Pages

Thursday, September 29, 2011

ವೈಭವ ಸಂಸ್ಕೃತಿವನದ ಕಲ್ಪನಾ ಲೋಕ

 
 



ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲವು ಹಲವು ಮಹತ್ವದ ಸಂಗತಿಗಳಿಂದ ಇತಿಹಾಸದ ಗಮನಶೀಲ ದಾಖಲೆಯಾಗಿ ಉಳಿದಿದೆ. ಈ ಕಾಲವನ್ನು ಇತಿಹಾಸಕಾರರು `ಸುವರ್ಣಯುಗ’ದ ಕಾಲವೆಂದು ಕರೆದಿದ್ದಾರೆ. ಈ ಐತಿಹಾಸಿಕ ಆಡಳಿತ ಅವಧಿಯಲ್ಲಿದ್ದ ಸಮರ್ಥ ಆಡಳಿತ ನಿರ್ವಹಿಸಿದ್ದ ಪ್ರಖ್ಯಾತ ದೊರೆ ಶ್ರೀಕೃಷ್ಣದೇವರಾಯರ ಪಟ್ಟಾಭಿಷೇಕದ ೫೦೦ನೇ ವರ್ಷಾಚರಣೆಯನ್ನು ಕಳೆದ ವರ್ಷ ಕರ್ನಾಟಕ ಸರ್ಕಾರವು ಹಮ್ಮಿಕೊಂಡಿತ್ತು.

ಈ ಐತಿಹಾಸಿಕ ಸಂದರ್ಭದಲ್ಲಿ ಅವಿಸ್ಮರಣೀಯ ಕಾಣಿಕೆ ನಾಡಿಗೆ ನೀಡಬೇಕೆಂಬ ಸಂಕಲ್ಪದಿಂದ ಯೋಜನೆಯೊಂದನ್ನು ರೂಪಿಸಿ ನಿರ್ಮಿಸಲು ‘ವಿಜಯನಗರ ಪುನಶ್ಚೇತನ ಪ್ರತಿಷ್ಠಾನ (ಟ್ರಸ್ಟ್)’ ಸ್ಥಾಪಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಸಮೃದ್ಧಿ, ಶೌರ್ಯ, ಸಂಸ್ಕೃತಿ, ಕಲೆ ಹಾಗೂ ಅರಸರ ಸುಶಾಸನವನ್ನು ಜನರಿಗೆ ತಲುಪಿಸಲು ಸಂಸ್ಕೃತಿವನ ನಿರ್ಮಿಸಬೇಕೆಂಬುದು ಉದ್ದೇಶ.
ಭಾರತೀಯ ಸಂಸ್ಕೃತಿಯಶೌರ್ಯದಸಮೃದ್ಧಿಯಸುಶಾಸನದ ಉಚ್ಛ್ರಾಯ ಮಾದರಿಯನ್ನು ತೋರಿಸುವ ಜಗತ್ತಿನ ಅತಿ ವಿಶಾಲ ಸಾಮ್ರಾಜ್ಯವನ್ನು ಅದಕ್ಕೆ ತಕ್ಕಂತೆ ತೋರಿಸುವಂತಹ ವಿಜಯನಗರ ವೈಭವ ಸಂಸ್ಕೃತಿವನದ ಕಲ್ಪನಾ ಲೋಕಕ್ಕೆ ಹೋಗೋಣ ಬನ್ನಿ. http://vpptrust.com/