 ಲಕ್ಷಕ್ಕೂ ಹೆಚ್ಚು ಗ್ರಾಹಕರು ಮತ್ತು 55 ಸಾವಿರಕ್ಕೂ ಹೆಚ್ಚು ಪಾಲುದಾರರನ್ನು ಹೊಂದಿದೆ. ಕಂಪೆನಿಯು ಸಿಲಿಕಾನ್ ವ್ಯಾಲಿಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ವಿಶ್ವದಾದ್ಯಂತ ಕಚೇರಿಗಳನ್ನು ತೆರೆದಿದೆ. 
ಹೆಚ್ಚಿನ ವಿವರಗಳಿಗೆ ಜಾಲತಾಣ ಮತ್ತು ಸಂಪರ್ಕ: 
http://www.vmware.com/in# & http://www.edelman.com

ಸಂಪರ್ಕ:
ವಿವಿಯನ್ ಜಿಡಾನ್                                      ಅರ್ಚನಾ ಮಹಾಲಿಂಗಮ್
ವಿಎಂವೇರ್                                                ಎಡೆಲ್‌ಮನ್
+91 9972291924                                       +91 9731901166